2000ನೇ ಜುಲೈ 30 ಡಾ. ರಾಜ್‌ಕುಮಾರ್ ಅವರನ್ನು ವೀರಪ್ಪನ್ ಅಪಹರಣ ಮಾಡಿದ್ದ. ಇಡೀ ಕನ್ನಡ ನಾಡಿಗೆ ಈ ಸುದ್ದಿ ಆಘಾತ ತಂದಿತ್ತು. ಇಡೀ ಚಿತ್ರರಂಗವೇ ಸ್ತಬ್ಧವಾಗಿತ್ತು.
ಇದೀಗ ಬರೋಬ್ಬರಿ ಇಪ್ಪತ್ತು ವರ್ಷಗಳ ಬಳಿಕ ಡಾ. ರಾಜ್ ಅಪಹರಣದ ಸುತ್ತಮುತ್ತಲೂ ನಡೆದ ಅಸಲಿ ಘಟನೆಗಳನ್ನು ಪತ್ರಕರ್ತ ಕೆ.ಎಂ. ವೀರೇಶ್ ತಮ್ಮ ಚಿತ್ರಲೋಕ ಡಾಟ್ ಕಾಮ್ ಮೂಲಕ ತೆರೆದಿಟ್ಟಿದ್ದಾರೆ.
ಅಪ್ಪಟ ಬಂಗಾರ ಡಾ.ರಾಜ್ ಕುಮಾರ್‌ಗೆ 22 ಕ್ಯಾರೆಟ್ ಚಿನ್ನದ ನಾಣ್ಯದ ಗೌರವ!
ರಾಜ್ ಅಪಹರಣವಾದಾಗ ಅವರೊಂದಿಗೆ ಕಾಡಿಗೆ ಹೋದದ್ದು ಅಳಿಯ ಎಸ್.ಎ.ಗೋವಿಂದರಾಜು, ನಾಗಪ್ಪ, ನಾಗೇಶ್. ಇದೀಗ ಮೊದಲ ಸಂಚಿಕೆಗಳಲ್ಲಿ ಗೋವಿಂದರಾಜು ಇಡೀ ಪ್ರಕರಣದ ಒಳನೋಟಗಳನ್ನು ‘ಚಿತ್ರಲೋಕ ಡಾಟ್ ಕಾಮ್’ ಮೂಲಕ ಬಿಚ್ಚಿಟ್ಟಿದ್ದಾರೆ. ಮೊದಲಿಗೆ ಎರಡು ಎಪಿಸೋಡ್‌ಗಳು ಪ್ರಕಟವಾಗಿದ್ದು, ಮುಂದೆ ಸುಮಾರು 15 ಎಪಿಸೋಡ್‌ಗಳಲ್ಲಿ ಇಡೀ ಘಟನೆಯ ನೈಜ ಘಟನೆಗಳು ಅನಾವರಣಗೊಳ್ಳಲಿವೆ. ಇದರಲ್ಲಿ ನಾಲ್ಕಾರು ಮಂದಿ ವಾಸ್ತವಾಂಶಗಳನ್ನು ತೆರೆದಿಡಲಿದ್ದಾರೆ.
undefined
ಇಂದಿಗೆ (ಅ. 16) ರಾಜ್‌ಕುಮಾರ್ 108 ದಿನಗಳ ವನವಾಸ ಮುಗಿಸಿ ಮರಳಿ ಬಂದಿದ್ದಕ್ಕೆ 20 ವರ್ಷಗಳು ಆಗಿವೆ. ಈ ಸುದೀರ್ಘ ಅವಧಿಯಲ್ಲಿ ಅಪಹರಣ ಸಂಬಂಧ ಸಾಕಷ್ಟುಊಹಾಪೋಹಗಳು ಎದ್ದಿದ್ದವು, ಇದಕ್ಕೆಲ್ಲಾ ತೆರೆ ಎಳೆಯುವ ನಿಟ್ಟಿನಲ್ಲಿ ವೀರೇಶ್ ಈ ಪ್ರಯತ್ನ ಮಾಡಿದ್ದಾರೆ.
ಬಬ್ರುವಾಹನ ಸಿನಿಮಾ ಡೈಲಾಗ್ ಹೊಡೆದ 4 ವರ್ಷದ ಪೋರ; ವಿಡಿಯೋ ಸಿಕ್ಕಾಪಟ್ಟೆ ವೈರಲ್!
ಅಂತೆ ಕಂತೆಗಳಿಗೆಲ್ಲಾ ತೆರೆ ಬೀಳಲಿದೆ
ಡಾ. ರಾಜ್ ಅಪಹರಣವಾದಾಗ ಆಗ ತಾನೇ ಶುರುವಾಗಿದ್ದ ನನ್ನ ‘ಚಿತ್ರಲೋಕ ಡಾಟ್ ಕಾಮ್’ ಈ ಸುದ್ದಿಯನ್ನು ಮೊದಲ ಬಾರಿಗೆ ನಾಡಿನ ಜನತೆಗೆ ತಿಳಿಸಿತ್ತು. ನಾನು ಇತ್ತೀಚೆಗೆ ತಿಪಟೂರಿನ ರಾಮಸ್ವಾಮಿ ಅವರನ್ನು ಭೇಟಿಯಾದಾಗ ಅವರು ರಾಜ್ ಅಪಹರಣದ ಬಗ್ಗೆ ಒಂದೆರಡು ಕುತೂಹಲಕಾರಿ ಅಂಶಗಳನ್ನು ಹೇಳಿದರು. ಇದೆಲ್ಲಾ ಇಲ್ಲಿಯವರೆಗೂ ಎಲ್ಲಿಯೂ ದಾಖಲಾಗದ ಅಂಶಗಳು. ಇವೆಲ್ಲವನ್ನೂ ಅಧಿಕೃತ ವ್ಯಕ್ತಿಗಳಿಂದ ಮಾಹಿತಿ ಪಡೆದು ದಾಖಲು ಮಾಡಬೇಕು ಎಂದು ಇಪ್ಪತ್ತು ವರ್ಷಗಳ ಬಳಿಕ ಈ ಪ್ರಯತ್ನಕ್ಕೆ ಕೈ ಹಾಕಿದ್ದೇನೆ. ಸುಮಾರು 15 ಎಪಿಸೋಡ್‌ಗಳಲ್ಲಿ ಇಡೀ ಘಟನೆಗಳ ಪ್ರತಿಯೊಂದು ಮಾಹಿತಿಗಳೂ ದೊರೆಯಲಿವೆ. ಇದರಿಂದ ಕೆಲವು ಅಂತೆ ಕಂತೆಗಳಿಗೆಲ್ಲಾ ಅಧಿಕೃತ ತೆರೆ ಬಿದ್ದಂತೆ ಆಗುತ್ತದೆ. -ಕೆ.ಎಂ. ವೀರೇಶ್, ಚಿತ್ರಲೋಕ ಡಾಟ್ ಕಾಮ್ ಸಂಪಾದಕ