Badava Rascal Movie: ಗಣರಾಜ್ಯೋತ್ಸವದಂದು OTTಗೆ ಬರಲಿದ್ದಾನೆ ಡಾಲಿ ಧನಂಜಯ

By Suvarna NewsFirst Published Jan 19, 2022, 11:39 PM IST
Highlights

ಧನಂಜಯ್ ಅಭಿನಯದ  'ಬಡವ ರಾಸ್ಕಲ್' ಚಿತ್ರ ಕಳೆದ ಡಿಸೆಂಬರ್ 24ರಂದು ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಂಡಿತ್ತು. ನಿರ್ಮಾಪಕನಾಗಿ ಮೊದಲ ಸಿನಿಮಾದಲ್ಲೇ ಧನಂಜಯ ಅವರು ಗೆದ್ದಿದ್ದರು. ಇದೀಗ ಈ ಚಿತ್ರ ಓಟಿಟಿಗೆ ಬರಲು ಸಜ್ಜಾಗಿದೆ. 

ಸ್ಯಾಂಡಲ್‌ವುಡ್‌ನ ನಟ ರಾಕ್ಷಸ ಡಾಲಿ ಧನಂಜಯ್ (Dolly Dhananjay) ಅಭಿನಯದ  'ಬಡವ ರಾಸ್ಕಲ್' (Badava Rascal) ಚಿತ್ರ ಕಳೆದ ಡಿಸೆಂಬರ್ 24ರಂದು ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಂಡಿತ್ತು. ನಿರ್ಮಾಪಕನಾಗಿ ಮೊದಲ ಸಿನಿಮಾದಲ್ಲೇ ಧನಂಜಯ ಅವರು ಗೆದ್ದಿದ್ದರು. ಇದೀಗ ಈ ಚಿತ್ರ ಓಟಿಟಿಗೆ (OTT) ಬರಲು ಸಜ್ಜಾಗಿದೆ. ಹೌದು! ಗಣರಾಜ್ಯೋತ್ಸವದ (Republic Day) ಪ್ರಯುಕ್ತ ಜನವರಿ 26ರಂದು ವೂಟ್ ಸೆಲೆಕ್ಟ್‌ನಲ್ಲಿ (Voot Select) 'ಬಡವ ರಾಸ್ಕಲ್' ಸಿನಿಮಾ ಪ್ರಸಾರವಾಗಲಿದೆ. ಶಂಕರ್ ಗುರು (Shankar Guru) ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರವು ಪ್ರೇಕ್ಷಕರಿಗೆ ಸಾಕಷ್ಟು ನಗುವಿನ ಕಚಗುಳಿ ನೀಡಿತ್ತು. 

ಶ್ರೀಮಂತ ರಾಜಕಾರಣಿಯ ಮಗಳು ಸಂಗೀತಾ (ಅಮೃತಾ) (Amrutha Iyengar) ಮತ್ತು ಮಧ್ಯಮ ವರ್ಗ ಕುಟುಂಬದ ಶಂಕರ್ (ಧನಂಜಯ್) ನಡುವೆ ಪ್ರೇಮ ಬೆಳೆದು ಅಂತಿಮವಾಗಿ ಅವರಿಬ್ಬರು ಒಂದಾಗಲಿದ್ದಾರೆಯೇ ಎಂಬುದೇ ಸಿನಿಮಾದ ಕಥೆ. ಹಲವು ತಿರುವುಗಳುಳ್ಳ ಈ ಸಿನಿಮಾದಲ್ಲಿ ಮಧ್ಯಮ ವರ್ಗದ ಜೀವನದ ಬಗ್ಗೆಯೂ ಹೇಳಲಾಗಿದೆ. ರೊಮ್ಯಾಂಟಿಕ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ರಂಗಾಯಣ ರಘು (Rangayana Raghu) ಹಾಗೂ ತಾರಾ (Tara) ಅವರು ಧನಂಜಯ ಅವರ ತಂದೆ-ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರವೂ ಈಗಾಗಲೇ ಯಶಸ್ವಿ ಪ್ರದರ್ಶನ ಕಂಡು, ಜನರಿಂದ ಮೆಚ್ಚುಗೆ ಪಡೆದಿದ್ದು, ಇದೀಗ ವೂಟ್ ಸೆಲೆಕ್ಟ್ ಮೂಲಕ ಓಟಿಟಿಯಲ್ಲಿ ಧೂಳೆಬ್ಬಿಸಲು ಸಜ್ಜಾಗಿದೆ. 

ಪುಟ್ಟ ಮಕ್ಕಳು ಕೊಟ್ಟ ಗಿಫ್ಟ್‌ಗೆ ವೇದಿಕೆ ಮೇಲೆ ಭಾವುಕರಾದ Badava Rascal Dhananjay!

