ಸ್ಟಾರ್‌ಗಳಿಗೆ ಮರುಜನ್ಮ ಕೊಟ್ಟ ಚಿತ್ರಗಳು; ಅವರಿಗೂ ಈ ಗೆಲುವು ತುರ್ತಾಗಿ ಬೇಕಿದೆ!

By Kannadaprabha News  |  First Published May 30, 2020, 9:15 AM IST

ಬೆಳ್ಳಿತೆರೆಯ ಮಿನುಗು ತಾರೆಗಳ ಸೋಲು- ಗೆಲುವಿನ ಲೆಕ್ಕಾಚಾರವಿದು. ಇನ್ನೇನು ಸೋತೇ ಹೋದರು ಎನ್ನುವಾಗ ಫೀನಿಕ್ಸ್‌ನಂತೆ ಎದ್ದು ಬಂದರು ಕೆಲವರು. ಬ್ಲಾಕ್‌ಬಾಸ್ಟರ್‌ ಹಿಟ್‌ ಕೊಟ್ಟವರು ತಮ್ಮ ಹಿಂದಿನ ಯಶಸ್ಸು ಮುಂದುವರಿಸುತ್ತಾರೆಯೇ ಎಂಬುದು ಮತ್ತೊಂದು ಲೆಕ್ಕ, ಈ ಚಿತ್ರದಿಂದಲಾದರೂ ಗೆಲುವಿನ ಕುದುರೆ ಏರಬಹುದೇ ಎನ್ನುವ ನಿರೀಕ್ಷೆ ಮತ್ತೊಂದಿಷ್ಟುತಾರೆಗಳದ್ದು.


ಆರ್‌ಕೆ

ಇನ್ನೂ ಕೆಲವರಿಗೆ ತುರ್ತಾಗಿ ಯಶಸ್ಸು ಬೇಕಿದೆ. ಹೀಗೆ ಹಿಟ್‌-ಫ್ಲಾಪ್‌ನ ಗಣಿತ ಪುಸ್ತಕದಲ್ಲಿ ಕನ್ನಡದ ಬಹುತೇಕ ತಾರೆಗಳ ಯಶಸ್ಸಿನ ಗ್ರಾಫ್‌ನ ಗೆರೆಗಳು ತೂಗುತ್ತಿವೆ. ಆಯಾ ನಟರ ಅಭಿಮಾನಿಗಳಿಗೂ ತಮ್ಮ ಹೀರೋ ಗೆಲ್ಲಲಿ, ಯಶಸ್ಸು ಮುಂದುವರಿಸಲಿ, ಹಿಟ್‌ ದಕ್ಕಿಸಿಕೊಳ್ಳಲಿ... ಹೀಗೆ ನಾನಾ ರೀತಿಯ ಪ್ರಾರ್ಥನೆಗಳಲ್ಲಿ ಗಟ್ಟಿಯಾಗಿ ತೊಡಗಿದ್ದಾರೆಂಬುದು ಚಿತ್ರರಂಗದ ನಂಬಿಕೆ.

Tap to resize

Latest Videos

ರಾಜವೀರ ಮದಕರಿ ನಾಯಕ ಚಿತ್ರಕ್ಕೆ ಡಿ-ಬಾಸ್‌ ಸಿದ್ಧತೆ ಹೀಗಿದೆ!

