ಹೊಂಬಾಳೆ ಫಿಲ್ಮ್ಸ್ ಇಂದು (ಜೂನ್ 10) ಮತ್ತೊಂದು ಅನೌನ್ಸ್ ಮೆಂಟ್ ಮಾಡುವುದಾಗಿ ಬಹಿರಂಗ ಪಡಿಸಿತ್ತು. ಅಭಿಮಾನಿಗಳು ಯಾವ ಸಿನಿಮಾ, ಯಾರ ಜೊತೆ ಸಿನಿಮಾ ಮಾಡುತ್ತಿದ್ದಾರೆ ಎಂದು ಕಾತರದಿಂದ ಕಾಯುತ್ತಿದ್ದರು. ಇದೀಗ ಈ ಕುತೂಹಲಕ್ಕೆ ತೆರೆ ಬಿದ್ದಿ. ಹೌದು, ಹೊಂಬಾಳೆ ಫಿಲ್ಮ್ಸ್ ಮತ್ತೊಂದು ಸಿನಿಮಾ ಘೋಷಣೆ ಮಾಡಿದೆ.
ಸ್ಯಾಂಡಲ್ ವುಡ್‌ನ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್(Hombale Films) ಮತ್ತೊಂದು ಸಿನಿಮಾ ಅನೌನ್ಸ್ ಮಾಡುವ ಮೂಲಕ ಸಂತಸದ ಸುದ್ದಿ ಹಂಚಿಕೊಂಡಿದೆ. ಕೆಜಿಎಫ್-2 (KGF 2) ಸೂಪರ್ ಸಕ್ಸಸ್‌ನಲ್ಲಿ ತೆಲುತ್ತಿರುವ ವಿಜಯ್ ಕಿರಗಂದೂರ್ ಅವರ ಹೊಂಬಾಳೆ ಸಂಸ್ಥೆ ಅದೇ ಖುಷಿಯಲ್ಲಿ ಸಾಲು ಸಾಲು ಸಿನಿಮಾ ಘೋಷಣೆ ಮಾಡಿದೆ. ಹೊಂಬಾಳೆ ಫಿಲ್ಮ್ಸ್ ಇಂದು (ಜೂನ್ 10) ಮತ್ತೊಂದು ಅನೌನ್ಸ್ ಮೆಂಟ್ ಮಾಡುವುದಾಗಿ ಬಹಿರಂಗ ಪಡಿಸಿತ್ತು. ಅಭಿಮಾನಿಗಳು ಯಾವ ಸಿನಿಮಾ, ಯಾರ ಜೊತೆ ಸಿನಿಮಾ ಮಾಡುತ್ತಿದ್ದಾರೆ ಎಂದು ಕಾತರದಿಂದ ಕಾಯುತ್ತಿದ್ದರು. ಇದೀಗ ಈ ಕುತೂಹಲಕ್ಕೆ ತೆರೆ ಬಿದ್ದಿ. ಹೌದು, ಹೊಂಬಾಳೆ ಫಿಲ್ಮ್ಸ್ ಮತ್ತೊಂದು ಸಿನಿಮಾ ಘೋಷಣೆ ಮಾಡಿದೆ.
ಈ ಬಾರಿ ಹೊಂಬಾಳೆ ಫಿಲ್ಮ್ಸ್ ಸಿನಿಮಾ ಮಾಡಲು ಮುಂದಾಗಿದ್ದು ಮಲಯಾಳಂ ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್ (Prithviraj Sukumaran) ಜೊತೆ. ಹೌದು ಕನ್ನಡ, ತೆಲುಗು ಬಳಿಕ ಹೊಂಬಾಳೆ ಫಿಲ್ಮ್ಸ್ ಇದೀಗ ಮಲಯಾಳಂ ಕಡೆ ಮುಖ ಮಾಡಿದೆ. ಪೃಥ್ವಿರಾಜ್ ಅವರಿಗೆ ಸಿನಿಮಾ ನಿರ್ಮಾಣ ಮಾಡುವ ಮೂಲಕ ಮಲಯಾಲಂ ಸಿನಿ ಪ್ರೇಕ್ಷಕರ ಹೃದಯ ಗೆಲ್ಲಲು ಮುಂದಾಗಿದೆ ಹೊಂಬಾಳೆ ಫಿಲ್ಮ್ಸ್. ಅಂದಹಾಗೆ ಸಿನಿಮಾಗೆ 'ಟೈಸನ್' ಎಂದು ಹೆಸರಿಡಲಾಗಿದೆ.
