ಅದು ಹಾಗೇ ಆಗಿದ್ರೆ ಕೊಲೆಗೂ ಮೊದ್ಲೇ ದರ್ಶನ್ & ಗ್ಯಾಂಗ್ ಮಹಾ ಅಪರಾಧ ಎಸಗಿದೆ: ಅಗ್ನಿ ಶ್ರೀಧರ್ ಹೇಳಿದ್ದೇನು?

By Shriram Bhat  |  First Published Jun 29, 2024, 11:50 AM IST

ಚಿತ್ರದುರ್ಗದಲ್ಲಿ ಇರೋ ಇವ್ರ ಅಭಿಮಾನಿ ಹುಡುಗ್ರಿಗೆ ಹೇಳಿ ಒಂದು ಕಡೆ ಕೂಡ್ರಿಸಿಕೊಂಡು ಅವ್ನಿಗೆ ಮಾಡಿರೋ ತಪ್ಪು ಹೇಳಿ ಎರಡು ಏಟು ಕಪಾಳಕ್ಕೆ ಹೊಡೆದು, ಇನ್ಮೇಲೆ ಹೀಗ್ ಮಾಡ್ಬೇಡ ಅಂತ ಬುದ್ಧಿ ಹೇಳಿ ಕಳಿಸಿದ್ದಿದ್ರೆ ಸಿಂಪಲ್ ಆಗಿ ಮುಗಿದು ಹೋಗಿರೋದು...


ಹಿರಿಯ ಬರಹಗಾರ ಅಗ್ನಿ ಶ್ರೀಧರ್ ಅವರು ರೇಣುಕಾಸ್ವಾಮಿ ಮರ್ಡರ್ ಹಾಗೂ ಕೊಲೆ ಆರೋಪಿಗಳಾಗಿ ಜೈಲಿನಲ್ಲಿ ಇರುವ ದರ್ಶನ್ ಮತ್ತು ಗ್ಯಾಂಗ್ ಬಗ್ಗೆ ಮಾತನಾಡಿದ್ದಾರೆ. 'ರೇಣುಕಾಸ್ವಾಮಿ ಅನ್ನೋ ಆ ಹುಡಗನ್ನ ಚಿತ್ರದುರ್ಗದಿಂದ ಎತ್ತಾಕ್ಕೊಂಡು ಬಂದಿರೋದು ಬಹಳ ದೊಡ್ಡ ಅಪರಾಧ. ಅವ್ನು ಬದುಕಿಬಿಟ್ಟಿದ್ದಿದ್ರೂ, ಅವ್ನಿಗೆ ಸ್ವಲ್ಪ ಏಟ್ ಕೋಟ್ಟು ಕಳಿಸಿದ್ದಿದ್ರೂ ಅದು ತುಂಬಾ ಗಭೀರ ಅಪರಾಧ. ಅವ್ನೇನಾದ್ರೂ ಕಿಡ್ನಾಪ್ ಮಾಡಿದ್ದಕ್ಕೆ ಕಂಪ್ಲೇಂಟ್ ಕೊಟ್ಟಿದ್ದಿದ್ರೆ ಅದೇ ಒಂದು ಮಹಾ ಅಪರಾಧ ಆಗಿರ್ತಾ ಇತ್ತು. ಅದು ಮಹಾ ಸೀರಿಯಸ್ ಕೇಸ್ ಆಗ್ತಿತ್ತು. ಹಿಂದೆ ಯಾವುದೋ ಹೊಎಲ್ ಸಪ್ಲಾಯರ್‌ಗೆ ಹೊಡೆದ ಹಾಗೆ ಅಲ್ಲ, ಈ ಕಿಡ್ನಾಪ್ ಕೇಸ್. 