ಸ್ಟಾರ್‌ಗಳಿಗೆ ಮರು ಜೀವ

ನಟರಾದ ಸುದೀಪ್‌, ದರ್ಶನ್‌, ಯಶ್‌, ರಕ್ಷಿತ್‌ ಶೆಟ್ಟಿ, ಶ್ರೀಮರಳಿ, ಧನಂಜಯ್‌, ಡಾರ್ಲಿಂಗ್‌ ಕೃಷ್ಣ, ನೀನಾಸಂ ಸತೀಶ್‌, ಶರಣ್‌... ಹೀಗೆ ಸಾಲು ಸಾಲು ನಟರಿಗೆ ಒಂದಿಷ್ಟುಚಿತ್ರಗಳು ಮರು ಜೀವ ಕೊಟ್ಟಿವೆ. ಹೀಗೆ ಮರು ಜನ್ಮ ಕೊಟ್ಟಚಿತ್ರಗಳಿಗೂ ಮುನ್ನ ಈ ನಟರು ಸೋಲು ಮತ್ತು ಗೆಲುವು ಕಂಡಿದ್ದಾರೆ. ಆದರೆ, ಈ ಚಿತ್ರಗಳ ನಂತರ ಇವರ ದಾರಿಯೇ ಬದಲಾಯಿತು. ಕೇವಲ ಗೆಲವು ಮಾತ್ರವಲ್ಲ, ಹೊಸದಾಗಿ ಮೇಕ್‌ಓವರ್‌ ಆದರು. ಔಟ್‌ಲುಕ್‌, ತೆರೆ ಮೇಲೆ ತಮ್ಮನ್ನು ಪ್ರಸೆಂಟ್‌ ಮಾಡಿಕೊಳ್ಳುವ ರೀತಿ, ಪಾತ್ರ, ಕತೆಗಳ ಆಯ್ಕೆ ಹೀಗೆ ಪ್ರತಿಯೊಂದನ್ನು ಬದಲಾಯಿಸಿತು. ಜತೆಗೆ ಆಯಾ ನಟರಿಗೆ ಮರು ಜೀವ ಕೊಟ್ಟಈ ಚಿತ್ರಗಳು ಅವರ ಮಾರುಕಟ್ಟೆಯನ್ನೂ ವಿಸ್ತರಿಸಿದವು. ಈ ಎಲ್ಲ ಲೆಕ್ಕಾಚಾರಗಳಲ್ಲಿ ನೋಡುವುದಾರೆ ಪ್ರತಿಯೊಬ್ಬ ನಟನ ವೃತ್ತಿ ಪಯಣದಲ್ಲೂ ಒಂದು ಟರ್ನಿಂಗ್‌ ಪಾಯಿಂಟ್‌ ಸಿನಿಮಾ ಎದ್ದು ನಿಲ್ಲುತ್ತರೆ. ಹಾಗೆ ಎದ್ದು ಕಾಣುವ ಕೆಲ ನಟರ ಚಿತ್ರಗಳ ಪೈಕಿ....

