Gajanana and Gang Trailer: ಫೆಬ್ರವರಿ 4ರಂದು‌ ಶ್ರೀ- ಅದಿತಿ ಪ್ರಭುದೇವ ಚಿತ್ರ ರಿಲೀಸ್

Kannadaprabha News   | Asianet News
Published : Jan 03, 2022, 10:36 AM ISTUpdated : Jan 03, 2022, 10:45 AM IST
Gajanana and Gang Trailer: ಫೆಬ್ರವರಿ 4ರಂದು‌ ಶ್ರೀ- ಅದಿತಿ ಪ್ರಭುದೇವ ಚಿತ್ರ ರಿಲೀಸ್

ಸಾರಾಂಶ

ಶ್ರೀ ಮಹದೇವ್‌ ಹಾಗೂ ಅದಿತಿ ಪ್ರಭುದೇವ ನಟನೆಯ ‘ಗಜಾನನ ಗ್ಯಾಂಗ್‌’ ಚಿತ್ರದ ಟ್ರೇಲರ್‌ ಬಿಡುಗಡೆ ಇತ್ತೀಚೆಗೆ ನಡೆಯಿತು. ನಟಿ ಮೇಘನಾ ರಾಜ್‌ ಟ್ರೇಲರ್‌ ಬಿಡುಗಡೆ ಮಾಡಿದರು. ಈ ಚಿತ್ರವನ್ನು ನಿರ್ದೇಶನ ಮಾಡಿರುವುದು ‘ನಮ್ ಗಣಿ ಬಿಕಾಂ ಪಾಸ್‌’ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ಅಭಿಷೇಕ್‌ ಶೆಟ್ಟಿ.  

ಶ್ರೀ ಮಹದೇವ್‌ (Shri Mahadev) ಹಾಗೂ ಅದಿತಿ ಪ್ರಭುದೇವ (Aditi Prabhudeva) ನಟನೆಯ ‘ಗಜಾನನ ಗ್ಯಾಂಗ್‌’ (Gajanana and Gang) ಚಿತ್ರದ ಟ್ರೇಲರ್‌ (Trailer) ಬಿಡುಗಡೆ ಇತ್ತೀಚೆಗೆ ನಡೆಯಿತು. ನಟಿ ಮೇಘನಾ ರಾಜ್‌ (Meghana Raj) ಟ್ರೇಲರ್‌ ಬಿಡುಗಡೆ ಮಾಡಿದರು. ಈ ಚಿತ್ರವನ್ನು ನಿರ್ದೇಶನ ಮಾಡಿರುವುದು ‘ನಮ್ ಗಣಿ ಬಿಕಾಂ ಪಾಸ್‌’ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ಅಭಿಷೇಕ್‌ ಶೆಟ್ಟಿ (Abhishek Shetty).‘ಅದಿತಿ ಪ್ರಭುದೇವ ನನ್ನ ಇಷ್ಟದ ನಟಿ. ಮಹದೇವ್‌ ಅವರ ಜತೆಗೆ ‘ಇರುವುದೆಲ್ಲವ ಬಿಟ್ಟು’ ಚಿತ್ರದಲ್ಲಿ ನಟಿಸಿದ್ದೇನೆ. ಆ ಸ್ನೇಹದ ಕಾರಣಕ್ಕೆ ನಾನೂ ಟ್ರೇಲರ್‌ ಬಿಡುಗಡೆ ಮಾಡಲು ಬಂದಿದ್ದೆ. ಟ್ರೇಲರ್‌ ತುಂಬಾ ಚೆನ್ನಾಗಿದೆ’ ಎಂದು ಮೇಘನಾ ರಾಜ್‌ ಹಾರೈಸಿದರು.

