ನಟ ಜಗ್ಗೇಶ್‌ ಸಂಭಾವನೇ ಹೆಚ್ಚಾಗೋಕೆ ಅಂಬಿಯೇ ಕಾರಣ; ಹೇಗೆ?

By Suvarna News  |  First Published May 30, 2020, 11:00 AM IST

ಜಗ್ಗೇಶ್‌ ಆ ಪಾತ್ರಕ್ಕೆ ಬೇಕೆ ಬೇಕು ಎಂದು ಡಿಮ್ಯಾಂಡ್‌ ಮಾಡಿ ಸಂಭಾವನೆ ಹೆಚ್ಚಿಸಿದ ಅಂಬರೀಶ್‌ ಅವರನ್ನು ಹುಟ್ಟು ಹಬ್ಬದ ದಿನ ನೆನಪಿಸಿ ಕೊಂಡಿದ್ದು ಹೀಗೆ... 


ಚಿತ್ರರಂಗವಾಗಲಿ, ರಾಜಕೀಯವಾಗಲಿ ಎಲ್ಲ ವೃತ್ತಿಯನ್ನೂ  ಸಂತೋಷದಿಂದ ಅನುಭವಿಸಿದವರು ರೆಬೆಲ್ ಸ್ಟಾರ್ ಅಂಬರೀಷ್. ಎಲ್ಲ ಕ್ಷೇತ್ರದವರನ್ನು ಸಮಾನವಾಗಿ ಕಾಣುತ್ತಿದ್ದ ಗುಣ ರೆಬೆಲ್ ಸ್ಟಾರ್‌ಗೆ ಒಲಿದಿತ್ತು. ಅದು ಅವರ ದೊಡ್ಡ ಗುಣ. ಏನೇ ಗಲಾಟೆಯಾದರೂ, ಅಂಬಿ ಮಧ್ಯಸ್ಥಿಕೆ ವಹಿಸಿದರೆ ಸಾಕು, ಎಲ್ಲವೂ ಸುಸೂತ್ರವಾಗಿ ಪರಿಹಾರ ಕಾಣುತ್ತಿತ್ತು.  ಯಾರೊಂದಿಗೂ ಮನಸ್ತಾಪ ಮಾಡಿಕೊಳ್ಳದೇ, ವೈ ಮನಸ್ಸಿದ್ದರೂ ಕೂತು ಬಗೆ ಹರಿಸುತ್ತಿದ್ದ ನಟ ಅಂಬರೀಶ್‌ ಎಂದೆಂದಿಗೂ ಸ್ಯಾಂಡಲ್‌ವುಡ್ ಮರೆಯದ ಮಾಣಿಕ್ಯ. ಸದಾ ಮಿನಗುವ ನಕ್ಷತ್ರ. 

ಕಾಲಭೈರವನ ಸನ್ನಿಧಿಯಲ್ಲಿ ಜಗ್ಗೇಶ್‌ಗೆ ಕಾದಿತ್ತು ಅಚ್ಚರಿ!

Tap to resize

Latest Videos

ಅಂಬರೀಶ್‌ ಅವರು 68ನೇ ಹುಟ್ಟುಹಬ್ಬಕ್ಕೆ ಚಿತ್ರರಂಗದ ಕಲಾವಿದರು, ಮುಖ್ಯಮಂತ್ರಿ ಸೇರಿ ಅನೇಕ ರಾಜಕಾರಣಿಗಳು ಹಾಗೂ ಇತರೆ ಗಣ್ಯರು ಶುಭಾಶಯಗಳನ್ನು ತಿಳಿಸಿದ್ದಾರೆ. ಈ ವೇಳೆ ಜಗ್ಗೇಶ್ ಅಭಿಮಾನಿಯೊಬ್ಬ ಸಿನಿಮಾವೊಂದರ ಫೋಟೋ ಶೇರ್ ಮಾಡಿ ಅದರ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ , ಅಂಬರೀಷ್ ಎಂಬ ವಿಶಾಲ ಹೃದಯಿಯ ವ್ಯಕ್ತಿತ್ವವನ್ನು ಸ್ಮರಿಸಿದ್ದಾರೆ. 

