ಅವೆಲ್ಲಾ ಸ್ಪೂರ್ತಿ ಸ್ವಲ್ಪ ದಿನಗಳು ಇರಬಹುದು ಅಷ್ಟೇ. ಆದ್ರೆ ನಿಜವಾದ ಸ್ಪೂರ್ತಿ ಅಂದ್ರೆ ಬದುಕು. ಸಿಂಪಲ್ಲಾಗಿ ಹೇಳ್ಬೇಕು ಅಂದ್ರೆ ಬುಡಕ್ಕೆ ಬೆಂಕಿ ಬಿದ್ರೆನೇ ರಾಕೆಟ್ ಮೇಲಕ್ಕೆ ಹಾರೋದು. ಯಾವಾಗ ನಮಗೆ ಬದುಕೋದಕ್ಕೆ ನಿಜವಾಗಿಯೂ..
ಕನ್ನಡದ ನಟ, ರಾಕಿಂಗ್ ಸ್ಟಾರ್ ಯಶ್ (Rocking Star Yash) ನಿರೂಪಕಿ ಅನುಶ್ರೀ ಜೊತೆ ಮಾತನಾಡಿರುವೊಂದು ವೀಡಿಯೋ ಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇದು ಆ್ಯಂಕರ್ ಅನುಶ್ರೀ ಹಾಗೂ ನಟ ಯಶ್ ಅವರಿಬ್ಬರೂ ಒಂದು ವೇದಿಕೆಯ ಮೇಲೆ ಮಾತನಾಡಿರುವ ಹಳೆಯ ವೀಡಿಯೋ. ಆದರೆ, ಆ ವೀಡಿಯೋ ಕ್ಲಿಪ್ಪಿಂಗ್ ಹಳೆಯದಾಗಿದ್ದರೂ ಅದು ಎಲ್ಲಾ ಕಾಲಕ್ಕೂ ಸಲ್ಲುವಂತಹ, ಹಲವರಿಗೆ ಸ್ಪೂರ್ತಿ ನೀಡುವಂಥ ವೀಡಿಯೋ ಆಗಿದೆ ಎನ್ನಬಹುದು. ಆ ವೀಡಿಯೋದಲ್ಲಿ ನಟ ಯಶ್ ಮಾತನಾಡಿರುವ ರೀತಿ ತುಂಬಾ ಜನರಿಗೆ ಇಷ್ಟವಾಗಿದೆ ಎನ್ನಬಹುದು.
ಹಾಗಿದ್ರೆ ನಟ ಯಶ್ ಅಲ್ಲಿ ಅದೇನು ಹೇಳಿದ್ದಾರೆ ನೋಡೋಣ ಬನ್ನಿ.. ಆ್ಯಂಕರ್ ಅನುಶ್ರೀ ಅವರು ರಾಕಿಂಗ್ ಸ್ಟಾರ್ ನಟ ಯಶ್ ಅವರಿಗೆ ಕೆಲವು ಪ್ರಶ್ನೆಗಳನ್ನುಕೇಳಿದ್ದಾರೆ. ಅದಕ್ಕೆ ರಾಕಿಂಗ್ ಸ್ಟಾರ್ ತಮ್ಮ ಅನಿಸಿಕೆಯಂತೆ ಉತ್ತರ ಕೊಟ್ಟಿದ್ದಾರೆ. ಅನುಶ್ರೀ ಕೇಳಿದ ಪ್ರತಿಯೊಂದು ಪ್ರಶ್ನೆಗೆ ಯಶ್ ಕೊಟ್ಟ ಉತ್ತರಕ್ಕೆ ಅಲ್ಲಿದ್ದ ಪ್ರೇಕ್ಷಕರು ಹುಚ್ಚೆದ್ದು ಕುಣಿದಿದ್ದಾರೆ, ಕೇಕೆ ಹಾಕಿದ್ದಾರೆ, ಯಶ್ ಮೆಚ್ಯೂರಿಟಿಗೆ ಅಚ್ಚರಿ ಪಟ್ಟಿದ್ದಾರೆ, ತಲೆದೂಗಿದ್ದಾರೆ.
