Vikrant Rona Release: ಫೆಬ್ರವರಿ 24ರಂದು ಕಿಚ್ಚ ಸುದೀಪ್ ಚಿತ್ರ ರಿಲೀಸ್!

Suvarna News   | Asianet News
Published : Dec 07, 2021, 01:20 PM ISTUpdated : Dec 08, 2021, 01:12 PM IST
Vikrant Rona Release: ಫೆಬ್ರವರಿ 24ರಂದು ಕಿಚ್ಚ ಸುದೀಪ್ ಚಿತ್ರ ರಿಲೀಸ್!

ಸಾರಾಂಶ

ಕೋಟಿ ವೆಚ್ಚದ ಸಿನಿಮಾ ಡೇಟ್ ಅನೌನ್ಸ್ ಮಾಡಿದ ಕಿಚ್ಚ ಸುದೀಪ್. ಮುಂದಿನ ವರ್ಷ ಬರ್ತಿದ್ದಾನೆ ವಿಕ್ರಾಂತ್ ರೋಣ..... 

ಸ್ಯಾಂಡಲ್‌ವುಡ್‌ (Sandalwood) ಅಭಿನಯ ಚಕ್ರವರ್ತಿ, ಹ್ಯಾಂಡ್ಸಮ್ ಮ್ಯಾನ್, ಮಾಣಿಕ್ಯ ಕಿಚ್ಚ ಸುದೀಪ್ ಬಹು ನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣ (Vikrant Rona) ರಿಲೀಸ್ ದಿನಾಂಕದ ಬಗ್ಗೆ ಅಭಿಮಾನಿಗಳು ಸಾಕಷ್ಟು ಪ್ರಶ್ನೆಗಳನ್ನು ಕೇಳುತ್ತಿದ್ದರು. ಸಿನಿಮಾದ ಸಣ್ಣ ಪುಟ್ಟ ಅಪ್ಡೇಟ್‌ಗಳನ್ನು ಹಂಚಿಕೊಳ್ಳುತ್ತಿದ್ದ ತಂಡ, ಈ ವರ್ಷವೇ ಚಿತ್ರ ರಿಲೀಸ್‌ ಮಾಡಬಹುದು ಎಂದು ಅಭಿಮಾನಿಗಳು ಗೆಸ್ ಮಾಡಿದ್ದರು. ಕೋಟಿಗೊಬ್ಬ 3 (Kotiobba 3) ರಿಲೀಸ್ ಆಗಿದೆ. ವಿಕ್ರಾಂತ್ ಕೂಡ ಬರಲಿ ಎಂದು ಡಿಮ್ಯಾಂಡ್ ಮಾಡುತ್ತಿದ್ದರು. ಹೀಗಾಗಿ ಅಭಿಮಾನಿಗಳಿಗೋಸ್ಕರ ಬಿಗ್ ಸರ್ಪ್ರೈಸ್ ರಿವೀಲ್ ಮಾಡಿದ್ದಾರೆ.

ಹೌದು! ಕಿಚ್ಚ ಸುದೀಪ್ (Kiccha Sudeep) ಮತ್ತು ಅನೂಪ್ ಬಂಡಾರಿ (Anup Bhandari) ಕಾಂಬಿನೇಷನ್‌ನಲ್ಲಿ ಮೂಡಿ ಬಂದಿರುವ ವಿಕ್ರಾಂತ್ ರೋಣ ಸಿನಿಮಾವನ್ನು ನೀವು ಮುಂದಿನ ವರ್ಷ ಅಂದ್ರೆ 2022ರ ಫೆಬ್ರವರಿ 24ರಂದು ದೇಶಾದ್ಯಂತ ವೀಕ್ಷಿಸಬಹುದು.  37 ಸೆಕೆಂಡ್‌ಗಳ ಟೀಸರ್ ವಿಡಿಯೋ ರಿಲೀಸ್ ಮಾಡುವ ಮೂಲಕ ಡೇಟ್ ಅನೌನ್ಸ್ ಮಾಡಿದ್ದಾರೆ. ಜೀ ಸ್ಟುಡಿಯೋ ಮತ್ತು ಕಿಚ್ಚ ಕ್ರಿಯೇಷನ್ಸ್ (Kichcha Creations) ಅರ್ಪಿಸುವ , ಶಾಲಿನಿ ಆರ್ಟ್ಸ್‌ ನಿರ್ಮಾಣದ, Invenio ಫಿಲ್ಮ್ ಅಸೋಷಿಯೇಶನ್‌ ಮತ್ತು ಕೆವಿನ್ ಪ್ರೊಡಕ್ಷನ್ ಅರ್ಪಿಸುವ ಈ ಸಿನಿಮಾ ಬಿಡುಗಡೆ ಬಗ್ಗೆ ಸೃಷ್ಟಿಯಾಗಿದ್ದು ಡೌಟ್ಸ್ ಇದೀಗ ಕ್ಲೀಯರ್ ಆಗಿದೆ.

