ಗಂಡನ 'ಲಕ್ಷ್ಮೀಪುತ್ರ' ಸಿನಿಮಾ ಪ್ರಮೋಷನ್ ಮಾಡಿ ಅಂದ್ರೆ, ಕಥೆನೇ ರಿವೀಲ್ ಮಾಡಿದ ಚಿಕ್ಕಣ್ಣನ ಹೆಂಡ್ತಿ ಪಾವನಾ!

Published : Oct 18, 2026, 04:30 PM IST
Pavana Gowda Chikkanna Lakshmiputra Movie

ಸಾರಾಂಶ

ಹಾಸ್ಯ ನಟ ಚಿಕ್ಕಣ್ಣ ನಾಯಕನಾಗಿ ನಟಿಸಿರುವ 'ಲಕ್ಷ್ಮೀಪುತ್ರ' ಸಿನಿಮಾದ ಪ್ರಚಾರದಲ್ಲಿ ಅವರ ಪತ್ನಿ ಪಾವನಾ ತೊಡಗಿಸಿಕೊಂಡಿದ್ದಾರೆ. ಸಿನಿಮಾದ ಪ್ರಚಾರಕ್ಕೆ ಪತ್ನಿ ಪಾವನಾ ಮಾಧ್ಯಮಗಳ ಮುಂದೆ ಮಾತನಾಡುತ್ತಾ ಚಿತ್ರದ ಕಥೆಯನ್ನೇ ರಿವೀಲ್ ಮಾಡಿದ್ದಾರೆ. ಏನದು ಕಥೆ? ಪಾವನ ಹೇಳಿದ್ದೇನು? ಇಲ್ಲಿದೆ ನೋಡಿ.

ಕನ್ನಡ ಚಿತ್ರರಂಗದ ಹಾಸ್ಯ ನಟ ಚಿಕ್ಕಣ್ಣ ಅವರು ನಾಯಕ ನಟನಾಗಿ ನಟಿಸಿರುವ ಲಕ್ಷ್ಮೀಪುತ್ರ ಸಿನಿಮಾ ಮದುವೆಯಾದ ನಂತರ ಬೆಳ್ಳಿತೆರೆಗೆ ಬರುತ್ತಿದೆ. ಇನ್ನು ಹೊಸದಾಗಿ ಮದುವೆಯಾದ ಚಿಕ್ಕಣ್ಣನ ಹೆಂಡತಿ ಪಾವನಾ ಕೂಡ ಗಂಡನ ಸಿನಿಮಾ ಲಕ್ಷ್ಮೀಪುತ್ರ ಪ್ರಚಾರ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮಾಧ್ಯಮಗಳ ಮುಂದೆ ಸಿನಿಮಾದ ಪ್ರಮೋಷನ್ ಮಾಡಿ ಅಂದರೆ ಕಥಾವಸ್ತುವನ್ನೇ ರಿವೀಲ್ ಮಾಡಿದ್ದಾರೆ.

ಹೌದು, ಚಿಕ್ಕಣ್ಣ ಅವರ ಹೆಂಡತಿ ಪಾವನಾ ಅವರು ಗಂಡನ ಸಿನಿಮಾ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡು ಅವರಿಗೆ ಬೆನ್ನುಲುಬಾಗಿ ನಿಂತಿದ್ದಾರೆ. ಗಂಡನ ಸಿನಿಮಾವನ್ನು ಗೆಲ್ಲಿಸಲು ತಮ್ಮ ಕೈಲಾದಷ್ಟು ಕೊಡುಗೆ ನೀಡಲು ಮುಂದಾಗಿದ್ದಾರೆ. ಆದರೆ, ಸಿನಿಮಾ ನಟ, ನಟಿಯರು, ನಿರ್ದೇಶಕರು ಹಾಗೂ ನಿರ್ಮಾಪಕರಿಗಿಂತ ಮಾಧ್ಯಮಗಳಿಗೆ ಚಿಕ್ಕಣ್ಣ ಅವರ ಹೆಂಡತಿ ಪಾವನಾ ಅವರ ಮಾತಿನ ಮೇಲೆಯೇ ಆಸಕ್ತಿ. ಏಕೆಂದರೆ ಸಿನಿಮಾ ರಂಗಕ್ಕೆ ಅವರು ಹೊಸಬರು. ಗಂಡನ ಗೆಲುವಿಗಾಗಿ ಶ್ರಮಿಸಲು ಮುಂದಾದ ಅವರ ನಡೆಗೆ ಪ್ರೋತ್ಸಾಹ ನೀಡುವುದು ಕೂಡ ಮಾಧ್ಯಮಗಳ ಉದ್ದೇಶವಾಗಿದೆ.