ಕೊಲೆಗಿಂತ ಮೊದ್ಲೇ ಮಹಾ ಅಪರಾಧ ಮಾಡಿ ಮುಗಿಸಿತ್ತಾ ದರ್ಶನ್ & ಗ್ಯಾಂಗ್? ಅಗ್ನಿ ಶ್ರೀಧರ್ ಹೇಳಿದ್ದೇನು?
ನಟಿ, ನಿರೂಪಕಿ ಅನುಶ್ರೀ ಪ್ರಶ್ನೆ ಕೇಳುತ್ತ ಹೋಗಿದ್ದಾರೆ. ನಟ ಯಶ್ ಉತ್ತರಿಸುತ್ತ ಹೋಗಿದ್ದಾರೆ. ಅನುಶ್ರೀ ಸ್ಪೂರ್ತಿ' ಎಮದು ಕೇಳಿದ್ದಾರೆ. ಅದಕ್ಕೆ ನಟ ಯಶ್ 'ಸ್ಫೂರ್ತಿ ಅಂದರೆ ಬದುಕು, ಹೊಟ್ಟೆಪಾಡು ಎಂದಿದ್ದಾರೆ. ಸ್ಪೂರ್ತಿ ಅನ್ನೋದು ಎಲ್ಲೋ ಓಡದ್ಬಿಟ್ಟು, ಅಥವಾ ಯಶ್ ಏನೋ ಹೇಳಿದ್ರು, ಯಶ್ ಮಾತು ಕೇಳಿ ಒಂದ್ ಅಧ್ ಗಂಟೆ ಸ್ಪೂರ್ತಿ ಬರಬಹುದು, ಎರಡು ದಿನ ಸ್ಪೂರ್ತಿ ಬರಬಹುದು.. ಅಥವಾ, ಎಲ್ಲೋ ಏನೋ ಪುಸ್ತಕ ಓದಿ ಅಥವಾ ಯಾರೋ ಹೇಳಿದ್ದು ಕೇಳಿ ಸ್ಪೂರ್ತಿ ಬರಬಹುದು.
ಕೆಜಿಎಫ್ ಸ್ಟಾರ್ ಯಶ್: ಅವ್ರು ಕೊಡೋ ಪೋಸ್, ನಾವೇ ಗ್ರೇಟು ಅನ್ನೋ ಫೀಲಿಂಗ್‌ಗೆ..!
ಆದ್ರೆ, ಅವೆಲ್ಲಾ ಸ್ಪೂರ್ತಿ ಸ್ವಲ್ಪ ದಿನಗಳು ಇರಬಹುದು ಅಷ್ಟೇ. ಆದ್ರೆ ನಿಜವಾದ ಸ್ಪೂರ್ತಿ ಅಂದ್ರೆ ಬದುಕು. ಸಿಂಪಲ್ಲಾಗಿ ಹೇಳ್ಬೇಕು ಅಂದ್ರೆ ಬುಡಕ್ಕೆ ಬೆಂಕಿ ಬಿದ್ರೆನೇ ರಾಕೆಟ್ ಮೇಲಕ್ಕೆ ಹಾರೋದು. ಯಾವಾಗ ನಮಗೆ ಬದುಕೋದಕ್ಕೆ ನಿಜವಾಗಿಯೂ ಕಷ್ಟ ಬರುತ್ತೆ, ಆಗ್ಲೇ ನಾವು ಏನೋ ಮಾಡೋಕೆ ನೋಡ್ತೀವಿ. ಬದುಕೋಕೆ ಕಷ್ಟ ಆದ್ರೆ ಒಂದ್ ಚಿಕ್ಕ ಹುಳ ಕೂಡ ಕಚ್ಚೋಕೆ ಬರುತ್ತೆ.. ಅದಕ್ಕೇ, ನನ್ನ ಪ್ರಕಾರ ಬದುಕೇ ಸ್ಪೂರ್ತಿ' ಎಂದಿದ್ದಾರೆ ರಾಕಿಂಗ್ ಸ್ಟಾರ್ ಯಶ್.
