ಹೃದಯಗೀತೆ ಚಿತ್ರ ಶುರುವಾಗಿದ್ದು ಯಾಕೆ, ನಟ ವಿಷ್ಣುವರ್ಧನ್ ಸ್ವೀಕರಿಸಿದ್ದ ಚಾಲೆಂಜ್ ಎಂಥದ್ದು?

By Shriram BhatFirst Published Aug 17, 2024, 6:53 PM IST
Highlights

ಬಾಲಿವುಡ್ ಸಿನಿರಂಗದ ಪಗಲಾ ಕಹೀನ್ ಕಾ ಚಿತ್ರದಲ್ಲಿ ಶಮ್ಮಿ ಕಪೂರ್ ನಾಯಕರಾಗಿ ನಟಿಸಿದ್ದರು. ಆ ಪಾತ್ರವನ್ನು ಕನ್ನಡದ ನಿರ್ದೇಶಕರಾದ ಭಾರ್ಗವ ಅವರು ತುಂಬಾ ಇಷ್ಟಪಟ್ಟಿದ್ದರಂತೆ. ಅದೇ ರೀತಿ, ಕನ್ನಡದಲ್ಲಿ ಭಲೇ ಹುಚ್ಚ ಸಿನಿಮಾ..

ಹೃದಯಗೀತೆ ಚಿತ್ರವು ನಟ ವಿಷ್ಣುವರ್ಧನ್ ಕೆರಿಯರ್‌ನಲ್ಲಿ ಬಂದಿರುವ ಅತ್ಯುತ್ತಮ ಚಿತ್ರಗಳಲ್ಲಿ ಒಂದು. ಈ ಚಿತ್ರದ ಹಾಡುಗಳು ಕೂಡ ಬಹಳಷ್ಟು ಜನಪ್ರಿಯವಾಗಿದ್ದವು. ಅಷ್ಟೇ ಅಲ್ಲ, ನಟ ವಿಷ್ಣುವರ್ಧನ್ ಅವರು ಈ ಚಿತ್ರದಲ್ಲಿ ಮಾಡಿದ್ದ ಪಾತ್ರ ಕೂಡ ಬಹಳಷ್ಟು ಜನರಿಗೆ ಇಷ್ಟವಾಗಿದ್ದವು. 'ಪಗಲಾ ಕಹೀನ್ ಕಾ' ಹೆಸರಿನ ಹಿಂದಿ ಚಿತ್ರದ ಪ್ರೇರಣೆಯಿಂದ ಮಾಡಿದಂಥ ಕನ್ನಡ ಸಿನಿಮಾ ಈ 'ಹೃದಯಗೀತೆ' ಎನ್ನುವುದು ಬಹಳಷ್ಟು ಜನರಿಗೆ ಗೊತ್ತಿರುವ ಸಂಗತಿ. 

ಬಾಲಿವುಡ್ ಸಿನಿರಂಗದ ಪಗಲಾ ಕಹೀನ್ ಕಾ ಚಿತ್ರದಲ್ಲಿ ಶಮ್ಮಿ ಕಪೂರ್ ನಾಯಕರಾಗಿ ನಟಿಸಿದ್ದರು. ಆ ಪಾತ್ರವನ್ನು ಕನ್ನಡದ ನಿರ್ದೇಶಕರಾದ ಭಾರ್ಗವ ಅವರು ತುಂಬಾ ಇಷ್ಟಪಟ್ಟಿದ್ದರಂತೆ. ಅದೇ ರೀತಿ, ಕನ್ನಡದಲ್ಲಿ ಭಲೇ ಹುಚ್ಚ ಸಿನಿಮಾದಲ್ಲಿ ಡಾ ರಾಜ್‌ಕುಮಾರ್ ಅವರು ನಟಿಸಿದ್ದ ಪಾತ್ರ ಕೂಡ ಭಾರ್ಗವ ಅವರಿಗೆ ತುಂಬಾ ಇಷ್ಟವಾಗಿತ್ತಂತೆ. ನಾನೂ ಕೂಡ ಇದೇ ತರದ ಪಾತ್ರವನ್ನು ಸೃಷ್ಟಿಸಿ ಕನ್ನಡ ಸಿನಿಪ್ರೇಕ್ಷಕರಿಗೆ ತಲುಪಿಸಬೇಕು ಎಂದು ಕನಸು ಕಂಡಿದ್ದರಂತೆ ಭಾರ್ಗವ ಅವರು. 

