ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ #PuneethRajkumar. ಯಾವ ಜಾತಿ ಭೇದವಿಲ್ಲದೆ ಹಬ್ಬದಂತೆ ಆಚರಿಸುತ್ತಿರುವ ಅಭಿಮಾನಿಗಳು....
ಕನ್ನಡ ಚಿತ್ರರಂಗದ ಮುತ್ತು ರತ್ನ, ಪವರ್ ಸ್ಟಾರ್ ಡಾ.ಪುನೀತ್ ರಾಜ್‌ಕುಮಾರ್ ಇಂದು 46ರ ವಸಂತಕ್ಕೆ ಕಾಲಿಟ್ಟಿದ್ದಾರೆ. ಅಪ್ಪು ಇಲ್ಲದೆ ಅಭಿಮಾನಿಗಳು ಆಚರಿಸುತ್ತಿರುವ ಮೊದಲ ಹುಟ್ಟುಹಬ್ಬದ ಇದಾಗಿದ್ದು ಎಲ್ಲರಿಗೂ ಮಿಶ್ರ ಭಾವನೆಗಳು. ಇಂದು ಪುನೀತ್ ನಾಯಕನಾಗಿ ನಟಿಸಿರುವ ಕೊನೆ ಸಿನಿಮಾ ಜೇಮ್ಸ್ ಬಿಡುಗಡೆಯಾಗುತ್ತಿದೆ. ಫಸ್ಟ್ ಡೇ ಫಸ್ಟ್ ಶೋ ಫುಲ್ ಬುಕ್ಕಿಂಗ್ ಆಗಿದ್ದು ದೊಡ್ಡ ದೊಡ್ಡ ಕಟೌಟ್ ಹಾಕಿ ಅನ್ನ ದಾನ, ನೇತ್ರದಾನ ಹಮ್ಮಿಕೊಂಡಿದ್ದಾರೆ ಅಭಿಮಾನಿಗಳು. ಸೋಷಿಯಲ್ ಮೀಡಿಯಾದಲ್ಲಿ ಪುನೀತ್ ಹೆಸರು ಟ್ರೆಂಡ್ ಆಗುತ್ತಿದೆ. ಸಿನಿ ಸ್ನೇಹಿತರು ಶುಭ ಕೋರಿರುವುದು ಹೀಗೆ....
ರಕ್ಷಿತ್ ಶೆಟ್ಟಿ:
'ಅವರ ಹೆಸರೇ ಅವರ ವ್ಯಕ್ತಿತ್ವದ ಬಗ್ಗೆ ಹೇಳುತ್ತದೆ. ಪುನೀತ್ ರಾಜ್‌ಕುಮಾರ್ ಅವರನ್ನು ಹುಟ್ಟುಹಬ್ಬದ ದಿನ ನೆನಪಿಸಿಕೊಳ್ಳಬೇಕಿದೆ. ನಾವು ಅವರನ್ನು ಪ್ರೀತಿಸಿದಷ್ಟೇ ಜೇಮ್ಸ್ ಸಿನಿಮಾವನ್ನು ಪ್ರೀತಿಸಬೇಕು. ಇಡೀ ತಂಡಕ್ಕೆ ಒಳ್ಳೆಯದಾಗಲಿ'
ಡ್ಯಾನಿಷ್ ಸೇಠ್:
ಈ ಭೂಮಿ ಮೇಲೆ ಅವರಂತೆ ಯಾರೂ ಇಲ್ಲ ಯಾರು ಇರಲು ಸಾಧ್ಯವೂ ಇಲ್ಲ. ಹ್ಯಾಪಿ ಬರ್ತಡೇ ಪುನೀತ್ ಅಣ್ಣ. ನಿಮ್ಮ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳು ನಿಮ್ಮನ್ನು ಅನಂತ ಮತ್ತು ಅದಕ್ಕೂ ಮೀರಿ ಆಚರಿಸುತ್ತಾರೆ.ಜೇಮ್ಸ್‌ಗೆ ದೊಡ್ಡ ಯಶಸ್ಸು ಸಿಗಲಿ
ಅನುಪ್ ಭಂಡಾರಿ:
ಚಿತ್ರಮಂದಿರದಿಂದ ಹೊರ ಬರುವಾಗ ನಮ್ಮಲ್ಲಿ ಬೇರೆಯ ಭಾವನೆ. ಮನಸ್ಸಿನ ತುಂಬಾ ಭಾವನೆಗಳನ್ನು ತುಂಬಿಕೊಂಡು ಚಿತ್ರಮಂದಿರ ಪ್ರವೇಶಿಸಿದ್ದು ಇದೇ ಮೊದಲು. ನಿಮ್ಮ ಜನ್ಮ ದಿನದಂದು ನಿಮ್ಮನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇನೆ ಅಪ್ಪು ಸರ್.
