ಕೆಲವೊಂದನ್ನು ಲೈಫಲ್ಲಿ ಕಳ್ಕೊಂಡಾಗ ದೇವರು ಮತ್ತಿನ್ನೇನೋ ಕೊಡ್ತಾನೆ ಎಂದಿದ್ಯಾಕೆ ಚಂದನ್ ಶೆಟ್ಟಿ?

By Shriram Bhat  |  First Published Jul 18, 2024, 4:12 PM IST

ಇಷ್ಟು ದಿನ ನಾನು ಸಾಕಷ್ಟು ಏಳು-ಬೀಳುಗಳನ್ನು ನೋಡ್ಕೊಂಡು ಅನುಭವಿಸ್ಕೊಂಡು ಬಂದಿದೀನಿ.. ಅದನ್ನ ನೀವೂ ಎಲ್ಲಾನೂ ನೋಡಿದೀರ.. ಹೊಸದಾಗಿ ಏನೂ ಹೇಳುವಂಥದ್ದೇನಿಲ್ಲ.. 'ನಾನು ನನ್ನ ಹಿಂದಿನ ದಿನಗಳ ಬಗ್ಗೆ ಮಾತನಾಡಲು ಇಷ್ಟಪಡುವುದಿಲ್ಲ. ಫ್ಯೂಚರ್‌ನಲ್ಲಿ ನಾನು ಒಂದು ದೊಡ್ಡ ಮಟ್ಟಕ್ಕೆ ರೀಚ್ ಆಗ್ಬೇಕು ಅಂತ..


ಸಿಂಗರ್ ಹಾಗು ನಟ ಚಂದನ್ ಶೆಟ್ಟಿ (Chandan Shetty) ಅವರು ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ ಇನ್‌ಸ್ಟಾಗ್ರಾಂನಲ್ಲಿ ಲೈವ್ ವೀಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಅರೇ, ಅದ್ಯಾಕೆ ಈಗ ಮಾಡಿದ್ದು ಅಂತ ಕೂತೂಹಲ ನಿಮಗೆಲ್ಲರಿಗೂ ಕಾಡದೇ ಇರದು. ಹೌದು, ಅವರೀಗ ವೀಡಿಯೋ ಪೋಸ್ಟ್ ಮಾಡಲು ಜೆನ್ಯೂನ್ ಕಾರಣವಿದೆ. ಚಂದನ್ ಶೆಟ್ಟಿ ಅವರು ಮೊಟ್ಟಮೊದಲು ನಟಿಸಿರುವ 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರವು ನಾಳೆ, ಅಂದರೆ 19 ಜುಲೈ 2024ರಂದು ಎಲ್ಲಾ ಕಡೆ ಬಿಡುಗಡೆ ಆಗುತ್ತಿದೆ. ಈ ಕಾರಣಕ್ಕೆ ಾವರು ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಓದುಗರಿಗೋಸ್ಕರ ಅವರೇನು ಹೇಳಿದ್ದಾರೆ ಎಂಬುದು ಮುಂದಿದೆ ಓದಿ.. 

ದೇವ್ರು ನಮ್ ಹತ್ರ ಏನೋ ಒಂದು ಕಿತ್ಕೊಂಡಿದಾನೆ ಅಂತಂದ್ರೆ, ಮುಂದೊಂದು ದಿನ ಏನೋ ಒಂದು ದೊಡ್ಡದಾಗಿ ಕೊಡ್ತಾನೆ ಅಂತ ಹೇಳ್ತಾರೆ.. ಈಗ ನನಗೆ ಕೊಡೋ ದೇವರುಗಳು ನೀವೇನೇ.. ಇಷ್ಟು ವರ್ಷ ನೀವು ನನ್ನ ಕೈ ಬಿಟ್ಟಿಲ್ಲ.. ಈಗ್ಲೂ ಕೂಡ ನನ್ನ ಕೈಬಿಡಲ್ಲ ಅಂತ ನಂಬಿದೀನಿ.. ನಟನಾಗಿ ಇದು ನನ್ನ ಮೊದಲನೇ ಪ್ರಯತ್ನ- ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಮೂಲಕ ಆಗ್ತಾ ಇದೆ.. ಅಂದ್ರೆ ಜುಲೈ 19ರಂದು (19 ಜುಲೈ 2024). ದಯವಿಟ್ಟು ಮೊದಲನೇ ದಿನವೇ ಥೀಯೇಟರ್‌ನಲ್ಲಿ ಎಲ್ಲಾರೂ ಹೋಗಿ ಸಿನಿಮಾ ನೋಡಿ.. ದಯವಿಟ್ಟು ನನಗೆ ಸಪೋರ್ಟ್ ಮಾಡಿ.. 