ತಾಯಿ ಇಷ್ಟಪಡುವವರಿಗೆ ಸಿನಿಮಾ ಇಷ್ಟವಾಗುತ್ತೆ

ಈ ವೇಳೆ ಮಾಧ್ಯಮಗಳು ಅವರ ಟಿವಿ ಚಾನೆಲ್‌ಗಳ ಲೋಗೋಗಳನ್ನು ಹಿಡಿದು ಸಿನಿಮಾ ಬಗ್ಗೆ ಮಾತನಾಡಿ ಎಂದು ಕೇಳುತ್ತಾರೆ. ಆಗ ಧೈರ್ಯದಿಂದಲೇ ಮಾತನಾಡಿದ ಪಾವನಾ ಚಿಕ್ಕಣ್ಣ ಅವರು, ಎಲ್ಲರಿಗೂ ನಮಸ್ಕಾರ, ನವೆಂಬರ್ 27ರಂದು ಚಿಕ್ಕಣ್ಣ ಅವರ ಹೊಸ ಸಿನಿಮಾ ರಿಲೀಸ್ ಆಗ್ತಿದೆ. ಎಲ್ಲ ಪ್ರೇಕ್ಷಕರು ಕೂಡ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ ಹರಸಿ ಹಾರೈಸಬೇಕು. ಮೂವಿ ತುಂಬಾ ಚೆನ್ನಾಗಿದೆ. ಯಾರಾರಿಗೆ ಅವರ ತಾಯಿ ಎಂದರೆ ತುಂಬಾ ಇಷ್ಟವೋ ಅವರೆಲ್ಲರೂ ಈ ಲಕ್ಷ್ಮೀಪುತ್ರ ಸಿನಿಮಾವನ್ನು ನೋಡಿ ಚೆನ್ನಾಗಿದೆ ಎಂದು ಹೇಳೇ ಹೇಳುತ್ತಾರೆ.

ಇನ್ನು ಚಿಕ್ಕಣ್ಣ ಅವರಿಗೆ ಮದುವೆಯಾದ ನಂತರ ಮೊದಲ ಸಿನಿಮಾ. ಹೀಗಾಗಿ ನಾನು ಸಿನಿಮಾದ ಬಗ್ಗೆ ಭಾರೀ ಎಕ್ಸೈಟೆಡ್ ಆಗಿದ್ದೇನೆ, ಜೊತೆಗೆ ಒಂದಷ್ಟು ನರ್ವಸ್ ಕೂಡ ಆಗ್ತಿದೆ. ಮೊದಲ ಸಿನಿಮಾ ಜನರು ಹೇಗೆ ಸ್ವೀಕಾರ ಮಾಡುತ್ತಾರೆ ಎನ್ನುವ ಕುತೂಹಲ ಜಾಸ್ತಿಯಿದೆ. ಆದರೆ, ನಾನು ಸಿನಿಮಾ ನೋಡಿದ್ದೇನೆ, ನಂಗೆ ತುಂಬಾ ಇಷ್ಟವಾಯ್ತು. ಜೊತೆಗೆ ಸಿನಿಮಾ ನೋಡುವ ಎಲ್ಲರಿಗೂ ತುಂಬಾ ಇಷ್ಟ ಆಗುತ್ತದೆ. ಯಾರಾರು ತಮ್ಮ ತಾಯಿಯನ್ನು ಇಷ್ಟಪಡುತ್ತಾರೋ ಅವರೆಲ್ಲರಿಗೂ ಇಷ್ಟ ಆಗುತ್ತದೆ ಎಂದು ಹೇಳಿದರು.

ಚಿಕ್ಕಣ್ಣ ಅವರು ಹಾಸ್ಯನಟ ಅಂತಲೇ ಹೇಳ್ತಾರೆ, ಅದ್ರೆ ಅವರು ಎಲ್ಲ ಪಾತ್ರಗಳಿಗೂ ಸೂಟ್ ಆಗ್ತಾರೆ. ಯಾವ ಪಾತ್ರಗಳನ್ನು ಕೊಟ್ಟರೂ ಅದಕ್ಕೆ ಜೀವ ತುಂಬುವ ಕಲೆ ಅವರಲ್ಲಿದೆ. ಲಕ್ಷ್ಮೀ ಪುತ್ರ ಸಿನಿಮಾವನ್ನು ನೋಡಿದರಿಗೆ ಚಿಕ್ಕಣ್ಣ ಅವರು ಒಬ್ಬ ಹೀರೋ ಮೆಟೀರಿಯಲ್ ಎನ್ನುವುದು ತಿಳಿಯುತ್ತದೆ.

