ಇಂಜಿನಿಯರಿಂಗ್‌ ಹೈದ ಫ್ಯಾಂಟಸಿ ಜಗತ್ತು;ನಿರ್ದೇಶಕ ಪವನ್‌ಕುಮಾರ್‌ ಕಷ್ಟಸುಖಗಳು

Kannadaprabha News   | Asianet News
Published : Nov 13, 2020, 11:22 AM IST
ಇಂಜಿನಿಯರಿಂಗ್‌ ಹೈದ ಫ್ಯಾಂಟಸಿ ಜಗತ್ತು;ನಿರ್ದೇಶಕ ಪವನ್‌ಕುಮಾರ್‌ ಕಷ್ಟಸುಖಗಳು

ಸಾರಾಂಶ

ಚಿತ್ರೀಕರಣ ಮುಗಿಸಿ ಈಗ ಪೋಸ್ಟ್‌ ಪ್ರೊಡಕ್ಷನ್‌ ಹಂತಕ್ಕೆ ಹೋಗಿರುವ ಪವನ್‌ ಕುಮಾರ್‌ ನಿರ್ದೇಶನದ ‘ಫ್ಯಾಂಟಸಿ’ ಸಿನಿಮಾ ಮುಂದಿನ ವರ್ಷ ಫೆಬ್ರವರಿ ತಿಂಗಳಲ್ಲಿ ತೆರೆಗೆ ಬರುವ ಸಾಧ್ಯತೆಗಳಿವೆ ಎಂದು ನಿರ್ದೇಶಕರೇ ಹೇಳಿಕೊಂಡರು. 

ಶೂಟಿಂಗ್‌ ಸ್ಥಳಕ್ಕೆ ಭೇಟಿ ಕೊಟ್ಟಪತ್ರಕರ್ತರ ಮುಂದೆ ಕೂತ ನಿರ್ದೇಶಕ ಹಾಗೂ ನಿರ್ಮಾಪಕ ಪವನ್‌ ಕುಮಾರ್‌ ಹೇಳಿದ್ದೇನು ಎಂಬುದನ್ನು ಅವರ ಮಾತುಗಳಲ್ಲೇ ಕೇಳಿ.

-ಸಹಾಯಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಬಂದವನು ನಾನು. ಮೊದಲ ಹಂತದಲ್ಲೇ ನಿರ್ದೇಶನ, ನಿರ್ಮಾಣ ಎರಡೂ ಜವಾಬ್ದಾರಿಗಳನ್ನು ಹೊತ್ತುಕೊಂಡು ಈ ಚಿತ್ರದ ಮೂಲಕ ಬರುತ್ತಿದ್ದೇನೆ. ನನ್ನ ಈ ಸಾಹಸಕ್ಕೆ ನನ್ನ ಅಪ್ಪ, ಅಮ್ಮ ಸಾಥ್‌ ನೀಡುತ್ತಿದ್ದಾರೆ. ಅವರು ಧೈರ್ಯದಿಂದಲೇ ಚಿತ್ರವನ್ನು ಇಷ್ಟುಬೇಗ ಮುಗಿಸಿದ್ದೇನೆ.

ಪ್ರಿಯಾಂಕಳನ್ನು ನೋಡಿದಾಗ ಮಾಲಾಶ್ರೀ ನೆನಪಾದ್ರು: ಉಪೇಂದ್ರ 

- ನಾನು ಸಿನಿಮಾರಂಗಕ್ಕೆ ಬರುವುದಕ್ಕೆ ಚಿರಂಜೀವಿ ಸರ್ಜಾ ಅವರು ಕಾರಣಕರ್ತರಾದರೆ, ನಿರ್ದೇಶನದ ಪಾಠವನ್ನು ಕಲಿತಿದ್ದು ಮಾತ್ರ ನಿರ್ದೇಶಕ ಕೆ ಎಂ ಚೈತನ್ಯ ಅವರಿಂದ. ಹೀಗಾಗಿ ಚಿತ್ರರಂಗದಲ್ಲಿ ಇವರಿಬ್ಬರು ನನಗೆ ಸ್ಫೂರ್ತಿ ಮತ್ತು ಮಾರ್ಗದರ್ಶಿಗಳು ಎನ್ನಬಹುದು.

- ಇಂಜಿನಿಯರಿಂಗ್‌ ಅರ್ಧಕ್ಕೆ ಬಿಟ್ಟು, ಸಿನಿಮಾ ಬೆನ್ನಹಿಂದೆ ಬಿದ್ದೆ. ಒಳ್ಳೇ ಕಥೆಯೂ ಸಿದ್ಧವಾಯ್ತು. ನಾನೇ ನಿರ್ಮಾಣ ಮಾಡುವ ಬಗ್ಗೆ ನಿರ್ಧರಿಸಿ ಕೆಲಸ ಆರಂಭಿಸಿದೆ. ಕಂಟೆಂಟ್‌ ಎಷ್ಟೇ ಗಟ್ಟಿಯಾಗಿದ್ದರೂ, ಅದನ್ನು ತೋರಿಸುವ ಛಾಯಾಗ್ರಾಹಕ ಅಷ್ಟೇ ಮುಖ್ಯ. ಆ ಸ್ಥಾನ ತುಂಬಲು ಪಿಕೆಎಚ್‌ ದಾಸ್‌ ಬಂದರು. ನನ್ನ ನಿರೀಕ್ಷೆಗೂ ಮೀರಿ ಅವರು ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ. ಗಣೇಶ್‌ ನಾರಾಯಣ್‌ ಸಂಗೀತ ನೀಡಿದ್ದಾರೆ. ಶಶಿರಾಮ… ಸಂಕಲನ ಮಾಡಿದ್ದಾರೆ.

ಲಾಕ್‌ಡೌನ್‌ ನಂತರ ಮೊದಲ ಶೂಟಿಂಗ್‌ ಸೆಟ್‌ ವಿಸಿಟ್‌; 22 ದಿನಗಳಲ್ಲಿ ಶೂಟಿಂಗ್‌ ಮುಗಿಸಿದ ಫ್ಯಾಂಟಸಿ! 

- ಪ್ರಿಯಾಂಕ, ಬಾಲರಾಜವಾಡಿ, ಅನುರಾಗ್‌, ಮೂರ್ತಿ, ಹೇಮಂತ್‌, ಹರಿಣಿ, ಗೌರಿ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ. ಒಂದು ಒಳ್ಳೆಯ ಆಲೋಚನೆಯನ್ನು ತುಂಬುವ ಸಿನಿಮಾ ಇದು.

- ಇದೊಂದು ಥ್ರಿಲ್ಲರ್‌ ಶೈಲಿಯ ಸಿನಿಮಾ. ಚಿತ್ರದ ಶೇ. 90 ಭಾಗ ಒಳಾಂಗಣದಲ್ಲಿ ಚಿತ್ರೀಕರಣ ಮಾಡಲಾಗಿದೆ. ಆದಷ್ಟುಬೇಗ ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ಮುಗಿಸಿಕೊಂಡು ಮುಂದಿನ ವರ್ಷ ಫೆಬ್ರವರಿ ತಿಂಗಳಲ್ಲಿ ತೆರೆ ಮೇಲೆ ಸಿನಿಮಾ ಮೂಡಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?