Latest Videos

ನನ್ ಲೈಫ್ ಒಂದು ಜರ್ನಿ, ನಿಲ್ದಾಣ ಅಲ್ಲ, KGF ಸ್ಟಾರ್ ಯಶ್ ಮಾತಿಗೆ ಸ್ಟನ್ ಆಯ್ತು ಜಗತ್ತು!

By Shriram BhatFirst Published Jun 27, 2024, 8:51 PM IST
Highlights

ನನ್ನ ಪರಿಸ್ಥಿತಿಯನ್ನು ನೋಡಿ ಎಲ್ಲರೂ ಬೇಸರ ಪಟ್ಟುಕೊಂಡು ಒಂದು ಸಣ್ಣ ಕಾರನ್ನಾದರೂ ತೆಗೆದುಕೋ ಎನ್ನುತ್ತಿದ್ದರು. ಆದರೆ, ನಾನು ಅದಕ್ಕೆ ಒಪ್ಪಿರಲಿಲ್ಲ, ಕೆಲವರು ತುಂಬಾ ಒತ್ತಾಯ ಮಾಡಿದಾಗ..

ಕನ್ನಡದ ರಾಕಿಂಗ್ ಸ್ಟಾರ್ ಯಶ್ (Rocking Star Yash) ಮತ್ತೊಂದು ವೀಡಿಯೋ ವೈರಲ್ ಆಗಿದೆ. 'ನೀವು ನಿಮ್ಮ ಹಣವನ್ನು ಯಾವುದಾದರೂ ಆಸ್ತಿ ಖರೀದಿಗೆ ಹೂಡಿಕೆ ಮಾಡಿ, ಅಥವಾ ಕಾರು ಸೇರಿದಂತೆ ಯಾವುದಾದ್ರೂ ವಾಹನದ ಮೇಲೆ ಇನ್‌ವೆಸ್ಟ್ ಮಾಡಿ ಎಂದು ನನಗೆ ಹಲವರು ಸಲಹೆ ನೀಡುತ್ತಿದ್ದರು. ಯಾಕೆಂದರೆ, ಈಗ ನಾನಿನ್ನೂ ಬೈಕಿನಲ್ಲಿ ಓಡಾಡುತ್ತಿದ್ದೆ. ನನ್ನ ಎಲ್ಲಾ ಡ್ರೆಸ್ ಹಾಗು ಅಗತ್ಯ ವಸ್ತುಗಳನ್ನು ದೊಡ್ಡ ಬ್ಯಾಗ್‌ನಲ್ಲಿ ತುಂಬಿಕೊಂಡು ಅದನ್ನು ಬೆನ್ನಿಗೆ ಹಾಕಿಕೊಂಡು, ಲಾಡಿಯನ್ನು ಹೊಟ್ಟೆಗೆ ಸುತ್ತಿಕೊಂಡು ಎಲ್ಲಾ ಕಡೆ ಓಡಾಡುತ್ತಿದ್ದೆ. 

ನನ್ನ ಪರಿಸ್ಥಿತಿಯನ್ನು ನೋಡಿ ಎಲ್ಲರೂ ಬೇಸರ ಪಟ್ಟುಕೊಂಡು ಒಂದು ಸಣ್ಣ ಕಾರನ್ನಾದರೂ ತೆಗೆದುಕೋ ಎನ್ನುತ್ತಿದ್ದರು. ಆದರೆ, ನಾನು ಅದಕ್ಕೆ ಒಪ್ಪಿರಲಿಲ್ಲ, ಕೆಲವರು ತುಂಬಾ ಒತ್ತಾಯ ಮಾಡಿದಾಗ ಅವರಿಗೆ 'ಸದ್ಯಕ್ಕೆ ನಾನು ಇದೇ ಬೈಕಿನಲ್ಲಿ ಓಡಾಡ್ತೀನಿ. ಆದ್ರೆ ಆಮೇಲೆ ಚಿಕ್ಕಪುಟ್ಟದ್ದು ಅಲ್ಲ, ದೊಡ್ಡ ಕಾರನ್ನೇ ತಗೋತೀನಿ' ಅಂದಿದ್ದೆ. ಯಾಕಂದ್ರೆ, ನನ್ ವಿಸನ್ ಇದ್ದಿದ್ದು ಸಿನಿಮಾರಂಗದಲ್ಲಿ ಯಶಸ್ವಿ ಆಗ್ಬೇಕು ಅನ್ನೋದು. ನಾನು ನನ್ನ ನಿರ್ಧಾರದಂತೆ ನಡೆದುಕೊಂಡೆ. 