ಇದರಲ್ಲಿ ಕಥೆ ರಿವೀಲ್ ಎಲ್ಲಿ ಮಾಡಿದ್ರು?

ಪಾವನಾ ಅವರು ತುಂಬಾ ಜಾಣೆ. ಸಿನಿಮಾದ ಬಗ್ಗೆ ಅನುಭವ ಇಲ್ಲದಿದ್ದರೂ ಗಂಡನ ಸಿನಿಮಾಗಾಗಿ ಮಾಧ್ಯಮಗಳ ಕ್ಯಾಮೆರಾವನ್ನು ಧೈರ್ಯವಾಗಿ ಎದುರಿಸಿದ್ದಾರೆ. ಸ್ವಲ್ಪ ಭಯ ಎನ್ನುವುದು ಮನಸ್ಸಿನಲ್ಲಿದ್ದರೂ ಅದನ್ನು ತೋರಿಸಿಕೊಳ್ಳದೇ ಮಾತನಾಡಿದ್ದು, ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಇಲ್ಲಿ ಅವರು ಸಿನಿಮಾ ಕಥೆಯನ್ನು ರಿವೀಲ್ ಮಾಡಿಲ್ಲ, ಕಥಾವಸ್ತುವನ್ನು ಬಿಚ್ಚಿಟ್ಟಿದ್ದಾರೆ. ಸಿನಿಮಾ ನೋಡುಗರಿಗೆ ತಾಯಿ-ಮಗನ ವಿಷಯವಸ್ತು ಇರುವುದನ್ನು ರಿವೀಲ್ ಮಾಡಿದ್ದು, ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುವಂತೆ ಕುತೂಹಲ ಮೂಡಿಸಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಹಲವು ನಟರ ಪತ್ನಿಯರು ಗಂಡನಿಗೆ ಬೆನ್ನುಲುಬಾಗಿ ನಿಂತಿದ್ದಾರೆ. ಅದಕ್ಕೆ ಉದಾಹರಣೆ ಎಂದರೆ ಡಾ.ರಾಜ್ ಕುಮಾರ್ ಅವರಿಗೆ ಪಾರ್ವತಮ್ಮ ಅವರಿಂದ ಹಿಡಿದು, ಈಗ ಶಿವರಾಜ್ ಕುಮಾರ್ ಅವರಿಗೆ ಗೀತಾ ಅವರು, ಯಶ್ ಅವರಿಗೆ ರಾಧಿಕಾ, ಉಪೇಂದ್ರ ಅವರಿಗೆ ಪ್ರಿಯಾಂಕಾ, ಪ್ರೇಮ್‌ಗೆ ರಕ್ಷಿತಾ, ತರುಣ್ ಸುಧೀರ್‌ಗೆ ಸೋನಲ್, ವಶಿಷ್ಠ ಸಿಂಹ ಅವರಿಗೆ ನಟಿ ಹರಿಪ್ರಿಯಾ ಮುಂತಾದವರು ಇದಕ್ಕೆ ಉತ್ತಮ ಉದಾಹರಣೆ ಆಗಿದ್ದಾರೆ. ಈ ಸಾಲಿಗೆ ಇದೀಗ ಹೊಸದಾಗಿ ಚಿಕ್ಕಣ್ಣನಿಗೆ ಸಾಥ್ ಕೊಡಲು ಪಾವನಾ ಅವರು ಸೇರಿಕೊಂಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಜೈಲರ್ 2 ಅಬ್ಬರದ ನಡುವೆಯೂ ಕನ್ನಡ ಸಿನಿಮಾದ ಕಮಾಲ್: ‘ಪ್ರೇಮದ ಊರಲಿ’ ಕಲೆಕ್ಷನ್ ಆಗಿದ್ದೆಷ್ಟು?
Premada Oorali ಸಿನಿಮಾದಲ್ಲಿ ನಾಯಕಿಯರಿಗೆ ರುಕ್ಮಿಣಿ, ವಸಂತ ಹೆಸರಿಟ್ಟಿದ್ದು ಏಕೆ? ನಿರ್ದೇಶಕ ರಿವೀಲ್​