ಎಲ್ಲೆಡೆ ಸದ್ದು ಮಾಡುತ್ತಿರುವ ಕಾಸ್ಟಿಂಗ್ ಕೌಚ್ ಬಗ್ಗೆ ನಟಿ ಅದಾ ಶರ್ಮಾ ನೀಡಿದ ಹೇಳಿಕೆ ವೈರಲ್. ಅದಾ ನಿಜಕ್ಕೂ ಇಷ್ಟೊಂದು ಬೋಲ್ಡಾ?
ಪುನೀತ್ ರಾಜ್‌ಕುಮಾರ್‌ಗೆ ಜೋಡಿಯಾಗಿ ಮಿಂಚಿದ ನಟಿ ಅದಾ ಶರ್ಮಾ ಮೊದಲ ಬಾರಿಗೆ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. ನೀಡಿದ್ದು ಒಂದೇ ಹೇಳಿಕೆಯಾದರೂ ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚು ಹೆಚ್ಚಿಸುತ್ತಿದೆ....
ಅನೇಕ ಚಿತ್ರರಂಗದಿಂದ ನಟ-ನಟಿಯರು ತಾವು ಎದುರಿಸಿದಂತ ಕಾಸ್ಟಿಂಗ್ ಕೌಚ್ ಬಗ್ಗೆ ಇತ್ತೀಚಿನ ದಿನಗಳಲ್ಲಿ ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ನಟಿ ಅದಾ ಶರ್ಮಾ ಖಾಸಗಿ ಸಂದರ್ಶನವೊಂದರಲ್ಲಿ ಮಾತನಾಡುವಾಗ ಕಾಸ್ಟಿಂಗ್ ಕೌಚ್ ಪ್ರಶ್ನಗೆ ಉತ್ತರಿಸಿದ್ದಾರೆ.
ಕಾಸ್ಟಿಂಗ್ ಕೌಚ್ Exists:
ಕಾಸ್ಟಿಂಗ್ ಕೌಚ್ ಕೇವಲ ಸೌತ್ ಅಥವಾ ನಾರ್ಥ್ ಅಂತ ಸೀಮಿತವಾಗಿರುವುದಿಲ್ಲ. ವಿಶ್ವದ್ಯಾಂತ ಇದರ ಬಗ್ಗೆ ಜನರು ಮಾತನಾಡುತ್ತಿದ್ದಾರೆ. ಎಲ್ಲಾ ಸಿನಿ ಉದ್ಯಮದಲ್ಲೂ ಕಾಸ್ಟಿಂಗ್ ಕೌಚ್ ಇದೆ. ಇದಕ್ಕೆ ಸಾಕಷ್ಟು ಜನರು ಸಿಕ್ಕಿಕೊಂಡಿರುತ್ತಾರೆ. ಆದರೆ ಕೆಲವರು ಹೇಳಿಕೊಳ್ಳುವುದಿಲ್ಲ. ಆದರೆ ಏನು ಮಾಡಬೇಕು ಎಂಬುದು ನಿಮ್ಮ ಕೈಯಲಿದೆ. ಬೇಡವಾದರೆ ಅಲ್ಲಿಂದ ಹೊರಡಿ. ಬೇಕು ಎಂದರೆ ಅಲ್ಲಿಯೇ ಇದ್ದು, ಬಂದ ಸಂಕಷ್ಟಗಳನ್ನು ಜಾಣ್ಮೆಯಿಂದ, ಧೈರ್ಯವಾಗಿ ಎದುರಿಸುವುದ ಕಲೀರಿ,' ಎಂದು ಹೇಳಿದ್ದಾರೆ.
'ರಣವಿಕ್ರಮ'ನ ಜೋಡಿ:
2015ರಲ್ಲಿ ಪವನ್ ವಡೆಯರ್ ನಿರ್ದೇಶನ 'ರಣವಿಕ್ರಮ' ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ ಜೋಡಿಯಾಗಿ ಮಿಂಚಿದ್ದಾರೆ. ಇದು ಅದಾ ಮೊದಲ ಹಾಗೂ ಕೊನೆಯ ಕನ್ನಡ ಸಿನಿಮಾ ಆಗಿದ್ದು ಇದೀಗ ಬಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. ತಮಿಳು, ಐದು ತೆಲುಗು ಚಿತ್ರಗಳಲ್ಲಿಯೂ ಅದಾ ತಮ್ಮ ಪ್ರತಿಭೆ ತೋರಿದ್ದಾರೆ.
