Dolly Dhananjay: ಧನಂಜಯ 25ನೇ ಚಿತ್ರ 'ಹೊಯ್ಸಳ': ಪೊಲೀಸ್ ಪಾತ್ರದಲ್ಲಿ ಡಾಲಿ

Suvarna News   | Asianet News
Published : Jan 15, 2022, 10:23 PM IST
Dolly Dhananjay: ಧನಂಜಯ 25ನೇ ಚಿತ್ರ 'ಹೊಯ್ಸಳ': ಪೊಲೀಸ್ ಪಾತ್ರದಲ್ಲಿ ಡಾಲಿ

ಸಾರಾಂಶ

'ಬಡವ ರಾಸ್ಕಲ್' ಸಿನಿಮಾದ ಯಶಸ್ಸಿನ ಗುಂಗಿನಲ್ಲಿರುವ ಧನಂಜಯ ಅವರ 25ನೇ ಚಿತ್ರ ಘೋಷಣೆಯಾಗಿದೆ. 'ಹೊಯ್ಸಳ' ಎಂದು ಚಿತ್ರಕ್ಕೆ ಹೆಸರಿಡಲಾಗಿದೆ. ಗಣೇಶ್​ ಅಭಿನಯದ 'ಗೀತಾ' ಚಿತ್ರ ನಿರ್ದೇಶಿಸಿದ್ದ ವಿಜಯ್.ಎನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

'ಬಡವ ರಾಸ್ಕಲ್' ಸಿನಿಮಾದ ಯಶಸ್ಸಿನ ಗುಂಗಿನಲ್ಲಿರುವ ಧನಂಜಯ (Dhananjay) ಅವರ 25ನೇ ಚಿತ್ರ ಘೋಷಣೆಯಾಗಿದೆ. 'ಹೊಯ್ಸಳ' (Hoysala) ಎಂದು ಚಿತ್ರಕ್ಕೆ ಹೆಸರಿಡಲಾಗಿದೆ. ಧನಂಜಯ ನಟನೆಯ 'ರತ್ನನ್​ ಪ್ರಪಂಚ' (Ratnan Prapancha) ಸಿನಿಮಾ ಕಳೆದ ವರ್ಷ ಒಟಿಟಿಯಲ್ಲಿ (OTT) ರಿಲೀಸ್​ ಆಗಿತ್ತು. ಈ ಚಿತ್ರವನ್ನು ಕೆ.ಆರ್​.ಜಿ. ಸ್ಟುಡಿಯೋಸ್​ (KRG Studios) ನಿರ್ಮಾಣ ಮಾಡಿತ್ತು. ಈಗ 'ಹೊಯ್ಸಳ' ಚಿತ್ರವನ್ನೂ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣ ಮಾಡುತ್ತಿದೆ. ಅಮೇಜಾನ್​ ಪ್ರೈಮ್‌ನಲ್ಲಿ ರಿಲೀಸ್​ ಆದ 'ರತ್ನನ್ ಪ್ರಪಂಚ' ಮೆಚ್ಚುಗೆ ಪಡೆದುಕೊಂಡಿತ್ತು. ತಾಯಿ ಸೆಂಟಿಮೆಂಟ್​ ಕಥೆ ಸಿನಿಮಾದಲ್ಲಿ ಹೈಲೈಟ್​ ಆಗಿತ್ತು. 