ಅಂಬಿಗೆ ಶುಭಾಶಯ:
'ಇದು ನಾನು ಅಂಬಿ ಸರ್ ತೆಗೆಸಿಕೊಂಡ ಕಡೆಯ ಫೋಟೋ. ಹಾಗೂ ಅವರ ಜೊತೆಗೂಡಿ ಮಾಡಿದ ಕೊನೇ ಊಟವೂ ಹೌದು. ಅಂದು ನಾವಿಬ್ಬರೂ ತುಂಬಾ ಸಂತೋಷವಾಗಿ ಒಟ್ಟಿಗೆ ಊಟ ಮಾಡಿದೆವು. ನಂತರ 3 ತಿಂಗಳಲ್ಲಿಯೇ ನಮ್ಮನ್ನೆಲ್ಲ ಅಗಲಿದರು. ಈ ದಿನ ಅವರು ಅಭಿಮಾನಿಗಳಿಗೆ ಹಾಗೂ ಮಾಧ್ಯಮದ ಮಿತ್ರರಿಗೆ ಸಿಕ್ಕಿದರೆ, ಅವರದ್ದೇ ಶೈಲಿಯಲ್ಲಿ ಮಾತನಾಡುತ್ತಿದ್ದರು ಎನಿಸುತ್ತದೆ. ಕನ್ನಡದ ಮಾಣಿಕ್ಯನಿಗೆ ಹುಟ್ಟು ಹಬ್ಬದ ಶುಭಾಶಯಗಳು' ಎಂದು ವಿಶ್ ಮಾಡಿದ್ದಾರೆ.

 

ನಾನು ಅಂಬಿಸಾರ್ ತೆಗೆಸಿಕೊಂಡ ಕಡೆಯ ಚಿತ್ರ!ಹಾಗು ಅವರ ಜೊತೆ ಕಡೆಊಟ!ಅಂದು ತುಂಬ ಸಂತೋಷವಾಗಿ ಒಟ್ಟಿಗೆ ಊಟಮಾಡಿದೆವು!ನಂತರ 3ತಿಂಗಳಿಗೆ ನಮ್ಮಅಗಲಿ ಹೋದರು!ಈ ದಿನ ಅವರು ಬಂದ ಅಭಿಮಾನಿಗಳಿಗೆ ಹಾಗು ಮಾಧ್ಯಮದಮಿತ್ರರಿಗೆ ಸಿಕ್ಕು ಅವರದೆ ಶೈಲಿಯಲ್ಲಿ ಮಾತಾಡುತ್ತಿದ್ದರು ಅನ್ನಿಸುತ್ತದೆ!
ಕನ್ನಡದ ಮಾಣಿಕ್ಯನಿಗೆ ಹುಟ್ಟುಹಬ್ಬದ ಶುಭಾಶಯಗಳು!
ಶುಭದಿನ! https://t.co/Do4VxZvQqV

— ನವರಸನಾಯಕ ಜಗ್ಗೇಶ್ (@Jaggesh2)