ನಟಿಯ ನ್ಯೂಸ್ ಪೇಪರ್ ಅವತಾರ ಟ್ರೋಲಿಗರಿಗೆ ಆಯ್ತು ಆಹಾರ
ವೆಬ್‌ಸೀರಿಸ್‌ನಲ್ಲಿ ಆದಾ:
'ಪುಕ್ಕಾರ್', 'Moh' ಹಾಗೂ 'ದಿ ಹಾಲಿಡೆ' ಹಿಂದಿ ವೆಬ್‌ಸೀರಿಸ್‌ನಲ್ಲಿ ಅಭಿನಯಿಸಿರುವ ಅದಾಗೆ ಖ್ಯಾತಿ ತಂದುಕೊಟ್ಟಿದೆ. ಲಾಕ್‌ಡೌನ್ ರಿಲೀಸ್ ಆದ ಕೂಡಲೆ ಅದಾ 'Man to Man'ಸಿನಿಮಾ ಚಿತ್ರೀಕರಣ ಶುರು ಮಾಡಲಿದ್ದಾರೆ. ಇದೊಂದು ರೋಮ್ಯಾಂಟಿಕ್ ಕಾಮಿಡಿ ಸಿನಿಮಾ ಆಗಿದ್ದು ಅದಾ ಬೆತ್ತಲಾಗಿ ಫೋಟೋಶೋಟ್ ಮಾಡಿಸಲಾಗಿತ್ತು.
ಮರ್ಚೆಂಟ್ ನೇವಿಯಲ್ಲಿ ಕ್ಯಾಪ್ಟನ್ ಆಗಿದ್ದ ಆದಾ ತಂದೆ, ಮೂಲತಃ ಮಧುರೈನವರು. ತಾಯಿ ಶಾಸ್ತ್ರೀಯ ನೃತ್ಯಗಾತಿ. ಇನ್ನೂ ಹತ್ತನೇ ತರಗತಿ ಮುಗಿಯುವುದರೊಳಗೆ ಆದಾ ನಟಿಯಾಗಬೇಕೆಂದು ಮುಂದಾಗಿದ್ದರು. ಆದರೆ, ಓದಲು ಪೋಷಕರು ಒತ್ತಾಯ ಮಾಡಿದ್ದರಿಂದ 12ನೇ ತರಗತಿ ತನಕ ಓದಿ, ತಮ್ಮ ನೆಚ್ಚಿನ ನಟನಾ ಕ್ಷೇತ್ರಕ್ಕೆ ಕಾಲಿಟ್ಟು, ಸೈ ಎನಿಸಿಕೊಂಡರು.
ಆಯುಷ್ಮಾನ್ ಖುರಾನ್‌ಗೂ ಕಾಸ್ಟಿಂಗ್ ಕೌಚ್ ಅನುಭವ:
ಬಾಲಿವುಡ್ ಮೋಸ್ಟ್ ಡಿಮ್ಯಾಂಡಿಂಗ್ ಹೀರೋ ಆಯುಷ್ಮಾನ್ ಇತ್ತೀಚಿಗೆ ಕಾಸ್ಟಿಂಗ್ ಕೌಚ್ ಅನುಭವವನ್ನು ಹೇಳಿಕೊಂಡಿದ್ದಾರೆ. ಚಿತ್ರರಂಗಕ್ಕೆ ಕಾಲಿಡಲು ಪರದಾಡುತ್ತಿರುವಾಗ ಆಯುಷ್ಮಾನ್‌ನನ್ನು ಆಡೀಶನ್‌ಗೆ ಕರೆದ ನಿರ್ದೇಶಕರೊಬ್ಬರು 'Show me your tool' ಎಂದು ಹೇಳಿದ್ದರಂತೆ. ಹೀಗಾಗಿ ಆಯುಷ್ಮಾನ್ ಕಾಸ್ಟಿಂಗ್ ಕೌಚ್ ಹೆಣ್ಣುಮಕ್ಕಳಿಗೆ ಮಾತ್ರವಲ್ಲ ಗಂಡಸರನ್ನೂ ಬಿಟ್ಟಿಲ್ಲ ಎಂಬ ಇನ್ನೊಂದು ಸತ್ಯ ಬಿಚ್ಚಿಟ್ಟು, ಇತ್ತೀಚೆಗೆ ಸುದ್ದಿಯಾಗಿದ್ದರು.