ಇದು ಗುರೂ ಮಾತು ಅಂದ್ರೆ, KGF ರಾಕಿಂಗ್ ಸ್ಟಾರ್ ರ್‍ಯಾಪಿಡ್ ಫೈರ್ ಸ್ಟೈಲ್ ನೋಡಿ ಜನ ಕಂಗಾಲು!
ಇನ್ನು ಕನ್ನಡದ ನಟಿ, ಆ್ಯಂಕರ್ ಅನುಶ್ರೀ ಎಂದರೆ ಅವರೊಂದು 'ಬೊಂಬಾಟ್ ಮಾತಿನ ಬೊಂಬೆ' ಇದ್ದಂತೆ ಎಂಬುದು ಬಹಳಷ್ಟು ಜನರಿಗೆ ಗೊತ್ತು. ಸ್ಯಾಂಡಲ್‌ವುಡ್ ಹಾಗು ಕಿರುತೆರೆಯ ಹಲವಾರು ಕಲಾವಿದರನ್ನು ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಅನುಶ್ರೀ ಸಂದರ್ಶನ ಮಾಡುತ್ತಾ ಇರುತ್ತಾರೆ. ಅಲ್ಲಿ ಹಲವರನ್ನು ಕಾಲೆಳೆದು ನಕ್ಕುನಗಿಸಿ, ಅವರಿಕೆ ಪ್ರಶ್ನೆ ಕೇಳಿ ಉತ್ತರ ಪಡೆದು ಅದನ್ನೆಲ್ಲ ಜಗತ್ತಿನ ತುಂಬಾ ಹರಿದಾಡಲು ಬಿಟ್ಟು ಎಂಜಾಯ್ ಮಾಡುತ್ತಾರೆ. ಅದು ಅನುಶ್ರೀ ಅವರ ಕೆಲಸವೋ ಹವ್ಯಾಸವೋ ಗೊತ್ತಿಲ್ಲ.
ಅಭಿಮಾನಿಗಳು ಯಾರೂ ಜೈಲಿನ ಬಳಿ ಬರಬೇಡಿ, ಜೈಲ್‌ನಿಂದಲೇ ಫ್ಯಾನ್ಸ್‌ಗೆ ನಟ ದರ್ಶನ್ ಮನವಿ!
ಅಂದಹಾಗೆ, ನಟ ಯಶ್ ಅವರು ಸದ್ಯ ಬಾಲಿವುಡ್‌ನ ರಾಮಾಯಣ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಜತೆಗೆ, ಈ ಸಿನಿಮಾದ ನಿರ್ಮಾಣದಲ್ಲಿ ಯಶ್ ಪಾಲುದಾರಿಕೆ ಹೊಂದಿದ್ದಾರೆ. ಅಷ್ಟೇ ಅಲ್ಲ, ಮತ್ತೊಂದು ಪ್ಯಾನ್ ವರ್ಲ್ಡ್ ಸಿನಿಮಾ 'ಟಾಕ್ಸಿಕ್'ನಲ್ಲೂ ನಟ ಯಶ್ ನಟಿಸುತ್ತಿದ್ದಾರೆ. ಗೀತೂ ಮೋಹನ್ ದಾಸ್ ನಿರ್ದೇಶನದ ಟಾಕ್ಸಿಕ್ ಚಿತ್ರದಲ್ಲಿ ಯಶ್ ಎದುರು ನಾಯಕಿಯಾಗಿ ಸಾಯಿ ಪಲ್ಲವಿ ಹೆಸರು ಕೇಳಿ ಬರುತ್ತಿದೆ. ಆದರೆ, ರಾಮಾಯಣ ಚಿತ್ರದಲ್ಲಿ, ರಾಮನಾಗಿ ನಟಿಸುತ್ತಿರುವ ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಅವರಿಗೆ ಸೀತೆಯಾಗಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ.
ನನ್ ಲೈಫ್ ಒಂದು ಜರ್ನಿ, ನಿಲ್ದಾಣ ಅಲ್ಲ, KGF ಸ್ಟಾರ್ ಯಶ್ ಮಾತಿಗೆ ಸ್ಟನ್ ಆಯ್ತು ಜಗತ್ತು!