
ಚಿರು ಇಲ್ಲದೇ ಜೀವನ ನೆನೆದು ಮಂಕಾಗಿರುವ ಮೇಘನಾ ರಾಜ್ ಮುಖದಲ್ಲಿ ಮಂದಹಾಸ ತಂದಿದ್ದು ಅವರು ಕುಟುಂಬಸ್ಥರು ಹಾಗೂ ಆಪ್ತ ಗೆಳೆಯರು ಆಯೋಜಿಸಿದ ಸೀಮಂತ ಹಾಗೂ ಬೇಬಿ ಶವರ್ ಕಾರ್ಯಕ್ರಮದಲ್ಲಿ. ಸುಮಾರು ಒಂದು ವಾರದಿಂದ ಮೇಘನಾ ರಾಜ್ ಸೀಮಂತ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಅಗುತ್ತಿದೆ. ಆ ಸಂದರ್ಭದಲ್ಲಿ ಮೇಘನಾ ಪಕ್ಕ ಇರುವ ಆ ವ್ಯಕ್ತಿ ಯಾರೆಂಬ ಕುತೂಹಲ ಹೆಚ್ಚಾಗಿದೆ.
ಚಿರು ಇಲ್ಲದ ಜೀವನದ ಬಗ್ಗೆ ಮೇಘನಾ ಮೊದಲ ಮಾತು!
ಮೇಘನಾ ರಾಜ್ ಸಹೋದರ:
ಮೇಘನಾ ರಾಜ್, ಸುಂದರ್ ರಾಜ್ ಹಾಗೂ ಪ್ರಮೀಳಾ ಜೋಶಿ ಪಕ್ಕದಲ್ಲಿ ನಿಂತಿದ್ದ ವ್ಯಕ್ತಿ ಹೆಸರು ತೇಜ್. ಅವರು ಮೇಘನಾ ರಾಜ್ ಚಿಕ್ಕಮ್ಮನ ಮಗ ಎನ್ನಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಅವರನ್ನು ಕೆಲವರು ಕಾರ್ ಡ್ರೈವರ್, ಇವೆಂಟ್ ಮ್ಯಾನೇಜರ್ ಎಂದೆಲ್ಲಾ ಗೆಸ್ ಮಾಡುತ್ತಿದ್ದಾರೆ. ಆದರೆ ಅದು ಶುದ್ದ ಸುಳ್ಳು.
ತೇಜ್ ಸ್ಯಾಂಡಲ್‌ವುಡ್ ಯುವ ನಟ. ಬಾಲ್ಯದಲ್ಲಿ ಶಂಕರ್ ನಾಗ ಜೊತೆ ತೆರೆ ಹಂಚಿಕೊಂಡವರು. ರಾಜಣ್ಣನ ಕೈಯಲ್ಲಿ ಭೇಷ್ ಎಂದೆನಿಸಿಕೊಂಡವರು. ಕನ್ನಡ ರಿವೈಡ್ ಚಿತ್ರದ ನಾಯಕ ಹಾಗೂ ನಿರ್ದೇಶಕ. ನಂತರದ ಚಿತ್ರ ರಾಮಚಾರಿ 2.0 ರಘಡ್‌ಲುಕ್‌ನಲ್ಲಿ ಸುದ್ದಿಯಾದವರು. ಕನ್ನಡ ಮಾತ್ರವಲ್ಲದೇ ತಮಿಳು ಚಿತ್ರರಂಗದಲ್ಲೂ ಗುರುತಿಸಿಕೊಂಡಿದ್ದಾರೆ.
ತೇಜ್ ಅವರ ಸಿನಿಮಾಗಳಿಗೆ ಹಾಗೂ ಮೇಘನಾ ರಾಜ್ ಕುಟುಂಬಕ್ಕೆ ಆಗಮಿಸಲಿರುವ ಲಿಟಲ್ ಸ್ಟಾರ್ ಒಳ್ಳೆಯದಾಗಲಿ ಎಂದು ಶುಭ ಹಾರೈಸೋಣ.
"
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.