ಈತ, ದರ್ಶನ್ ತನ್ನ ಮೇಲೆ ತಾನು ಹಿಡಿತ ಕಳ್ಕೊಂಡ್ಬಿಟಿದಾನೆ. ಹೆಣ್ಣುಮಕ್ಳು ನೋವು ಅನುಭವಿಸುವಾಗ, ಅದ್ರಲ್ಲೂ ನಮಗೆ ಸಂಬಂಧಪಟ್ಟ ಹೆಣ್ಣುಮಕ್ಕಳು ಮಾನಸಿಕ ಹಿಂಸೆಯಿಂದ ನರಳುತ್ತಿರುವಾಗ ನಮಗೆ ಅದಕ್ಕೆ ಕಾರಣರಾದವರ ಮೇಲೆ ಸಹಜವಾಗಿಯೇ ಸಿಟ್ಟು ಬರುತ್ತೆ. ಆದ್ರೆ, ನಾವೆಲ್ಲಾ ನಮ್ಮ ಹಿಡಿತ ಕಳ್ಕೊಳ್ಳೋದಿಲ್ಲ. ಜತೆಗೆ, ಅದು ನಮ್ಮ ಹೆಣ್ಣುಮಗ್ಳಿಗೆ ಮಾತ್ರ ಆಗಿದೆ ಅನ್ನೋ ತರ ಯೋಚ್ನೆ ಮಾಡ್ವಷ್ಟು ಅವಿವೇಕಿಗಳು ನಾವು ಆಗೋದಿಲ್ಲ. ಇದು ತುಂಬಾ ಜನಕ್ಕೆ ಆಗುತ್ತೆ, ನಮಗೂ ಆಗಿದೆ ಅಂತ ಹೇಳಿ ಅರ್ಥ ಮಾಡ್ಕೋತೀವಿ. 

Tap to resize

Latest Videos

undefined

ಜೈಲಿಂದ ವಾಪಸ್ ಆದ್ಮೇಲೆ ಮತ್ತೆಂದೂ 'ಅದನ್ನು' ಮಾಡ್ಬೇಡ; ನಟ ದರ್ಶನ್‌ಗೆ ಅಗ್ನಿ ಶ್ರೀಧರ್ ಸಲಹೆ!

ಅಲ್ಲಿ, ಚಿತ್ರದುರ್ಗದಲ್ಲಿ ಇರೋ ಇವ್ರ ಅಭಿಮಾನಿ ಹುಡುಗ್ರಿಗೆ ಹೇಳಿ ಒಂದು ಕಡೆ ಕೂಡ್ರಿಸಿಕೊಂಡು ಅವ್ನಿಗೆ ಮಾಡಿರೋ ತಪ್ಪು ಹೇಳಿ ಎರಡು ಏಟು ಕಪಾಳಕ್ಕೆ ಹೊಡೆದು, ಇನ್ಮೇಲೆ ಹೀಗ್ ಮಾಡ್ಬೇಡ ಅಂತ ಬುದ್ಧಿ ಹೇಳಿ ಕಳಿಸಿದ್ದಿದ್ರೆ ಸಿಂಪಲ್ ಆಗಿ ಮುಗಿದು ಹೋಗಿರೋದು. ಅದನ್ನು ಸ್ವತಃ ದರ್ಶನ್‌ ಅವರೇ ಆ ಹುಡುಗನಿಗೆ ಫೋನ್ ಮಾಡಿ ಹೇಳಿದ್ದಿದ್ರೆ ಆಗಿರ್ತಿತ್ತು. ನಮ್ ಹೆಣ್ಣುಮಗಳಿಗೆ ಅಂತಲ್ಲ, ಈ ತರ ಯಾವುದೇ ಹೆಣ್ಣಿಗೂ ಮಾಡ್ಬೇಡ ಅಂದ್ರೆ ಮುಗಿದೇ ಹೋಗಿರ್ತಿತ್ತು. ಅವ್ನಿಗೆ ಬದಲಾಗೋದಿದ್ದರೆ ಒಂದು ಚಾನ್ಸ್ ಕೂಡ ಸಿಗ್ತಿತ್ತು. ಇವ್ರು ಕೂಡ ಈ ತರ ಜೈಲು ಪಾಲಾಗೋದು ತಪ್ಪುತ್ತಿತ್ತು. 

ಕೆಜಿಎಫ್ ಸ್ಟಾರ್ ಯಶ್: ಅವ್ರು ಕೊಡೋ ಪೋಸ್, ನಾವೇ ಗ್ರೇಟು ಅನ್ನೋ ಫೀಲಿಂಗ್‌ಗೆ..!

