5ಮಿಲಿಯನ್‌ಗೂ ಹೆಚ್ಚು ಮನಗಳ ಗೆದ್ದ ಟ್ರೇಲರ್- ‘ತೋತಾಪುರಿ’ಯಲ್ಲಿದೆ ಬೇರೆಯದ್ದೇ ಪ್ರಪಂಚ

Published : Apr 29, 2022, 04:23 PM ISTUpdated : Apr 29, 2022, 04:25 PM IST
5ಮಿಲಿಯನ್‌ಗೂ ಹೆಚ್ಚು ಮನಗಳ ಗೆದ್ದ ಟ್ರೇಲರ್- ‘ತೋತಾಪುರಿ’ಯಲ್ಲಿದೆ ಬೇರೆಯದ್ದೇ ಪ್ರಪಂಚ

ಸಾರಾಂಶ

ನೀರ್ ದೋಸೆ ಸಿನಿಮಾ ಕಾಂಬಿನೇಶನ್ ಮತ್ತೆ ಒಂದಾಗಿದೆ ಅಂದಾಗಲೇ ಒಂದು ಸೆನ್ಸೇಶನ್ ಕ್ರಿಯೇಟ್ ಆಗಿ ಹೋಗಿತ್ತು.  

ನೀರ್ ದೋಸೆ ಸಿನಿಮಾ ಕಾಂಬಿನೇಶನ್ ಮತ್ತೆ ಒಂದಾಗಿದೆ ಅಂದಾಗಲೇ ಒಂದು ಸೆನ್ಸೇಶನ್ ಕ್ರಿಯೇಟ್ ಆಗಿ ಹೋಗಿತ್ತು.ಆ ಕಾಂಬಿನೇಶನ್ ಗೆ ‘ತೋತಾಪುರಿ’ ಎಂದು ಹೆಸರಿಟ್ಟಾಗ ಇದೇನಪ್ಪ ಇದು ಎಂದು ಗಲ್ಲಿ ಗಲ್ಲಿಗಳಲ್ಲೂ ಟೈಟಲ್ ನದ್ದೇ ಸದ್ದು ಸುದ್ದಿ. ವಿಜಯಪ್ರಸಾದ್ ಸಿನಿಮಾ, ಅವ್ರಿಡೋ ಟೈಟಲ್, ಸಂಭಾಷಣೆ ಎಲ್ಲವೂ ಡಿಫ್ರೆಂಟ್ ಅನ್ನೋದು ಜಗಜ್ಜಾಹೀರು ಆಗಿದೆ. ಇದೀಗ ಆರಂಭದಿಂದಲೂ ಸೆನ್ಸೇಶನ್ ಕ್ರಿಯೇಟ್ ಮಾಡಿಕೊಂಡು ಬಂದ ‘ತೋತಾಪುರಿ’ ಬಿಡುಗಡೆ ಸನಿಹಕ್ಕೆ ಬಂದು ನಿಂತಿದೆ. ತೋತಾಪುರಿ ಅಂತ ಯಾಕಿಟ್ರು, ಏನ್ ಹೇಳೋಕೆ ಹೊರಟಿದ್ದಾರೆ ಅನ್ನೋದನ್ನ ತಿಳಿದುಕೊಳ್ಳೋಕು ಹೆಚ್ಚು ದಿನ ಇಲ್ಲ.

ತೆರೆಗೆ ಸಜ್ಜಾಗುತ್ತಿದೆ ಜಗ್ಗೇಶ್ 'ತೋತಾಪುರಿ'!

