
ಕಿಚ್ಚ ಸುದೀಪ್ ನಟನೆಯ ‘ಕೋಟಿಗೊಬ್ಬ 3’ ಚಿತ್ರ ನಾಲ್ಕೇ ದಿನದಲ್ಲಿ 40.5 ಕೋಟಿ ರು. ಬಾಚಿಕೊಂಡಿದೆ. ಸ್ವತಃ ಕಿಚ್ಚ ಸುದೀಪ್ ಅವರೇ ಈ ಸುದ್ದಿಯನ್ನು ರೀಟ್ವೀಟ್ ಮಾಡಿದ್ದಾರೆ. ಜೊತೆಗೆ ‘ಕೋಟಿಗೊಬ್ಬ 3’ ತಂಡಕ್ಕೆ ಅಭಿನಂದನೆ ತಿಳಿಸಿದ್ದಾರೆ. ಎಲ್ಲೆಡೆ ಕಿಚ್ಚ ಸುದೀಪ್ ಅಭಿಮಾನಿಗಳು ಈ ಖುಷಿಯನ್ನು ಸಂಭ್ರಮಿಸುತ್ತಿದ್ದಾರೆ. ಈ ತಿಂಗಳ 14 ರಂದು ಬಿಡುಗಡೆಯಾಗಬೇಕಿದ್ದ ಈ ಚಿತ್ರ ಕಾರಣಾಂತರಗಳಿಂದ ಒಂದು ದಿನ ವಿಳಂಬವಾಗಿ ಆರಂಭವಾಗಿತ್ತು. ಇದರಿಂದ ಏಳೆಂಟು ಕೋಟಿ ರು. ನಷ್ಟವಾಗಿದೆ ಎಂದು ನಿರ್ಮಾಪಕ ಸೂರಪ್ಪ ಬಾಬು ಆಕ್ರೋಶ ವ್ಯಕ್ತಪಡಿಸಿದ್ದರು. ಜೊತೆಗೆ ಇದಕ್ಕೆ ಕಾರಣವಾದವರ ವಿರುದ್ಧ ಮೊಕದ್ದಮೆ ದಾಖಲಿಸುವುದಾಗಿ ತಿಳಿಸಿದ್ದರು. ಇದೀಗ ಚಿತ್ರ ದಾಖಲೆಯ ಗಳಿಕೆ ಕಾಣುತ್ತಿದ್ದು, ಚಿತ್ರತಂಡ ಗೆಲುವಿನ ಹುಮ್ಮಸ್ಸಿನಲ್ಲಿದೆ. ಜನಪ್ರವಾಹ ಥಿಯೇಟರ್‌ಗೆ ಬರುತ್ತಿರುವುದು ಚಿತ್ರೋದ್ಯಮದ ಮಂದಿ ನಿಟ್ಟುಸಿರು ಬಿಡುವಂತೆ ಮಾಡಿದೆ.
"
ಭಗವಂತ ಕಣ್ಬಿಟ್ಟಿದ್ದಾನೆ : ಸೂರಪ್ಪ ಬಾಬು, ನಿರ್ಮಾಪಕ
ಈಗ ಆಗಿರುವ 40.5 ಕೋಟಿ ರು. ಗಳಿಕೆ ಒಟ್ಟಾರೆಯಾಗಿ ಗಳಿಕೆಯಾದ ಮೊತ್ತ. ದೇವರು ಎಷ್ಟೇ ಕಷ್ಟಕೊಟ್ಟರೂ ಕೊನೆಗೂ ಕೈ ಹಿಡಿದ. ನಾನು ಎಷ್ಟೆಲ್ಲ ಪಾಡು ಪಟ್ಟಿದ್ದೆ ಅನ್ನುವುದು ಭಗವಂತನೊಬ್ಬನಿಗೇ ಗೊತ್ತು. ಈಗ ಬಹಳ ಖುಷಿ ಅನಿಸುತ್ತಿದೆ. ಸುದೀಪ್, ಜಾಕ್ ಮಂಜು ಸೇರಿದಂತೆ ಹಲವರು ನನ್ನ ಜೊತೆಗೆ ನಿಂತರು. ಸುದೀಪ್ ಅಭಿಮಾನಿಗಳು ಪೈರಸಿ ಆಗದಂತೆ ನೋಡಿಕೊಂಡರು. ಶನಿವಾರ ‘ಕೋಟಿಗೊಬ್ಬ 3’ ಸಕ್ಸಸ್ ಮೀಟ್ ಆಯೋಜಿಸಿದ್ದೇವೆ. ಅಲ್ಲಿ ನನಗಾದ ಅನ್ಯಾಯ, ನನ್ನ ವಿರುದ್ಧದ ಪಿತೂರಿ ಎಲ್ಲದಕ್ಕೂ ಉತ್ತರ ಕೊಡ್ತೀನಿ. ಇತರ ಭಾಷೆಗಳಲ್ಲಿ ಇನ್ನೆರಡು ವಾರ ಬಿಟ್ಟು ‘ಕೋಟಿಗೊಬ್ಬ 3’ ರಿಲೀಸ್ ಆಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.