
ಕನ್ನಡಿಗರು ಮಾತ್ರವಲ್ಲ, ತಮಿಳು, ತೆಲುಗು, ಹಿಂದಿ ಚಿತ್ರರಂಗದವರೂ ಈ ತಂಡವನ್ನು ಸಂಪರ್ಕಿಸಿ ಟೀಸರ್ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಈ ತಿಂಗಳ ಕೊನೆಯ ವಾರ ಅಥವಾ ಮೇ ಮೊದಲ ವಾರದಲ್ಲಿ ಚಿತ್ರ ಬಿಡುಗಡೆ ಆಗಲಿದೆ. ಆನಾ ನಿರ್ದೇಶಕ ಮನೋಜ್ ಆ್ಯಂಡ್ ಟೀಮ್ ಈ ಖುಷಿಯನ್ನು ಹಂಚಿಕೊಳ್ಳಲೆಂದೇ ಸುದ್ದಿಗೋಷ್ಠಿ ಕರೆದಿತ್ತು.
ಭಾರತದ ಮೊದಲ ಸೂಪರ್ ಹೀರೋ ಚಿತ್ರ 'ಆನ'; ಹೀಗೆದೆ ಅದಿತಿ ತಯಾರಿ!
‘ಹೊಸಬರ ಈ ತಂಡ ನನ್ನನ್ನು ಸಂಪರ್ಕಿಸಿದ್ದು ಲಾಕ್‌ಡೌನ್ ಟೈಮ್‌ನಲ್ಲಿ. ಆಗ ಎಲ್ಲರಂತೆ ನಾನೂ ಕೆಲಸವಿಲ್ಲದೇ ಕೂತಿದ್ದೆ. ಹೀಗಾಗಿ ಹೊಸಬರ ತಂಡವಾದರೂ ಕಥೆ ಇಂಟರೆಸ್ಟಿಂಗ್ ಅನಿಸಿದ ಕಾರಣ ಈ ಪ್ರಾಜೆಕ್ಟ್ ಒಪ್ಪಿಕೊಂಡೆ. ಆಲ್‌ಮೋಸ್ಟ್ ಶೂಟಿಂಗ್ ನಡೆದದ್ದೆಲ್ಲ ರಾತ್ರಿಯಲ್ಲೇ. ಬಹಳ ರಿಸ್ಕ್ ತಗೊಂಡು ಶೂಟಿಂಗ್ ಮಾಡುತ್ತಿದ್ದರು. ಸಿನಿಮಾದಲ್ಲಿ ಹೊಸ ಹೊಸ ಪಾತ್ರ ಅರಸುತ್ತಾ ಹೋಗುವವಳು ನಾನು. ಇದು ಡಿಫರೆಂಟ್ ಜಾನರ್ ಸಿನಿಮಾ. ಈವರೆಗೆ ಇಂಥಾ ಪಾತ್ರ ಮಾಡಿರಲಿಲ್ಲ’ ಅಂದರು ನಾಯಕಿ ಅದಿತಿ ಪ್ರಭುದೇವ.
ನಿರ್ದೇಶಕ ಮನೋಜ್ ಪಿ ಮಡಲುಮನೆ ಮೂಲತಃ ದಾವಣಗೆರೆಯವರು. ‘ಇದೊಂದು ಡಾರ್ಕ್ ಫ್ಯಾಂಟಸಿ. ನನ್ನ ಮೊದಲ ಪ್ರಯತ್ನಕ್ಕೆ ಈ ಮಟ್ಟಿನ ಮೆಚ್ಚುಗೆ ಹರಿದು ಬರುತ್ತಿರುವುದು ಬಹಳ ಖುಷಿ ಕೊಟ್ಟಿದೆ. ಇದನ್ನು ಪ್ಯಾನ್ ಇಂಡಿಯಾ ಸಿನಿಮಾ ಮಾಡುವ ಯೋಚನೆ ಇದೆ. ಉಳಿದ ಭಾಷೆಗಳ ಚಿತ್ರರಂಗದವರು ಈ ಟೀಸರ್ ನೋಡಿ, ಯಾರಾರಯರಿಂದಲೋ ನಮ್ಮ ನಂಬರ್ ಕಲೆಕ್ಟ್ ಮಾಡಿ ಕರೆ ಮಾಡಿದ್ದಾರೆ. ಪ್ರೋತ್ಸಾಹದ ನುಡಿಗಳನ್ನು ಹೇಳಿದ್ದಾರೆ. ಆದರೆ ನಮ್ಮ ಕನ್ನಡದವರಿಂದ ನಿರೀಕ್ಷಿತ ಪ್ರೋತ್ಸಾಹ ಸಿಕ್ಕಿಲ್ಲ’ ಎಂದರು.
"
ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ, ನಟ ಸುನೀಲ್ ಪುರಾಣಿಕ್ ಮಾತನಾಡಿ, ‘ಹೊಸ ಹುಡುಗರ ಹುಮ್ಮಸ್ಸು ಕೆಲಸದಲ್ಲೂ ಎದ್ದು ಕಾಣುತ್ತದೆ. ಅವರ ಸಿನಿಮಾ ಪ್ರೀತಿ ಇಷ್ಟವಾಯ್ತು. ಬಹಳ ಮುಖ್ಯ ಪಾತ್ರ ಮಾಡುತ್ತಿದ್ದೇನೆ. ಈ ಚಿತ್ರ ಸ್ಯಾಂಡಲ್‌ವುಡ್‌ಗೇ ತಿರುವು ನೀಡುವಂತೆ ಕಾಣುತ್ತಿದೆ’ ಎಂದರು.
ಡಿಓಪಿ ಮಾಡಿದ ಉದಯ್ ಲೀಲಾ, ಸಂಕಲಕಾರ ವಿನೀತ್ ಚಂದ್ರ, ನಟರಾದ ಶಿವ ಮಂಜು, ರಣ್ವಿತ್ ಶಿವಕುಮಾರ್, ಚೇತನ್ ಗಂಧರ್ವ ಪಾಲ್ಗೊಂಡಿದ್ದರು. ಯುಕೆ ಪ್ರೊಡಕ್ಷನ್ ಲಾಂಛನದಲ್ಲಿ ಪೂಜಾ ವಸಂತಕುಮಾರ್ ಈ ಚಿತ್ರ ನಿರ್ಮಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.