Tap to resize

Latest Videos

ಮುತ್ತಿನಹಾರ ಮುಹೂರ್ತಕ್ಕೆ ಬಂದಿದ್ರು ಪಾರ್ವತಮ್ಮ ರಾಜ್‌ಕುಮಾರ್; ಸುಹಾಸಿನಿ ಗೈರು ಆಗಿದ್ಯಾಕೆ?

ಇಷ್ಟು ದಿನ ನಾನು ಸಾಕಷ್ಟು ಏಳು-ಬೀಳುಗಳನ್ನು ನೋಡ್ಕೊಂಡು ಅನುಭವಿಸ್ಕೊಂಡು ಬಂದಿದೀನಿ.. ಅದನ್ನ ನೀವೂ ಎಲ್ಲಾನೂ ನೋಡಿದೀರ.. ಹೊಸದಾಗಿ ಏನೂ ಹೇಳುವಂಥದ್ದೇನಿಲ್ಲ.. 'ನಾನು ನನ್ನ ಹಿಂದಿನ ದಿನಗಳ ಬಗ್ಗೆ ಮಾತನಾಡಲು ಇಷ್ಟಪಡುವುದಿಲ್ಲ. ಫ್ಯೂಚರ್‌ನಲ್ಲಿ ನಾನು ಒಂದು ದೊಡ್ಡ ಮಟ್ಟಕ್ಕೆ ರೀಚ್ ಆಗ್ಬೇಕು ಅಂತ ಕನಸು ಕಂಡಿದೀನಿ.. ತಾವುಗಳು ನನಗೆ ದಯವಿಟ್ಟು ಸಪೋರ್ಟ್ ಮಾಡ್ಬೇಕು.. ನಾನು ಕೇಳ್ಕೊಳ್ಳೋದು ಎಲ್ಲರಿಗೂ ಏನಂದ್ರೆ, ದಯವಿಟ್ಟು ಸಿನಿಮಾನ 19ಕ್ಕೇ ನೋಡಿ.. 

ಮುಂದಿನ ವಾರ ನೋಡೋಣ ಅಂತ ವೇಟ್ ಮಾಡ್ಬೇಡಿ.. ಯಾಕೆ ಅಂತ ಹೇಳಿದ್ರೆ.. ಫಸ್ಟು ಓಪನಿಂಗ್ ಬರ್ಲಿಲ್ಲ ಅಂದ್ರೆ ಮೊದಲನೇ ದಿನಾನೇ, ಥಿಯೇಟರ್‌ಗಳು ಒಂದೊಂದಾಗಿನೇ ಡಿಲೀಟ್ ಆಗ್ತಾ ಹೋಗುತ್ತೆ.. ದಯವಿಟ್ಟು ನೀವು ನನ್ನ ಕೈ ಬಿಡಲ್ಲ ಅಂತ ನಂಬಿದೀನಿ.. ಜುಲೈ 19ಕ್ಕೆ ಬಂದು ಥಿಯೇಟರ್‌ನಲ್ಲಿ ಚಿತ್ರ ನೋಡಿ, ನಮ್ ಎಂಟರ್ ಸಿನಿಮಾ ತಂಡಕ್ಕೆ ಆಶೀರ್ವಾದ ಮಾಡಿ.. ಈ ಸಿನಿಮಾದಲ್ಲಿ ನಾನು ಒಂದು ಸ್ಪೆಷಲ್ ರೋಲ್ ಮಾಡಿದೀನಿ.. ನನ್ ಜೊತೆ ಇನ್ನೂ ನಾಲ್ಕು ಜನ ಕೋ ಆರ್ಟಿಸ್ಟ್ ಗಳಿ ಇದಾರೆಎ, ಸ್ಟೂಡೆಂಟ್ಸ್ ಪಾತ್ರ ಮಾಡಿದಾರೆ.. ಅವ್ರು ಕೂಡ ತುಂಬಾ ಚೆನ್ನಾಗಿ ಆಕ್ಟ್ ಮಾಡಿದಾರೆ. ಅರುಣ್ ಅಮುಕ್ತ ಅವರು ಡೈರೆಕ್ಷನ್ ಮಾಡಿದಾರೆ. 

