ಸಿನಿಮಾಗಳನ್ನು ಪ್ರೀತಿಸಿ, ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲೇ ಉಸಿರು ಚೆಲ್ಲಿದ ಕನ್ನಡ ನಿರ್ದೇಶಕ Joe Siman

Published : Feb 13, 2026, 05:33 PM ISTUpdated : Feb 13, 2026, 06:23 PM IST
kannada director joe siman death

ಸಾರಾಂಶ

Kannada Director Joe Siman Death: ಸಿನಿಮಾಗಳನ್ನು ಪ್ರೀತಿಸಿ, ಸಿನಿಮಾವನ್ನು ಜೀವನವಾಗಿಸಿಕೊಂಡಿದ್ದ ನಟ, ನಿರ್ದೇಶಕ ಜೋ ಸೈಮನ್‌ ಅವರು ನಿಧನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. 

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲೇ ಹೃದಯಾಘಾತವಾಗಿದ್ದು, ನಿಧನರಾಗಿದ್ದಾರೆ. ಫಿಲ್ಮ್ ಚೇಂಬರ್ ಸದಸ್ಯರು ಅಲ್ಲೇ ಪಕ್ಕದಲ್ಲೇ ಇದ್ದ ಮಲ್ಲಿಗೆ ಆಸ್ಪತ್ರೆಗೆ ಕರೆತಂದಿದ್ದಾರೆ.

ಕನ್ನಡ ಚಿತ್ರರಂಗದ ಅದ್ಭುತ ನಿರ್ದೇಶಕ

ಜೋ ಸೈಮನ್​ ಅವರಿಗೆ 80 ವರ್ಷ ವಯಸ್ಸಾಗಿತ್ತು. ನಟ ವಿಷ್ಣುವರ್ಧನ್​ಗೆ ಸಾಹಸ ಸಿಂಹ ಎಂಬ ಬಿರುದ್ಧು ಕೊಟ್ಟ ನಿರ್ದೇಶಕ ಈಗ ಇನ್ನಿಲ್ಲ. ಸಾಹಸ ಸಿಂಹ, ಹಾಂಕಾಂಗ್​ನಲ್ಲಿ ಏಜೆಂಟ್ ಅಮರ್​, ಸಿಂಹ ಜೋಡಿ, ಸ್ನೇಹದ ಕಡಲಲ್ಲಿ, ರವಿವರ್ಮ, ಊರಿಗೆ ಉಪಕಾರಿ ಸೇರಿದಂತೆ ಹಿಟ್​ ಸಿನಿಮಾ ಕೊಟ್ಟಿದ್ದಾರೆ. ವಿಷ್ಣುವರ್ಧನ್​, ಅಂಬರೀಶ್​​ಗೆ ನೆಚ್ಚಿನ ನಿರ್ದೇಶಕ ಆಗಿದ್ದರು.

ವಿಷ್ಣುವರ್ಧನ್‌ ಹಾಗೂ ಜೋ ಸೈಮನ್‌ ಅವರು ಒಟ್ಟಿಗೆ ಅನೇಕ ಸಿನಿಮಾಗಳನ್ನು ಮಾಡಿದ್ದರು. ಇವರಿಬ್ಬರು ಒಟ್ಟಿಗೆ ಸಿನಿಮಾ ಮಾಡಬಾರದು ಎಂದು ಅನೇಕರು ಪತ್ರ ಬರೆದಿದ್ದರಂತೆ,. ಇವರನ್ನು ದ್ವೇಷ ಮಾಡುವವರು ಕೂಡ ಅನೇಕರು ಇದ್ದರು. ಒಟ್ಟಿನಲ್ಲಿ ವಿಷ್ಣು ಹಾಗೂ ಸೈಮನ್‌ ಮೇಲೆ ದ್ವೇಷ ಕಾರುವವರು ಇದ್ದರು.

ವಿಷ್ಣು ಅವರಿಗೆ ಸೈಮನ್‌ ಕಂಡರೆ ತುಂಬ ಇಷ್ಟ. ಸೈಮನ್‌ ಅವರಿಗೂ ಕೂಡ ವಿಷ್ಣು ಕಂಡರೆ ಇಷ್ಟ. ಸೈಮನ್‌ ತಾಯಿ ಸತ್ತಾಗ ವಿಷ್ಣು ಅತ್ತಿದ್ದರು, ಅದಾದ ಬಳಿಕ ಸೈಮನ್‌ ಅವರಿಗೆ ಅಪಾಯ ಆಗುತ್ತದೆ ಎಂದು ಗೊತ್ತಾದಾಗಲೂ ಕೂಡ ಅತ್ತಿದ್ದರಂತೆ. ಇದನ್ನು ಸೈಮನ್‌ ಅವರು ಮರೆಯೋಕೆ ಆಗೋದಿಲ್ಲ ಎಂದು ಹೇಳಿದ್ದರಂತೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸಾಹಸ ಸಿಂಹ ಬಿರುದು ಕೊಟ್ರೂ ವಿಷ್ಣು, ಜೋ ಸೈಮನ್ ಒಟ್ಟಿಗೆ ಸಿನಿಮಾ ಮಾಡಬಾರದು; ಧಮ್ಕಿ ಹಾಕಿ ಪತ್ರ ಬರೆದ್ರು!
ಮಾರ್ಚ್​ 19ಕ್ಕೆ ಬಾಕ್ಸ್ ಆಫೀಸ್ ಉಡೀಸ್! ಧುರಂಧರ್ 60, ಟಾಕ್ಸಿಕ್ 40; ಏನಿದು 60x40 ಲೆಕ್ಕ? ಫಸ್ಟ್ ಡೇ ಕಲೆಕ್ಷನ್ ಯಾರಿಗೆ ಸಿಂಹಪಾಲು?