
ದಿನೇ ದಿನೇ ಸಾಮಾಜಿಕ ಜಾಲತಾಣಗಳನ್ನು ಬಳಸುವವರು ಹೆಚ್ಚಾಗುತ್ತಿದ್ದಂತೆ ವಿವಾದಗಳು, ಅರೋಪ ಪ್ರತ್ಯಾರೋಪಗಳು ಹಹೆಚ್ಚಾಗುತ್ತಿವೆ. ತಮ್ಮ ನೆಚ್ಚಿನ ನಟ-ನಟಿಯನ್ನು ಫಾಲೋ ಮಾಡುತ್ತಾ ಅವರು ಅಪ್ಲೋಡ್ ಮಾಡುವ ಫೋಟೋ ಮತ್ತು ವಿಡಿಯೋಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಇಷ್ಟವಾದರೆ ಹೊಗಳುತ್ತಾರೆ ತಪ್ಪಿದ್ದರೆ ತಮ್ಮ ಮೂಗಿನ ನೇರಕ್ಕೆ ಹೇಳುತ್ತಾರೆ. ಇತ್ತೀಚಿಗೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ ಕನ್ನಡ ಬಳಸದ ಕಾರಣ ಟ್ರೋಲ್ ಅಗಿದ್ದರು ಈಗ ಮತ್ತೊಬ್ಬ ನಟಿ ಕನ್ನಡಾಭಿಮಾನಿಗಳ ಕೆಂಗಣ್ಣಿಗೆ ಗುರಿ ಆಗಿದ್ದಾರೆ.
ಮಿಸ್ಟರ್ ಆಂಡ್ ಮಿಸಸ್ ರಾಮಚಾರಿ ಚಿತ್ರದ ಮೂಲಕ ಚಿತ್ರರಂಗದ ಅವಳಿ ಸಹೋದರಿಯರು ಎಂದು ಪರಿಚಿತರಾದರಲ್ಲಿ ಒಬ್ಬರು ಅಶ್ವಿತಿಶೆಟ್ಟಿ ಈಗ ನೆಟ್ಟಿಗರ ಟಾರ್ಗೆಟ್ ಆಗಿದ್ದಾರೆ. ಇತ್ತೀಚಿಗೆ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಫೋಟೋ ಶೇರ್ ಮಾಡಿಕೊಂಡು ಇಂಗ್ಲಿಷ್‌ನಲ್ಲಿ ಕ್ಯಾಪ್ಶನ್ ಬರೆದುಕೊಂಡಿದ್ದಾರೆ. ಇದನ್ನು ನೋಡಿ ನೆಟ್ಟಿಗನೊಬ್ಬ 'ಕನ್ನಡವನ್ನು ಬಳಸಿ ಮೇಡಂ ದಯವಿಟ್ಟು' ಎಂದು ಕಾಮೆಂಟ್ ಮಾಡಿದ್ದಾರೆ.
ಅಶ್ವಿತಿ ರಪ್ಲೈ ಹೀಗಿತ್ತು:
ಈ ರೀತಿ ಮನವಿ ಮಾಡಿದ ಅಭಿಮಾನಿಗೆ ಅಶ್ವಿತಿ 'ದೇವರಾಜ್ ಆರ್ ನಿಮ್ಮ ಬಯೋಡೇಟಾದಲ್ಲಿ ಯಾಕೆ ಇಂಗ್ಲೀಷ್ ಇದೆ?' ಎಂದು ಮರು ಪ್ರಶ್ನೆ ಮಾಡಿದ್ದಾರೆ. ಅಶ್ವಿತಿ ಅವರ ಗೊಂದಲಕ್ಕೆ ಸ್ಪಷ್ಟನೇ ನೀಡಬೇಕೆಂದು ದೇವರಾಜ್ ಮರು ಉತ್ತರಿಸಿದ್ದಾರೆ.
ನಾನು ಕನ್ನಡನೇ ಬಳಸಿ ಅಂತ ಹೇಳ್ತಿಲ್ಲ. ಕನ್ನಡವನ್ನೂ ಬಳಸಿ ಅಂತ ಹೇಳ್ತಿರೋದು. ನೀವೇನು ಹಾಲಿವುಡ್ ಜೀಮ್ಸ್ ಕ್ಯಾಮರನ್ ಜೊತೆ ಕೆಲ್ಸ ಮಾಡ್ತಿಲ್ಲ ಕನ್ನಡ ನಿರ್ದೇಶಕರ ಜೊತೆ ಕೆಲಸ ಮಾಡ್ತಿರೋದು. ನಿಮ್ಮನ್ನು ಪರದೆ ಮೇಲೆ ಹೆಚ್ಚಾಗಿ ಕನ್ನಡಿಗರೇ ನೋದೋದು ಹೊರತು ಬೇರೆ ಭಾಷೆಯವರಾಗಲಿ ಬೇರೆ ರಾಷ್ಟ್ರದವರಾಗಲಿ ನೋಡಲ್ಲ. ಇನ್ನು ನನ್ನ ಬಯೋ ವಿಚಾರಕ್ಕೆ ಬರೋದಾದ್ರೆ ನಾವ್ ಆಂಗ್ಲ ಭಾಷೆಯನ್ನು ಊಟದ ಜೊತೆ ಉಪ್ಪಿನಕಾಯಿ ರೀತಿ ಬಳಸ್ತೀವಿ ಹೊರತು ಆಂಗ್ಲ ಭಾಷೆಯನ್ನೇ ಊಟದ ರೀತಿ ನೋಡಲ್ಲ' ಎಂದು ಬರೆದುಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.