ಈ ಚಿತ್ರವನ್ನು ಕಾರ್ತಿಕ್ ಗೌಡ ಮತ್ತು ಯೋಗಿ.ಜಿ. ರಾಜ್ ನಿರ್ಮಾಣ ಮಾಡಿದ್ದರು. ಇದೀಗ 'ಹೊಯ್ಸಳ' ಚಿತ್ರದ ನಿರ್ಮಾಣ ಜವಾಬ್ದಾರಿಯೂ ಇವರದ್ದೇ ಆಗಿರಲಿದೆ. ಹೊಂಬಾಳೆ ಸಂಸ್ಥೆಯ ವಿಜಯ್ ಕಿರಗಂದೂರು (Vijay Kiragandur) ಅವರು ಈ ಚಿತ್ರವನ್ನು ಅರ್ಪಿಸುತ್ತಿದ್ದಾರೆ.  ಚಿತ್ರದ ನಿರ್ದೇಶನದ ಜವಾಬ್ಧಾರಿಯನ್ನು ಈ ಹಿಂದೆ ಗಣೇಶ್​ ಅಭಿನಯದ 'ಗೀತಾ' ಚಿತ್ರ ನಿರ್ದೇಶಿಸಿದ್ದ ವಿಜಯ್.ಎನ್ (Vijay.N) ಅವರು ಹೊರಲಿದ್ದಾರೆ. ಈ ಚಿತ್ರಕ್ಕೆ ಸಂಗೀತವನ್ನು ದಕ್ಷಿಣ ಭಾರತದ ಬಹಳ ಯಶಸ್ವಿ ಸಂಗೀತ ನಿರ್ದೇಶಕರಾದ ಎಸ್.ಎಸ್.ತಮನ್ (SS.Thaman) ಅವರು ನೀಡಲಿದ್ದಾರೆ. ದೀಪು.ಎಸ್.ಕುಮಾರ್ ಸಂಕಲನ, ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನವಿದ್ದು, ಮಾಸ್ತಿ ಚಿತ್ರಕ್ಕೆ ಸಂಭಾಷಣೆಯನ್ನು ಬರೆಯಲ್ಲಿದ್ದಾರೆ.

Shiva Rajkumar: ಸಂಕ್ರಾಂತಿ ಹಬ್ಬಕ್ಕೆ 'ಬೈರಾಗಿ' ಚಿತ್ರದ ಪೋಸ್ಟರ್ ರಿಲೀಸ್

'ಹೊಯ್ಸಳ' ಚಿತ್ರಕ್ಕೆ ನಟ ರಾಕ್ಷಸ ಧನಂಜಯ ನಾಯಕ. ಈ ಚಿತ್ರ ಧನಂಜಯ ಅವರ 25ನೇ ಸಿನಿಮಾ ಅನ್ನೋದು ವಿಶೇಷ. ಈ ಚಿತ್ರದ ಬಹುತೇಕ ಶೂಟಿಂಗ್​ ಬೆಳಗಾವಿ ಜಿಲ್ಲೆಯ ಅನೇಕ ಭಾಗಗಳಲ್ಲಿ ನಡೆಯಲಿದೆ. ಪೊಲೀಸ್​ ಕಥಾಹಂದರವನ್ನು ಇದು ಹೊಂದಿದೆ. ಬೆಳಗಾವಿಯಲ್ಲಿ ನಡೆಯುವ ಒಬ್ಬ ದಿಟ್ಟ ಪೊಲೀಸ್  ಅಧಿಕಾರಿಯ ಸುತ್ತ ಹೆಣೆದಿರುವ ಕಥೆ ಇದಾಗಿದೆ. ಏಪ್ರಿಲ್ ತಿಂಗಳಿನಲ್ಲಿ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದ್ದು, ಚಿತ್ರದ ಕಲಾವಿದರ ಆಯ್ಕೆ ಪ್ರಗತಿಯಲ್ಲಿದೆ. ಮುಂಬರುವ ದಿನಗಳಲ್ಲಿ ಈ ಬಗ್ಗೆ ಘೋಷಣೆ ಆಗಲಿದೆ. ಚಿತ್ರಕ್ಕೆ ಪಿಆರ್‌ಒ ಆಗಿ ಸುಧೀಂದ್ರ ವೆಂಕಟೇಶ್ ಅವರು ಕೈ ಜೋಡಿಸಲಿದ್ದಾರೆ. 

