ಸೈಬರ್ ಲೋಕದ 100 ಟ್ರೇಲರ್ ರಿಲೀಸ್: ಫ್ಯಾಮಿಲಿ ಥ್ರಿಲ್ಲರ್‌ನಲ್ಲಿ ರಮೇಶ್ ಅರವಿಂದ್

By Suvarna News  |  First Published Nov 6, 2021, 1:51 PM IST

ಪುನೀತ್ ಫೋಟೋಗೆ ಹೂ ಹಾಕಿ ಶ್ರದ್ಧಾಂಜಲಿ ಸಲ್ಲಿಸಿದ ರಮೇಶ್ ಅರವಿಂದ್ ಹಾಗೂ ಚಿತ್ರತಂಡ ಒಂದು ನಿಮಿಷಗಳ ಕಾಲ ಮೌನಾಚರಣೆ ಮಾಡಿ ಅಪ್ಪುಗೆ ಗೌರವ ಸಲ್ಲಿಸಿದ್ದಾರೆ. ಬಳಿಕ ಅಪ್ಪು ಒಂದು ದೊಡ್ಡ ಅದ್ಬುತ ಎಂದು ಹೇಳಿದ್ದಾರೆ.


ರಮೇಶ್‌ ಅರವಿಂದ್‌ (Ramesh Aravind) ನಟಿಸಿ, ನಿರ್ದೇಶನ ಮಾಡಿರುವ '100' ಚಿತ್ರದ ಟ್ರೇಲರ್ (Trailer) ಬಿಡುಗಡೆಯಾಗಿದ್ದು, ಇನ್ಸ್‌ಪೆಕ್ಟರ್ ವಿಷ್ಣು ಪಾತ್ರದಲ್ಲಿ ರಮೇಶ್ ಕಾಣಿಸಿಕೊಂಡಿದ್ದಾರೆ. ಪ್ರತಿಕಥೆಯಲ್ಲೂ ಒಬ್ಬ ಹಿರೋ, ಒಬ್ಬ ವಿಲನ್ ಇರ್ತಾನೆ, ಆದರೆ ನಮ್ಮ ಕಥೆಯಲ್ಲಿ ಹಿರೋನೇ ಇಲ್ಲ, ಇಬ್ರೂನೂ ವಿಲನ್ನೇ?. ಈ ಸಾವುಗಳ ಹಿಂದಿರೋ ನಿಗೂಢತೆಯನ್ನು ಭೇದಿಸೋರು ಯಾರು?. ನಾನು ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿಲ್ಲ?. ಒಂದು ನಿಮಿಷ ಫೋನ್ ಇಲ್ಲದೇ  ಇರೋಕೆ ಆಗಲ್ವಾ ನಿನಗೆ?. ಈ ಫೋನ್ ದಿನ ಎಲ್ಲ ಹೀಗೆ ಬರ್ತಾಯಿರುತ್ತೆ ಕಣೋ?. ಟೆಕ್ನಾಲಜಿ ಇಸ್ ಕಿಲ್ಲಿಂಗ್ ಮಿ?. ವೆಟಿಂಗ್ ಫಾರ್ 100?. ಈ ಎಲ್ಲ ಸಂಭಾಷಣೆಗಳು ಚಿತ್ರದ ಟ್ರೇಲರ್‌ನಲ್ಲಿ ಹೈಲೆಟ್ ಆಗಿವೆ. ಹಾಗೂ ಒಂದು ಮೊಬೈಲ್ ಫೋನ್‌ನಿಂದ ಏನೆಲ್ಲಾ ಆಗುತ್ತದೆ ಎನ್ನುವುದನ್ನು ಒಂದು ಫ್ಯಾಮಿಲಿಯೊಳಗಿನ ಘಟನೆಗಳ ಮೂಲಕ ಚಿತ್ರದಲ್ಲಿ ಹೇಳಲಾಗಿದೆ. 