ಸಂಭಾವನೆ ಏರಿತ್ತು:
'ರೌಡಿ ಎಂಎಲ್‌ಎ ಚಿತ್ರಕ್ಕೆ ನಿರ್ದೇಶಕರು ಜಗ್ಗೇಶ್‌ ಅವರಿಗೆ ಕಥೆ ಹೇಳುತ್ತಾರೆ, ಜಗ್ಗಣ್ಣ  ಆಗ 50  ಸಾವಿರ ರೂ. ಸಂಭಾವನೆ ಕೇಳಿದ್ದರು. ಅದಕ್ಕೆ ಒಪ್ಪದ ಮ್ಯಾನೇಜರ್‌ ಅಷ್ಟು ದೊಡ್ಡ ಮೊತ್ತ ನೀಡಲು ಸಾಧ್ಯವಿಲ್ಲವೆಂದು ಹೇಳಿ, ಬೇಡ ಎಂದು ಹೇಳುತ್ತಾ  ಬೇರೆ ನಟನನ್ನು ಬುಕ್ ಮಾಡಿದ್ದರು. ಅಂಬಿ ಸರ್‌‌ಗೆ ಈ ವಿಷಯ ತಿಳಿದು ಮ್ಯಾನೇಜರ್‌ಗೆ ಬೈದು, ಆ ಪಾತ್ರಕ್ಕೆ ಅವನೇ ಸೂಕ್ತ ಎಂದು ನನ್ನನ್ನೇ ಬುಕ್‌ ಮಾಡಿದರು. ಆಗ ಸಂಭಾವನೆ 75 ಸಾವಿರ ರೂ.ಗೆ ಏರಿತು. ಚಿತ್ರ ಬಿಡುಗಡೆಯಾಗಿ ಪ್ರೇಕ್ಷಕರು ಚಪ್ಪಾಳೆ ನೋಡಿ ಅಂಬಿ ಸರ್‌ ಭುಜ ತಟ್ಟಿ ಹರಸಿದ್ದರು' ಎಂದು ಅಭಿಮಾನಿಗಳು ಶೇರ್ ಮಾಡಿದ ಫೋಟೋಗೆ ನವರಸನಾಯಕ ಸ್ಯಾಂಡಲ್‌ವುಡ್ ಜಲೀಲನೊಂದಿಗಿನ ತಮ್ಮ ಬಾಂಧವ್ಯದ ಬಗ್ಗೆ, ಅಂಬಿ ಮಾಡಿದ ಉಪಕಾರವನ್ನು ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

 


ಈಪಾತ್ರಕ್ಕೆ ನಾನು 50k ಸಂಭಾವನೆ ಕೇಳಿದೆ!ಮ್ಯಾನೇಜರ್ ಸಾಧ್ಯವಿಲ್ಲಾ ಬೇಡ ಎಂದು ಬೇರೆ ನಟನ ಬುಕ್ ಮಾಡಿದ!ಅಂಬಿಸಾರ್ಗೆ ವಿಷಯತಿಳಿದು ಮ್ಯಾನೇಜರ್ಗೆ ಬೈದು ಆಪಾತ್ರಕ್ಕೆ ಅವನೆಸೂಕ್ತ ಎಂದು ನನ್ನೆ ಬುಕ್ ಮಾಡಿದರು!ಆಗ ಸಂಭಾವನೆ 75ಸಾವಿರಕ್ಕೆ ಏರಿತು!
ಚಿತ್ರ ಬಿಡುಗಡೆಯಾಗಿ ಪ್ರೇಕ್ಷಕನ ಚಪ್ಪಾಳೆನೋಡಿ ಅಂಬಿಸಾರ್ ಭುಜತಟ್ಟಿ ಹರಸಿದರು. https://t.co/iYkIZjBeOk

— ನವರಸನಾಯಕ ಜಗ್ಗೇಶ್ (@Jaggesh2)

ಮಗನ ಪೋಸ್ಟರ್‌ ರಿಲೀಸ್:
ರೆಬೆಲ್‌ ಸ್ಟಾರ್ ಅಂಬರೀಶ್‌ 68ನೇ ಹುಟ್ಟು ಹಬ್ಬಕ್ಕೆ ಅಂಬರೀಶ್‌ ಪುತ್ರನ ಎರಡನೇ ಸಿನಿಮಾ ಪೋಸ್ಟರ್‌ ಬಿಡುಗಡೆ ಮಾಡಲಾಗಿದೆ. ನಿರ್ದೇಶಕ ಸೂರಿ ಚಿತ್ರಕ್ಕೆ 'ಬ್ಯಾಡ್‌ ಮ್ಯಾನರ್ಸ್‌' ಎಂದು ನಾಮಕರಣ ಮಾಡಿದ್ದಾರೆ.  ಈ ಚಿತ್ರ ಅಭಿ ಮೊದಲ ಸಿನಿಮಾ ಆಗಬೇಕಿತ್ತು. ಆದರೆ 'ಅಮರ್‌' ಚಿತ್ರದ ಮೂಲಕ ಲಾಂಚ್‌ ಆದರು ಎಂದು ಅಭಿಮಾನಿಗಳು ಮಾತುಗಳು ಕೇಳಿ ಬರುತ್ತಿದೆ.

click me!