
ಕನ್ನಡ ಚಿತ್ರರಂಗದಲ್ಲಿ (Sandalwood) ಮತ್ತು ಕಿರುತೆರೆ ಲೋಕದಲ್ಲಿ ಅದ್ಭುತ ನಟಿಯಾಗಿ ಗುರುತಿಸಿಕೊಳ್ಳಬೇಕು, ಒಂದು ನಿರ್ಮಾಣ ಸಂಸ್ಥೆ ತೆರೆಯಬೇಕು ಎಂದು ಕನಸು ಕಂಡಿದ್ದ ನಟಿ ಸೌಜನ್ಯ (Soujanya) ಆತ್ಮಹತ್ಯೆ ಸುದ್ದಿ ಇಡೀ ಸಿನಿ ಸ್ನೇಹಿತರಿಗೆ ಹಾಗೂ ಸಿನಿ ರಸಿಕರಿಗೆ ಶಾಕ್ ತಂದುಕೊಟ್ಟಿತ್ತು. ಸೌಜನ್ಯ ತುಂಬಾನೇ ಸ್ಟ್ರಾಂಗ್, ಇದು ಆತ್ಮಹತ್ಯೆ ಅಲ್ಲ, ಕೊಲೆ ಎಂದು ದೂರು ದಾಖಲಿಸಿದ ಪೋಷಕರಿಗೆ ಮರಣೋತ್ತರ ಪರೀಕ್ಷೆಯಿಂದ ಸತ್ಯ ತಿಳಿದು ಬಂದಿದೆ.
ಮರಣೋತ್ತರ ಪರೀಕ್ಷೆಯಲ್ಲಿ ಕಿರುತೆರೆ ನಟಿಯ ಸಾವು ಆತ್ಮಹತ್ಯೆ ಎಂಬುವುದು ದೃಢವಾಗಿದೆ. ಕಾಸ್ ಆಫ್ ಡೆತ್ ಹ್ಯಾಂಗಿಂಗ್ ಎಂದು ಮರಣೋತ್ತರ ಪರೀಕ್ಷಾ ವರದಿ ಬಂದಿದೆ. ಸೌಜನ್ಯ ಆತ್ಮಹತ್ಯೆ ಸಂಬಂಧಿಸಿದಂತೆ ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ಮಾಡಿದ್ದರು. ಸೌಜನ್ಯ ಅವರಿಗೆ ಅಷ್ಟಾಗಿ ಅವಕಾಶಗಳು ಸಿಗದೇ ಬೇಸರ ಮಾಡಿಕೊಂಡಿದ್ದರು. ಅದಲ್ಲದೆ ಸೌಜನ್ಯ ಅವರ ಆರೋಗ್ಯ ಪದೇ ಪದೇ ಕೈ ಕೊಡುತ್ತಿತ್ತು. ಒಂದು ಕಡೆ ಆರೋಗ್ಯ ಸಮಸ್ಯೆ, ಮತ್ತೊಂದು ಕಡೆ ವೃತ್ತಿ ಜೀವನ ಕೈ ಹಿಡಿಯಲಿಲ್ಲ ಎನ್ನುವ ಕಾರಣಕ್ಕೆ ಡಿಪ್ರೆಷನ್‌ಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು.
ಸೌಜನ್ಯ ಸಾಯುವ ವೇಳೆ ಬರೆದಿಟ್ಟ ಡೆತ್ ನೋಟ್ (Death Note) ಎಫ್‌ಎಸ್‌ಎಲ್‌ಗೆ (FSL) ರವಾನೆ ಮಾಡಲಾದೆ. ರಿಪೋರ್ಟ್ ಬಂದ ಬಳಿಕ ಈ ಡೆತ್ ನೋಟ್ ಯಾರು ಬರೆದದ್ದು, ಎಂದು ದೃಢವಾಗಲಿದೆ. ಈ ಡೆತ್ ನೋಟ್ ಮತ್ತು ಅವರ ತಂದೆ ಕೊಟ್ಟಿರುವ ದೂರಿನ ಆಧಾರದ ಮೇಲೆ ತನಿಖೆ ನಡೆಸಿದ್ದಾರೆ ಪೊಲೀಸ್ ಅಧಿಕಾರಿಗಳು. ಪೋಷಕರು ನೀಡಿದ್ದ ದೂರಿನ ಮೇರೆಗೆ ಸೌಜನ್ಯ ಸ್ನೇಹಿತ ವಿವೇಕ್ (Vivek) ಮತ್ತು ಪಿಎ ಮಹೇಶ್ (PA Mahesh) ಅವರನ್ನೂ ವಿಚಾರಣೆ ನಡೆಸಲಾಗಿತ್ತು. ನಾವು ಮದುವೆ ಮಾಡಿಕೊಳ್ಳುವುದಾಗಿ ನಿರ್ಧರಿಸಿದ್ದೇವು. ಆದರೆ ನಮ್ಮ ನಡುವೆ ಯಾವುದೇ ಜಗಳ ಅಥವಾ ಕಿರುಕುಳ ಗಲಾಟೆ ಇರಲಿಲ್ಲ, ಎಂದು ವಿವೇಕ್ ವಿಚಾರಣೆ ವೇಳೆ ಸ್ಪಷ್ಟಪಡಿಸಿದ್ದರು, ಎನ್ನಲಾಗಿದೆ.
