
ಕನ್ನಡ ಚಿತ್ರರಂಗದ ನಿರ್ದೇಶಕ, ಚಿತ್ರಕಥೆ ಬರಹಗಾರ ಹಾಗೂ ಗೀತರಚನೆಕಾರ ಎಪಿ ಅರ್ಜುನ್ ಕೊರೋನಾ ಲಾಡ್‌ಡೌನ್ ನಡುವೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
ಮೇ.10ರಂದು ಸರಳವಾಗಿ ಮನೆಯಲ್ಲಿಯೇ ಮದುವೆಯಾಗಲು ನಿರ್ಧರಿಸಿದ್ದಾರೆ ಇವರು. 7-8 ವರ್ಷಗಳ ಕಾಲ ಅರ್ಜುನ್ ಹಾಗೂ ಅನು ಪ್ರೀತಿಸುತ್ತಿದ್ದು, ಈಗ ಸತಿಪತಿಗಳಾಗಲು ಹಸೆಮಣೆ ಏರುತ್ತಿದ್ದಾರೆ. ಹಿಂದು ಸಂಪ್ರದಾಯದಂತೆ ಅನು ಕೈ ಹಿಡಿಯಲಿದ್ದಾರೆ ಅರ್ಜುನ್. ಮದುವೆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಆದರೂ ಸರಳ ಮದುವೆ ಹೇಗಿರುತ್ತದೆ ಎಂದು ಕಾದು ನೋಡಬೇಕಿದೆ.
100 ಸಂಭ್ರಮದಲ್ಲಿ 'ಕಿಸ್'; ಎಪಿ ಅರ್ಜುನ್ ಚಿತ್ರದ 'ಅದ್ದೂರಿ ಲವರ್'!
ಹಿಟ್ ನಿರ್ದೇಶಕ ಆರ್ಜುನ್:
2009ರಲ್ಲಿ ಅಂಬಾರಿ ಚಿತ್ರದ ಮೂಲಕ ನಿರ್ದೇಶಕರಾದ ಅರ್ಜುನ್ 2013ರಲ್ಲಿ ಅದ್ಧೂರಿ ಚಿತ್ರವನ್ನು ನಿರ್ದೇಶಿಸಿದ್ದಾರೆ. ಹೀಗೆ ಒಂದಾದ ಮೇಲೊಂದು ಹಿಟ್ ಚಿತ್ರಗಳನ್ನು ನೀಡಿರುವ ಅರ್ಜುನ್ ಕನ್ನಡ ಚಿತ್ರರಂಗದಲ್ಲಿ ಬೇಡಿಕೆ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ.
ಕಿಸ್ ಕೊಟ್ಟ ಅರ್ಜುನ್:
2019ರಲ್ಲಿ ಅರ್ಜುನ್ ನಿರ್ದೇಶನ 'ಕಿಸ್' ಕನ್ನಡ ಸಿನಿ ರಸಿಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಚಿತ್ರದ ನಾಯಕ ವಿರಾಟ್ ಹಾಗೂ ನಟಿ ಶ್ರೀ ಲೀಲಾಗೆ ತುಂಬಾನೇ ಆಫರ್‌ಗಳು ಹರಿದು ಬರುತ್ತಿದೆ
"
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.