8 ಲಕ್ಷ ಫಾಲೋವರ್ಸ್‌ ಇದ್ರೂ ಕಿಚ್ಚ ಸುದೀಪ್‌ ಮಾತ್ರ ಈ 4 ಜನರನ್ನಷ್ಟೇ ಫಾಲೋ ಮಾಡೋದು!

Suvarna News   | Asianet News
Published : Jul 24, 2020, 05:19 PM IST
8 ಲಕ್ಷ  ಫಾಲೋವರ್ಸ್‌ ಇದ್ರೂ ಕಿಚ್ಚ ಸುದೀಪ್‌ ಮಾತ್ರ ಈ 4 ಜನರನ್ನಷ್ಟೇ ಫಾಲೋ ಮಾಡೋದು!

ಸಾರಾಂಶ

ಕುತೂಹಲ ಸೃಷ್ಟಿಸಿತು ಕಿಚ್ಚ ಸುದೀಪ್ ಫಾಲೋವರ್ಸ್‌ ಲಿಸ್ಟ್‌. 771k ಫಾಲೋವರ್ಸ್‌ ಹೊಂದಿರುವ ಕಿಚ್ಚ ಸುದೀಪ್‌ ಈ 4 ಜನರನ್ನು ಮಾತ್ರ ಫಾಲೋ ಮಾಡ್ತಿರೋದು..  

ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಅದರಲ್ಲೂ ಟ್ಟಿಟರ್‌ ಮತ್ತು ಇನ್‌ಸ್ಟಾಗ್ರಾಂನಲ್ಲಿ ಏನಾದರೂ ಅಪ್ಡೇಟ್‌ ಮಾಡುತ್ತಲೇ ಇರುತ್ತಾರೆ. ಸುಮಾರು 7.5 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ ಹೊಂದಿರುವ ಕಿಚ್ಚ ಮಾತ್ರ ಯಾರ ಪೋಸ್ಟ್‌ ಹೆಚ್ಚು ನೋಡುತ್ತಾರೆ ಗೊತ್ತಾ?

ಕಿಚ್ಚ ಫಾಲೋವಿಂಗ್:

ಸುಮಾರು 153 ಫೋಟೋ/ ವಿಡಿಯೋಗಳನ್ನು ಶೇರ್ ಮಾಡಿರುವ ಕಿಚ್ಚ ಸುದೀಪ್‌ ಮಾತ್ರ ನೋಡುವುದು ಇವರ ಪೋಸ್ಟ್‌ ಮಾತ್ರ. ಅವರು ಬೇರೆ ಯಾರೂ ಅಲ್ಲ ತಬ್ರೇಜ್ ಶಮ್ಸಿ,ಆಡಮ್ ಗಿಲ್‌ಕ್ರಿಸ್ಟ್, ಹರ್ಷಲ್ ಗಿಬ್ಸ್ ಮತ್ತು ಡ್ಯಾರೆನ್ ಸೆಂಟೋಫಾಂಟಿರನ್ನು.

ತಬ್ರೇಜ್ ಶಮ್ಸಿ ಸೌತ್‌ ಆಫ್ರಿಕಾದ ಬೌಲರ್‌, ಆಡಮ್ ಗಿಲ್‌ಕ್ರಿಸ್ಟ್ ಆಸ್ಟ್ರೇಲಿಯಾದ ಲೆಫ್ಟ್‌ ಹ್ಯಾಂಡ್‌ ಕ್ರಿಕೆಟರ್‌, ಹರ್ಷಲ್ ಗಿಬ್ಸ್ ಸೌತ್‌ ಆಫ್ರಿಕಾದ ರೈಟ್‌ ಹ್ಯಾಂಡ್‌ ಕ್ರಿಕೆಟರ್‌ ಮತ್ತು ಖ್ಯಾತ ಫೋಟೋಗ್ರಾಫರ್‌ ಡ್ಯಾರೆನ್‌ರನ್ನು.

4 ಸರ್ಕಾರಿ ಶಾಲೆ ದತ್ತು ಪಡೆದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್!

ಫ್ಯಾಂಟಮ್‌ ಕ್ರೇಜಿ:

ಕಿಚ್ಚ ಸುದೀಪ್ ಬಹು ನಿರೀಕ್ಷಿತ ಸಿನಿಮಾ 'ಕೋಟಿಗೊಬ್ಬ 3' ರಿಲೀಸ್‌ ಆಗಬೇಕಿದೆ. ಚಿತ್ರಮಂದಿರದಲ್ಲಿ ಪ್ರದರ್ಶನ ಪ್ರಾರಂಭಿಸಿದ ಕೂಡಲೇ ಸಿನಿಮಾ ರಿಲೀಸ್ ಮಾಡಲಾಗುತ್ತದೆ. ಇನ್ನು ಲಾಕ್‌ಡೌನ್‌ ಕೊರೋನಾ ಭಯದ ನಡುವೆಯೂ ಕಿಚ್ಚ ಸುದೀಪ್‌ ಹೈದರಾಬಾದ್‌ಗೆ ತೆರಳಿ ಕಾಡಿನ ಸೆಟ್‌ನಲ್ಲಿ ಚಿತ್ರೀಕರಣ ಪ್ರಾರಂಭಿಸಿದ್ದಾರೆ. ಫ್ಯಾಂಟಮ್‌ ಸಿನಿಮಾದ ವಿಡಿಯೋಗಳು  ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಹೈಪ್‌ ಕ್ರಿಯೇಟ್‌ ಮಾಡಿವೆ. ಚಿತ್ರತಂಡ ಸಿನಿಮಾದ ಪ್ರಮುಖ ಅಪ್ಡೇಟ್ಗಳನ್ನು  ಶೇರ್ ಮಾಡುತ್ತಲೇ ಇರುತ್ತಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?