25 ವರ್ಷಗಳ ನಂತ್ರ ಎತ್ತಿನ ಗಾಡಿ ಓಡಿಸಿದ ಗುರುದೇಶಪಾಂಡೆ; ಟ್ರಾಫಿಕ್ ಜಾಮಿಲ್ಲ, ಪೊಲ್ಲ್ಯೂಷನ್ ಇಲ್ಲ

By Suvarna NewsFirst Published Oct 13, 2020, 10:38 AM IST
Highlights

ನಿರ್ದೇಶಕ ಗುರು ದೇಶಪಾಂಡೆ 25 ವರ್ಷಗಳ ನಂತರ ತಮ್ಮ ಹಳ್ಳಿ ಜೀವನವನ್ನು ಎಂಜಾಯ್ ಮಾಡಿದ್ದಾರೆ.  ಎತ್ತಿನ ಗಾಡಿ ಓಡಿಸಿದ ಅನುಭವವನ್ನು ಹಂಚಿಕೊಂಡಿದ್ದಾರೆ. 

ಹಳ್ಳಿ  ಜೀವನದ ಸಂತೋಷವೇ ಬೇರೆ. ಸೈಕಲ್, ಎತ್ತಿನ ಗಾಡಿ, ಬಯಲು ಸೇಮೆ, ಹೊಲಗದ್ದೆ ಯಾವುದನ್ನೂ ಮೀರಿಸಲು ಸಾಧ್ಯವಿಲ್ಲ ಮಾಯಾನಗರದ ಪಬ್, ಮಾಲ್ ಹಾಗೂ ಐಟಿ ಹಬ್‌ಗಳಿಗೆ.  ಆತ್ಮೀಯತೆಯಿಂದ ಮಾತನಾಡುವ ಜನರು ಸಿಕ್ಕರೆ ಸಾಕಾಗಿದೆ ಈ ಕಾಂಕ್ರೀಟ್‌ ವರ್ಲ್ಡ್‌ನಲ್ಲಿ. ಇಂತಹ ಸಮಯದಲ್ಲಿ ನಿರ್ದೇಶಕ ಗುರುದೇಶಪಾಂಡೆ ಹಳ್ಳಿ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ.

ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕ ಗುರುದೇಶಪಾಂಡೆ. ರಾಜಹುಲಿ, ಪಡ್ಡೆಹುಲಿ, ಜಂಟಲ್‌ಮ್ಯಾನ್‌ ಸೇರಿ ಹಲವು ಅದ್ಭುತ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಈ ಹೈಫೈ ಬ್ಯೂಸಿ ಜೀವನದ ನಡುವೆಯೂ ಬಿಡುವು ಮಾಡಿಕೊಂಡು, ಹಳ್ಳಿ ಜೀವನಕ್ಕೆ ಸೈ ಎಂದಿದ್ದಾರೆ.

ಮೇಕೆ ಕೊಂಡ್ಕೊಂಡಿದ್ದು ಆಯ್ತು ಈಗ ಎತ್ತಿನ ಗಾಡಿ ಕಡೆ ದರ್ಶನ್‌ ಕಣ್ಣು! 

ಟ್ಟಿಟರ್‌ನಲ್ಲಿ ವಿಡಿಯೋ:
'ಸಿಟಿಯಲ್ಲಿ ಟ್ರಾಫಿಕ್ ಜಾಮ್, ಪರಿಸರ ಮಾಲಿನ್ಯ, ಬೈಕ್ ಕಾರುಗಳ ಹಾರ್ನ್ ನಡುವೆ ನಮ್ಮ ಎತ್ತಿನಗಾಡಿ ಓಡಿಸುವ ಮಜಾನೇ ಬೇರೆ. 25 ವರ್ಷಗಳ ಹಿಂದೆ ನಾನು ಊರಿಂದ ಬೆಂಗಳೂರಿಗೆ ಬಂದ ನಂತರ ನಮ್ಮ ಊರು, ಎತ್ತಿನಗಾಡಿ, ಎತ್ತು ಕರುಗಳು ಪ್ರತಿಯೊಂದನ್ನೂ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೆ. 25 ವರ್ಷಗಳ ನಂತರ ಎತ್ತಿನ ಗಾಡಿ ಓಡಿಸಿದ ಅನುಭವವಂತೂ ಅದ್ಭುತ ಪದಗಳಲ್ಲಿ ವರ್ಣಿಸಲು ಆಗದು,' ಎಂದು ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.

 

ಸಿಟಿಯಲ್ಲಿ ಟ್ರಾಫಿಕ್ ಪೊಲ್ಲ್ಯೂಷನ್ ಬೈಕ್ ಕಾರ್ ಗಳ ನಡುವೆ ನಮ್ಮ ಎತ್ತಿನಗಾಡಿ ಓಡಿಸುವ ಮಜಾನೇ ಬೇರೆ 25 ವರ್ಷಗಳ ಹಿಂದೆ ನಾನು ಊರಿಂದ ಬೆಂಗಳೂರಿಗೆ ಬಂದ ನಂತರ ನಮ್ಮ ಊರು ಎತ್ತಿನಗಾಡಿ ಎತ್ತು ಕರು ಪ್ರತಿಯೊಂದನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೆ 25 ವರ್ಷಗಳ ನಂತರ ಎತ್ತಿನ ಗಾಡಿ ಓಡಿಸಿದ ಅನುಭವವಂತೂ ಅದ್ಭುತ ಪದಗಳಲ್ಲಿ ವರ್ಣಿಸಲು ಆಗದು pic.twitter.com/VwDkOfmrCr

— Guru Deshpande (@deshpandeguru1)

ಕೆಲವು ದಿನಗಳ ಹಿಂದೆ ನಿರ್ದೇಶಕ ಪವನ್ ಒಡೆಯರ್‌ ಕೂಡ ತೋಟದಲ್ಲಿ ಟ್ರ್ಯಾಕ್ಟರ್‌ ಓಡಿಸುವ ವಿಡಿಯೋ ಶೇರ್ ಮಾಡಿಕೊಂಡು, ಹಳ್ಳಿ ಜೀವನ ಮಿಸ್ ಮಾಡಿಕೊಳ್ಳುತ್ತಿರುವೆ ಎಂದು ಹೇಳಿದ್ದರು.  ಲಾಕ್‌ಡೌನ್‌ ಸಮಯದಲ್ಲಿ ಅನೇಕರು ತಮ್ಮ ಹಳ್ಳಿ ಜೀವನಕ್ಕೆ ಮರಳಿದ್ದರು. ಮೊಬೈಲ್, ಟಿವಿ, ಕಂಪ್ಯೂಟರ್‌ ಇಷ್ಟೇ ಜೀವನ ಎಂದುಕೊಂಡಿದ್ದ ಮಕ್ಕಳಿಗೆ ಹಳ್ಳಿ ಜೀವನ ಪರಿಚಯಿಸಿ, ಹೊರಾಂಗಣ ಆಟಗಳನ್ನು ಹೇಳಿಕೊಟ್ಟವರೂ ಇದ್ದಾರೆ. ಒಟ್ಟಿನಲ್ಲಿ ಪರಿಸರದ ನಡುವೆ ಬದುಕ ಸವೆಸುವುದೇ ಜೀವನದ ಅತಿ ಅದ್ಭುತ.

click me!