ದೇವರ ಕೋಣೆಯಲ್ಲಿ ಅಣ್ಣಾವ್ರು, ಅಪ್ಪು ಫೋಟೋ; ಅಭಿಮಾನಿಗಳಿಗೆ ಸಾಷ್ಟಾಂಗ ನಮಸ್ಕಾರ ಎಂದು ರಾಘಣ್ಣ

By Suvarna News  |  First Published Nov 6, 2021, 12:39 PM IST

ಅಭಿಮಾನಿಗಳು ಅಪ್ಪುಗೆ ತೋರಿಸುತ್ತಿರುವ ಪ್ರೀತಿ ಕಂಡು ಭಾವುಕರಾದ ರಾಘವೇಂದ್ರ ರಾಜ್‌ಕುಮಾರ್. 


ಕರ್ನಾಟಕದ (Karnataka) ಮೂಲೆ ಮೂಲೆಗಳಲ್ಲೂ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಫೋಟೋಗಳನ್ನು ನೋಡಬಹುದು. ಒಂದು ಬಾರಿ ಅಪ್ಪು ಸಿನಿಮಾ ರಿಲೀಸ್ (Film release) ಆಗಿರಬೇಕು ಎಂದೆನಿಸುತ್ತದೆ. ಆದರೆ ಹಾರ (Garland) ಹಾಕಿರುವುದನ್ನು ನೋಡಿ ಏನೋ ಖಾಲಿ ಖಾಲಿ ಎನಿಸುತ್ತದೆ. ಅಗಲಿ 9 ದಿನಗಳಾದರೂ ಮನಸ್ಸು ಸತ್ಯ (Truth) ಒಪ್ಪಿಕೊಳ್ಳಲು ಕಷ್ಟ ಪಡುತ್ತಿದೆ. ಅಪ್ಪು ಅಂತಿಮ ದರ್ಶನ ಪಡೆಯಲು 25 ಲಕ್ಷಕ್ಕೂ ಹೆಚ್ಚು ಮಂದಿ ಆಗಮಿಸಿದ್ದರು. ಸಮಾಧಿ ಬಳಿ ಈಗಲೂ 50-70 ಸಾವಿರ ಮಂದಿ ಇದ್ದೇ ಇರುತ್ತಾರೆ. 

ಪುನೀತ್‌ ರಾಜ್‌ಕುಮಾರ್ ಜೊತೆ ಕೊನೆಯದಾಗಿ ಹಾಡಿದ ವಿಡಿಯೋ ಹಂಚಿಕೊಂಡ ರಾಘಣ್ಣ!

ಸೋಷಿಯಲ್ ಮೀಡಿಯಾದಲ್ಲಿ (Social Media) ಆಕ್ಟೀವ್ ಆಗಿರುವ ರಾಘವೇಂದ್ರ ರಾಜ್‌ಕುಮಾರ್ (Raghavendra Rajkumar) ಸಹೋದರನ ಜೊತೆ ಕಳೆದ ಅಮೂಲ್ಯ ಕ್ಷಣಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿದ್ದಾರೆ. ಅದರಲ್ಲೂ ಇತ್ತೀಚಿಗೆ ಹಂಚಿಕೊಂಡ ಫೋಟೋ ನೋಡಿದರೆ ಅಭಿಮಾನಿಗಳು ಅಪ್ಪುಗೆ ನೀಡಿರುವ ಸ್ಥಾನ ಯಾವುದು ಎಂದು ತಿಳಿಯುತ್ತದೆ. 

Tap to resize

Latest Videos

undefined

'ಅಪ್ಪು ನೀನು ಇನ್ನು ಅಭಿಮಾನಿಗಳಲ್ಲಿಯೇ ಬದುಕುತ್ತಿದ್ದೀಯ ಎಂಬ ಭಾವನೆ ನನಗೆ ಕಂದ. ದೇವರನ್ನು ಪೂಜಿಸುವ (Temple Room) ಜಾಗದಲ್ಲಿ ಅಪ್ಪುವಿಗೆ ಕೊಟ್ಟಿರುವ ಈ ಸ್ಥಾನಕ್ಕೆ  ನನ್ನ ಸಾಷ್ಟಾಂಗ ನಮಸ್ಕಾರಗಳು. ಈ ಸಂದರ್ಭದಲ್ಲಿ ಇಂತಹ ಕಾರ್ಯಗಳಿಂದ ನಮಗೆ ಇನ್ನಷ್ಟು ಶಕ್ತಿ ತುಂಬುವ ನಮ್ಮ ನಚ್ಚಿನ ಅಭಿಮಾನಿ ದೇವರುಗಳಿಗೆ ನನ್ನ ವಂದನೆಗಳು' ಎಂದು ರಾಘಣ್ಣ ಬರೆದುಕೊಂಡಿದ್ದಾರೆ. ದೇವರ ಕೋಣೆಯಲ್ಲಿ ರಾಘವೇಂದ್ರ ಸ್ವಾಮಿ (Raghavedra Swamy), ಲಕ್ಷ್ಮಿ (Lakshmi) ಫೋಟೋಗಳ ಪಕ್ಕದಲ್ಲಿ ಡಾ.ರಾಜ್‌ಕುಮಾರ್ (Dr. Rajkumar) ಮತ್ತು ಪುನೀತ್ ರಾಜ್‌ಕುಮಾರ್ ಫೋಟೋ ಇಟ್ಟು ಪೂಜಿಸಿದ್ದಾರೆ. ಈ ಫೋಟೋ ಎಂಥವರ ಕಣ್ಣಲ್ಲೂ ನೀರು ತರಿಸುತ್ತದೆ. 

ಅಪ್ಪು ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಳ್ಳಬೇಡಿ: ಪುನೀತ್ ಕುಟುಂಬದವರ ಮನವಿ

ಅಣ್ಣಾವ್ರು ತಮ್ಮ ತಾಯಿ, ಪತ್ನಿ ಹಾಗೂ ಮಕ್ಕಳ ಜೊತೆಗಿರುವ ಬ್ಲಾಕ್ ಆಂಡ್ ವೈಟ್ (Black and White) ಫೋಟೋ ಹಂಚಿಕೊಂಡ ರಾಘಣ್ಣ 'ಇದನ್ನು ನೋಡಿದಾಗ ಮನಸ್ಸಿಗೆ ತುಂಬಾನೇ ನೋವಾಗುತ್ತದೆ. ಅತಿ ಕಿರಿಯವ ನಮ್ಮನ್ನು ಬಿಟ್ಟು ಹೋಗಿದ್ದಾನೆ. ಖಾಲಿ..ಕತ್ತಲು' ಎಂದು ಬರೆದುಕೊಂಡಿದ್ದಾರೆ. 'ನಮಗೇ ಇಷ್ಟು ಸಂಕಟ ಆಗುತ್ತಿದೆ ನಿಮ್ಮ ಸಂಕಟ ಊಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆ ಭಗವಂತ ಶಕ್ತಿ ಕೊಡಲಿ ರಾಘಣ್ಣ' ಎಂದು ಗಾಯಕಿ ವಾಣಿ ಹರಿಕೃಷ್ಣ (Vani Harikrishna) ಕಾಮೆಂಟ್ ಮಾಡಿದ್ದಾರೆ.

click me!