
ರಂಗಭೂಮಿ ಕಲಾವಿದ (Theater artist), ಕನ್ನಡ ಚಿತ್ರರಂಗದ ಸಿಂಪಲ್ ನಟ ನೀನಾಸಂ ಸತೀಶ್ (Sathish Ninasam) ಅವರ ತಾಯಿ ಚಿಕ್ಕತಾಯಮ್ಮ (Chikkatayamma) ಅಕ್ಟೋಬರ್ 1ರಂದು ಕೊನೆ ಉಸಿರೆಳೆದಿದ್ದಾರೆ. ಕಳೆದ ಒಂದು ವರ್ಷದಿಂದ ಚಿಕ್ಕತಾಯಮ್ಮ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು, ಎನ್ನಲಾಗಿದೆ.
ಸಿನಿಮಾ ಕ್ಷೇತ್ರದಲ್ಲಿ ಬ್ಯುಸಿಯಾಗಿರುವ ಸತೀಶ್ ಬೆಂಗಳೂರಿನ ಆರ್‌ಆರ್ ನಗರದಲ್ಲಿ (RR Nagar) ವಾಸವಿದ್ದರು. ಚಿಕ್ಕತಾಯಮ್ಮ ಕೂಡ ಕಿರಿಯ ಪುತ್ರನ ಜೊತೆಯೇ ಇದ್ದರು. ಮಕ್ಕಳು ಹಾಗೂ ಮೊಮ್ಮಕ್ಕಳನ್ನು ಚಿಕ್ಕತಾಯಮ್ಮ ಅಗಲಿದ್ದಾರೆ. ಇಂದು ಮದ್ದೂರಿನ (Maddur) ಯಲದಳ್ಳಿಯಲ್ಲಿ ಅಂತ್ಯ ಸಂಸ್ಕಾರ ನೇರವೇರಲಿದೆ.
ಸತೀಶ್ ತಾಯಿ ನಿಧನಕ್ಕೆ ಇಡೀ ಕನ್ನಡ ಚಿತ್ರರಂಗವೇ ಕಂಬನಿ ಮಿಡಿದಿದೆ. ಚಿಕ್ಕತಾಯಮ್ಮ ಅವರಿಗೆ ನಾಲ್ಕು ಗಂಡು ಮಕ್ಕಳು ಹಾಗೂ ನಾಲ್ಕು ಹೆಣ್ಣು ಮಕ್ಕಳು. ಸತೀಶ್ ಸಿನಿಮಾ ಆಪ್ತರು ಚಿಕ್ಕತಾಯಮ್ಮ ಅವರ ಕೊನೆ ದರ್ಶನ ಪಡೆದುಕೊಂಡಿದ್ದಾರೆ.
ಸತೀಶ್ ತಾಯಿಯ ಮುದ್ದಿನ ಮಗ. ಏನೇ ಒಳ್ಳೆಯ ಕೆಲಸ ಮಾಡಿದರೂ ತಾಯಿಗೆ ಕ್ರೆಡಿಟ್ ನೀಡುತ್ತಾರೆ. ಎಲ್ಲ ದಿನವೂ ಅಮ್ಮಂದಿರ ದಿನ ಎಂದು ಬರೆದುಕೊಳ್ಳುವವರು. ಬೆಂಗಳೂರಿನಲ್ಲಿದ್ದರೂ ತಮ್ಮ ಹಳ್ಳಿ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವವರು. ಬಿಡುವು ಮಾಡಿಕೊಂಡು, ಹಳ್ಳಿಯಲ್ಲಿದ್ದು ಹಳ್ಳಿ (Village) ಜೀವನ ನಡೆಸುತ್ತಾರೆ ಈ ಸ್ಯಾಂಡಲ್‌ವುಡ್ ನಟ ಸತೀಶ್.
ಕೊರೋನಾ ಲಾಕ್‌ಡೌನ್ (Covid19 Lockdown) ಸಮಯದಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ನಟ ಸತೀಶ್ ಆಪ್ತ ಗೆಳೆಯ ಸಂಚಾರಿ ವಿಜಯ್‌ರನ್ನು (Sanchari Vijay) ಕಳೆದುಕೊಂಡಿದ್ದರು. ಸ್ವಂತ ಅಣ್ಣನಂತೆಯೇ ಮುಂದೆ ನಿಂತು ಪ್ರತಿಯೊಂದೂ ಕೆಲಸ ಕಾರ್ಯಗಳನ್ನು ನಡೆಸಿಕೊಟ್ಟಿದ್ದರು.
ಸತೀಶ್ ಅಭಿನಯದ ಪೆಟ್ರೋಮ್ಯಾಕ್ಸ್ (Petromax) ಸಿನಿಮಾ ಬಿಡುಗಡೆಯ ಹಂತ ತಲುಪಿದೆ. ದಸರಾ (Dasara), ಗೋದ್ರಾ (Godra), ಮ್ಯಾಟ್ನಿ (matine) ಸಿನಿಮಾ ಚಿತ್ರೀಕರಣ ಮಾಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.