"

ಡೇಟ್ ಅನೌನ್ಸ್ ಮಾಡಿರುವ ಈ ವಿಡಿಯೋದಲ್ಲಿ ದಿ ವರ್ಲ್ಡ್‌ ಗೆಟ್ಸ್‌ ಅ ನ್ಯೂ ಹೀರೋ ಆನ್ Feb 24th 2020 ಎಂದು ತೋರಿಸ, ಸುದೀಪ್ ಕ್ರಿಯೇಟಿವ್ ಬೈಕ್ ಮೇಲೆ ಕುಳಿತಿರುವ ಫೋಟೋ ಹಂಚಿಕೊಂಡಿದ್ದಾರೆ. ಚಿತ್ರ ತಂಡ ರಿವೀಲ್ ಮಾಡಿರುವ ಮತ್ತೊಂದು ಇಂಟ್ರೆಸ್ಟಿಂಗ್ ವಿಚಾರ ಏನೆಂದರೆ ಇದು 3D ಸಿನಿಮಾ ಎಂದು. ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ ಒಂದೇ ದಿನ ಬಿಡುಗಡೆಯಾಗುತ್ತಿದೆ. 

ಈ ಹಿಂದೆಯೇ ನಿರ್ಮಾಪಕರಾದ ಜಾಕ್ ಮಂಜು ವಿಕ್ರಾಂತ್ ರೋಣ ರಿಲೀಸ್‌ ಬಗ್ಗೆ ಸುಳಿವು ನೀಡಿದ್ದರು. 'ಡಿಸೆಂಬರ್‌ನಲ್ಲಿಯೇ ಸಿನಿಮಾ ರಿಲೀಸ್‌ ಎಂದು ಕೊಂಡು ಕೆಲಸ ಮಾಡುತ್ತಿದ್ದೇವೆ. ಚಿತ್ರದ ಬಿಡುಗಡೆ ದಿನಾಂಕ ಮೊದಲೇ ಘೋಷಿಸುವುದು, ಆಮೇಲೆ ಅದು ಮುಂದೆ ಹೋಗೋದು ಈಗ ಕಾಮನ್‌ ಆಗಿದೆ. ನಮ್ಮ ಚಿತ್ರಕ್ಕೆ ಹಾಗಾಗಬಾರದು ಅನ್ನುವ ಉದ್ದೇಶದಿಂದ ಸಿನಿಮಾ ಬಿಡುಗಡೆಗೂ ಕೆಲವು ದಿನ ಮೊದಲಷ್ಟೇ ರಿಲೀಸ್‌ ದಿನಾಂಕ ಘೋಷಿಸುತ್ತೇವೆ,' ಎಂದಿದ್ದರು. 

