Latest Videos

ಕನ್ನಡ ಸಿನಿಮಾ ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆಗೆ ಸ್ಪೋಟಕ ಟ್ವಿಸ್ಟ್!

By Sathish Kumar KHFirst Published May 24, 2024, 12:35 PM IST
Highlights

ಕನ್ನಡ ಚಲನಚಿತ್ರ ನಿರ್ಮಾಪಕ   ಸೌಂದರ್ಯ ಜಗದೀಶ್ (Soundarya Jagadeesh)  ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗೆ ಸಂಬಂಧಿಸಿದಂತೆ ಸ್ಫೋಟಕ ತಿರುವು ಸಿಕ್ಕಿದೆ.

ಬೆಂಗಳೂರು (ಮೇ 24): ಕಳೆದ ತಿಂಗಳು ಕನ್ನಡ ಚಲನಚಿತ್ರ ನಿರ್ಮಾಪಕ   ಸೌಂದರ್ಯ ಜಗದೀಶ್ (Soundarya Jagadeesh)  ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗೆ ಸಂಬಂಧಿಸಿದಂತೆ ಸ್ಫೋಟಕ ತಿರುವು ಸಿಕ್ಕಿದೆ. ಇವರ ಬ್ಯುಸಿನೆಸ್ ಪಾರ್ಟನರ್‌ಗಳು 60 ಕೋಟಿ ರೂ. ನಷ್ಟ ಮಾಡಿಸಿ, ಹಣ ಕೊಡದೇ ಬೆದರಿಕೆ ಹಾಕಿದ್ದಾರೆಂದು ಬರೆದಿಟ್ಟ ಡೆತ್‌ನೋಟ್ ಪತ್ತೆಯಾಗಿದೆ.

ಕನ್ನಡ ಚಲನಚಿತ್ರ ನಿರ್ಮಾಪಕ   ಸೌಂದರ್ಯ ಜಗದೀಶ್ (Soundarya Jagadeesh) ಕಳೆದ ತಿಂಗಳು ಏ.14ರಂದು ಬೆಂಗಳೂರಿನ ಮಹಾಲಕ್ಷ್ಮೀ ಲೇ ಔಟ್‌ನಲ್ಲಿರುವ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಹಣಕಾಸಿನ ವಿಚಾರದಲ್ಲಿ ಈ ಸಾವಾಗಿದೆ ಎಂದು ಹೇಳಲಾಗಿತ್ತು. ಇದರಿಂದ ತೀವ್ರ ದಃಖದಲ್ಲಿದ್ದ ಅವರ ಕುಟುಂಬ ಸದಸ್ಯರು ನೋವಿನಿಂದ ಹೊರ ಬರಲೂ ಸಾಧ್ಯವಾಗಿರಲಿಲ್ಲ. ಇದಾದ ನಂತರ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿ, ಅವರ ಇಚ್ಛೆಯಂತೆ ಚನ್ನರಾಯಪಟ್ಟಣದ ಹಿರಿಸಾವೆ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು.

ಸೌಂದರ್ಯ ಜಗದೀಶ್ ನಿಧನ, ಕುಟುಂಬಸ್ಥರಿಂದ ದೂರು ದಾಖಲು, ಹಿರಿಸಾವೆ ಫಾರ್ಮ್‌ಹೌಸ್‌ನಲ್ಲಿ ಅಂತ್ಯಕ್ರಿಯೆ

ಸೌಂದರ್ಯ ಜಗದೀಶ್ ಅವರ ಅಂತ್ಯಕ್ರಿಯೆ ನಂತರ ಉತ್ತರ ಕ್ರಿಯೆ ನಡೆಸಲು ಅವರ ಬಟ್ಟೆಗಳನ್ನು ತೆಗೆದುಕೊಳ್ಳಲು ಹೋದಾಗ ಅವರ ವಾಲ್‌ರೋಬ್‌ನಲ್ಲಿ ಡೆತ್‌ನೋಟ್ ಪತ್ತೆಯಾಗಿದೆ. ಅದರಲ್ಲಿ ತಮ್ಮ ಸಾವಿಗೆ ಉದ್ಯಮ ಪಾಲುದಾರರಾದ ಸುರೇಶ್, ಹೊಂಬಣ್ಣ ಹಾಗೂ ಸುಧೀಂದ್ರ ಅವರೇ ನೇರ ಕಾರಣ ಎಂದು ಉಲ್ಲೇಖ ಮಾಡಿದ್ದಾರೆ. ಸುರೇಶ್ ಮತ್ತು ಹೊಂಬಣ್ಣ ಅವರು ಸೌಂದರ್ಯ ಕನ್ಸ್ಟ್ರಕ್ಷನ್ ಎಂಬ ಉದ್ಯಮದಲ್ಲಿ ಕೋಟ್ಯಂತರ ರೂ. ಹಣವನ್ನು ಹೂಡಿಕೆ ಮಾಡಿಸಿದ್ದಾರೆ. ನಂತರ, ತಮ್ಮ ಹಣವನ್ನು ಹಿಂತೆಗೆದುಕೊಂಡು ಕೇವಲ ಜಗದೀಶ್ ಅವರಿಂದ ಹೆಚ್ಚು ಹಣ ಹೂಡಿಕೆ ಮಾಡಿ ಉದ್ಯಮ ನಷ್ಟದಲ್ಲಿದೆ ಎಂದು ತೋರಿಸಿದ್ದಾರೆ. ಲಾಭದ ಹಣವನ್ನೆಲ್ಲಾ ಉದ್ಯಮ ಪಾಲುದಾದರರು ವೈಯಕ್ತಿಕವಾಗಿ ಬಳಕೆ ಮಾಡಿಕೊಂಡಿದ್ದಾರೆ.

