ರೆಬೆಲ್ ಬಾಯ್ ಟೂ ಲವರ್ ಬಾಯ್ 'ಅಮರ್' ಟ್ರೈಲರ್!

Published : Mar 01, 2019, 01:46 PM IST
ರೆಬೆಲ್ ಬಾಯ್ ಟೂ ಲವರ್ ಬಾಯ್ 'ಅಮರ್' ಟ್ರೈಲರ್!

ಸಾರಾಂಶ

ಅಭಿಷೇಕ್ ಅಂಬರೀಶ್ ಅಭಿನಯದ ಚಿತ್ರ 'ಅಮರ್ ಟ್ರೈಲರ್' ರಿಲೀಸ್ ಆಗಿದ್ದು ಜನರಿಂದ ಬಾರಿ ಮೆಚ್ಚುಗೆ ಪಡೆಯುತ್ತಿದೆ. ಇಲ್ಲಿದೆ ಅಮರ್ ಅಫೀಶಿಯಲ್ ಟ್ರೈಲರ್.

ಸ್ಯಾಂಡಲ್‌ವುಡ್ ಬಹು ನಿರೀಕ್ಷಿತ ’ಅಮರ್’ ಚಿತ್ರದ ಟ್ರೈಲರ್ ಅದ್ಧೂರಿಯಾಗಿ ಬಿಡುಗಡೆ ಆಗಿದೆ. ಚಿತ್ರದ ಟೀಸರನ್ನು ಪ್ರೇಮಿಗಳ ದಿನದಂದು ಬಿಡುಗಡೆ ಮಾಡಲಾಗಿತ್ತು. ಅಭಿಷೇಕ್ ಮಾಸ್ ಲುಕ್‌ಗೆ ಅಭಿಮಾನಿಗಳು ಫುಲ್ ಥ್ರಿಲ್ಲಾಗಿದ್ದಾರೆ.

ಈಗ ಚಿತ್ರದ ಟ್ರೈಲರನ್ನು ’ಯಜಮಾನ’ ಚಿತ್ರ ಪ್ರದರ್ಶನಕ್ಕೂ ಮುನ್ನ ತೋರಿಸಲಾಯ್ತು. ನಂತರ ಡಿಜಿಟಲ್ ಪ್ಲ್ಯಾಟ್ ಫಾರಂನಲ್ಲಿ ಆನಂದ್ ಆಡಿಯೋ ಯೂಟ್ಯೂಬ್ ಖಾತೆಯಲ್ಲಿ ಬಿಡುಗಡೆ ಮಾಡಲಾಗಿದೆ.

'ಅಮರ್' ಟೀಸರ್ ರಿಲೀಸ್.. ನೋಡ್ರಪ್ಪಾ ಜೂ.ರೆಬೆಲ್ ಸ್ಟಾರ್‌ನಾ...!

ಟ್ರೈಲರ್‌ ವಿಶೇಷವೇನೆಂದರೆ ಶುರುವಿನಲ್ಲಿ ಅಭಿಷೇಕ್, ಅಂಬರೀಷ್ ಆಶೀರ್ವಾದ ಪಡೆದು ಆ ನಂತರ ಚಾಲೆಂಜಿಂಗ್ ಸ್ಟಾರ್‌ಗೆ Heartfull ಥ್ಯಾಂಕ್ಸ್ ಹೇಳಿದ್ದಾರೆ.

ಇನ್ನು ಚಿತ್ರದ ನಟಿ ತಾನ್ಯಾ ಹೋಪ್ ಬುಲೆಟ್ ಓಡಿಸಿಕೊಂಡು ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್‌ನಲ್ಲಿ ತಂದೆಯ ಡೈಲಾಗ್ 'ಹೀರೋ ತರನಾ.....no way chance eh illa....ಹೀರೋನೇ' ಎಂದು ಹೇಳುವ ಮೂಲಕ ಎಲ್ಲರ ಗಮನ ಸೆಳೆದರು. ಈಗ ಟ್ರೈಲರ್‌ನಲ್ಲಿ 'ನೀನು 6 ದಿನ ಬದುಕಿರು 6 ವಾರ ಬದುಕಿರು ಅಥವಾ 6 ತಿಂಗಳು ಬದುಕಿರು 6 ವರ್ಷ ಬದುಕಿರು you will be the only girl in my life ಐ ಲವ್ ಯೂ" ಎಂದು ಹೇಳುವ ಸೂಪರ್ ಡೈಲಾಗ್ ಹೊಡೆಯುತ್ತಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಶಿರಸಿ ಸಾಯಿಬಾಬಾಗೆ ಬಲು ದುಬಾರಿಯ ಚಿನ್ನದ ಕಿರೀಟ ಅರ್ಪಿಸಿದ ನಟಿ ಮಾಲಾಶ್ರೀ: ಕಾರಣವೂ ರಿವೀಲ್​!
34th Wedding Anniversary : ಅಂಬಿ ನೆನಪಲ್ಲಿ ಸುಮಲತಾ ಭಾವನಾತ್ಮಕ ಪೋಸ್ಟ್