ಸುದೀಪ್‌-ಕೆಂಪೇಗೌಡ

ದರ್ಶನ್‌-ಸಾರಥಿ

ಪುನೀತ್‌ ರಾಜ್‌ಕುಮಾರ್‌- ರಾಜಕುಮಾರ

ಯಶ್‌-ರಾಜಾಹುಲಿ

ಶ್ರೀಮುರಳಿ- ಉಗ್ರಂ

ರವಿಚಂದ್ರನ್‌-ದೃಶ್ಯ

ಜಗ್ಗೇಶ್‌- ನೀರ್‌ದೋಸೆ

ರಕ್ಷಿತ್‌ ಶೆಟ್ಟಿ- ಸಿಂಪಲ್ಲಾಗ್‌ ಒಂದ್‌ ಲವ್‌ ಸ್ಟೋರಿ

ಧನಂಜಯ್‌- ಟಗರು

ಡಾರ್ಲಿಂಗ್‌ ಕೃಷ್ಣ- ಲವ್‌ ಮಾಕ್ಟೇಲ್‌

ನೀನಾಸಂ ಸತೀಶ್‌- ಲೂಸಿಯಾ

ಶರಣ್‌- ರಾರ‍ಯಂಬೋ

ಈ ಪಟ್ಟಿಇನ್ನೂ ದೊಡ್ಡದಿರಬಹುದು. ಸಾಕಷ್ಟುನಟರು ಈ ಸಾಲಿನಲ್ಲಿ ಕಾಣಿಸಿಕೊಳ್ಳಬಹುದು. ಆದರೆ, ಈ ಚಿತ್ರಗಳ ಗೆಲುವಿನ ನಂತರ ಹೊಸದಾಗಿ ತೆರೆ ಮೇಲೆ ಕಾಣಿಸಿಕೊಳ್ಳುವುದಕ್ಕೆ ಶುರು ಮಾಡಿದರು. ಪರಭಾಷಿಗರನ್ನೂ ಸೆಳೆಯುವ ತಾಕತ್ತು ಬೆಳೆಸಿಕೊಂಡರು ಎಂಬುದಕ್ಕೆ ಇವರ ನಟನೆಯ ಮುಂದಿನ ಚಿತ್ರಗಳೇ ಸಾಕ್ಷಿ. ಹೀಗೆ ಮರು ಜೀವ ಪಡೆದುಕೊಂಡ ಸ್ಟಾರ್‌ಗಳ ನಡುವೆ ಯಶಸ್ಸಿನ ನಿರೀಕ್ಷೆ, ಹಿಂದಿನ ಗೆಲುವನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ, ಅದೇ ಹಿಟ್‌ ಚಿತ್ರಕ್ಕಾಗಿ ಕಾಯುತ್ತಿರುವ ನಟರೂ ಇದ್ದಾರೆ.

ಮೂರು ಹಿಟ್‌, ನಾಲ್ಕನೇಯದು?

ಇನ್ನೂ ನಟ ಧ್ರವ ಸರ್ಜಾ ಅವರದ್ದೇ ಬೇರೆ ದಾರಿ. ಅದ್ದೂರಿ ಚಿತ್ರದ ಮೂಲಕ ಎಂಟ್ರಿಯಾದ ಈ ಖಡಕ್‌ ಹೀರೋ ಖಾತೆಯಲ್ಲಿ ಈಗ ನಾಲ್ಕು ಚಿತ್ರಗಳಿವೆ. ಈ ಪೈಕಿ ‘ಅದ್ದೂರಿ’, ‘ಬಹದ್ದೂರ್‌’, ‘ಭರ್ಜರಿ’ ಚಿತ್ರಗಳು ಸಖತ್‌ ಹಿಟ್‌ ಆಗಿವೆ. ಈಗ ಬಿಡುಗಡೆಯ ಹಂತದಲ್ಲಿ ‘ಪೊಗರು’ ಸಿನಿಮಾ ಕಾಯುತ್ತಿದೆ. ನಂದ ಕಿಶೋರ್‌ ನಿರ್ದೇಶನದ ಈ ಚಿತ್ರ ‘ಪೊಗರು’ ಸಿನಿಮಾ ಧ್ರುವ ಸರ್ಜಾರ ಹಿಂದಿನ ಯಶಸ್ಸನ್ನು ಮುಂದುವರಿಸುತ್ತದೆ ಎಂಬುದು ಎಲ್ಲರ ಕುತೂಹಲ.