ಇದಾದ ನಂತರವೂ ಉದ್ಯಮ ನಷ್ಟದಲ್ಲಿದೆ ಎಂದು ಸೌಮದರ್ಯ ಜಗದೀಶ್ ಅವರಿಂದ ಮತ್ತಷ್ಟು ಹಣವನ್ನು ಹೂಡಿಕೆ ಮಾಡಿಸುವ ಉದ್ದೇಶದಿಂದ ಖಾಲಿ ಚೆಕ್ ಬುಕ್ ಪಡೆದು ಅವರಿಂದ ಸಹಿ ಹಾಕಿಸಿಕೊಂಡು ಸಾಕಷ್ಟು ಸಾಲ ಮಾಡಿಸಿ ಉದ್ಯಮಕ್ಕೆ ಹೂಡಿಕೆ ಮಾಡಿದ್ದಾರೆ. ನಂತರ, ಉದ್ಯಮಕ್ಕೆ ಹೂಡಿಕೆ ಮಾಡಿದ ಹಣವನ್ನು ಇವರೇ ಹಿಂಪಡೆದು ವೈಯಕ್ತಿಕವಾಗಿ ಬಳಸಿಕೊಂಡಿದ್ದಾರೆ. ಒಟ್ಟಾರೆ ಉದ್ಯಮದಿಂದ ಬರೋಬ್ಬರಿ 60 ಕೋಟಿ ರೂ. ನಷ್ಟವನ್ನುಂಟು ಮಾಡಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿದಾದ ಬಿಳಿ ಹಾಳೆಯ ಮೇಲೆ ಸೌಂದರ್ಯ ಜಗದೀಶ್ ಅವರ ನಕಲಿ ಸಹಿ ಮಾಡಿಟ್ಟುಕೊಂಡು ಬೆದರಿಕೆ ಹಾಕಿದ್ದಾರೆ. ಇದರಿಂದ ಪೊಲೀಸ್ ಠಾಣೆ ಮೆಟ್ಟಿಲೇರುವುದಾಗಿ ತಿಳಿಸಿದಾಗ ಹಣ ವಾಪಸ್ ಕೊಡುವುದಾಗಿ ಹೇಳಿದ್ದರು.

ಭಗವದ್ಗೀತೆಯಲ್ಲಿ ಡೆತ್ ನೋಟ್ ಬರೆದಿಟ್ಟು, ಆತ್ಮಹತ್ಯೆಗೆ ಶರಣಾದ ಸರ್ಕಾರಿ ಶಾಲೆ ಶಿಕ್ಷಕ

ಸೌಂದರ್ಯ ಜಗದೀಶ್ ಅವರಿಗೆ ಹಣ ವಾಪಸ್ ಕೊಡುವುದಾಗಿ ಹಲವು ದಿನಗಳನ್ನು ತಳ್ಳುತ್ತಾ ಬಂದಿದ್ದಾರೆ. ಆದರೆ, ಸಾಲಕ್ಕೆ ಬಡ್ಡಿ ಹೆಚ್ಚಳವಾಗುತ್ತಲೇ ಇತ್ತು. ಆಗ ಒತ್ತಡ ಹೇರಿ ಹಣವನ್ನು ಕೇಳಿದಾಗ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಡೆತ್‌ ನೋಟ್‌ನಲ್ಲಿ ಬರೆದಿದ್ದಾರೆ. ಈ ಡೆತ್‌ ನೋಟ್ ಆಧರಿಸಿ ಸೌಂದರ್ಯ ಜಗದೀಶ್ ಅವರ ಪತ್ನಿ ಶಶಿರೇಖಾ ಅವರು ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಶಶಿರೇಖಾ ಅವರು ದೂರಿನಲ್ಲಿ ಡೆತ್‌ನೋಟ್‌ನ ವಿವರವನ್ನು ದಾಖಲಿಸಿದ ಜೊತೆಗೆ,  ಸೌಂದರ್ಯ ಜಗದೀಶ್ ಸಾವಿಗೆ ಒಂದು ವಾರ ಮುಂಚಿನಿಂದಲೂ ಸುರೇಶ್ ಹಾಗೂ ಹೊಂಬಣ್ಣ ಅವರ ಫೋನ್ ಕರೆಗಳು ಬಂದರೆ ಬೆಚ್ಚಿ ಬೀಳುತ್ತಿದ್ದರು. ಮಾನಸಿಕ ಸ್ಥಿಮಿತ ಕಳೆದುಕೊಂಡು ರೂಮಿಗೆ ಹೋಗು ಬಾಗಿಲು ಹಾಕಿಕೊಂಡು ಮಾತನಾಡುತ್ತಿದ್ದರು ಎಂದು ಉಲ್ಲೇಖ ಮಾಡಿದ್ದಾರೆ. ಈಗ ಪೊಲೀಸರು ಎಫ್‌ಐಆರ್ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

click me!