ಆದ್ರೆ ಅದನ್ನೆಲ್ಲ ಮಾಡೋದು ಬಿಟ್ಟು ಬೆಂಗಳೂರಿಗೆ ಕರೆದುಕೊಂಡು ಬಂದಿದ್ದು ಮಹಾ ಅಪರಾಧ. ಆ ಹುಡುಗನ್ನ ಅಲ್ಲಿಂದ ಏನ್ ಹೇಳಿ ಕರ್ಕೊಂಡು ಬಂದಿದಾರೆ ಅನ್ನೋದು ಕೂಡ ಸ್ಪಷ್ಟವಾಗಿಲ್ಲ. ಎಲ್ಲರೂ ಸೇರಿ ತುಮಕೂರಲ್ಲಿ ತಿಂಡಿ ತಿಂದಿದಾರೆ, ಅದಕ್ಕೆ ರೇಣುಕಾಸ್ವಮಿಯೇ ಎಲ್ಲರ ಬಿಲ್ ಪಾವತಿ ಮಾಡಿದಾನೆ ಅಂಎಲ್ಲ ಸುದ್ದಿಯಿದೆ. ಹಾಗೆ ಆಗಿದ್ದಿದ್ದರೆ, ಅದು ಕಿಡ್ನಾಪ್ ಅಂತ ಹೇಳೋದಕ್ಕೂ ಆಗಲ್ಲ. ಯಾಕಂದ್ರೆ, ಅವ್ನು ಇಲ್ಲಿಯವರೆಗೆ ಆರಾಮಾಗಿ ಬಂದಿದ್ದಿದ್ರೆ, ಯಾವುದೇ ರೀತಿನಲ್ಲೂ ಹಿಂಸೆ ನೀಡದೇ, ಅವ್ನು ದರ್ಶನ್‌ ನೋಡೋಕೆ ಇಷ್ಟಪಟ್ಟು ಬಂದಿದ್ದಿದ್ರೆ, ಆತ ಆ ಕೇಸ್‌ ನಡೆಯೋ ರೀತಿನೇ ಬೇರೆ. 

ಇದು ಗುರೂ ಮಾತು ಅಂದ್ರೆ, KGF ರಾಕಿಂಗ್ ಸ್ಟಾರ್ ರ್‍ಯಾಪಿಡ್ ಫೈರ್ ಸ್ಟೈಲ್ ನೋಡಿ ಜನ ಕಂಗಾಲು!

ಅದೇನೇ ಇರ್ಲಿ, ಅವೆಲ್ಲಾ ಮುಂದೆ ಕಾನೂನು ರೀತಿಯಲ್ಲಿ ಕೇಸ್ ನಡೆದಾಗ ಹೊರಗೆ ಬರುತ್ತೆ ವಿಷ್ಯ. ಆದ್ರೆ, ಕನ್ನಡದ ಸ್ಟಾರ್ ನಟನೊಬ್ಬ, ಅದೂ ಕೂಡ ಭಾರೀ ಜನಪ್ರಿಯ ನಟನೊಬ್ಬ ಕೊಲೆ ಕೇಸ್‌ನಲ್ಲಿ ಆರೋಪಿಯಾಗಿ ಜೈಲು ಸೇರಿರೋದು ಇದ್ಯಲ್ಲಾ, ಅದು ತುಂಬಾ ನೋವಿನ ಸಂಗತಿ. ಆದ್ರೆ ನಟ ದರ್ಶನ್‌ಗೆ ಘೋರ ಶಿಕ್ಷೆ ಆಗ್ಬಾರ್ದು, ಅವ್ನು ಬದಲಾಗೋದಕ್ಕೆ ಅವಕಾಶ ಸಿಗ್ಬೇಕು. ಕೊಲೆಯಾಗಿರೋ ಆ ರೇಣುಕಾಸ್ವಾಮಿಗಂತೂ ಬದಲಾಗೋಕೆ ಅವಕಾಶ ಸಿಗ್ಲಿಲ್ಲ, ಅಟ್‌ಲೀಸ್ಟ್‌  ದರ್ಶನ್‌ ಅಂಡ್ ಗ್ಯಾಂಗ್‌ಗೆ ಆದ್ರೂ ಆ ಚಾನ್ಸ್ ಸಿಗ್ಬೇಕು' ಎಂದಿದ್ದಾರೆ ಖ್ಯಾತ ಬರಹಗಾರ ಅಗ್ನಿ ಶ್ರೀಧರ್. 

ಏನ್ರೀ ಇದೂ, ಲೇಟ್‌ ಆಗಿ ಗುಟ್ಟು ರಟ್ಟಾಗಿದೆ, ಯಾರಿಂದ್ಲೂ ಆಗದೇ ಇರೋದನ್ನ ಮಾಡಿದ್ರು ವಿಷ್ಣುವರ್ಧನ್!

click me!