
ಕನ್ನಡದಲ್ಲಿ ಈಗ ಕಂಟೆಂಟ್ ಓರಿಯಂಟೆಡ್ ಚಿತ್ರಗಳು ಹೆಚ್ಚಾಗಿ ಗೆಲುತ್ತಿದೆ. ಅಂತಹ ವಿಭಿನ್ನ ಹಾಗೂ ನೈಜಘಟನೆ ಆಧಾರಿತ 'ಸೆಕ್ಟರ್ 7' ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಉಲ್ಲಾಳದ ಶ್ರೀಮುನೇಶ್ವರ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಕೃಷ್ಣರಾಜೇ ಅರಸ್ ಆರಂಭ ಫಲಕ ತೋರಿದರು. ಶ್ರೀಕಾಂತ್ ರಾಜೇ ಅರಸ್ ಕ್ಯಾಮೆರಾ ಚಾಲನೆ ಮಾಡಿದರು. ಬೆಂಗಳೂರು ಹಾಗೂ ಊಟಿಯಲ್ಲಿ ಚಿತ್ರೀಕರಣ ನಡೆಯಲಿದೆ.
ನೈಜಘಟನೆ ಆಧಾರಿತ ಹಾಗೂ ಹಾರಾರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಸಂಜೀವ್ ಗವಂಡಿ ನಿರ್ದೇಶಿಸುತ್ತಿದ್ದಾರೆ. ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಸಂಜೀವ್ ಗವಂಡಿ ಅವರೆ ಬರೆದಿದ್ದಾರೆ. "ಮಂಗಾಟ" ಚಿತ್ರದ ಮೂಲಕ ನಿರ್ದೇಶನ ಆರಂಭಿಸಿದ್ದ ಸಂಜೀವ್ ಅವರಿಗೆ "ಸೆಕ್ಟರ್ 7" ಐದನೇ ನಿರ್ದೇಶನದ ಚಿತ್ರ. ಎಂ.ಎಸ್ ಮೂವೀಸ್ ಲಾಂಛನದಲ್ಲಿ ಮಂಜುಳ ಅರಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಎರಡು ಹಾಡುಗಳಿರುವ ಈ ಚಿತ್ರಕ್ಕೆ ವಿನು ಮನಸ್ಸು ಸಂಗೀತ ನೀಡುತ್ತಿದ್ದಾರೆ. ವೀರೇಶ್ (ಎನ್ ಟಿ ಎ) ಛಾಯಾಗ್ರಹಣ, ಆದಿ ಆದರ್ಶ(ಬಾಂಬೆ) ಸಂಕಲನ ಹಾಗೂ ವಿ.ನಾಗೇಶ್ ಅವರ ನೃತ್ಯ ನಿರ್ದೇಶನ "ಸೆಕ್ಟರ್ 7" ಚಿತ್ರಕ್ಕಿದೆ.
ನೂತನ ಪ್ರತಿಭೆ ಸುನೀಲ್ ಕುಮಾರ್ ಈ ಚಿತ್ರದ ನಾಯಕ. ಐಶ್ವರ್ಯ ನಾಯಕಿ. ನಿರ್ಮಾಪಕಿ ಮಂಜುಳ ಅರಸ್ ಅವರು ಸಹ ಪ್ರಮುಖಪಾತ್ರದಲ್ಲಿ ನಟಿಸುತ್ತಿದ್ದಾರೆ. ಸ್ನೇಹ, ನಾಗರಾಜು, ಹನುಮಂತೇ ಗೌಡ, ಗಿರೀಶ್ ಜತ್ತಿ, ಹೇಮಾ, ವಿನೋದ್ ಗೊಬ್ಬರಗಾಲ, ಚೇತನ್, ಮೈಕೋ ಶಿವಕುಮಾರ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.