ಕಳೆದ ವರ್ಷ ಕೆಲವು ಬಾಲಿವುಡ್ ನಟಿಯರಿಂದ ಆರಂಭವಾದ #MeToo ಅಭಿಯಾನ, ಎಲ್ಲ ಚಿತ್ರೋದ್ಯಮಗಳಿಗೂ ಪಸರಿಸಿ, ಸ್ಯಾಂಡಲ್‌ವುಡ್‌ಗೂ ತಲುಪಿತ್ತು. ಕೆಲವು ದಿನಗಳ ಕಾಲ ಕೇವಲ ಇದರದ್ದೇ ಸುದ್ದಿಯಾಗಿತ್ತು. ನಟ ಅರ್ಜುನ್ ಸರ್ಜಾ ತಮ್ಮ ವಿರುದ್ಧ ದುರ್ನಡತೆ ತೋರಿದ್ದಾರೆಂದು, ಶೃುತಿ ಹರಿಹರನ್ ಮಾಡಿರುವ ಆರೋಪ ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡಿತ್ತು. ಆಗಲೇ ಕೆಲವು ಪರ, ವಿರೋಧ ಚರ್ಚೆಗಳೂ ನಡೆದಿತ್ತು.
ಚಿತ್ರದ ಪ್ರಮೋಶನ್ ಗೆ ಬೆತ್ತಲೆ ಪೋಸು ಕೊಟ್ಟ ಬಾಲಿವುಡ್ ನಟಿ!
ಒಟ್ಟಿನಲ್ಲಿ ನಟನಾ ಕ್ಷೇತ್ರಕ್ಕೆ ಕಾಲಿಡುವುದು ಎಂದರೆ ಸುಲಭವಲ್ಲ, ಎನ್ನುವುದು ಹಿಂದಿನಿಂದಲೂ ಕೇಳಿ ಬರುತ್ತಿರುವ ಮಾತು. ಆದರೆ, ಧೈರ್ಯವಿಲ್ಲದ ಹೆಣ್ಣು ಮಕ್ಕಳು ಈ ಬಗ್ಗೆ ಮಾತನಾಡಿದ್ದು ಕಡಿಮೆ. ಈಗೀಗ, ಬೋಲ್ಡ್ ಆಗಿ ಈ ಬಗ್ಗೆ ಮಾತನಾಡುತ್ತಿದ್ದಾರೆ. ಮಾತನಾಡುವವರಿಗೆ ಸೂಕ್ತ ಸಪೋರ್ಟ್ ಸಿಗುವುದು ಕಡಿಮೆ. ಒಟ್ಟಿನಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ಈ #MeToo ಸಮಸ್ಯೆ ಕಾಡುತ್ತಿದ್ದು, ಪ್ರತಿಯೊಂದೂ ಹೆಣ್ಣೂ ತನ್ನ ಮೇಲೆ ವಿಶ್ವಾಸ ಬೆಳೆಯಿಸಿಕೊಂಡು, ಇಂಥ ಸಂಕಟಗಳಿಂದ ಎದುರಿಸಲು ಯತ್ನಿಸಬೇಕು. ಎದುರಿಸುವ ಸ್ಥೈರ್ಯ ಬೆಳೆಯಿಸಿಕೊಂಡರೆ ಮಾತ್ರ ಲೈಂಗಿಕ ದೌರ್ಜನ್ಯ ಸಮಸ್ಯೆಯಿಂದ ಮುಕ್ತವಾಗಬಹುದು ಎಂದೆನಿಸುತ್ತೆ.