ದರ್ಶನ್-ಅತ್ತಿಗೆ ಜಗಳದಿಂದ ರಿಲೀಸ್‌ಗೆ ಭಯ ಆಗಿತ್ತು; ಸಾರಥಿ ಯಶಸ್ಸಿನ ಗುಟ್ಟು ಬಿಚ್ಚಿಟ್ಟ ದಿನಕರ್ ತೂಗುದೀಪ

Published : May 13, 2024, 10:06 AM ISTUpdated : May 13, 2024, 11:23 AM IST
ದರ್ಶನ್-ಅತ್ತಿಗೆ ಜಗಳದಿಂದ ರಿಲೀಸ್‌ಗೆ ಭಯ ಆಗಿತ್ತು; ಸಾರಥಿ ಯಶಸ್ಸಿನ ಗುಟ್ಟು ಬಿಚ್ಚಿಟ್ಟ ದಿನಕರ್ ತೂಗುದೀಪ

ಸಾರಾಂಶ

100 ದಿನಕ್ಕೂ ಹೆಚ್ಚು ವೀಕ್ಷಣೆ ಪಡೆದ ಸಾರಥಿ ಸಿನಿಮಾ. ರಿಲೀಸ್ ಮಾಡುವಾಗ ಎದುರಿಸಿದ ಸಮಸ್ಯೆ ವಿವರಿಸಿದ ದಿನಕರ್...

ನಟ ದರ್ಶನ್ ಮತ್ತು ದೀಪಾ ಸನ್ನಿಧಿ ನಟಿಸಿರುವ ಸಾರಥಿ ಸಿನಿಮಾ ಬ್ಲಾಕ್‌ ಬಸ್ಟರ್ ಹಿಟ್ ಕಂಡಿತ್ತು. ವೈಯಕ್ತಿಕ ಸಮಸ್ಯೆಗಳ ನಡುವೆಯೂ ದರ್ಶನ್ ಯಶಸ್ಸು ಕಂಡಿದ್ದು ಚಾಮುಂಡೇಶ್ವರಿ ಆಶಿರ್ವಾದ ಅಂತಾರೆ ಫ್ಯಾನ್ಸ್‌. ಆದರೆ ಅ ಸಮಯದಲ್ಲಿ ಏನೇಲ್ಲಾ ಕಷ್ಟಗಳು ಎದುರಾಗಿತ್ತು ಎಂದು ಸಹೋದರ ದಿನಕರ್ ಹಂಚಿಕೊಂಡಿದ್ದಾರೆ.

'ಸಾರಥಿ ಸಿನಿಮಾ ನಿರ್ಮಾಪಕರಿಗೆ ಕೊಂಚ ಸಮಸ್ಯೆ ಆಗಿ ರಿಲೀಸ್ ಮಾಡಲು ಆಗುತ್ತಿರಲಿಲ್ಲ. ಡಬ್ಬಿಂಗ್ ಆದ ಮೇಲೆ ಸಾರಥಿ ಸಿನಿಮಾ ಸುಮಾರು ನಾಲ್ಕುವರೆ ಗಂಟೆ ಇತ್ತು. ನಿರ್ಮಾಪಕರು ಸಮಸ್ಯೆಯಿಂದ ಹೊರ ಬರಲು ಸುಮಾರು 6 ತಿಂಗಳು ತೆಗೆದುಕೊಂಡರು, ಆಗ ನಾನು ಇಡೀ ಸಿನಿಮಾವನ್ನು ಎಡಿಟ್‌ ಮಾಡಿ 3 ಗಂಟೆಗೆ ತರಲಾಗಿತ್ತು. ಇನ್ನೇನು ಸಿನಿಮಾ ರಿಲೀಸ್ ಆಗಬೇಕು ಅಷ್ಟರಲ್ಲಿ ನಮ್ಮ ಜೀವನದಲ್ಲಿ ದೊಡ್ಡ ಬಾಂಬ್ ತರ ದರ್ಶನ್ ಮತ್ತು ಅತ್ತಿಗೆ ನಡುವೆ ಗಲಾಟೆ ಶುರುವಾಯ್ತು. ಏನು ಮಾಡಲಾಗದು ಆ ಸಮಯ ಹಾಗೆ ಮಾಡಿಸಿತ್ತು' ಎಂದು ಖಾಸಗಿ ಯುಟ್ಯೂಬ್ ಸಂದರ್ಶನದಲ್ಲಿ ದಿನಕರ್ ಮಾತನಾಡಿದ್ದಾರೆ.

ತಾಯಿ ಒಂಟಿಯಾಗಿದ್ದರೂ ಕೊರತೆ ಇಲ್ಲದಂತೆ ನನ್ನನ್ನು ಬೆಳೆಸಿದ್ದಾರೆ: ಭಾವುಕರಾದ ನಟಿ ಶ್ರುತಿ ಹರಿಹರನ್