ಗೆಲುವಿನ ನಿರೀಕ್ಷೆಯಲ್ಲಿ

ಹಲವು ಚಿತ್ರಗಳನ್ನು ಮಾಡಿ ಇಲ್ಲಿವರೆಗೂ ಸೋಲಿನ ಜತೆಗೆ ಕೆಲವನ್ನೂ ನೋಡುತ್ತಾ ಬಂದವರು ದುನಿಯಾ ವಿಜಯ್‌. ಸದ್ಯ ಅವರ ಹೊಸ ನಿರೀಕ್ಷೆ ‘ಸಲಗ’ ಚಿತ್ರದ ಮೇಲೆ ನಿಂತಿದೆ. ನಟ ಗಣೇಶ್‌ ಹಾಗೂ ಯೋಗರಾಜ್‌ ಜೋಡಿಯ ಕಮಾಲ್‌ ಎಲ್ಲರಿಗೂ ಗೊತ್ತಿದೆ. ಹೀಗಾಗಿ ಮತ್ತೆ ಜತೆಯಾಗಿಸಿರುವ ‘ಗಾಳಿಪಟ 2’ ಚಿತ್ರದ ಸುತ್ತ ಗೆಲುವಿನ ನಿರೀಕ್ಷೆಯ ಮಳೆಯ ಸಂಭ್ರಮ. ಹಾಗೆ ಮೊದಲ ಚಿತ್ರದ ಮೂಲಕವೇ ಹಿಟ್‌ ಕೊಟ್ಟಅನುಪ್‌ ಭಂಡಾರಿ ಹಾಗೂ ನಿರೂಪ್‌ ಭಂಡಾರಿ ಸೋದರರಿಗೆ ‘ಫ್ಯಾಂಟಮ್‌’ ಮೇಲೆ ನಂಬಿಕೆ ಹೆಚ್ಚಾಗಿದೆ.

ಟಿವಿಯಲ್ಲಿ ಪ್ರಸಾರವಾಗುವ ಈ ಸಿನಿಮಾಗಳಿಗೂ ಟಾಪ್‌ 10ರ ಸ್ಥಾನ!

ಅಜಯ್‌ ರಾವ್‌ ಬಿಡುಗಡೆಯ ಖಾತೆಯಲ್ಲಿರುವ ‘ಶೋಕಿವಾಲ’, ‘ಕೃಷ್ಣ ಟಾಕೀಸ್‌’ ಹಾಗೂ ‘ರೈನ್‌ಬೋ’ ಚಿತ್ರಗಳು ಭರವಸೆಯ ಸಿನಿಮಾಗಳಾಗಿ ಕಾಣುತ್ತಿವೆ. ಅತಿ ಹೆಚ್ಚು ಹೆಚ್ಚು ಚಿತ್ರಗಳನ್ನು ಒಪ್ಪಿಕೊಂಡು ಬ್ಯುಸಿಯಾಗಿರುವ ಪ್ರಜ್ವಲ್‌ ದೇವರಾಜ್‌ ಅವರಿಗೆ ‘ಜಂಟಲ್‌ಮನ್‌’ ಚಿತ್ರ ಒಂದು ಹಂತಕ್ಕೆ ಹೊಸ ಹೆಸರು ಕೊಟ್ಟಮೇಲೆ ‘ಇನ್ಸ್‌ಪೆಕ್ಟರ್‌ ವಿಕ್ರಮ್‌’ ಚಿತ್ರದ ಮೇಲೆ ಅವರ ಯಶಸ್ಸಿನ ಭರವಸೆ ಹೆಚ್ಚಾಗಿದೆ. ಸಾಕಷ್ಟುಚಿತ್ರಗಳಲ್ಲಿ ಸಣ್ಣ ಪುಟ್ಟಪಾತ್ರ ಮಾಡಿದ ಮೇಲೆ ‘ರಾರ‍ಯಂಬೋ’, ‘ವಿಕ್ಟರಿ’, ‘ಅಧ್ಯಕ್ಷ’ ಚಿತ್ರಗಳ ಮೂಲಕ ಹೀರೋ ಆಗಿ ಯೂ ಟರ್ನ್‌ ತೆಗೆದುಕೊಂಡವರು. ಆ ನಂತರ ನಿರೀಕ್ಷಿತ ಗೆಲುವು ಕಾಣುತ್ತಿಲ್ಲ. ಹೀಗಾಗಿ ಮುಂದೆ ಬಿಡುಗಡೆಯಾಗಲಿರುವ ‘ಅವತಾರ ಪುರುಷ’ ಚಿತ್ರದ ಮೇಲೆ ಸಾಕಷ್ಟುಭರವಸೆ ಇಟ್ಟುಕೊಂಡಿದ್ದಾರೆ.

