
ಬೆಂಗಳೂರು(ಜು. 24) ಚಿರು ಆತ್ಮದ ಜೊತೆ ಮಾತುಕತೆ ನಡೆಸಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಚಿರಂಜೀವಿ ಸರ್ಜಾ ಆತ್ಮದ ಜತೆ ಮಾತನಾಡಿದ ವಿಡಿಯೋ ಸಂಚಲನ ಸೃಷ್ಟಿಸಿದೆ.
ಪ್ಯಾರಾನಾರ್ಮಲ್ ತಜ್ಞ ಚಿರಂಜೀವಿಯನ್ನು ಮಾತನಾಡಿಸಲು ಮಾಡಿರೋ ಪ್ರಯತ್ನದ ವಿಡಿಯೋ ಯು ಟ್ಯೂಬ್ ನಲ್ಲಿ ಇದೆ. ಹೃದಯಾಘಾತದಿಂದ ನಿಧನರಾಗಿದ್ದ ಚಿರಂಜೀವಿ ನಿಧನರಾಗಿದ್ದರು.
ಸುಶಾಂತ್ ಸಿಂಗ್ ಆತ್ಮ ಮಾತನಾಡುತ್ತಿದೆ; ಆತ್ಮಹತ್ಯೆ ಕಾರಣ ಬಿಚ್ಚಿಟ್ಟ ಆತ್ಮದ ವಿಡಿಯೋ ಇದು?
ಆರಂಭದಲ್ಲಿ ಚಿರು ಅವರ ಹುಟ್ಟಿದ ದಿನ ಮತ್ತು ವರ್ಷವನ್ನು ಹೇಳಿ ಮಾತು ಆರಂಭ ಮಾಡಲಾಗುತ್ತದೆ. ಬಳಿಕ ಅವರ ಸಾವಿನ ದಿನಾಂಕವನ್ನು ಹೇಳಿ ಮಾತು ಕಥೆ ಮುಂದುವರಿಯುತ್ತದೆ. ಆದರೆ ಎಲ್ಲಿಯೂ ಚಿರು ಅವರ ಧ್ವನಿಯಾಗಲಿ ಇನ್ನೇನು ಸೂಚನೆಯಾಗಲಿ ಕಂಡುಬವರುವುದಿಲ್ಲ. ರೆಡಿಯೋದ ರೀತಿಯ ಸೌಂಡ್ ಮಾತ್ರ ಕೇಳಿಸುತ್ತದೆ.
"
ಪ್ಯಾರಾನಾರ್ಮಲ್ ತಜ್ಞನ ಪ್ರಕಾರ ಆ ಬಿಪ್ -ಆಡಿಯೋ ಡಿಸ್ಟರ್ಬ್ ಆಗುವುದೇ ಆತ್ಮದ ಸನ್ನೆ. ಚಿರಂಜಿವಿ ಸರ್ಜಾ ನಿಮ್ಮ ಅಭಿಮಾನಿಗಳಿಂದ ನಿಮಗೆ ಸಂದೇಶ ಇದೆ ಎಂದು ತಜ್ಞ ಮಾತು ಮುಂದುವರಿಸುತ್ತಾರೆ. 3 ನಿಮಿಷ 54 ಸೆಕೆಂಡ್ ಇರೋ ವಿಡಿಯೋ ವೈರಲ್ ಆಗುತ್ತಿದೆ. ಇತ್ತೀಚೆಗಷ್ಟೇ ಸುಶಾಂತ್ ಸಿಂಗ್ ಆತ್ಮದ ಜತೆ ಮಾತನಾಡಿದ್ದ ಪ್ಯಾರಾನಾರ್ಮಲ್ ತಜ್ಞ ಮಾತನಾಡಿದ್ದರು.
ಸೋಶಿಯಲ್ ಮೀಡಿಯಾದಲ್ಲಿ ಇದು ರೆಡಿಯೋ ಪ್ರಿಕ್ವೆನ್ಸಿ ಎಂದು ಕಮೆಂಟ್ ಗಳು ಬಂದಿವೆ. ಸುಶಾಂತ್ ಸಿಂಗ್ ನಂತರ ಚಿರಂಜೀವಿ ಸರ್ಜಾಗೂ ಸಂಬಂಧಿಸಿ ಒಂದೆ ತೆರನಾದ ವಿಡಿಯೋ ವೈರಲ್ ಆಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.