
ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟಿ ಮಿಲನ ನಾಗರಾಜ್ ಸಂತಸದ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. ಅದುವೇ ಅವರ ಮೊದಲ ಸಿನಿಮಾ ರಿಲೀಸ್ ಆಗಿ 7 ವರ್ಷ ಪೂರೈಸಿರುವುದು. ಈ ವಿಚಾರದ ಬಗ್ಗೆ ಟ್ಟೀಟ್ ಮಾಡಿದ್ದಾರೆ...
ಕೃಷ್ಣ- ಮಿಲನ ಚಿತ್ರಕತೆ ಮುಂದುವರಿದಿದೆ; ಎರಡನೇ ಚಿತ್ರಕ್ಕೆ ತಯಾರಾಗಿದೆ ನವ ಜೋಡಿ!
ಬೃಂಧಾವನ:
'7 ವರ್ಷದ ಬೃಂದಾವನ. ಎಂಥ ಅದ್ಭುತವಾದ ಜರ್ನಿ. ಪ್ರತಿ ಹೊಸ ಸಿನಿಮಾ ಹೊಸ ಶೂಟಿಂಗ್ ಸೆಟ್ ಎಲ್ಲವೂ ನನಗೆ ಹೊಸತನ್ನು ಹೇಳಿಕೊಟ್ಟಿದೆ ಹಾಗೂ ನಾನು ಇಂದು ಈ ಮಟ್ಟಕ್ಕೆ ಬೆಳೆಯುವುದಕ್ಕೆ ಇವೆಲ್ಲವೂ ಕಾರಣ. ನನ್ನ ನಿರ್ದೇಶಕರಿಗೆ, ನಿರ್ಮಾಪಕರಿಗೆ, ತಂತ್ರಜ್ಞಾರಿಗೆ ಹಾಗೂ ಸಹ ಕಲಾವಿದರಿಗೆ ಧನ್ಯಾವಾದಗಳು' ಎಂದು ಬರೆದಿದ್ದಾರೆ.
'ಪಾನಿಪುರಿ' ಹುಡುಗಿ ಬರ್ತಡೇ;ನಿಧಿಮಾ ಕ್ರೇಜ್ ಹೇಗಿದೆ ನೋಡಿ!
'ನಮ್ ದುನಿಯಾ ನಮ್ ಸೈಲ್' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಮಿಲನಗೆ ವೃತ್ತಿ ಜೀವನದಲ್ಲಿ ಬ್ರೇಕ್ ಕೊಟ್ಟಂತ ಸಿನಿಮಾವೇ ಬೃಂದಾವನ. ಇದಾದ ನಂತರ ಹೆಚ್ಚಾಗಿ ಜಾಹೀರಾತುಗಳು ಹಾಗೂ ಇನ್ನಿತರ ಭಾಷೆಯಲ್ಲಿ ಕಾಣಿಸಿಕೊಂಡರು. ಡಾರ್ಲಿಂಗ್ ಕೃಷ್ಣ ಜೊತೆ 'ಲವ್ ಮಾಕ್ಟೇಲ್'ನಲ್ಲಿ ಅಭಿನಯಿಸಿದ ನಂತರ ಹಿಟ್ ನಟಿಯಾಗಿ ಗುರುತಿಸಿಕೊಂಡರು.
ಲವ್ ಮಾಕ್ಟೇಲ್ ಯಶಸ್ಸಿನ ನಂತರ ಭಾಗ 2ಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೆ ಸ್ಕ್ರಿಪ್ಟ್ ಪೂಜೆ ನಡೆದಿದ್ದು ಕೆಲವೇ ದಿನಗಳ ಚಿತ್ರೀಕರಣ ಆರಂಭವಾಗಲಿದೆ.
"
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.