Presenting my 4th directorial, next after Empuraan - L2. With co creator Murali Gopy. This time with ! Thank you for the trust. pic.twitter.com/CFmXohP9Fx
ಟೈಸನ್ ಸಿನಿಮಾದಲ್ಲಿ ಪೃಥ್ವಿರಾಜ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಟನೆಯ ಜೊತೆಗೆ ಪೃಥ್ವಿರಾಜ್ ನಿರ್ದೇಶನದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಈಗಾಗಲೇ ಪೃಥ್ವಿರಾಜ್ ನಟನೆ ಮತ್ತು ನಿರ್ದೇಶನ ಎರಡರಲ್ಲೂ ಸಕ್ಸಸ್ ಆಗಿದ್ದಾರೆ. ಇದೀಗ ಕನ್ನಡದ ನಿರ್ಮಾಣ ಸಂಸ್ಥೆ ಜೊತೆ ಸಿನಿಮಾ ಮಾಡುತ್ತಿರುವುದು ಕನ್ನಡಿಗರಿಗೂ ಖುಷಿಯ ವಿಚಾರವಾಗಿದೆ.
ಒಂದೇ ಸಿನಿಮಾದಲ್ಲಿ ಯಶ್, ಪ್ರಭಾಸ್, ಜೂ.ಎನ್‌ಟಿಆರ್; ಹೊಂಬಾಳೆ ಫಿಲ್ಮ್ಸ್‌ನ ಹೊಸ ಸಾಹಸ
ಸದ್ಯ ರಿಲೀಸ್ ಆಗಿರುವ ಪೋಸ್ಟರ್ ನಲ್ಲಿ ವ್ಯಕ್ತಿಯೋರ್ವ ಬೋರ್ಡ್ ಮೇಲೆ ಬರೆಯುತ್ತಿರುವ ಫೋಟೋ ಇದೆ. ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ರಿವೀಲ್ ಮಾಡದ ಸಿನಿಮಾತಂಡ ಕುತೂಹಲ ಹಾಗೆ ಕಾಯ್ದಿರಿಸಿದೆ. ಮಲಯಾಳಂ ಸಿನಿಮಾರಂಗ ಇತ್ತೀಚಿಗೆ ಅದ್ಭುತ ಸಿನಿಮಾಗಳ ಮೂಲಕ ವಿಶ್ವದ ಗಮನ ಸೆಳೆಯುತ್ತಿದೆ. ಇದೀಗ ಪಥ್ವಿರಾಜ್, ಟೈಸನ್ ಮೂಲಕ ಅಭಿಮಾನಿಗಳ ಮನ ಗೆಲ್ತಾರಾ ಎಂದು ಕಾದುನೋಡಬೇಕಿದೆ. ಇನ್ನು ಟೈಸನ್ ಸಿನಿಮಾ ಮಲಯಾಳಂ ಜೊತೆಗೆ ಕನ್ನಡ, ತಮಿಳು ಮತ್ತು ತೆಲುಗಿನಲ್ಲೂ ರಿಲೀಸ್ ಆಗುತ್ತಿದೆ.