ಈ ಬಗ್ಗೆ ಪ್ರತಿಕ್ರಿಯಿಸಿರುವ ಚಿತ್ರದ ನಟ ಡಾಲಿ ಧನಂಜಯ್, ಈ ಚಿತ್ರ ನನಗೆ ಎರಡು ಕಾರಣಗಳಿಂದ ಬಹಳ ಹತ್ತಿರವೆನಿಸುತ್ತದೆ. ಒಂದು, ಚಿತ್ರತಂಡ, ಮತ್ತೊಂದು, ಈ ಚಿತ್ರದಲ್ಲಿನ ಕಥೆ. ಬಡತನದ ಸೂಕ್ಷ್ಮತೆಯನ್ನು ಈ ಚಿತ್ರತಂಡ ತೋರಿಸುವಲ್ಲಿ ಯಶಸ್ವಿಯಾಗಿದೆ. ಒಬ್ಬ ಸಾಮಾನ್ಯ ಮನುಷ್ಯ ತನ್ನ ಕನಸುಗಳನ್ನು ಹೇಗೆ ಬೆನ್ನಟ್ಟಿ ಯಶಸ್ವಿಯಾಗುತ್ತಾನೆ, ಜೊತೆಗೆ ಪ್ರೀತಿಯನ್ನೂ ಬಿಟ್ಟುಕೊಡದೇ ಹೇಗೆಲ್ಲಾ ಕಷ್ಟ ಪಡುತ್ತಾನೆ ಎಂಬುದನ್ನು ಭಾವನಾತ್ಮಕವಾಗಿ ತೋರಿಸಲಾಗಿದೆ. ಲಾಕ್‌ಡೌನ್‌ನಿಂದಾಗಿ ಸಾಕಷ್ಟು ಜನರು ಥಿಯೇಟರ್‌ಗೆ ಬರಲು ಸಾಧ್ಯವಾಗಿಲ್ಲ. ಹೀಗಾಗಿ ನಮ್ಮ ಚಿತ್ರವೇ ನಿಮ್ಮ ಮನೆಗೆ ಬರಲು ಸಿದ್ಧವಾಗಿದೆ. ಪ್ರತಿಯೊಬ್ಬರು ವೂಟ್‌ ಸೆಲೆಕ್ಟ್‌ನಲ್ಲಿ ಈ ಚಿತ್ರವನ್ನು ವೀಕ್ಷಿಸಿ ಎಂದು ಮನವಿ ಮಾಡಿದ್ದಾರೆ. 



ಇತ್ತೀಚೆಗೆ ಸಿನಿಮಾ ಗೆಲುವಿನ ಹಿನ್ನೆಲೆಯಲ್ಲಿ ಇಡೀ ಚಿತ್ರತಂಡ ರಾಜ್ಯದ ಹಲವು ಜಿಲ್ಲೆಗಳಿಗೆ ಭೇಟಿ ನೀಡಿತ್ತು. ಈ ಮೂಲಕ ಗೆಲುವನ್ನು ಸಂಭ್ರಮಿಸಿತ್ತು. ಡಾಲಿ ಹೋದಲ್ಲೆಲ್ಲಾ ಆರತಿ ಎತ್ತಿ, ಹೂ ಮಳೆ ಸುರಿಸಿ ಅಭಿಮಾನಿಗಳು ಜೈಕಾರ ಕೂಗಿದ್ದರು. ಮಾತ್ರವಲ್ಲದೇ ಕೋವಿಡ್​ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೆಲ ಜಿಲ್ಲೆಗಳಿಗೆ ಭೇಟಿ ನೀಡೋಕೆ ಚಿತ್ರತಂಡದ ಬಳಿ ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಧನಂಜಯ ಅವರು ಬೇಸರ ಹೊರ ಹಾಕಿದ್ದರು. ಎಲ್ಲರೂ ಸುರಕ್ಷಿತವಾಗಿರಿ ಎಂದು ಅವರು ಕೋರಿಕೊಂಡಿದ್ದರು. ಮುಖ್ಯವಾಗಿ 'ಟಗರು' ಸಿನಿಮಾದಿಂದ ಇಷ್ಟು ದಿನ ವಿಲನ್ ಆಗಿ ಗೆದ್ದಿದ್ದ ಧನಂಜಯ್ ಈಗ ಹೀರೋ ಆಗಿ ಈ ಚಿತ್ರದಿಂದ ದೊಡ್ಡ ಸಕ್ಸಸ್ ಪಡೆದಿದ್ದಾರೆ.

Ratnan Prapancha: OTTಯಲ್ಲಿ ತಮಿಳು ಸೂರ್ಯನನ್ನು ಮೀರಿಸಿದ ಡಾಲಿ ಧನಂಜಯ

ಇನ್ನು 'ಡಾಲಿ ಪಿಕ್ಚರ್' (Dolly Picture) ಬ್ಯಾನರ್‌ನಲ್ಲಿ ಸಾವಿತ್ರಮ್ಮ ಅಡವಿ ಸ್ವಾಮಿ ನಿರ್ಮಿಸುತ್ತಿರುವ 'ಬಡವ ರಾಸ್ಕಲ್‌' ಚಿತ್ರಕ್ಕೆ ಶಂಕರ್‌ ಗುರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಈ ಚಿತ್ರದಲ್ಲಿ 'ಮಠ' ಗುರುಪ್ರಸಾದ್‌ (Guruprasad) ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  'ಸ್ವರ್ಶ' ರೇಖಾ, ನಾಗಭೂಷಣ್, ಪೂರ್ಣಚಂದ್ರ ಮೈಸೂರು, ನಿರಂಜನ್, ಮಾಸ್ತಿ ಮಂಜು ಸೇರಿದಂತೆ ಮುಂತಾದವರು ಬಣ್ಣ ಹಚ್ಚಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ವಾಸುಕಿ ವೈಭವ್‌ (Vasuki Vaibhav) ಸಂಗೀತ ಸಂಯೋಜಿಸಿದ್ದಾರೆ. ಪ್ರೀತ ಜಯರಾಮನ್‌ ಛಾಯಾಗ್ರಹಣ, ನಿರಂಜನ್‌ ದೇವರಮನೆ ಸಂಕಲನ ಹಾಗೂ ವಿನೋದ್‌ ಸಾಹಸ ನಿರ್ದೇಶನ 'ಬಡವ ರಾಸ್ಕಲ್‌' ಚಿತ್ರಕ್ಕಿದೆ.

ಬಡವ ರಾಸ್ಕಲ್❤️
ಇದೇ ಜನವರಿ 26 ರಿಂದ ನಲ್ಲಿ pic.twitter.com/Mt5FlyTvkf

— Dhananjaya (@Dhananjayaka)
click me!