ಸುಬ್ರಹ್ಮಣ್ಯ ಕುಕ್ಕೇ ಹಾಗೂ ಶಿವಲಿಂಗೇ ಗೌಡ ಅವರು ಇಬ್ಬರೂ ಸೇರಿ ಪ್ರೊಡ್ಯೂಸ್ ಮಾಡಿದಾರೆ. ಎಂಟೈರ್ ಚಿತ್ರತಂಡ ತುಂಬಾ ಶ್ರದ್ಧೆಯಿಂದ ಈ ಸಿನಿಮಾನ ಮಾಡಿದೀವಿ.. ಸಿನಿಮಾನ ಥಿಯೇಟರ್‌ನಲ್ಲಿ ನೋಡಿ, ಸಿನಿಮಾ ಚೆನ್ನಾಗಿದ್ರೆ ಒಂದು ಒಳ್ಳೇ ರಿವ್ಯೂ ಕೊಡಿ.. ಲೈಕ್ಸ್ ಕೊಡಿ, ನಾಲ್ಕು ಜನಕ್ಕೆ ಹೇಳಿ ಸಿನಿಮಾ ನೋಡ್ಲಿಕ್ಕೆ.. ತಪ್ಪಿದ್ದಲ್ಲಿ ತಿಳಿಸಿ, ತಪ್ಪಿದ್ದಲ್ಲಿ ತಿದ್ಕೊಂಡು ಮುಂದೆ ನಾನು ಇನ್ನೂ ಬೆಟರ್ ಆಕ್ಟರ್ ಆಗಿ ಪರಿವರ್ತನೆ ಆಗೋದಕ್ಕೆ ಇದು ಸಹಾಯಕ ಆಗುತ್ತೆ.

ರಾಕಿಂಗ್ ಸ್ಟಾರ್ ಯಶ್ ವಿಡಿಯೋ ವೈರಲ್ ಆಗ್ತಿದೆ; ಅಂಥಾದ್ದೇನಿದೆ ಅದ್ರಲ್ಲಿ ಗುರೂ! 

ಪೊಸೆಟಿವ್, ನೆಗೆಟಿವ್ ಏನೇ ಇದ್ರೂ ಹೇಳಿ, ಅದನ್ನ ನಾನು ಸ್ವೀಕಾರ ಮಾಡ್ತೀನಿ ಅಂತ ಹೇಳ್ತಾ ಇದೀನಿ.. ದಯವಿಟ್ಟು 19ನೇ ತಾರೀಕು ಸಿನಿಮಾ ನೋಡೋದನ್ನ ಮರಿಬೇಡಿ..' ಎಂದು ಚಂದನ್ ಶೆಟ್ಟಿ ಸಿನಿಪ್ರೇಮಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಲೈವ್ ವಿಡಿಯೋ ಪೋಸ್ಟ್ ಮಾಡಿರುವ ಚಂದನ್ ಶೆಟ್ಟಿಯವರಿಗೆ ಒಂದು ತಾಸಿನೊಳಗೇ ನಾಲ್ಕು ಸಾವಿರಕ್ಕೂ ಮೀರಿ ಲೈಕ್ಸ್, ಕಾಮೆಂಟ್ಸ್ ಬಂದಿವೆ. ಒಟ್ಟಿನಲ್ಲಿ, ನಾಳೆ ಚಂದನ್ ಶೆಟ್ಟಿ ನಟನೆಯ ಮೊಟ್ಟಮೊದಲ ಸಿನಿಮಾ ಬಿಡುಗಡೆಯಾಗಿ ಫಲಿತಾಂಶ ಹೊರಬೀಳಲಿದೆ. 

 

 

click me!