ಲೇಟ್‌ ಆಗಿ ಗುಟ್ಟು ರಟ್ಟಾಗಿದೆ, ಯಾರೂ ಮಾಡದ ದಾಖಲೆ ನಟ ವಿಷ್ಣುವರ್ಧನ್ ಹೆಸರಲ್ಲಿದೆ..!

ಯಾರಿಗೋ ಕೆಲವರಿಗೆ ನಾನು ಇರುವ ರೀತಿ, ನನ್ನ ನಡವಳಿಕೆ ನೀತಿ ಇಷ್ಟವಾಯ್ತು ಅಂದ್ಕೋತೀನಿ. ನನಗೆ ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡು ಹಂತಹಂತವಾಗಿ ಬೆಳೆಯುತ್ತ ಬಂದೆ. ಇಂದು ನಾನೆಲ್ಲಿ ಇದೀನಿ ಅಂತ ನಿಜವಾಗಿಯೂ ನನಗೆ ಗೊತ್ತಿಲ್ಲ. ಆದರೆ, ನಾನು ಒಂದು ಮಾತನ್ನು ಮಾತ್ರ ಸ್ಪಷ್ಟವಾಗಿ ಹೇಳಬಲ್ಲೆ, ಅದೇನೆಂದರೆ, ನಾನು ಇಲ್ಲೂ ಫಿಕ್ಸ್ ಆಗಿ ಇರುವುದಿಲ್ಲ.., ಮತ್ತೂ ಮತ್ತೂ ಮುಂದಕ್ಕೆ ಸಾಗುತ್ತಲೇ ಇರುತ್ತೇನೆ. ನನ್ನ ಲೈಫ್ ಒಂದು ಜರ್ನಿ, ನಿಲ್ದಾಣ (ಡೆಸ್ಟಿನೇಶನ್) ಅಲ್ಲ' ಎಂದಿದ್ದಾರೆ ರಾಕಿಂಗ್ ಸ್ಟಾರ್ ಯಶ್. 

ಆ್ಯಂಕರ್​ ಅನುಶ್ರೀ ವೀಡಿಯೋ ಮತ್ತೆ ವೈರಲ್, ಎಕ್ಸ್‌ಕ್ಯೂಸ್‌ ಮೀ ನಟನ ಮನೇಲಿ ಮಾತಿನ ಮಲ್ಲಿ ಓಡಾಡಿದ್ದೇಕೆ..?

ಅಂದಹಾಗೆ, KGF Movie ನಟ ಯಶ್ ಅವರು ಸದ್ಯ ಬಾಲಿವುಡ್‌ನ ರಾಮಾಯಣ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಜತೆಗೆ, ಈ ಸಿನಿಮಾದ ನಿರ್ಮಾಣದಲ್ಲಿ ಯಶ್ ಪಾಲುದಾರಿಕೆ ಹೊಂದಿದ್ದಾರೆ. ಅಷ್ಟೇ ಅಲ್ಲ, ಮತ್ತೊಂದು ಪ್ಯಾನ್ ವರ್ಲ್ಡ್‌ ಸಿನಿಮಾ 'ಟಾಕ್ಸಿಕ್‌'ನಲ್ಲೂ ನಟ ಯಶ್ ನಟಿಸುತ್ತಿದ್ದಾರೆ. ಗೀತೂ ಮೋಹನ್‌ ದಾಸ್ ನಿರ್ದೇಶನದ ಟಾಕ್ಸಿಕ್ ಚಿತ್ರದಲ್ಲಿ ಯಶ್ ಎದುರು ನಾಯಕಿಯಾಗಿ ಸಾಯಿ ಪಲ್ಲವಿ ಹೆಸರು ಕೇಳಿ ಬರುತ್ತಿದೆ. ಆದರೆ, ರಾಮಾಯಣ ಚಿತ್ರದಲ್ಲಿ, ರಾಮನಾಗಿ ನಟಿಸುತ್ತಿರುವ ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಅವರಿಗೆ ಸೀತೆಯಾಗಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. 

ಎತ್ತಿ ಆಡಿಸಿದ ಇದೇ ಕೈಗಳಿಂದ ನಟಿ ಅಮೂಲ್ಯ ಬಾಡಿ ಟಚ್ ಮಾಡಲಾರೆ; ನಟ ದರ್ಶನ್!

click me!