ರಮೇಶ್ ಅರವಿಂದ್ ನಟನೆಯ '100' ಚಿತ್ರತಂಡವು ಸುದ್ದಿಗೋಷ್ಠಿಗೂ ಮುನ್ನ ಅಗಲಿದ ನಟ ಪುನೀತ್ ರಾಜಕುಮಾರ್ (Puneeth Rajkumar) ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದೆ. ಬೆಂಗಳೂರಿನ ರೇಣುಕಾಂಬ ಚಿತ್ರಮಂದಿರದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ರಮೇಶ್ ಅರವಿಂದ್ ಮಾತನಾಡಿ, ಪುನೀತ್ ಜೊತೆಗಿನ ಒಡನಾಟವನ್ನು ಸ್ಮರಿಸಿಕೊಂಡಿದ್ದಾರೆ. ಪುನೀತ್ ಫೋಟೋಗೆ ಹೂ ಹಾಕಿ ಶ್ರದ್ಧಾಂಜಲಿ ಸಲ್ಲಿಸಿದ ರಮೇಶ್ ಅರವಿಂದ್ ಹಾಗೂ ಚಿತ್ರತಂಡ ಒಂದು ನಿಮಿಷಗಳ ಕಾಲ ಮೌನಾಚರಣೆ ಮಾಡಿ ಅಪ್ಪುಗೆ ಗೌರವ ಸಲ್ಲಿಸಿದ್ದಾರೆ. ಬಳಿಕ ಅಪ್ಪು ಒಂದು ದೊಡ್ಡ ಅದ್ಬುತ. ಅವರಲ್ಲಿ ಒಬ್ಬ ಸ್ಟಾರ್, ಡಾನ್ಸರ್, ಫೈಟರ್, ಎಲ್ಲವೂ ಇತ್ತು. ನಾನು ಅಪ್ಪು ಅವರ ಜೊತೆ ಸಾಯೋ ಮೊದಲ ದಿನ ಎರಡು ಗಂಟೆ ಜೀವನದ ಬಗ್ಗೆ ಗುರುಕಿರಣ್ ಮನೆ ಕಾರ್ಯಕ್ರಮದಲ್ಲಿ ಹೆಚ್ಚಾಗಿ ಮಾತನಾಡಿದ್ದೆ. ಆದರೆ ಮರು ದಿನ ಅಪ್ಪು ಇಲ್ಲ. ಅಪ್ಪು ಬಿಟ್ಟ ಜಾಗವನ್ನ ತುಂಬೋದು ಬಹಳ ಕಷ್ಟ. ನಾವೆಲ್ಲಾ ಸೇರಿ ಪುನೀತ್ ರಾಜ್ ಕುಮಾರ್‌ಗೆ ನಮನ ಸಲ್ಲಿಸಬೇಕು ಎಂದು ರಮೇಶ್ ಭಾವುಕರಾಗಿ ನುಡಿದಿದ್ದಾರೆ.

Tap to resize

Latest Videos

100-150 ಕಾರುಗಳನ್ನು ಬಳಸಿ ಭರ್ಜರಿ ಫೈಟ್‌ ಸೀನ್ ಚಿತ್ರೀಕರಣ ಮಾಡುತ್ತಿರುವ ರಮೇಶ್ ಅರವಿಂದ್!

'100' ಸಿನಿಮಾ ಸೈಬರ್‌ ಕ್ರೈಮ್‌ ಆಧಾರಿತ ಸಿನಿಮಾವಾಗಿದೆ. ರಮೇಶ್‌ ಅರವಿಂದ್‌ ಜತೆ ರಚಿತಾ ರಾಮ್‌, ಪೂರ್ಣಾ ನಟಿಸಿದ್ದು, ಇದು ಫ್ಯಾಮಿಲಿ ಥ್ರಿಲ್ಲರ್‌ ಜಾನರ್‌ನ ಸಿನಿಮಾವಾಗಿದೆ. ವಿಶೇಷ ಎಂದರೆ ರಮೇಶ್‌ ಅರವಿಂದ್‌ ಫ್ಯಾಮಿಲಿ ಮ್ಯಾನ್ ಆಗಿ ಕುಟುಂಬದ ರಕ್ಷಣೆ ಮತ್ತು ಪೊಲೀಸ್ ನಾಗಿ ತಮ್ಮ ಕರ್ತವ್ಯ ಎರಡು ಶೆಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸುರ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ಚಿತ್ರ ತಯಾರಾಗಿದ್ದು,  ಶ್ರೀಮತಿ ಉಮಾ, ಶ್ರೀ ಎಂ. ರಮೇಶ್ ರೆಡ್ಡಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸತ್ಯ ಹೆಗಡೆ ಕ್ಯಾಮರಾ ಕೈಚಳಕ, ಶ್ರೀನಿವಾಸ್ ಕಲಾಲ್ ಸಂಕಲನ, ಗುರು ಕಶ್ಯಪ್ ಸಂಭಾಷಣೆ,  ಧನ೦ಜಯ ನೃತ್ಯ ಸಂಯೋಜನೆ, ಜಾಲಿ ಬಾಸ್ಟಿನ್, ಡಾ.ರವಿವರ್ಮ ಸಾಹಸ ಈ ಚಿತ್ರಕ್ಕಿದೆ. ರಚಿತಾ ರಾಮ್, ಪೂರ್ಣ, ಪ್ರಕಾಶ್ ಬೆಳವಾಡಿ, ಶೋಭರಾಜ್, ರಾಜು ತಾಳಿಕೋಟೆ,  ಮಾಲತಿ ಸುಧೀರ್, ಬೇಬಿ ಸ್ಮಯ ಸೇರಿದಂತೆ ಮುಂತಾದವರ ತಾರಾಬಳಗ ಚಿತ್ರಕ್ಕಿದೆ.