ಹೌದು, ಸೆನ್ಸೇಷನಲ್ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಸದ್ಯದಲ್ಲೇ ಚಿತ್ರಮಂದಿರಕ್ಕೆ ಕಾಲಿಡ್ತೀವಿ ಅನ್ನೋ ಸುಳಿವನ್ನು ಚಿತ್ರತಂಡ ನೀಡಿದೆ. ಡೇಟ್ ಅನೌನ್ಸ್ ಆಗಬೇಕಿದೆಯಷ್ಟೇ. ಟ್ರೇಲರ್ ಬಿಡುಗಡೆ ಆಗಿದ್ದೇ ಆಗಿದ್ದು ತೋತಾಪುರಿ ಹವಾ ಮತ್ತಷ್ಟು ಜೋರಾಗಿದೆ. ಸಿನಿಮಾದಲ್ಲೇನೋ ವಿಶೇಷ ಅಂಶ ಇದೆ ಅನ್ನೋದನ್ನು ಅದೇ ಟ್ರೇಲರ್ ಹೇಳುತ್ತಿದೆ. ಸಾಮರಸ್ಯ, ಕರ್ಮ, ಧರ್ಮ, ಜಾತಿ, ನಂಬಿಕೆ ಹೀಗೆ ನಾನಾ ವಿಚಾರಗಳು ಟ್ರೇಲರ್ ಝಲಕ್ ನಲ್ಲಿವೆ ಇವೆಲ್ಲವೂ ತೋತಾಪುರಿ ಬಗೆಗಿದ್ದ ಮೊದಲಿನ ಇಮ್ಯಾಜಿನೇಶನ್ ನನ್ನು ಬೇರೆ ಲೆವೆಲ್ಗೆ ಕೊಂಡೊಯ್ದಿದೆ. ಅಲ್ಲಿಗೆ ಕಾಮಿಡಿ ಜೊತೆಗೆ ಒಂದೊಳ್ಳೆ ವಿಚಾರವನ್ನು ಚಿತ್ರ ಸಾರುತ್ತೆ ಅನ್ನೋದು ಕನ್ಫರ್ಮ್ ಅದೇನು ಎತ್ತ ಅನ್ನೋದಕ್ಕೆ ಸಿನಿಮಾ ಬಿಡುಗಡೆಯಾಗಬೇಕು. ಸದ್ಯಕ್ಕಂತೂ ಮಿಲಿಯನ್ಗೂ ಹೆಚ್ಚಿನ ವೀಕ್ಷಣೆ ಪಡೆದು ಬಿಡುಗಡೆಯಾದ ಟ್ರೇಲರ್ ಟ್ರೆಂಡಿಂಗ್ ನಲ್ಲಿದೆ.

ಜಗ್ಗೇಶ್ ಅವ್ರ ಕಾಮಿಡಿ ಟೈಮಿಂಗ್, ಅದಿತಿ ಪ್ರಭುದೇವ ಗ್ಲಾಮರ್, ವೀಣಾ ಸುಂದರ್, ಹೇಮಾದತ್ತ್, ದತ್ತಣ್ಣ, ಸುಮನ ರಂಗನಾಥ್, ಡಾಲಿ ಪಾತ್ರ ತೋತಾಪುರಿಯನ್ನು ಶ್ರೀಮಂತವಾಗಿಸಿದೆ. ಕಟೆಂಟ್, ಕ್ವಾಲಿಟಿ ವಿಚಾರದಲ್ಲಿ ನಿರ್ದೇಶಕರು, ನಿರ್ಮಾಪಕರು ಕಾಂಪ್ರಮೈಸ್ ಆಗದೇ ರಿಚ್ ಆಗಿ ತೆರೆ ಮೇಲೆ ತಂದಿರೋದು ಗೊತ್ತಾಗಿದೆ. ಅನೂಪ್ ಸೀಳಿನ್ ಸಂಗೀತ ಕೂಡ ಮೆಚ್ಚುಗೆ ಪಡೆದುಕೊಂಡಿದೆ. ಹೀಗೆ ಸಾಕಷ್ಟು ಇಂಟ್ರಸ್ಟಿಂಗ್ ಫ್ಯಾಕ್ಟರ್ ಹೊತ್ತ ‘ತೋತಾಪುರಿ’ ಚಿತ್ರವನ್ನು ಮೋನಿಫ್ಲಿಕ್ಸ್ ಸ್ಟುಡಿಯೋಸ್ ಹಾಗೂ ಸುರೇಶ್ ಆರ್ಟ್ಸ್ ಬ್ಯಾನರ್ ನಡಿ ಕೆ ಎ ಸುರೇಶ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಈಗ್ಲೇ ದರ್ಶನ್ 'ಡೆವಿಲ್'ಗೆ ಯಾಕೆ ಟೆನ್ಷನ್..? ನರ್ತಕಿ ಚಿತ್ರಮಂದಿರದ ಮೇಲೆ ಬೇರೆ ಸ್ಟಾರ್‌ಗಳ ಕಣ್ಣು ಬಿತ್ತಾ?
ಬೆಂಗಳೂರಿನಲ್ಲಿ ಬಿಗ್ ಮ್ಯೂಸಿಕಲ್ ನೈಟ್; JAM JUNXION"ನಲ್ಲಿ ಚಂದನ್ ಶೆಟ್ಟಿ ಸೇರಿದಂತೆ ಪ್ರಸಿದ್ಧ ಬ್ಯಾಂಡ್ ಧಮಾಕಾ!