Latest Videos

ಎಡಗೈ ಬಳಕೆದಾರರಿಗೆ ಗುಡ್ ನ್ಯೂಸ್, ನಿಮಗಾಗಿ ಒಂದು ಸಿನಿಮಾವನ್ನೇ ಮಾಡಲಾಗಿದೆ ನೋಡಿ!

ಅದರಂತೆ, ಬಹಳಷ್ಟು ಕಥೆ ಕೇಳಿದ್ದ ಭಾರ್ಗವ ಅವರಿಗೆ 'ಹೃದಯಗೀತೆ' ಎಂಬ ಕಥೆ ತುಂಬಾ ಇಷ್ಟವಾಯ್ತು. ಭಾರ್ಗವ ಅವರು ತಾವು ಇಷ್ಟಪಟ್ಟಿದ್ದ ಹುಚ್ಚನ ಪಾತ್ರವನ್ನು ನಟ ವಿಷ್ಣುವರ್ಧನ್ ಅವರಿಂದ ಮಾಡಿಸಿ, ತಮ್ಮ ಆಸೆಯನ್ನು ಆ ಮೂಲಕ ನೆರವೇರಿಸಿಕೊಂಡರು ಎನ್ನಬಹುದು. ಹೀಗೆ ಡಾ ರಾಜ್‌ ನಟನೆಯ ಭಲೇ ಹುಚ್ಚ ಸಿನಿಮಾ ಡಾ ವಿಷ್ಣು ಅವರ ಹೃದಯಗೀತೆ ಸಿನಿಮಾ ಬರಲು ಪರೋಕ್ಷವಾಗಿ ಕಾರಣವಾಯ್ತು ಎನ್ನಬಹುದು. 

ಜೊತೆಗೆ, ಹಾಲಿವುಡ್‌ನಲ್ಲಿ ಬಂದಿದ್ದ 'ಕೋಮಾ' ಸಿನಿಮಾ ಕೂಡ ಈ ಹೃದಯಗೀತೆ ಸಿನಿಮಾಗೆ ಪ್ರೇರಣೆ ಆಗಿದೆ. ಕಾರಣ, ಆ ಚಿತ್ರದಲ್ಲಿ ಆಸ್ಪತ್ರೆಗಳಲ್ಲಿ ಮಾನಸಿಕ ರೋಗಿಗಳನ್ನು ಬಳಸಿಕೊಂಡು ಅಂಗಾಂಗ ಮಾಫಿಯಾ ಮಾಡುತ್ತಿರುವ ಕಥೆ ಇದೆ. ಆ ಚಿತ್ರದ ಕಥೆಯನ್ನು ಕೂಡ ಹೃದಯಗೀತೆ ಚಿತ್ರದ ಕಥೆಗೆ ಭಾರ್ಗವ ಅವರು ಪ್ರೇರಣೆಯಾಗಿ ಇಟ್ಟುಕೊಂಡಿದ್ದರಂತೆ. ಒಟ್ಟಿನಲ್ಲಿ, ಡಾ ರಾಜ್‌ಕುಮಾರ್ ಮಾಡಿದ್ದ ಪಾತ್ರವನ್ನು ಭಾರ್ಗವ ಅವರು ನಟ ವಿಷ್ಣುವರ್ಧನ್ ಅವರಿಂದಲೂ ಮಾಡಿಸಿ ಚಿತ್ರವನ್ನು ಗೆಲ್ಲಿಸಿದ್ದು ಈಗ ಇತಿಹಾಸ. 

ಆನಂದ್ ಚಿತ್ರಕ್ಕೆ ನಾಯಕಿಯಾಗಿ ಮೊದಲು ಆಯ್ಕೆಯಾಗಿದ್ದು ಸುಧಾರಾಣಿ ಅಲ್ಲ, ಮತ್ತೊಬ್ಬರು!

click me!