ನಟ ಪೃಥ್ವಿರಾಜ್ ಮತ್ತು ಹೊಂಬಾಳೆ ಫಿಲ್ಮ್ಸ್ ಜೊತೆ ಉತ್ತಮ ಬಾಂಧವ್ಯವಿದೆ. ಕೆಜಿಎಫ್ ಸಿನಿಮಾವನ್ನು ಮಲಯಾಳಂನಲ್ಲಿ ರಿಲೀಸ್ ಮಾಡಲು ಪೃಥ್ವಿ ಸಾಥ್ ನೀಡಿದ್ದರು. ಅಲ್ಲದೇ ಕೆಜಿಎಫ್-2 ಟ್ರೈಲರ್ ರಿಲೀಸ್ ಈವೆಂಟ್‌ನಲ್ಲೂ ಪೃಥ್ವಿರಾಜ್ ಹಾಜರಿದ್ದರು. ಆಗಾಗಾ ಹೊಂಬಾಳೆ ಫಿಲ್ಮ್ಸ್ ಜೊತೆ ಕಾಣಿಸಿಕೊಳ್ಳುತ್ತಿದ್ದ ಪೃಥ್ವಿರಾಜ್ ಇದೀಗ ಹೊಂಬಾಳೆ ಬ್ಯಾನರ್್ನಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಟೈಸನ್, ಪೃಥ್ವಿರಾಜ್ ನಿರ್ದೇಶನದ 4ನೇ ಸಿನಿಮಾವಾಗಿದೆ. ಬಗ್ಗೆ ನಟ ಪಥ್ವಿರಾಜ್ ಸಾಮಾಜಿಕ ಜಾಲತಾಣದಲ್ಲಿ ಸೇರ್ ಮಾಡಿ ಹೊಂಬಾಳೆ ಫಿಲ್ಮ್ಸ್‌ಗೆ ಧನ್ಯವಾದ ತಿಳಿಸಿದ್ದಾರೆ.
Presenting my 4th directorial, next after Empuraan - L2. With co creator Murali Gopy. This time with ! Thank you for the trust. pic.twitter.com/CFmXohP9Fx
'ನನ್ನ 4ನೇ ನಿರ್ದೇಶನದ ಸಿನಿಮಾ. ಹೊಂಬಾಳೆ ಫಿಲ್ಮ್ಸ್ ಜೊತೆ. ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕೆ ವಿಜಯ್ ಕಿರಗಂದೂರ್ ಅವರಿಗೆ ಧನ್ಯವಾದಗಳು' ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಪೃಥ್ವಿರಾಜ್ ಸಹ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಅವರ ಸಿನಿಮಾ ಲಿಸ್ಟ್‌ಗೆ ಟೈಸನ್ ಸೇರ್ಪಡೆಯಾಗಿದೆ.
ಆ. 5ಕ್ಕೆ ಜಗ್ಗೇಶ್ ನಟನೆಯ ರಾಘವೇಂದ್ರ ಸ್ಟೋರ್ಸ್ ರಿಲೀಸ್!
ಇನ್ನು ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ಸಾಲು ಸಾಲು ಸಿನಿಮಾಗಳು ಮೂಡಿಬರುತ್ತಿವೆ. ಈಗಾಗಲೇ ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ ಸಲಾರ್ ಸಿನಿಮಾ ಸಿದ್ಧವಾಗುತ್ತಿದೆ. ರಿಷಬ್ ಶೆಟ್ಟಿ ನಟನೆಯ ಕಾಂತಾರ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ, ಜಗ್ಗೇಶ್ ಮತ್ತು ಸಂತೋಷ್ ಆನಂದ್ ರಾಮ್ ಕಾಂಬಿನೇಷನ್ ನ ರಾಘವೇಂದ್ರ ಸ್ಟೋರ್ಸ್, ಯುವರಾಜ್ ಕುಮಾರ್ ಮತ್ತು ಸಂತೋಷ್ ಆನಂದ್ ರಾಮ್ ಅವರ ಹೊಸ ಸಿನಿಮಾ ಹಾಗೂ ಸೂರರೈ ಪೊಟ್ರು ಸಿನಿಮಾ ಖ್ಯಾತಿಯ ಸುಧಾ ಕೊಂಗಾರ ಅವರ ಸಿನಿಮಾವಿದೆ.