
ಸ್ಯಾಂಡಲ್‌ವುಡ್ ಅಂಗಳದಲ್ಲಿ 1992ರಲ್ಲಿ ತೆರೆಗೆ ಬಂದ ಚೈತ್ರದ ಪ್ರೇಮಾಂಜಲಿ ಚಿತ್ರದಲ್ಲಿ ನಟ ರಘುವೀರ್ ಜೋಡಿಯಾಗಿ ನಟಿಸಿದ್ದ ನಟಿ ಶ್ವೇತಾ. ಮುಗ್ಧ ಮುಖದ, ಸ್ನಿಗ್ಧ ಚೆಲುವಿನ ನಟಿ ಶ್ವೇತಾ ತಮ್ಮ ಅನುಪಮ ಸೌಂದರ್ಯ ಹಾಗೂ ಅಮೋಘ ನಟನೆಯಿಂದ ಕನ್ನಡ ಸಿನಿಪ್ರೇಕ್ಷಕರ ಮನ ಗೆದ್ದುಬಿಟ್ಟರು. ಬಳಿಕ ಶ್ವೇತಾ ಕರ್ಪೂರದ ಗೊಂಬೆ, ಮಿನುಗು ತಾರೆ, ನಮ್ಮ ಸಂಸಾರ ಆನಂದ ಸಾಗರ ಮುಂತಾದ ಸಿನಿಮಾಗಳಲ್ಲಿ ನಟಿ ಶ್ವೇತಾ ನಟಿಸಿದ್ದಾರೆ. ತೆಲುಗು ಹಾಗು ತಮಿಳು ಚಿತ್ರರಂಗದಲ್ಲಿ ಕೂಡ ನಟಿ ಶ್ವೇತಾ ನಟಿಸಿ ಸೈ ಎನಿಸಿಕೊಂಡಿದ್ದರು.
ಸಿನಿಮಾರಂಗದಲ್ಲಿ ಮಿಂಚುತ್ತಿದ್ದ ಸಮಯದಲ್ಲೇ ಶ್ರೀಧರ್ ಹೆಸರಿನ ಖ್ಯಾತ ವ್ಯಕ್ತಿಯೊಂದಿಗೆ ಲವ್‌ನಲ್ಲಿ ಬಿದ್ದು ಮದುವೆ ಕೂಡ ಮಾಡಿಕೊಂಡಿದ್ದಾರೆ. ಬಳಿಕ, ಶ್ರೀಧರ್-ಶ್ವೇತಾ ದಾಂಪತ್ಯದ ಕೊಡುಗೆಯಾಗಿ ಪುಟ್ಟದೊಂದು ಮಗು. ಹೀಗಾಗಿ ನಟಿ ಶ್ವೇತಾ ಸಿನಿಮಾ ನಟನೆಯಿಂದ ಬ್ರೇಕ್ ತೆಗೆದುಕೊಂಡರು. ಆದರೆ, ಆಕಸ್ಮಿಕ ಘಟನೆ ಶ್ರೀಧರ್ ಹಾಗು ಶ್ವೇತಾ ಜೀವನದಲ್ಲಿ ನಡೆದುಹೋಗಿದೆ.
ತುಂಬಿದ ಅಸೆಂಬ್ಲಿಯಲ್ಲಿ ಸೀರೆ-ಬ್ಲೌಸ್ ಕಿತ್ತ ದೊರೆ ಮುರುಗನ್; ಜಯಲಲಿತಾ ಅಂದು ಹೇಳಿದ್ದೇನು?
