
ಕೇವಲ ಎರಡು ಕೋಟಿ ಬಜೆಟ್ನಲ್ಲಿ ಯಾವುದೇ ಗದ್ದಲವಿಲ್ಲದೇ ಆರಂಭವಾಗಿದ್ದ ಪ್ರೇಮದ ಊರಲಿ (Premada Oorali Movie) ಸಿನಿಮಾ 85 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಚಿಕ್ಕ ಬಜೆಟ್ನ ಸಿನಿಮಾವೊಂದನ್ನು ಜನರು ಹೇಗೆ ಮೆಚ್ಚಿಕೊಳ್ಳುತ್ತಾರೆ ಎನ್ನುವುದನ್ನು ಸಾಬೀತು ಪಡಿಸಿದೆ. ಸ್ಟಾರ್ ನಟರಿಲ್ಲದೇ, ಪ್ರಚಾರದ ಅಬ್ಬರವಿಲ್ಲದೇ, ಹೀರೋ ಕೈಯಲ್ಲಿ ಲಾಂಗು, ಮಚ್ಚು ಕೊಡಿಸದೇ, ರಕ್ತಪಾತವಿಲ್ಲದೇ, ಇಂದಿನ ಜನರು ಬಯಸೋದು ಇದನ್ನೇ ಎಂದು ಹೇಳಿ ಅತಿ ಎನ್ನಿಸುವಷ್ಟು ಅಶ್ಲೀಲತೆ ತುಂಬದೆ, ಸೀದಾ ಸಾದಾ ಲವ್ ಸ್ಟೋರಿಯನ್ನೇ ವಿಭಿನ್ನವಾಗಿ ತೋರಿಸಿದರೆ ಜನರಿಂದ ಜನರ ಬಾಯಿಗೆ ಹೋಗಿಯೇ ಚಿತ್ರ ಯಾವ ಪರಿಯಲ್ಲಿ ಸಕ್ಸಸ್ ಕಾಣಬಹುದು ಎನ್ನುವುದಕ್ಕೆ ಸಾಕ್ಷಿಯಾಗಿ ನಿಂತಿರುವುದೇ ಪ್ರೇಮದ ಊರಲಿ.
ಅಷ್ಟಕ್ಕೂ ಈ ಸಿನಿಮಾದಲ್ಲಿ ಯಾರೂ ಅಷ್ಟೊಂದು ಹೆಚ್ಚಾಗಿ ಗಮನಿಸದ ಅಂಶವೊಂದಿದೆ. ಅದೇ ನಾಯಕಿಯರ ಹೆಸರು. ಒಬ್ಬಾಕೆಯ ಹೆಸರು ರುಕ್ಮಿಣಿ, ಇನ್ನೊಬ್ಬಳು ವಸಂತಾ. ಎರಡೂ ಸೇರಿದರೆ ರುಕ್ಮಿಣಿ ವಸಂತಾ. ಹಾಗಿದ್ದರೆ ನಟಿ ರುಕ್ಮಿಣಿ ವಸಂತಾಗೂ, ಈ ಎರಡೂ ಹೆಸರಿಗೂ ಲಿಂಕ್ ಇದ್ಯಾ ಎಂದು ಕೇಳಿದರೆ, ಒಂದರ್ಥದಲ್ಲಿ ಹೌದು, ಇನ್ನೊಂದರ್ಥದಲ್ಲಿ ಹಾಗೇನೂ ಇಲ್ಲ ಎಂದು ಈ ಹೆಸರಿನ ಕುತೂಹಲವನ್ನು ತೆರೆದಿಟ್ಟಿದ್ದಾರೆ ನಿರ್ದೇಶಕ ಮನೋಜ್. ಸದ್ಯ ಇವರು ಈಗ ಸೂಪರ್ಸ್ಟಾರ್ ಆಗಿದ್ದು, ಇವರಿಗೆ ಸಕತ್ ಡಿಮಾಂಡ್ ಬಂದಿದೆ. ಈ ಸಿನಿಮಾದ ಬಗ್ಗೆ ಪ್ರಶ್ನೆಗಳ ಸುರಿಮಳೆಯನ್ನೇ ಮಾಡಲಾಗುತ್ತಿದ್ದು, ಎಲ್ಲದ್ದಕ್ಕೂ ನಿರ್ದೇಶಕ ಮನೋಜ್ ಅವರು ಅಷ್ಟೇ ಸೈಲೆಂಟ್ ಆಗಿ, ಯಾವುದೇ ಬಿಗುಮಾನವಿಲ್ಲದೇ ಉತ್ತರಿಸುವುದು ಕೂಡ ಜನರಿಗೆ ಇಷ್ಟವಾಗುತ್ತಿದೆ.
