ನಟ ಪ್ರಜ್ವಲ್ ಹಾಗೂ ಪ್ರಜ್ವಲ್ ಪತ್ನಿ ರಾಗಿಣಿಗೆ Covid ಪಾಸಿಟಿವ್!

Published : Apr 01, 2021, 04:05 PM IST
ನಟ ಪ್ರಜ್ವಲ್ ಹಾಗೂ ಪ್ರಜ್ವಲ್ ಪತ್ನಿ ರಾಗಿಣಿಗೆ Covid ಪಾಸಿಟಿವ್!

ಸಾರಾಂಶ

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್‌ ಹಾಗೂ ಪತ್ನಿ ರಾಗಿಣಿಗೆ ಕೊರೋನಾ ಸೋಂಕು ತಗುಲಿದೆ. ಇನ್‌ಸ್ಟಾಗ್ರಾಂ ಮೂಲಕ ರಾಗಿಣಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.

ಸ್ಯಾಂಡಲ್‌ವುಡ್‌ ಡೈನಾಮಿಕ್ ಪ್ರಿನ್ಸ್‌, ಚಾಕೋಲೆಟ್ ಬಾಯ್ ಪ್ರಜ್ವಲ್ ದೇವರಾಜ್‌ ಹಾಗೂ ಪತ್ನಿ ರಾಗಿಣಿಗೆ ಕೊರೋನಾ ಪಾಸಿಟಿವ್ ಎಂದು ತಿಳಿದು ಬಂದಿದೆ. ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಇರುವ ಸ್ಟಾರ್ ಕಪಲ್ ಅಭಿಮಾನಿಗಳ ಜೊತೆ ಮಾಹಿತಿ ಹಂಚಿ ಕೊಂಡಿದ್ದಾರೆ ಹಾಗೂ ಜಾಗೃತರಾಗಿರುವಂತೆ ಮನವಿ ಮಾಡಿ ಕೊಂಡಿದ್ದಾರೆ. 

'ಪ್ರಜ್ವಲ್ ಮತ್ತು ನನಗೆ ಕೊರೋನಾ ಪಾಸಿಟಿವ್ ಎಂದು ತಿಳಿದು ಬಂದಿದೆ. ವೈದ್ಯರು ಸೂಚಿಸಿರುವ ಔಷಧಿ ಹಾಗೂ ಸರಿಯಾದ ರೀತಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದೀವಿ. ನಿಮ್ಮಲ್ಲರ ಪ್ರೀತಿ ಹಾಗೂ ಹಾರೈಕೆಯಿಂದ ನಾವು ಬೇಗ ಗುಣಮುಖರಾಗುತ್ತೇವೆ,' ಎಂದು ಬರೆದುಕೊಂಡಿದ್ದಾರೆ. ಫೋಟೋದಲ್ಲಿ ಇಬ್ಬರೂ ಕೈ ಕೈ ಹಿಡಿದು ಒಬ್ಬರನ್ನೊಬ್ಬರು ನೋಡುತ್ತಾ ನಿಂತಿದ್ದಾರೆ.

ಸ್ನೇಹಿತರು ಹಾಗೂ ಕನ್ನಡ ಚಿತ್ರರಂಗದ ಆಪ್ತರು ಯಾವುದೇ ತೊಂದರೆ ಇಲ್ಲದೆ ಗುಣ ಮುಖರಾಗುವಂತೆ ಕಾಮೆಂಟ್ ಮಾಡಿ, ಧೈರ್ಯ ನೀಡಿದ್ದಾರೆ.  ಇನ್‌ಸ್ಪೆಕ್ಟರ್ ವಿಕ್ರಂ ಯಶಸ್ಸಿನಲ್ಲಿರುವ ಪ್ರಜ್ವಲ್ ತಮ್ಮ ಮುಂದಿನ ಚಿತ್ರದ ಮಾತುಕತೆಯಲ್ಲಿ ಬ್ಯುಸಿಯಾಗಿದ್ದರು. 'ಲಾ' ಚಿತ್ರದ ಮೂಲಕ ಕನ್ನಡ ಚಿತ್ರರಂಗ ಕಾಲಿಟ್ಟ ರಾಗಿಣಿ, ಕಥಕ್ ಡ್ಯಾನ್ಸರ್ ಆಗಿಯೂ ಸದಾ ಬ್ಯುಸಿ ಇರುವ ಕಲಾವಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಕರ್ಲಿ ಹೇರ್, ಹಳದಿ ಡ್ರೆಸ್: ಸಂಗೀತಾ ಶೃಂಗೇರಿ ಹೊಸ ಅವತಾರ ನೋಡಿ ನೆಟ್ಟಿಗರು ಏನಂದ್ರು?
ಹಿಮವದ್ ಗೋಪಾಲಸ್ವಾಮಿ ದೇವರ ದರ್ಶನಕ್ಕೆ ಬಂದ ನಟ ಚಿಕ್ಕಣ್ಣ-ಪಾವನಾ: ಅಲ್ಲೇ ಸಿಕ್ತು ಸಿಹಿ ಸುದ್ದಿ!