ಹೆಲ್ಮೆಟ್ ಹಾಕಿಕೊಳ್ಳದೇ ಗಾಡಿ ಓಡಿಸುತ್ತಿದ್ದ ಶ್ರೀಧರ್ ಅವರಿಗೆ ಅಪಘಾತವಾಗಿ ಬಲವಾದ ಪೆಟ್ಟು ಬಿದ್ದಿದೆ. ಎರಡೂ ಕಾಲುಗಳ ಸ್ವಾಧಿನ ಕಳೆದುಕೊಂಡಿದ್ದಾರೆ. ಬಹಳಷ್ಟು ಕಡೆ ಟ್ರೀಟ್‌ಮೆಂಟ್ ಕೊಡಿಸಿದರೂ ಶ್ರೀಧರ್‌ಗೆ ಹೇಳಿಕೊಳ್ಳುವಂಥ ಯಾವುದೇ ಪ್ರಯೋಜನ ಆಗಿಲ್ಲ. ಇವತ್ತಿಗೂ ಶ್ವೇತಾ ಪತಿ ಶ್ರೀಧರ್ ವೀಲ್ ಚೇರ್‌ನಲ್ಲಿಯೇ ಓಡಾಡಬೇಕಿದೆ. ಸಂಸಾರದ ಸಮಸ್ಯೆ ಶ್ವೇತಾ ಹೆಗಲೇರಿದೆ. ಹೀಗಾಗಿ ತಮಿಳಿನ ಧಾರಾವಾಹಿಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ನಟಿ ಶ್ವೇತಾ. ತಮ್ಮ ಸಂಸಾರದ ನಿರ್ವಹಣೆಯ ಜವಾಬ್ದಾರಿ ಹೊತ್ತು ಜೀವನ ನಡೆಸುತ್ತಿದ್ದಾರೆ ಶ್ವೇತಾ.
ಬ್ರೇಕಪ್ ಬಳಿಕ ಖಿನ್ನತೆಗೆ ಜಾರಿದ್ದ ಅನುಪಮಾ ಗೌಡಗೆ ಹೆಲ್ಪ್ ಮಾಡಿದ ಹ್ಯಾಂಡ್ ಯಾರದು?
ಕನ್ನಡದ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಶ್ವೇತಾರನ್ನು ಕನ್ನಡದ ಸಿನಿರಸಿಕರು ಎಂದಿಗೂ ಮರೆಯಲು ಸಾಧ್ಯವಿಲ್ಲ. ನಟಿ ಶ್ವೇತಾ ಎಂದರೆ ಸಾಕು, ಚೈತ್ರದ ಪ್ರೇಮಾಂಜಲಿಯ ಮಧುರವಾದ ಹಾಡುಗಳು ನೆನಪಿಗೆ ಬರುತ್ತವೆ. ಕಣ್ಮುಂದೆ ನಟಿ ಶ್ವೇತಾರ ಅಮೋಘ ಅಭಿನಯ, ಹಾವಭಾವ ಹಾಗು ಪಾತ್ರಗಳು ಹಳೆಯ ನೆನಪುಗಳ ಮೂಲಕ ಮರುಕಳಿಸುತ್ತವೆ.
ಭಾಷೆ ಬಗ್ಗೆ ಮತ್ತೆ 'ಕಿರಿಕ್' ಮಾಡಿಕೊಂಡ್ರಾ ರಶ್ಮಿಕಾ ಮಂದಣ್ಣ; ಎಲ್ಲೇ ಹೋದ್ರೂ ಬೆಂಬಿಡದ ವಿವಾದ!
ಆದರೆ, ಇಂದು ಜೀವನ ಹಳೆಯ ಒಳ್ಳೆಯ ಜೀವನವಾಗಿ ಉಳಿದಿಲ್ಲ, ಬದಲಿಗೆ ದುರಂತಮಯವಾಗಿದೆ. ಆದರೇನು ಮಾಡುವುದು? ಪಾಲಿಗೆ ಬಂದಿದ್ದು ಪಂಚಾಮೃತ ಎಂಬಂತೆ ನಟಿ ಶ್ವೇತಾ ಬಯಸದೇ ಬಂದ ತಮ್ಮ ಇಂದಿನ ಜೀವನದ ಪರಿಸ್ಥಿತಿಯನ್ನು ತಮಗಾಗುವ ರೀತಿಯಲ್ಲಿ ಬದುಕುತ್ತಿದ್ದಾರೆ.
ನೈಟ್ ಮೆಸೇಜ್ ಮಾಡಿ ಅಂದಿದ್ರಿ ನಂಬರ್ ಕೊಟ್ಟು; ಅನುಶ್ರೀಗೆ ತಗ್ಲಾಕೊಂಡ್ರಾ ಅಚ್ಯುತ್?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.