ನೆನಪಿರಲಿ ಪ್ರೇಮ್‌ ಅವರಿಗೆ ತಮ್ಮ 25ನೇ ಚಿತ್ರವಾದ ‘ಪ್ರೇಮಂ ಪೂಜ್ಯಂ’ ಎರಡು ಚಿತ್ರಗಳಲ್ಲಿ ನಟಿಸಿ ಮೂರನೇ ಚಿತ್ರದ ಬಿಡುಗಡೆಯ ಹಾದಿಯಲ್ಲಿರುವ ವಿನಯ್‌ ರಾಜ್‌ ಕುಮಾರ್‌ ಅವರನ್ನು ‘ಗ್ರಾಮಾಯಣ’ ಹಾಗೂ ‘ಟೆನ್‌’ ಚಿತ್ರಗಳು ಸಿನಿಮಾ ಹೊಸದಾಗಿ ತೋರಿಸುತ್ತವೆ ಎನ್ನುವ ಲೆಕ್ಕಾಚಾರ ಸ್ವತಃ ವಿನಯ್‌ ರಾಜ್‌ಕುಮಾರ್‌ ಅವರದ್ದು. ಹೀಗೆ ಸ್ಯಾಂಡಲ್‌ವುಡ್‌ ನಟರು, ಸೋತು-ಗೆದ್ದವರ ನಡುವೆ ತಮ್ಮದೇ ಆದ ಯಶಸ್ಸಿನ ನಿರೀಕ್ಷೆಯಲ್ಲಿದ್ದಾರೆ.

ತುರ್ತಾಗಿ ಯಶಸ್ಸು ಬೇಕಿದೆ

ಕನ್ನಡದ ಬಹುತೇಕ ನಟರು ಈ ತುರ್ತು ಗೆಲುವಿಗಾಗಿ ಕಾಯುತ್ತಿದ್ದಾರೆ. ಅವರಿಗೆ ತಾವು ಮಾಡುವ ಪ್ರತಿ ಚಿತ್ರವೂ ಒಂದಲ್ಲಾ ಒಂದು ಹಂತದಲ್ಲಿ ಅಂಥ ಯಶಸ್ಸು ನೀಡುವ ಮೂಲಕ ಸೋಲಿನ ಐಸಿಯೂನಿಂದ ತುರ್ತು ನಿರ್ಗಮನ ಮಾಡಿಸಬೇಕಿದೆ. ವಿಜಯ್‌ ರಾಘವೇಂದ್ರ, ಕೋಮಲ್‌, ಲೂಸ್‌ ಮಾದ, ಚಿರಂಜೀವಿ ಸರ್ಜಾ, ದಿಗಂತ್‌, ಶ್ರೀನಗರ ಕಿಟ್ಟಿ, ವಿನೋದ್‌ ಪ್ರಭಾಕರ್‌... ಹೀಗೆ ಸಾಲು ಸಾಲು ನಟರು ತುರ್ತು ಗೆಲುವಿಗಾಗಿ ಕಾಯುತ್ತಿದ್ದಾರೆ. ಇನ್ನೂ ಸಿನಿಮಾ ಕುಟುಂಬಗಳಿಂದ ಬಂದು ಮೊದಲ ಚಿತ್ರದಲ್ಲಿ ನಿರೀಕ್ಷೆ ಫಲಿತಾಂಶ ದಕ್ಕಿಸಿಕೊಳ್ಳದವರ ಸಾಲಿನಲ್ಲಿರುವ ಅಭಿಷೇಕ್‌ ಅಂಬರೀಶ್‌ ಹಾಗೂ ಶ್ರೇಯಸ್‌ ಅವರಿಗೂ ಮುಂದೆ ಒಪ್ಪಿಕೊಳ್ಳುವ ಸಿನಿಮಾಗಳಿಂದ ಯಶಸ್ಸು ಕಡ್ಡಾಯ ಎನ್ನುವಂತಾಗಿದೆ. ಹಾಗೆ ನೋಡಿದರೆ ಈ ಸಾಲಿನಲ್ಲಿರುವ ಬಹುತೇಕ ನಟರಿಗೆ ಪರಭಾಷೆಗಳ ಡಬ್ಬಿಂಗ್‌ ರೈಟ್ಸ್‌ನಿಂದ ಒಂದಿಷ್ಟುಬ್ಯುಸಿನೆಸ್‌ ಆಗಿದ್ದು ನಿಜ. ಈ ವ್ಯಾಪಾರ ನೋಡಿಕೊಂಡೇ ನಿರ್ಮಾಪಕರು ಕೂಡ ನಾಲ್ಕು ಫೈಟು ಇರುವ ಚಿತ್ರಗಳನ್ನು ಇವರಿಗಾಗಿ ನಿರ್ಮಿಸಿದರು. ಆದರೆ, ಡಬ್ಬಿಂಗ್‌ ವ್ಯವಹಾರಕ್ಕೆ ಮುಂದೆ ಪೆಟ್ಟು ಬೀಳಲಿದೆ. ಹೀಗಾಗಿ ಪ್ರಾಮಾಣಿಕ ಗೆಲುವು ಅಗತ್ಯ ಎನಿಸಿದೆ.

