ರಾಯನ್ ರಾಜ್ ಸರ್ಜಾ Birthdayಗೆ ಚಿಕ್ಕಪ್ಪನ ಸ್ಪೆಷಲ್ ಗಿಫ್ಟ್‌!

By Suvarna News  |  First Published Oct 25, 2021, 4:12 PM IST

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ ಚಿಕ್ಕಪ್ಪ ಧ್ರುವ ಕೊಟ್ಟ ಸ್ಪೆಷಲ್ ಬರ್ತಡೇ ಗಿಫ್ಟ್.


ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ, ಕನ್ನಡಿಗರ ಮನೆ ಮಗಳು ಮೇಘನಾ ರಾಜ್ (Meghana Raj) ಆಕ್ಟೋಬರ್ 22ರಂದು ಪುತ್ರ ರಾಯನ್ ರಾಜ್ ಸರ್ಜಾ (Raayan Raj Sarja) ಮೊದಲ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಗಣ್ಯಾತಿ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಜ್ಯೂನಿಯರ್ ಚಿರುಗೆ (Chiru) ಆಶೀರ್ವಾದ ಮಾಡಿದ್ದಾರೆ. 

ರಾಯನ್ kingdom:ಹೇಗಿದೆ ರಾಯನ್ ರಾಜ್ ಸರ್ಜಾ ಬರ್ತಡೇ ಸೆಲೆಬ್ರೆಶನ್!

ವಿಶಾಖಪಟ್ಟಣಂನಲ್ಲಿ (Visakhapatnam)ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಧ್ರುವ ಸರ್ಜಾ (Dhruva Sarja) ರಾಯನ್ ಮೊದಲ ಹುಟ್ಟುಹಬ್ಬವನ್ನು ಮಿಸ್ ಮಾಡಿಕೊಂಡಿದ್ದಾರೆ. ಚಿತ್ರೀಕರಣಕ್ಕೆ ತೆರಳುವ ಮುನ್ನವೋ ಅಥವಾ ಬಂದ ನಂತರವೋ ಗೊತ್ತಿಲ್ಲ, ಧ್ರುವ ಪುತ್ರನ ಕೊರಳಿಗೆ ಚಿನ್ನದ ಚೈನ್ (Gold chain) ಮತ್ತು ಆಂಜನೇಯನ (Anjaneya) ಡಾಲರ್‌ ಹಾಕಿದ್ದಾರೆ. ರಾಯನ್ ಹುಟ್ಟುವ ಮುನ್ನವೇ ಗಿಫ್ಟ್ ಮಾಡಿದ ಬೆಳ್ಳಿ ತೊಟ್ಟಿಲಿನಲ್ಲಿ ಕಂದಮ್ಮನನ್ನು ಮಲಗಿಸಿ ಕೊರಳಿಗೆ ಚೇನ್ ಹಾಕಿ ಮುದ್ದಾಡುತ್ತಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 

Tap to resize

Latest Videos

ರಾಯನ್ ಹುಟ್ಟುದ ದಿನದಿಂದಲೂ ಸರ್ಜಾ ಮತ್ತು ರಾಜ್ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದ. ಮಗು ಹುಟ್ಟಿದ ದಿನವೇ ಧ್ರುವ ಆಸ್ಪತ್ರೆ ಎದುರು ಪಟಾಕಿ (Crackers) ಸಿಡಿಸಿ, ಅಲ್ಲಿದ್ದ ಪ್ರತಿಯೊಬ್ಬರಿಗೂ ಸ್ವೀಟ್ (Sweets) ಹಂಚಿ ಸಂಭ್ರಮಿಸಿದ್ದರು. ಹುಟ್ಟಿದ ಕೆಲವೇ ಕ್ಷಣಗಳಲ್ಲಿ ಮಗುವನ್ನು ಎತ್ತಿ ಮುದ್ದಾಡಿದ್ದಾರೆ. ಚೆನ್ನೈನಲ್ಲಿ (Chennai) ವಾಸಿಸುತ್ತಿರುವ ಅರ್ಜುನ್ ಸರ್ಜಾ ಕೂಡ ಸಿಹಿ ಸುದ್ದಿ ಕೇಳಿ, ಕುಟುಂಬ ಸಮೇತರಾಗಿ ಬೆಂಗಳೂರಿಗೆ (Bengaluru) ಬಂದು ಮಗುವನ್ನು ನೋಡಿದ್ದರು. ಆಸ್ಪತ್ರೆಯಲ್ಲಿರುವಾಗಲೇ ಮಗುವಿನ ಕೊರಳಿಗೆ ಅರ್ಜುನ್ ಸರ್ಜಾ (Arjun Sarja) ಚಿನ್ನದ ಸರ ಹಾಕಿದ್ದರು. 

ರಾಯನ್ ಹುಟ್ಟು ಹಬ್ಬವನ್ನು ತಾತ ಸುಂದರ್ ರಾಜ್ (Sundar Raj) ನಿವಾಸದಲ್ಲಿ ಆಚರಿಸಲಾಗಿತ್ತು. ರಾಯನ್ ಕಿಂಗ್‌ಡಮ್ (Raayan Kingdom) ಎಂದು ಹೆಸರಿಟ್ಟು, ಎಲ್ಲರನ್ನೂ ಬರ ಮಾಡಿಕೊಂಡಿದ್ದರು. ಬರ್ತಡೇಯಲ್ಲಿ ಭಾಗಿಯಾಗಿದ್ದ ಪ್ರತಿಯೊಬ್ಬರಿಗೂ ಹ್ಯಾಂಡ್‌ಮೇಡ್ ಸೋಪ್‌ಗಳನ್ನು (Handmade soap) ರಿಟರ್ನ್‌ ಗಿಫ್ಟ್ ಆಗಿ ನೀಡಲಾಗಿದೆ. ಮಕ್ಕಳಿಗೆ ಮನೆಯೊಳಗೆ ಆಟವಾಡಲು ಸೆಟ್‌ ಹಾಕಲಾಗಿತ್ತು. ಸುಧಾರಾಣಿ ಸೇರಿದಂತೆ ಚಿತ್ರರಂಗದ ಅನೇಕ ಹಿರಿಯ ಕಲಾವಿದರು ಬರ್ತಡೇಯಲ್ಲಿ ಭಾಗಿಯಾಗಿದ್ದರು. 

ಚಿರು ಹುಟ್ಟುಹಬ್ಬವೂ ಇದೇ ತಿಂಗಳಿತ್ತು. ತಾಯಿ ಮತ್ತು ತಮ್ಮ ಧ್ರುವ ಸರ್ಜಾ ಅನಾಥಾಶ್ರಮ ಮತ್ತು ವೃದ್ಧಾಶ್ರಮದಲ್ಲಿ ಆಚರಿಸಿದ್ದಾರೆ. ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಸಹಾಯವಾಗುವಂತೆ ಪುಸ್ತಕ ನೀಡಿದ್ದಾರೆ ಹಾಗೂ ಹಿರಿಯರಿಗೆ ಅನ್ನದಾನ ಮಾಡಿದ್ದಾರೆ. ಅಂದೇ ಮೇಘನಾ ರಾಜ್ ಚಿತ್ರರಂಗಕ್ಕೆ ಕಮ್‌ಬ್ಯಾಕ್ ಮಾಡುತ್ತಿರುವ ವಿಚಾರ ಕೂಡ  ಹಂಚಿಕೊಂಡರು.

click me!