'ಶಿವಾಜಿ ಸುರತ್ಕಲ್‌'ಗೆ ಕಾಪ್ ಆಗಿ ಎಂಟ್ರಿ ಕೊಟ್ಟ ಮೇಘನಾ

ಇನ್ನು ರವಿ ಬಸ್ರೂರು ಸಂಗೀತ ಸಂಯೋಜನೆಯಿರುವ ಈ ಚಿತ್ರದಲ್ಲಿ ನಾಲ್ಕು ಫೈಟ್‌ಗಳಿದ್ದು, ಒಂದೊಂದಕ್ಕೂ ಗಟ್ಟಿಯಾದ ಭಾವನಾತ್ಮಕ ಕಾರಣಗಳಿವೆಯಂತೆ. ಎರಡು ಫೈಟ್ ದೃಶ್ಯಗಳನ್ನು ಜಾಲಿ ಬಾಸ್ಟಿನ್ ಮತ್ತೆರೆಡು ಫೈಟ್ ದೃಶ್ಯಗಳನ್ನು ರವಿವರ್ಮ ಮಾಡಿದ್ದಾರಂತೆ. ಹಾಗೂ ಸಿನಿಮಾದಲ್ಲಿರುವ ಚೇಸಿಂಗ್ ದೃಶ್ಯಕ್ಕೆ (Chasing scene) 100ರಿಂದ 150 ಕಾರುಗಳನ್ನು ಬಳಸಲಾಗಿದೆ. ಇಡೀ ರಸ್ತೆ ಬಾಡಿಗೆಗೆ ತೆಗೆದುಕೊಂಡು ಆ ದೃಶ್ಯವನ್ನು ಚಿತ್ರೀಕರಣ ಮಾಡಲಾಗಿದೆ. ಈ ಸನ್ನಿವೇಶಗಳನ್ನು ಚಿತ್ರೀಕರಿಸಿದ್ದೇ ಒಂದು ದೊಡ್ಡ ಥ್ರಿಲ್ಲಿಂಗ್ ಅನುಭವ. ರವಿವರ್ಮಾ ಅದ್ಭುತ ತಂತ್ರಜ್ಞರು ಅವರು ಚಿತ್ರಮಂದಿರದ ಒಳಗೆ ಒಂದು ಫೈಟ್ ಸನ್ನಿವೇಶ ಶೂಟ್ ಮಾಡಿದ್ದಾರೆ. ನಿರ್ಮಾಪಕರು ರಮೇಶ್ ರೆಡ್ಡಿ ಯಾವುದಕ್ಕೂ ಕಡಿಮೆ ಮಾಡದೇ ಆ ದೃಶ್ಯಗಳಿಗಾಗಿ ಖರ್ಚು ಮಾಡಿದ್ದಾರೆ ಎಂದು ರಮೇಶ್ ಅರವಿಂದ್ ಹೇಳಿದ್ದಾರೆ. ಚಿತ್ರವು ಇದೇ ನವೆಂಬರ್ 19ರಂದು ತೆರೆ ಕಾಣಲಿದೆ.
 

click me!