
ಸುದೀಪ್, ಪುನೀತ್ ರಾಜ್‌ಕುಮಾರ್, ಸಿಂಪಲ್ ಸುನಿ, ಜಯತೀರ್ಥ ಚಿತ್ರದ ಟ್ರೇಲರ್‌ಗೆ ಮೆಚ್ಚುಗೆ ಸೂಚಿಸಿದ್ದಾರೆ. ಚಿತ್ರತಂಡ ಟ್ರೇಲರ್ ಬಿಡುಗಡೆ ಸಂಭ್ರಮದಲ್ಲಿ ಮಾಧ್ಯಮಗಳ ಮುಂದೆ ಬಂತು. ಸಮಥ್‌ರ್ ನಾಯಕ್ ನಿರ್ದೇಶನದ, ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಕತೆಯನ್ನು ಹೊಂದಿರುವ ಸಿನಿಮಾ. ತಾಂತ್ರಿಕವಾಗಿಯೂ ಟ್ರೇಲರ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲಿದೆ ಎಂಬುದು ಚಿತ್ರತಂಡದ ನಂಬಿಕೆ.
1000 ಕಂತು ಪೂರೈಸಿದ ಬ್ರಹ್ಮಗಂಟು;ನಿರ್ದೇಶಕಿ, ನಿರ್ಮಾಪಕಿ ಶ್ರುತಿ ನಾಯ್ಡು ಸಂಭ್ರಮ!
ಏಪ್ರಿಲ್ 16ಕ್ಕೆ ಈ ಸಿನಿಮಾ ತೆರೆಗೆ ಬರುವ ಸಾಧ್ಯತೆಗಳಿವೆ. ಈಗಾಗಲೇ ಕೆಲ ಹಿಂದಿ ಚಿತ್ರಗಳಲ್ಲಿ ನಟಿಸಿರುವ ಮೋಹನ್ ಧನರಾಜ್ ‘ಮೋಕ್ಷ’ ಚಿತ್ರದ ನಾಯಕ. ಹೊಸ ರೀತಿಯ ಕತೆಯಲ್ಲಿ ನಟಿಸಿದ ಖುಷಿ ಇದೆ. ಒಂದು ಒಳ್ಳೆಯ ಚಿತ್ರವನ್ನು ಎಲ್ಲರು ನೋಡಿದರೆ ಮತ್ತಷ್ಟುಒಳ್ಳೆಯ ಚಿತ್ರಗಳು ಮೂಡಿ ಬರಲು ಸಾಧ್ಯ ಎಂಬುದು ಮೋಹನ್ ಧನರಾಜ್ ಮಾತು. ನಾಯಕಿಯಾಗಿ ಕಾಣಿಸಿಕೊಂಡಿರುವ ಆರಾಧ್ಯ ಲಕ್ಷ್ಮಣ್ ತಮ್ಮ ಪಾತ್ರದ ಕುರಿತು ಹೇಳಿಕೊಂಡರು. ತಾರಕ್ ಪೊನ್ನಪ್ಪ ಈ ಚಿತ್ರದಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಫೀಮೇಲ್ ಸೂಪರ್ ಹೀರೋ ಆಗಿ ಅದಿತಿ ಪ್ರಭುದೇವ; ಆನಾ ಟೀಸರ್‌ಗೆ ಭಾರಿ ಮೆಚ್ಚುಗೆ
ಈ ಥ್ರಿಲ್ಲರ್ ಚಿತ್ರದಲ್ಲಿ ಮಾಸ್ಕ್ ಮ್ಯಾನ್ ಪಾತ್ರವೊಂದಿದೆ. ಆ ಪಾತ್ರವೇ ನಾಯಕ, ನಾಯಕಿಗೆ ತೊಂದರೆ ಕೊಡುತ್ತಾ ಹೋಗುತ್ತದೆ. ಈ ಪಾತ್ರ ಯಾರು, ಯಾಕೆ ಆತ ಎಲ್ಲರನ್ನೂ ಕೊಲೆ ಮಾಡುತ್ತಾ ಬರುತ್ತಿರುತ್ತಾನೆ ಎಂಬುದು ಚಿತ್ರದ ಕತೆ. ಚಿತ್ರಕ್ಕೆ ಗುರುಪ್ರಶಾಂತ್ ರೈ, ಕಿರಣ್ ಹಂಪಾಪುರ, ಜೋಮ್ ಜೋಸಫ್ ಕ್ಯಾಮೆರಾ ಹಿಡಿದಿದ್ದಾರೆ. ಜಯಂತ್ ಕಾಯ್ಕಿಣಿ, ಕುಮಾರ್ ದತ್ ಅವರು ಬರೆದಿರುವ ಎರಡು ಹಾಡುಗಳಿಗೆ ಕಿಶನ್ ಮೋಹನ್ ಹಾಗೂ ಸಚಿನ್ ಬಾಲು ಸಂಗೀತ ನೀಡಿದ್ದಾರೆ. ಭೂಮಿ, ಪ್ರಶಾಂತ್ ನಟನ ಚಿತ್ರದ ತಾರಾಬಳಗದಲ್ಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.