ನಾನು ಫೇಕ್ ಅಕೌಂಟ್ ಮಾಡ್ಕೊಂಡು ಕೆಟ್ಟಕೆಟ್ಟದಾಗಿ ಬೈತೀನಿ, ಅಸಭ್ಯವಾಗಿ ವರ್ತಿಸ್ತೀನಿ, ಅಶ್ಲೀಲಕರವಾಗಿ ಮೆಸೇಜ್ ಮಾಡ್ತೀನಿ.. ಹೆಣ್ಣುಮಕ್ಕಳ ಬಾಡಿ ಪಾರ್ಟ್‌ಸ್ ಮೇಲೆ ಬರೀತೀನಿ, ನನ್ ಯಾರು ಹಿಡಿತಾರೆ? ಆ ಮೈಂಡ್‌ಸೆಟ್‌ಗೆ ಬಂದು ಕೂತ್‌ಬಿಟ್ಟಿದಾರೆ. ಇದು ಯಾವ್ ಮಟ್ಟಕ್ಕೆ ಹೋಗ್ತಾ ಇದೆ ಅಂದ್ರೆ, ಇವತ್ತು..
ಸಿಂಗರ್, ಆಕ್ಟರ್ ಚಂದನ್ ಶೆಟ್ಟಿ (Chandan Shetty) ಇತ್ತೀಚೆಗೆ ಬಹಳಷ್ಟು ಆಕ್ವಿವ್ ಆಗಿದ್ದಾರೆ. ತಮ್ಮ ನಟನೆಯ 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಚಿತ್ರದ ಗೆಲುವಿನಿಂದ ಖುಷಿಯಾಗಿರುವ ಚಂದನ್ ಶೆಟ್ಟಿ ಈಗ ಸಾಕಷ್ಟು ಸಂದರ್ಶನಗಳನ್ನೂ ನೀಡುತ್ತಿದ್ದಾರೆ. ಇತ್ತೀಚೆಗೆ ನಟ ಚಂದನ್ ಶೆಟ್ಟಿ ಮಾತನಾಡಿರುವ ವಿಡಿಯೋ ಒಂದು ಸಖತ್ ವೈರಲ್ ಆಗುತ್ತಿದೆ. ಕಾರಣ, ಅವರು ಮಾತನಾಡಿರುವುದು ಪ್ರಸ್ತುತ ಸಮಾಜದಲ್ಲಿ ಚರ್ಚಿಸಬೇಕಾದ, ಸ್ವಲ್ಪ ಮಟ್ಟಿಗೆ ಚರ್ಚೆ ಆಗುತ್ತಿರುವ ಸಂಗತಿಯೇ ಆಗಿದೆ.
ಹಾಗಿದ್ದರೆ ಚಂದನ್ ಶೆಟ್ಟಿ ಯಾವುದರ ಬಗ್ಗೆ ಏನು ಮಾತನಾಡಿದ್ದಾರೆ? ಆ ಬಗ್ಗೆ ಡೀಟಲ್ಸ್ ಇಲ್ಲಿದೆ.. ' ಸೋಷಿಯಲ್ ಮೀಡಿಯಾ ಅನ್ನೋದು ಈಗ ತುಂಬಾ ಪವರ್‌ಫುಲ್ ಟೂಲ್ ಅದು.. ಅದನ್ನು ಒಳ್ಳೇ ತರ ಬಳಿಸಿಕೊಳ್ಳಬೇಕು, ಆದ್ರೆ ಅದು ಕೆಟ್ಟವರ ಕೈಗೆ ಸಿಕ್ಕಿಬಿಟ್ಟಿದೆ. ಅಂದ್ರೆ, ಕೆಟ್ಟ ಮನಸ್ಥಿತಿಗಳ ಕೈಗೆ ರೀಚ್ ಆಗ್ಬಿಟ್ಟಿದೆ. ಅವ್ರಿಗೆ ಕಡಿವಾಣ ಹಾಕದೇ ಇರೋದ್ರಿಂದ ಅವ್ರು ಯಾರೂ ನನ್ನ ಏನೂ ಮಾಡೋಕಾಗಲ್ಲ, ನನ್ ಕಂಡು ಹಿಡಿಯೋಕೆ ಆಗಲ್ಲ, ನಾನು ಫೇಕ್ ಅಕೌಂಟ್‌ಗಳನ್ನು ಮಾಡ್ಕೊಂಡು ಬೇಕಾಗಿದ್ದು ಕಾಮೆಂಟ್ ಮಾಡ್ತೀನಿ..
ಬೇಬಿ ಬಿಟ್ಟು ಹೋದಳು ಎಂದಿದ್ದು ಪವಿತ್ರಾ ಲೋಕೇಶ್‌ಗಾ? ಮತ್ತೆ ಒಂಟಿಯಾದೆನೆಂದು ಅತ್ತ ನರೇಶ್!
