
ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಕೇಸ್ ಮೇಲೆ ನಟ ದರ್ಶನ್ ಜೈಲು ಪಾರಾಗಿದ್ದಾರೆ. ಸುಮಾರು 25 ದಿನಗಳಿಂದ ಜೈಲಿನಲ್ಲಿರುವ ನಟನಿಗೆ ಆರೋಗ್ಯದ ಸಮಸ್ಯೆ ಕಾಣಿಸುತ್ತಿದೆ. ಜೈಲಿನ ಆಹಾರ ಸೇರದೆ ಫುಡ್ ಪಾಯಿಸನ್ ಆಗುತ್ತಿದೆ. ದರ್ಶನ್ ಜೈಲು ಸೇರಿ ವಾರ ಕಳೆದ ಮೇಲೆ ಸ್ಟಾರ್ ನಟ-ನಟಿಯರು ತಮ್ಮ ಧ್ವನಿ ಎತ್ತುತ್ತಿದ್ದಾರೆ. ಸತ್ಯ ಗೆಲ್ಲಬೇಕು ಎನ್ನುತ್ತಾರೆ...ತಮ್ಮ ನಟ ತಪ್ಪು ಮಾಡಿಲ್ಲ ಅಂತಾನೂ ಹೇಳ್ತಾರೆ. ಈ ಸಮಯದಲ್ಲಿ ದರ್ಶನ್ ಬಗ್ಗೆ ಯಾರಿಗೂ ಗೊತ್ತಿರದ ಕೆಲವೊಂದು ವಿಚಾರಗಳನ್ನು ನಿರ್ದೇಶಕ ಓಂ ಪ್ರಕಾಶ್ ರಾವ್ ಹಂಚಿಕೊಂಡಿದ್ದಾರೆ.
ಸಾಮಾನ್ಯವಾಗಿ ಚಿತ್ರರಂಗದಲ್ಲಿ ಸ್ಟಾರ್ ವಾರ್ ತುಂಬಾನೇ ಕಾಮನ್. ಒಬ್ಬ ಸ್ಟಾರ್ ನಟನ ಸಿನಿಮಾ ರಿಲೀಸ್ ಆಗ್ತಿದೆ ಅಂದ್ಮೇಲೆ ಅದನ್ನು ಕೆಳಗೆ ಬೀಳಿಸಲು ಸಾಕಷ್ಟು ಕಾಣದ ಕೈಗಳು ಕೆಲಸ ಮಾಡುತ್ತಾರೆ. ಕೆಲವರು ಸತ್ಯ ತಿಳಿಯುತ್ತದೆ ಕೆಲವೊಂದು ಹಾಗೆ ಮುಚ್ಚಿಬಿಡುತ್ತಾರೆ. ಅಯ್ಯ ಸಿನಿಮಾ ಸಮಯದಲ್ಲಿ ಏನಾಯ್ತು ಎಂದು ಓಂ ಪ್ರಕಾಶ್ ಸತ್ಯ ಬಿಚ್ಚಿಟ್ಟಿದ್ದಾರೆ. '100% ಆ ಸಮಯದಲ್ಲಿ ಸ್ಟಾರ್ ವಾರ್‌ಗಳು ಇತ್ತು. ಯಾರೂ ಹೇಳದೇ ಇರಬಹುದು ಆದರೆ ಒಳಗೊಳಗೆ ಸ್ಟಾರ್ ವಾರ್ ಇದೆ. ಇವತ್ತೂ ಇದೆ ಯಾವತ್ತಿಗೂ ಇರುತ್ತದೆ' ಎಂದು ಖಾಸಗಿ ಸಂದರ್ಶನದಲ್ಲಿ ಓಂ ಪ್ರಕಾಶ್ ರಾವ್ ಮಾತನಾಡಿದ್ದಾರೆ.
ತೋಟದಲ್ಲಿ ಟೊಮೆಟೊ ಬೆಳೆದ ರೈತ; ದೃಷ್ಠಿಬೊಂಬೆ ಬದಲು ರಚಿತಾ ರಾಮ್, ಸನ್ನಿ ಲಿಯೋನ್ ಫೋಟೋ ಹಾಕಿದ!
'ಅಯ್ಯ ಸಿನಿಮಾ ತಡೆಯುವ ಪ್ರಯತ್ನ ಮಾಡಿದ್ದರು. ಸೆನ್ಸಾರ್ ಆಫೀಸ್‌ಗೆ ಫೋನ್ ಮಾಡಿ ಇದು ಫ್ಯಾಮಿಲಿ ನೋಡುವ ಸಿನಿಮಾನಾ ಎಂದು ಒಬ್ಬ ಹೀರೋ ಪೋನ್ ಮಾಡಿಸಿದ್ದಾನೆ. ಇದನ್ನು ನನಗೆ ಸೆನ್ಸಾರ್ ಆಫೀಸರ್ ಚಂದ್ರಶೇಖರ್ ಅವರೇ ಹೇಳಿದ್ದರು. ಈ ತರಹದ ಫೋನ್ ಬರ್ತಾಯಿದೆ ಡೋಂಟ್ ವರಿ. ಪಿಕ್ಚರ್ ತುಂಬಾ ಚೆನ್ನಾಗಿದೆ. ಯಾರೂ ತಡೆಯೋಕೆ ಆಗಲ್ಲ. 100% ಸೂಪರ್ ಡ್ಯೂಪರ್ ಹಿಟ್ ಆಗುತ್ತದೆ ಅಂತ ಮೂರು ವಾರ ಆದ್ಮೇಲೆ ನನಗೆ ಹೇಳಿದ್ದರು' ಎಂದು ಓಂ ಪ್ರಕಾಶ್ ರಾವ್ ಹೇಳಿದ್ದಾರೆ.
ಮನೆಯಲ್ಲಿ ಪ್ರೆಗ್ನೆನ್ಸಿ ಟೆಸ್ಟ್ ಮಾಡಿದ ಹರ್ಷಿಕಾ ಪೂಣಚ್ಚ; ಪಾಸಿಟಿವ್ ಎಂದು ಕಣ್ಣೀರಿಟ್ಟ ನಟಿ!
'ದರ್ಶನ್ ಫ್ಯಾಮಿಲಿ ಜೊತೆ ತುಂಬಾನೇ ಚೆನ್ನಾಗಿದ್ದಾರೆ. ವಿಜಯಲಕ್ಷ್ಮಿ ಮೇಡಂ ತುಂಬಾ ಒಳ್ಳೆಯವರು' ಎಂದಿದ್ದಾರೆ ಓಂ ಪ್ರಕಾಶ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.