ಅಷ್ಟಕ್ಕೂ ಈ ಸಿನಿಮಾಕ್ಕೆ ನಟಿ ರುಕ್ಮಿಣಿ ವಸಂತ್ ಅವರನ್ನು ತರಬೇಕು ಎನ್ನುವುದು ತಂಡದ ಆಶಯವಾಗಿದ್ದು ನಿಜ. ಆದರೆ ಆ ಸಮಯದಲ್ಲಿ ನಟಿ ಹೈದರಾಬಾದ್ನಲ್ಲಿ ಶೂಟಿಂಗ್ನಲ್ಲಿ ಇದ್ದರು. ಅವರನ್ನು ನಾವು ಅಪ್ರೋಚ್ ಮಾಡಲಿಲ್ಲ ಎಂದಿದ್ದಾರೆ ಮನೋಜ್. ಇದು ಕಡಿಮೆ ಬಜೆಟ್ ಸಿನಿಮಾ ಆಗಿತ್ತು. ಸಿನಿಮಾ ಸ್ಟೋರಿ ಕೇಳಿದ ಮೇಲೆ ರುಕ್ಮಿಣಿ ವಸಂತ್ ಅವರು ನಾವು ಕೊಡುವ ಹಣಕ್ಕೆ ಬರುತ್ತಿದ್ದರು ಎನ್ನುವುದರಲ್ಲಿ ಸಂದೇಹವಿಲ್ಲ. ಆದರೂ ಅವರು ಇದಾಗಲೇ ದೊಡ್ಡ ಸ್ಟಾರ್ ಆಗಿರುವ ಹಿನ್ನೆಲೆಯಲ್ಲಿ, ಕಡಿಮೆ ಬಜೆಟ್ ಸಿನಿಮಾಕ್ಕೆ ಕರೆಸುವುದು ಕೂಡ ಮುಜುಗರವಾಗಿತ್ತು ಎನ್ನುತ್ತಲೇ, ಮನೋಜ್ ಅವರು, ಯಾವುದೇ ನಟ-ನಟಿಯರು ಸಂಭಾವನೆ ಕಡಿಮೆ ಕೊಟ್ಟ ಮಾತ್ರಕ್ಕೆ ಸಿನಿಮಾ ಒಪ್ಪಲ್ಲ ಎಂದು ಹೇಳುವುದಿಲ್ಲ. ಕಥೆ ಇಷ್ಟವಾದರೆ ಒಪ್ಪಿಯೇ ಒಪ್ಪುತ್ತಾರೆ. ಹಾಗೆ ನಟಿ ರುಕ್ಮಿಣಿ ವಸಂತ್ ಅವರೂ ಒಪ್ಪುತ್ತಿದ್ದರು. ಆದರೆ ನಾವು ಅವರನ್ನು ಅಪ್ರೋಚ್ ಮಾಡಲಿಲ್ಲ, ಆದರೆ ಅವರನ್ನು ಸಿನಿಮಾಕ್ಕೆ ಹಾಕುವ ಯೋಚನೆ ಇದ್ದದ್ದು ನಿಜ ಎಂದಿದ್ದಾರೆ.
ಅದೇ ಕಾರಣಕ್ಕೆನೇ ನಾಯಕಿಯರಿಗೆ ಈ ಹೆಸರಾ ಕೇಳಿದಾಗ, ಆ ಹೆಸರು ಚೆನ್ನಾಗಿತ್ತು ಎಂದು ನಾಯಕಿಯರಿಗೆ ಇಟ್ಟಿದ್ದು ನಿಜನೇ. ಆದರೆ ವಸಂತಾ ಹೆಸರಿನ ಹಿಂದೆ ಇನ್ನೊಂದು ವಿಶೇಷತೆ ಕೂಡ ಇದೆ ಎಂದಿದ್ದಾರೆ ಮನೋಜ್. ವಸಂತ ಎಂದರೆ ಅದೊಂದು ಸುಗ್ಗಿಯ ಕಾಲ. ಒಂದಷ್ಟು ದಿನಗಳು ಎಲ್ಲರ ಮನಸ್ಸಿಗೆ ಮುದ ನೀಡುವ ವಸಂತ ಕಾಲ ಕೊನೆಗೆ ಮರೆಯಾಗುತ್ತದೆ. ಇಲ್ಲಿ ವಸಂತಾಳ ಪಾತ್ರ ಕೂಡ ಅದೇ ರೀತಿ ಇದೆ. ಆಕೆ ಎಲ್ಲರ ಮನಸ್ಸಿನಲ್ಲಿಯೂ ಶಾಶ್ವತವಾಗಿ ಉಳಿಯುವಂಥವಳು. ಇದೇ ಕಾರಣಕ್ಕೆ ವಸಂತಾ ಎಂದು ಹೆಸರಿಟ್ವಿ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.