ನಾನು ಫೇಕ್ ಅಕೌಂಟ್ ಮಾಡ್ಕೊಂಡು ಕೆಟ್ಟಕೆಟ್ಟದಾಗಿ ಬೈತೀನಿ, ಅಸಭ್ಯವಾಗಿ ವರ್ತಿಸ್ತೀನಿ, ಅಶ್ಲೀಲಕರವಾಗಿ ಮೆಸೇಜ್ ಮಾಡ್ತೀನಿ.. ಹೆಣ್ಣುಮಕ್ಕಳ ಬಾಡಿ ಪಾರ್ಟ್‌ಸ್ ಮೇಲೆ ಬರೀತೀನಿ, ನನ್ ಯಾರು ಹಿಡಿತಾರೆ? ಆ ಮೈಂಡ್‌ಸೆಟ್‌ಗೆ ಬಂದು ಕೂತ್‌ಬಿಟ್ಟಿದಾರೆ. ಇದು ಯಾವ್ ಮಟ್ಟಕ್ಕೆ ಹೋಗ್ತಾ ಇದೆ ಅಂದ್ರೆ, ಇವತ್ತು ನಾವೆಲ್ಲಾ ಅದ್ರ ಪರಿಣಾಮ ನೋಡ್ತಾ ಇದೀವಿ.. ಇದಕ್ಕೆ ಒಂದು ಕಡಿವಾಣ ಹಾಕ್ಲೇ ಬೇಕಾಗಿದೆ. ಯಾರು ಹಾಕ್ಬೇಕು ಅಂದ್ರೆ, ಅದು ನಮ್ಮ ಭಾರತದ ಸರ್ಕಾರನೇ ಹಾಕ್ಬೇಕಾಗಿದೆ.
ನಟ ಚಂದನ್ ಶೆಟ್ಟಿ ಮಾತನಾಡುತ್ತ ಸಾಕಷ್ಟು ಸಂಗತಿಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಕಾರಣ, ಅವರು ಜೀವನದಲ್ಲಿ ಇತ್ತೀಚೆಗೆ ಒಂದು ಕಹಿ ಘಟನೆ ನಡೆದುಹೋಗಿದೆ. ನಟಿ ಹಾಗು ಚಂದನ್ ಪತ್ನಿಯಾಗಿದ್ದ ನಿವೇದಿತಾ ಜೊತೆಗಿನ ದಾಂಪತ್ಯ ಮುರಿದುಬಿದ್ದು ಅದು ಕೊನೆಗೆ ಡಿವೋರ್ಸ್‌ನಲ್ಲಿ ಅಂತ್ಯವಾಗಿದೆ. ಆ ವೇಳೆ ಸೋಷಿಯಲ್ ಮೀಡಿಯಾಗಳಲ್ಲಿ ಬಂದ ಕಾಮೆಂಟ್‌ಗಳಿಂದ ನಿವೇದಿತಾ ಸೇರಿದಂತೆ, ಸ್ವತಃ ಚಂದನ್ ಸಾಕಷ್ಟು ನೋವು ಅನುಭವಿಸಿದ್ದಾರಂತೆ.
ಅನುಶ್ರೀ ಮ್ಯಾರೇಜ್‌ಗೆ ರೆಡಿ, ಗಂಡು ಹುಡುಕುವ ಕೆಲಸ ಖಾಲಿ ಇದ್ಯಂತೆ; ಯಾಕೆ ಟ್ರೈ ಮಾಡ್ಬಾರ್ದು..?
ಹೀಗಾಗಿ , ಸೂಕ್ತ ವೇದಿಕೆ-ಸಮಯ ಸಿಕ್ಕಾಗ ಚಂದನ್ ಶೆಟ್ಟಿ ಸೋಷಿಯಲ್ ಮೀಡಿಯಾಗಳಿಂದ ಅಗುತ್ತಿರುವ ಅವಾಂತರಗಳ ಬಗ್ಗೆ ಮಾತನ್ನಾಡಿದ್ದಾರೆ. ಅದೇ ವೇಳೆ ಅವರು 'ಸಾಮಾಜಿಕ ಜಾಲತಾಣ ಒಳ್ಳೆಯ ಟೂಲ್' ಎಂದು ಹೇಳಲು ಮರೆತಿಲ್ಲ. ಆದರೆ, ಈ ಒಳ್ಳೆಯ ಟೂಲ್ ಕೆಟ್ಟವರ ಕೈಗೆ ಸಿಕ್ಕಿ ಸಮಾಜದಲ್ಲಿ ಆಗಬಾರದ ಸಮಸ್ಯೆಗಳು, ಅಪರಾಧಗಳು ಸೃಷ್ಟಿಯಾಗುತ್ತಿವೆ ಎಂದಿದ್ದಾರೆ ಚಂದನ್ ಶೆಟ್ಟಿ . ಜೊತೆಗೆ, ಅದಕ್ಕೆ ಕಡಿವಾಣ ಹಾಕಬೇಕಾದ ಸರ್ಕಾರದ ಜವಾಬ್ದಾರಿ ಬಗ್ಗೆ ಕೂಡ ಅವರು ಎಚ್ಚರಿಸಿದ್ದಾರೆ.