ಅನುಶ್ರೀ:
ಅಂದು ಇಂದು ಎಂದೆಂದಿಗೂ ನಿಮ್ಮ ಅಭಿಮಾನಿ ಅಪ್ಪು ಅಂದ್ರೆ ಪ್ರೀತಿ ಅಪ್ಪು ಅಂದ್ರೆ ಮಾನವೀಯತೆ ಅಪ್ಪು ಅಂದ್ರೆ ಪರಮಾತ್ಮನ ಅಪ್ಪುಗೆ ಪರಮಾತ್ಮನ ಸ್ಪರ್ಶಿಸಿದ ಪುಣ್ಯ ನನ್ನದು ನೀವಿದ್ದೀರಿ ಇಲ್ಲೇ ಇದ್ದೀರಿ Happiest bday to my ONE n ONLY FAVOURITE APPU SIR ಒಳ್ಳೆತನದಲ್ಲಿ ಸದಾ ಜೀವಂತ
ಡಾರ್ಲಿಂಗ್ ಕೃಷ್ಣ:
ಬೆಳಗ್ಗೆ 6 ಗಂಟೆ ಶೋ. ಎಂದಿನಂತೆ ಈ ಸಲವೂ ತುಂಬಾನೇ ಎಕ್ಸೈಟ್ ಆಗಿರುವೆ. ಅಪ್ಪು ಸರ್ ಸಿನಿಮಾಗಳನ್ನು ಫಸ್ಟ್ ಡೇ ಫಸ್ಟ್ ಶೋ ನೋಡುವೆ. ನಮ್ಮ ಪವರ್ ಸ್ಟಾರ್‌ನ ದೊಡ್ಡ ಪರದೆ ಮೇಲೆ ನೋಡಲು ಕಾಯುತ್ತಿದ್ದೆ. ಬೋಲೋ ಬೋಲೋ ಜೇಮ್ಸ್. 2002ರಲ್ಲಿ ಅಪ್ಪು ಸರ್ ಅಭಿಮಾನಿಯಾಗಿ ನಾನು ನವರಂಗ್ ಚಿತ್ರಮಂದಿರದಲ್ಲಿ ಸಿನಿಮಾ ನೋಡಿದ್ದೆ.
ಯಶ್:
ಎಂದೂ ಮರೆಯಾಗದ ನಗು, ಎಂದಿಗೂ ಹೊಂದಿಸಲಾಗದ ಮ್ಯಾಚ್. ಎಂದಿಗೂ ನಿಲ್ಲಿಸಲಾಗದ ಶಕ್ತಿ, ಎಂದಿಗೂ ಕಸಿದುಕೊಳ್ಳಲಾಗದ ಶಕ್ತಿ.ಅವರು ಎಂದಿಗೂ ಬದುಕುತ್ತಾರೆ. ಹುಟ್ಟು ಹಬ್ಬದ ಶುಭಾಶಯಗಳು ಅಪ್ಪು ಸರ್.
ಶೈನ್ ಶೆಟ್ಟಿ: ಹಿಂದೆಂದೂ ಸಿಗದ ಮುಂದೆಂದೂ ಸಿಗಲಾರದ ಸೌಭಾಗ್ಯ ನಿಮ್ಮ ಜೊತೆಗೆ ಕಳೆದ ಆ ಕೆಲ ದಿನಗಳು. ಸಿಕ್ಕಿರಿ, ಬೆರೆತಿರಿ , ಪ್ರೀತಿ ನೀಡಿದಿರಿ, ಕೈ ಹಿಡಿದು ಮುಂದೆ ತಂದಿರಿ, ಬುಜದ ಮೇಲೆ ಕೈ ಇಟ್ಟು ಭಲ ನೀಡಿದಿರಿ . ಹುಟ್ಟು ಹಬ್ಬದ ಶುಭಾಶಯಗಳು ಅಣ್ಣ. ಅಂದು ಇಂದು ಎಂದೆಂದಿಗೂ ಸದಾ ನನ್ನ ಹೃದಯದಲ್ಲಿ .
ಅಭಿಷೇಕ್ ಅಂಬರೀಶ್:
ಕರುನಾಡಿನ ಜನಮಾನಸದಲ್ಲಿ ಅಪ್ಪು ಎಂದೇ ಚಿರಸ್ಥಾಯಿಯಾಗಿರುವ ನಮ್ಮೆಲ್ಲರ ಪ್ರೀತಿಯ ಪವರ್ ಸ್ಟಾರ್ ದಿ.ಡಾ ಪುನೀತ್ ರಾಜ್ ಕುಮಾರ್ ರವರಿಗೆ ಜನ್ಮ ದಿನದ ಶುಭಾಶಯಗಳು ಅಪ್ಪು ಸರ್ ರವರು ಇಂದು ನಮ್ಮೊಂದಿಗೆ ದೈಹಿಕವಾಗಿ ಇಲ್ಲದಿದ್ದರೂ ಅವರು ಸಮಾಜಕ್ಕೆ ಹಾಗೂ ಚಿತ್ರರಂಗಕ್ಕೆ ನೀಡಿದ ಕೊಡುಗೆಗಳು ಅವಿಸ್ಮರಣೀಯ. ಅಪ್ಪು ಸರ್ ಅವರ ಹಾದಿಯಲ್ಲಿ ಸಮಾಜಮುಖಿ ಕಾರ್ಯಗಳನ್ನು ಮುಂದುವರೆಸಲು ಭಗವಂತ ಕುಟುಂಬವರ್ಗದವರಿಗೆ ಮತ್ತು ಕೋಟ್ಯಾಂತರ ಅಭಿಮಾನಿಗಳಿಗೆ ಶಕ್ತಿ ನೀಡಲಿ. ಇಂದು ಬಿಡುಗಡೆ ಆಗಿರುವ ಅಪ್ಪು ಸರ್ ರವರ ಕೊನೆಯ "ಜೇಮ್ಸ್" ಚಿತ್ರವನ್ನು ನೋಡಿ ಆನಂದಿಸಿ.