ವಿಚಾರಣೆ ವೇಳೆ ಎಪಿ ಮಹೇಶ್ ಹೇಳಿಕೆ ದಾಖಲೆ ಮಾಡಿಕೊಂಡಿದ್ದರು ಪೊಲೀಸರು. ಸೆಪ್ಟೆಂಬರ್ 30ರಂದು ಸೌಜನ್ಯ ಅವರ ಮೃತ ದೇಹ ನೇಣು ಬಿಗದ ಸ್ಥಿತಿಯಲ್ಲಿ ಕುಂಬಳಗೋಡು ಬಳಿಯ ಅಪಾರ್ಟ್‌ಮೆಂಟ್‌ನಲ್ಲಿ (Suicide) ಪತ್ತೆಯಾಗತ್ತು. ಮೇಲ್ನೋಟಕ್ಕೆ ನಟಿ ಆತ್ಮಹತ್ಯೆ ಮಾಡಿಕೊಂಡಿದ್ದರೂ, ಕೆಲವರು ಇದೊಂದು ಕೊಲೆ ಎಂದು ಶಂಕಿಸಿದ್ದರು. ಆ ಕಾರಣದಿಂದ ವಿವಿಧ ಆಯಾಮಗಳಿಂದ ಹಲವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ವಿಚಾರಣೆ ವೇಳೆ ಪೊಲೀಸರು ಆಕೆ ಯಾರಿಗೆಲ್ಲ ಪೋನ್ (Phone) ಮಾಡುತ್ತಿದ್ದರು? ಯಾರಿಂದ ಅವರಿಗೆ ಫೋನ್ ಕರೆಗಳು ಬಂದಿವೆ ಎಂದು ಪೋನ್ ವಶಪಡಿಸಿಕೊಂಡು ಪತ್ತೆ ಮಾಡಿದ್ದಾರೆ. ಇದೇ ವೇಳೆ ಸೆಲೆಬ್ರಿಟಿ ಬದುಕು ನಡೆಸಲು ಸೌಜನ್ಯ ಬಳಿ ಸಾಕಷ್ಟು ಹಣ ಇರಲಿಲಲ್ಲ, ಬದುಕಲು ಹೆಚ್ಚು ಸಾಲ ಕೂಡ ಮಾಡಿಕೊಂಡಿದ್ದರು. ಹಣ ವ್ಯವಹಾರದಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು ಎಂದು ಮಾಹಿತಿ ಪೊಲೀಸರು ತನಿಳೆ ವೇಳೆ ಮಾಹಿತಿ ಬಹಿರಂಗವಾಗಿದೆ.
ಮೂಲತಃ ಕೊಡಗು (Kodagu) ಜಿಲ್ಲೆಯ ಕುಶಾಲನಗರದವರಾಗಿರುವ ಉದಯೋನ್ಮುಖ ನಟಿ ಸೌಜನ್ಯ ಅನೇಕ ಧಾರವಾಹಿಗಳಲ್ಲಿ ನಟಿಸಿದ್ದರು. ಅಲ್ಲದೇ ಚೌಕಟ್ಟು, ಫನ್ ಸಿನಿಮಾಗಳಲ್ಲಿಯೂ ತಮ್ಮ ಪ್ರತಿಭೆ ಅನಾವರಣಗೊಳಿಸಿದ್ದರು. ಸಾವಿಗೂ ಮೊದಲು ಡೆತ್ನೋಟ್(Suicide Note) ಬರೆದಿರುವ ಸೌಜನ್ಯ 'ನನ್ನ ಸಾವಿಗೆ ಯಾರೂ ಕಾರಣರಲ್ಲ. ಅಮ್ಮ-ಅಮ್ಮ ನನ್ನನ್ನು ಕ್ಷಮಿಸಿ. ನಾನು ನಿಮ್ಮಿಬ್ಬರನ್ನೂ ತುಂಬಾ ಪ್ರೀತಿಸುವೆ. ಸದ್ಯ ನನ್ನ ಮನಸ್ಥಿತಿ ಸರಿ ಇಲ್ಲ. ಅನಾರೋಗ್ಯ ತೀವ್ರವಾಗಿ ಕಾಡುತ್ತಿದೆ. ನಾನು ಸಾವಿನ ಮನೆಗೆ ಹೋಗುತ್ತಿದ್ದೇನೆ. ಕ್ಷಮಿಸಿ ಎಂದು ಸ್ನೇಹಿತರು ಮತ್ತು ಸಹೋದರರ ಹೆಸರನ್ನೂ ಬರೆದಿದ್ದರು. ಇಂಗ್ಲಿಷ್ನಲ್ಲಿ ಬರೆದಿರುವ ಡೆತ್ನೋಟ್ 4 ಪುಟಗಳಿದ್ದವು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.