48 ಕೋಟಿ ರೂ. ಆಫೀಸಲ್ಲಿ ಕಂಗನಾಗೇನು ಕೆಲ್ಸ? ಕೊಳ್ಳೋಕೆ ಹಣ ಬಂದಿದ್ದೆಲ್ಲಿಂದ?

ಶಿವಣ್ಣನದೇ ಸೆಪರೇಟ್‌ ಕೇಸು

ಆದರೆ, ಈ ಸೋಲು- ಗೆಲುವಿನ ಆಟದಲ್ಲಿ ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ಅವರದ್ದೇ ಪ್ರತ್ಯೇಕ ಲೆಕ್ಕ. ಅವರಿಗೆ ಹಿಟ್‌- ಫ್ಲಾಪ್‌ ಜತೆ ಸಂಬಂಧವಿಲ್ಲ. ನಿರಂತರವಾಗಿ ಸಿನಿಮಾ ಮಾಡುತ್ತಿರಬೇಕು. ಅವು ಜನಕ್ಕೆ ಸೇರುತ್ತಿರಬೇಕು. ಓಂ, ಜೋಗಿ, ಮೈಲಾರಿ, ಟಗರು ಇತ್ಯಾದಿ ಚಿತ್ರಗಳು ಆಗಾಗ ಶಿವಣ್ಣನ ಮಾರುಕಟ್ಟೆಯನ್ನು ವಿಸ್ತರಿಸುತ್ತ ಹೋಗುತ್ತವೆ. ಹೀಗಾಗಿ ಬಿದ್ದರೆ ಎಂದುಕೊಳ್ಳುವಾಗಲೇ ಎದ್ದೆ ನೋಡಿ ಎನ್ನುವ ತಾಕತ್ತು ಇರುವುದು ಕನ್ನಡದ ಮಟ್ಟಿಗೆ ಶಿವರಾಜ್‌ ಕುಮಾರ್‌ ಅವರಿಗೆ ಮಾತ್ರ ಅನಿಸುತ್ತದೆ. ಹೀಗಾಗಿ ಅವರ ಜೋಳಿಗೆಯಲ್ಲಿ ಮರು ಜನ್ಮ ಕೊಟ್ಟಚಿತ್ರಗಳು, ಸೋತ ಸಿನಿಮಾಗಳು, ಗೆಲ್ಲುವು ನಿರೀಕ್ಷೆಯ ಚಿತ್ರಗಳು ಸಮಾನವಾಗಿ ಸದಾ ತುಂಬಿರುತ್ತವೆ.

click me!