'ಸೆಪ್ಟೆಂಬರ್ 30ರಂದು ಸಿನಿಮಾ ರಿಲೀಸ್ ಮಾಡಲೇ ಬೇಕು ಎಂದು ನಿರ್ಮಾಪಕರು ನಿರ್ಧಾರ ಮಾಡಿಕೊಂಡಿದ್ದರು. ಆಗ ದರ್ಶನ್ ಜೈಲ್‌ನಲ್ಲಿದ್ದರು ಹೀಗಾಗಿ ನಾವು ಬೇಡ ಎಂದರೂ ಅವರು ಕೇಳಲು ರೆಡಿಯಾಗಿರಲಿಲ್ಲ. ಹೀಗಾಗಿ ಒಂದು ದಿನ ನಿರ್ಮಾಪಕರ ಜೊತೆ ದರ್ಶನ್‌ನ ಭೇಟಿ ಮಾಡಲು ಜೈಲಿಗೆ ಹೋದೆವು ಅಲ್ಲೂ ಕೂಡ ದರ್ಶನ್ ಬೇಡ ರಿಲೀಸ್ ಎನ್ನುತ್ತಿದ್ದರು....ನಿರ್ಮಾಪಕರು ಧೈರ್ಯ ಮಾಡಿ ಮುಂದೆ ನಡೆದರು. ಒಂದು ವೇಳೆ ಸಾರಥಿ ಸಿನಿಮಾ ಹಿಟ್ ಆಗಿಲ್ಲ ಅಂದ್ರೆ ನಾನು ಇನ್ನು ಮುಂದೆ ನಿರ್ದೇಶನ ಮಾಡಲ್ಲ ಎಂದು ದರ್ಶನ್‌ಗೆ ಹೇಳಿಬಿಟ್ಟಿ...ಯಾವ ಬಾಯಿಯಲ್ಲಿ ಹೇಳಿದೆ ಗೊತ್ತಿಲ್ಲ ಸಿನಿಮಾ ಸೂಪರ್ ಹಿಟ್ ಆಯ್ತು' ಎಂದು ದಿನಕರ್ ಹೇಳಿದ್ದಾರೆ

ಸಾರಥಿ ಸಿನಿಮಾದಲ್ಲಿ ಬಳಸಿಕೊಂಡಿರುವ ಚಾಮುಂಡೇಶ್ವರಿ ವಿಗ್ರಹವನ್ನು ಬೆಂಗಳೂರಿನ ಪ್ರತಿಷ್ಠಿತ ಥಿಯೇಟರ್‌ ಮುಂದೆ ನಿಲ್ಲಿಸಬೇಕು ಅನ್ನೋದು ದಿನಾಕರ್ ಆಸೆ ಆಗಿತ್ತಂತೆ. ಅಯ್ಯೋ ಸಿನಿಮಾ 2 ವಾರನೂ ಓಡಲ್ಲ ಯಾಕೆ ಕಷ್ಟ ಪಡುತ್ತೀರಾ ಎಂದು ಥಿಯೇಟರ್‌ ಮ್ಯಾನೇಜರ್ ಕೇವಲವಾಗಿ ಮಾತನಾಡಿಬಿಟ್ಟಿದ್ದರಂತೆ. ದಿನಾಕರು ಆಸೆ ಪಟ್ಟ ಕಾರಣ ವಿಗ್ರಹವನ್ನು ನಿಲ್ಲಿಸಲಾಗಿತ್ತು....2 ವಾರ ಅಂತ ನಿಂತ ವಿಗ್ರಹ 100 ದಿನ ಮುಗಿದರೂ ಅಲ್ಲೇ ಇತ್ತು. ಸಿನಿಮಾ ರಿಲೀಸ್ ಆದ ಎರಡನೇ ವಾರಕ್ಕೆ ದರ್ಶನ್‌ ಜೈಲಿನಿಂದ ಹೊರ ಬಂದಿದ್ದಾರೆ. 

ಮಗನ ಜೊತೆ ವಿಜಯಲಕ್ಷ್ಮಿ ದರ್ಶನ್ ವ್ಯಾಲೆಂಟೈನ್ಸ್ ಡೇ ಫೋಟೋ; ಬಾಸ್‌ ಫೋಟೋ ಎಲ್ಲಿ ಎಂದು ಪ್ರಶ್ನಿಸಿದ ನೆಟ್ಟಿಗರು!

ಮೊದಲು ಚಾಮುಂಡೇಶ್ವರಿ ವಿಗ್ರಹಕ್ಕೆ ಪೂಜೆ ಸಲ್ಲಿಸಿ ಅನಂತರ ಥಿಯೇಟರ್‌ ಒಳಗೆ ಕಾಲಿಟ್ಟ ದರ್ಶನ್ ತಮ್ಮ ತಂಡದ ಜೊತೆ ವಿಜಯ ಯಾತ್ರೆ ಮಾಡಲು ಮುಂದಾಗುತ್ತಾರೆ. 'ಆಗ ವೈಯಕ್ತಿಕ ಸಮಸ್ಯೆ ಏನೇ ಇದ್ದರೂ ನಮಗೆ ಬೇಡ ನಿಮ್ಮ ನಟನೆ ಮತ್ತು ಕಥೆ ಅದ್ಭುತ ಅದನ್ನು ಮೆಚ್ಚಿಕೊಂಡಿದ್ದೀವಿ ಅನ್ನೋ ರೀತಿಯಲ್ಲಿ ಜನರು ಪ್ರೀತಿ ಮತ್ತು ಸಪೋರ್ಟ್ ಕೊಟ್ಟರು' ಎಂದು ದಿನಾಕರ್ ಹೇಳಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆಂಧ್ರಪ್ರದೇಶದ X MLA Gummadi Narsaiah ಮನೆಗೆ ಹೋದಾಗ ನನ್ನ ತಂದೆ ಬಳಿಗೆ ಹೋದಂತಾಯ್ತು: Shiva Rajkumar
ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್