ಯಶ್ 'ಕಿರಾತಕ' ಸಿನಿಮಾ ನಿರ್ದೇಶಕ Pradeep Raj ಇನ್ನಿಲ್ಲ

Suvarna News   | Asianet News
Published : Jan 20, 2022, 10:17 AM IST
ಯಶ್ 'ಕಿರಾತಕ' ಸಿನಿಮಾ ನಿರ್ದೇಶಕ Pradeep Raj ಇನ್ನಿಲ್ಲ

ಸಾರಾಂಶ

ಕೊರೋನಾ ವೈರಸ್‌ ಮತ್ತು ಹಲವು ಆರೋಗ್ಯ ಸಮಸ್ಯೆಯಿಂದ ನಿಧನರಾದ ನಿರ್ದೇಶಕ ಪ್ರದೀಪ್ ರಾಜ್. 

ಇಡೀ ಕನ್ನಡ ಚಿತ್ರರಂಗದಲ್ಲಿ ಹಳ್ಳಿ ಕಥೆ ಹಾಗೂ ಮುದ್ದಾದ ಲವ್‌ ಸ್ಟೋರಿ (Love story) ಕೊಟ್ಟ ನಿರ್ದೇಶಕ ಪ್ರದೀಪ್ ರಾಜ್‌ (Pradeep Raj) ಜನವರಿ 20ರಂದು ಬೆಳಗ್ಗೆ ನಮ್ಮನ್ನು ಅಗಲಿದ್ದಾರೆ.  ಖ್ಯಾತ ನಿರ್ದೆಶಕರು ಹಲವು ತಿಂಗಳಿನಿಂದ ಅರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಕೊರೋನಾ ವೈರಸ್‌ಗೆ (Covid19) ಬಲಿಯಾಗಿದ್ದಾರೆ. ಇಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಕೊನೆ ಉಸಿರೆಳೆದಿದ್ದಾರೆ. 

ಪಾಂಡಿಚೇರಿಯ (Puducherry) ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿರುವ ಪ್ರದೀಪ್ ಅವರ ಅಂತ್ಯಕ್ರಿಯೆಯನ್ನು ಪಾಂಡಿಚೇರಿಯಲ್ಲಿಯೇ ಮಾಡಲಾಗುತ್ತದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅವರು ಅಗಲಿದ್ದಾರೆ. 'ಪ್ರದೀಪ್ ರಾಜ್‌ ಅವರು 15 ವರ್ಷಗಳಿಂದಲೂ ಮಧುಮೇಹದಿಂದ (Diabetes) ಬಳಲುತ್ತಿದ್ದರು. ಈಚಿಗೆ ಅವರಿಗೆ ಕೊರೋನಾ ಸೋಂಕು ಕೂಡ ತಗುಲಿತ್ತು. ಆದರಿಂದ ಅವರು ಸಾವನ್ನಪ್ಪಿದ್ದರು,' ಎಂದು ಪ್ರದೀಪ್ ರಾಜ್ ಸಹೋದರ ಪ್ರಶಾಂತ್ ರಾಜ್‌ ಮಾಧ್ಯಮ ಸ್ನೇಹಿತರಿಗೆ ತಿಳಿಸಿದ್ದಾರೆ. 

ಕೆಲವು ಮೂಲಗಳಿಂದ ತಿಳಿದು ಬಂದ ಮಾಹಿತಿ ಪ್ರಕಾರ ಮಧುಮೇಹದಿಂದ ಬಳಲುತ್ತಿದ್ದ ಪ್ರದೀಪ್ ರಾಜ್‌ ಅವರಿಗೆ 6 ತಿಂಗಳ ಹಿಂದೊಯೂ ಕೊರೋನಾ ವೈರಸ್ ತಗುಲಿತ್ತು. ಆದರೆ ಕುಟುಂಸ್ಥರೇ ಕೊರೋನಾದಿಂದ ಕೊನೆಯುಸಿರೆಳೆದಿದ್ದಾರೆ ಎಂಬ ಕಾರಣ, ಮತ್ತೆ ಸೋಂಕು ತಗುಲಿರಬಹುದು ಎನ್ನಲಾಗಿದೆ. ಪ್ರದೀಪ್ ರಾಜ್‌ ಅವರಿಗೆ ಲೀವರ್‌ ಸಂಪೂರ್ಣವಾಗಿ ಹಾನಿಯಾಗಿತ್ತು ಎನ್ನಲಾಗಿದೆ. 

'ನನ್ನಮ್ಮ ಸೂಪರ್ ಸ್ಟಾರ್' Samanvi ಅಸ್ತಿ ಕಾವೇರಿ ನದಿಯಲ್ಲಿ ವಿಸರ್ಜನೆ!

ಯಶ್ ಕಿರಾತಕ (Kirataka), ಗಣೇಶ್ (Ganesh) ಮಿ. 420, ದುನಿಯಾ ವಿಜಯ್ (Duniya Vijay) ರಜನಿಕಾಂತ, ಸತೀಶ್ ನೀನಾಸಂ ಅಂಜದ ಗಂಡು, ಬೆಂಗಳೂರು -23 ಮತ್ತು ಕಿಚ್ಚ ಸುದೀಪ್ (Kiccha Sudeep) ಅವರ ಕಿಚ್ಚ  ಸಿನಿಮಾವನ್ನು ಪ್ರದೀಪ್ ರಾಜ್ ನಿರ್ದೇಶನ ಮಾಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?
Karna Serial: ಸಂಜಯ್‌ ಕುತಂತ್ರಕ್ಕೆ ಬಲಿಯಾದ ನಿತ್ಯಾ: ಈಗ ಕರ್ಣನ ಜೊತೆ ಅಸಲಿ ಮದುವೆ ಆಗ್ಲೇಬೇಕು! ನಿಧಿ ಕಥೆ ಏನು?