'ಹೊಯ್ಸಳ' ಚಿತ್ರದ ಪ್ರಚಾರವನ್ನು ಕೆ.ಆರ್.ಜಿ.ಕನೆಕ್ಟ್ಸ್ ಸಂಸ್ಥೆ ಮಾಡಲಿದ್ದು, ಇದು ಪ್ಯಾನ್ ಇಂಡಿಯಾ ಸಿನಿಮಾವಾಗಿದೆ. ಈ ಸಿನಿಮಾವನ್ನು ನವೆಂಬರ್ 1 ಕನ್ನಡ ರಾಜ್ಯೋತ್ಸವ ದಿನದಂದು ಬಿಡುಗಡೆ ಮಾಡುವ ಯೋಚನೆ ನಿರ್ಮಾಪಕರದು. ಧನಂಜಯ್ 'ಬಡವ ರಾಸ್ಕಲ್' (Badava Rascal) ಸಿನಿಮಾ ಮೂಲಕ ನಿರ್ಮಾಪಕರಾಗಿ, ಈ ಚಿತ್ರದ ಯಶಸ್ಸಿನ ನಂತರದಲ್ಲಿ 'ಹೊಯ್ಸಳ' ಚಿತ್ರತಂಡ ಸೇರಿಕೊಂಡಿದ್ದಾರೆ. ಇದರ ಜೊತೆಗೆ 'Once upon a time in ಜಮಾಲಿಗುಡ್ಡ' ಚಿತ್ರದಲ್ಲಿಯೂ ನಟಿಸುತ್ತಿದ್ದಾರೆ. ನಟ ಅಲ್ಲು ಅರ್ಜುನ್ ನಟನೆಯ 'ಪುಷ್ಪ' (Pushpa) ಚಿತ್ರದಲ್ಲಿ ಅವರು ಖಳನಾಯಕನ ಜಾಲಿರೆಡ್ಡಿ ಪಾತ್ರದಲ್ಲಿಯೂ ಮಿಂಚಿದ್ದಾರೆ. 

Ratnan Prapancha: OTTಯಲ್ಲಿ ತಮಿಳು ಸೂರ್ಯನನ್ನು ಮೀರಿಸಿದ ಡಾಲಿ ಧನಂಜಯ

ಇದರ ಜೊತೆಗೆ ಮಾನ್ಸೂನ್ ರಾಗ (Monsoon Raga) ಸೇರಿದಂತೆ ಹೆಡ್​ ಬುಷ್ (Head Bush)​ ಸಿನಿಮಾದಲ್ಲಿ ಧನಂಜಯ ಬ್ಯುಸಿಯಾಗಿದ್ದಾರೆ. ಇನ್ನು, 'ಹೆಡ್​ ಬುಷ್'​ ಸಿನಿಮಾಕ್ಕೆ ಅಗ್ನಿ ಶ್ರೀಧರ್ (Agni Sridhar) ಕತೆ ಬರೆದಿದ್ದು, ಶೂನ್ಯ (Shoonya) ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ವಸಿಷ್ಠ ಸಿಂಹ, ಲೂಸ್ ಮಾದ ಯೋಗೇಶ್, ಬಾಲು ನಾಗೇಂದ್ರ, ಶ್ರುತಿ ಹರಿಹರನ್, ರಘು ಮುಖರ್ಜಿ ಸೇರಿದಂತೆ ದೊಡ್ಡ ತಾರಾಬಳಗವಿದ್ದು, ಒಟ್ಟಾರೆಯಾಗಿ ಏಕಕಾಲಕ್ಕೆ ನಟ, ಖಳನಾಯಕನಾಗಿ ಧನಂಜಯ ಅವರು ಹಲವು ಸಿನಿಮಾಗಳಲ್ಲಿ ಅಭಿನಯಿಸುತ್ತಿರುವುದು ಹೆಗ್ಗಳಿಕೆಯಾಗಿದೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