'ವಿಕ್ರಾಂತ್ ರೋಣ ಚಿತ್ರ ರಿಲೀಸ್ ದಿನಾಂಕವನ್ನು 3D ರೂಪದಲ್ಲಿ ಅನೌನ್ಸ್‌ ಮಾಡಿರುವುದಕ್ಕೆ ಖುಷಿ ಇದೆ. ನಮ್ಮ ಅಭಿಮಾನಿಗಳು ನಮ್ಮ ತಂಡದ ಮೇಲೆ ಸದಾ ಪ್ರೀತಿ ತೋರಿಸಿದ್ದಾರೆ. ಅವರ ಉತ್ಸಾಹ ಮತ್ತು ನಿರೀಕ್ಷೆಯು ಸಾಕಷ್ಟು ಸ್ಪಷ್ಟವಾಗಿತ್ತು. ಅದು ನಿರ್ಮಾಪಕರಿಗೆ ಅರ್ಧದಷ್ಟು ಯುದ್ಧವನ್ನು ಗೆಲ್ಲಿಸಿದಂತಾಗಿದೆ. ಅವರಿಂದ ಬೆಂಬಲ ಸಿಕ್ಕಿರುವುದಕ್ಕೆ ನಾನು ಆಭಾರಿಯಾಗಿದ್ದೇನೆ. ಈ ಚಿತ್ರದ ಮೂಲಕ ಜನರನ್ನು ರಂಜಿಸಲು ಮತ್ತು ಮಿಸ್ಟರಿ-ಥ್ರಿಲ್ಲರ್ ಪ್ರಕಾರವನ್ನು ದೊಡ್ಡ ರೀತಿಯಲ್ಲಿ ಮರು ಪರಿಚಯಿಸಲು ನಾವು ಬಯಸುತ್ತೇವೆ,' ಎಂದು ನಿರ್ಮಾಪಕ ಮಂಜು ಹೇಳಿದ್ದಾರೆ.

'ವಿಕ್ರಾಂತ್ ರೋಣ ಚಿತ್ರಮಂದಿರಗಳಿಗೆ ಹೇಳಿ ಮಾಡಿಸಿದ ಚಿತ್ರ. ಚಿತ್ರದ ಕ್ಯಾನ್ವಾಸ್ ಮತ್ತು 3D ಅನುಭವವನ್ನು ದೊಡ್ಡ ಪರದೆ ಮೇಲೆ ಆನಂದಿಸುವ ಸಂಗತಿಯಾಗಿದೆ. ಪ್ರಪಂಚದಾದ್ಯಂತ ವೀಕ್ಷಕರನ್ನು ಹೊಂದಲು ನಾವು ಅದೃಷ್ಟಶಾಲಿಯಾಗಿದ್ದೇವೆ. ಫೆಬ್ರವರಿ 24ರಂದು ಥಿಯೇಟರ್‌ಗಳಲ್ಲಿ ಬರುತ್ತೆವೆ,' ಎಂದು ನಿರ್ದೇಶಕ ಅನೂಪ್ ಮಾತನಾಡಿದ್ದಾರೆ. 

ವಿಕ್ರಾಂತ್ ರೋಣ ಚಿತ್ರದಲ್ಲಿ ಮಿಲನಾ ನಾಗರಾಜ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ, ಮಿಲನಾ ಅವರ ಪಾತ್ರ ಹೇಗಿರುತ್ತದೆ ಎಂಬುವುದು ಸದ್ಯಕ್ಕೆ ಸಸ್ಪೆನ್ಸ್ ಆಗಿದೆ. ಹುಟ್ಟು ಹಬ್ಬದ ದಿನ ಬಿಟ್ಟರೆ, ನಿರ್ದೇಶಕರು ಪಾತ್ರಧಾರಿಗಳ ಬಗ್ಗೆ ಯಾವ ಮಾಹಿತಿಯನ್ನೂ ರಿವೀಲ್ ಮಾಡುವುದಿಲ್ಲ. ಆದರೆ ಮಿಲನಾ ಚಿತ್ರೀಕರಣ ಮುಗಿಸಿದ್ದಾರೆ ಎನ್ನಲಾಗಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಿಷಬ್ ಶೆಟ್ಟಿ ದೈವದ ಮುಂದೆ ಅತ್ಬಿಟ್ರಾ? ಅಳಬೇಡ ಅಂತ ಸಂತೈಸಿದ್ದೇಕೆ ಪಂಜುರ್ಲಿ ದೈವ?
ಆಂಧ್ರಪ್ರದೇಶದ X MLA Gummadi Narsaiah ಮನೆಗೆ ಹೋದಾಗ ನನ್ನ ತಂದೆ ಬಳಿಗೆ ಹೋದಂತಾಯ್ತು: Shiva Rajkumar