ನಿರ್ದೇಶಕ ಕಂ ನಟ ಅಭಿಷೇಕ್‌ ಶೆಟ್ಟಿಮಾತನಾಡಿ, ‘ಇದೊಂದು ಕಾಲೇಜು ಹುಡುಗರ ಕತೆ. ನಾಯಕ ಮಹದೇವ್‌ ಅವರಿಗೆ ಇಲ್ಲಿ ಎರಡು ರೀತಿಯ ಪಾತ್ರವಿದೆ. ನಿರ್ದೇಶನದ ಜತೆಗೆ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದೇನೆ. ಯು ಎಸ್‌ ನಾಗೇಶ್‌ ಕುಮಾರ್‌ ಈ ಚಿತ್ರವನ್ನು ನಿರ್ಮಿಸಿದ್ದಾರೆ’ ಎಂದರು. ಪ್ರದ್ಯುತನ್‌ ಸಂಗೀತ, ಉದಯ ಲೀಲಾ ಕ್ಯಾಮೆರಾ ಚಿತ್ರಕ್ಕಿದೆ. ಬಿಗ್‌ಬಾಸ್‌ ಖ್ಯಾತಿಯ ರಘು ಗೌಡ, ಚೇತನ್‌ ದುರ್ಗ, ನಾಟ್ಯರಂಗ, ಅಶ್ವಿನ್‌ ಹಾಸನ್‌ ಹಾಗೂ ಶಮಂತ್‌ ಅಲಿಯಾಸ್‌ ಬ್ರೋ ಗೌಡ ಚಿತ್ರದಲ್ಲಿ ನಟಿಸಿದ್ದಾರೆ. ಇನ್ನು ಚಿತ್ರವನ್ನು ಫೆ.4ರಂದು ತೆರೆಗೆ ತರಲು ಚಿತ್ರತಂಡ ತಯಾರಿ ಮಾಡಿಕೊಳ್ಳುತ್ತಿದೆ.

Lets Break Up: ರಚನಾ, ಶ್ರೀ ಮಹದೇವ್‌ ನಟನೆಯ ಫಸ್ಟ್‌ಲುಕ್ ರಿಲೀಸ್

ಈ ಕಾರ್ಯಕ್ರಮಕ್ಕೆ ಬರಲು ಮೊದಲ ಕಾರಣ ಈ ಚಿತ್ರದ ನಾಯಕ ಶ್ರೀ ಮಹದೇವ್' ಇರುವುದೆಲ್ಲವ ಬಿಟ್ಟು' ಸಿನಿಮಾದಲ್ಲಿ ನನ್ನ​ ಜೊತೆಯಾಗಿ ನಟಿಸಿದ್ದರು. ಆ ಸ್ನೇಹದ ಕಾರಣಕ್ಕಾಗಿ. ಹಾಗೂ ಅದಿತಿ ಅಭಿನಯದ 'ರಂಗನಾಯಕಿ'  (Ranganayaki) ಚಿತ್ರವನ್ನು ನನ್ನ ತಾಯಿ ಪ್ರಮೀಳಾ ಜೋಷಾಯ್ ತುಂಬ ಮೆಚ್ಚಿಕೊಂಡಿದ್ದು, ಆ ಚಿತ್ರದ ಬಗ್ಗೆ ಅಮ್ಮ ನನ್ನ ಜೊತೆ ಅನೇಕ ಬಾರಿ ಮಾತನಾಡಿದ್ದಾರೆ. ಅದನ್ನು ಕೇಳಿ ಕೇಳಿ ನಾನು ಆ ಚಿತ್ರವನ್ನು ನೋಡದೇ ಇದ್ದರೂ ಕೂಡ ಅವರಿಗೆ ಅಭಿಮಾನಿಯಾಗಿದ್ದೇನೆ. ಆದಿತಿ ನನ್ನ ಫೇವರಿಟ್​ ಹೀರೋಯಿನ್​ಗಳಲ್ಲಿ ಒಬ್ಬರು. ಈ ಎಲ್ಲ ಕಾರಣಗಳಿಂದಾಗಿ ಚಿತ್ರದ ಟ್ರೇಲರ್​ ರಿಲೀಸ್​ಗೆ ಬಂದಿರುವುದಾಗಿ ಮೇಘನಾ ಹೇಳಿದರು. 

ಬಿಡುಗಡೆಯಾದ ಟ್ರೇಲರ್‌ನಲ್ಲಿ 'ಗಜಾನನ ಅಂಡ್ ಗ್ಯಾಂಗ್'ನ ಕಾಲೇಜ್ ಕಥೆಯಿದೆ. ಕಾಲೇಜಿನ ಹಿರೋ, ಹಿರೋಯಿನ್, ಗೆಳೆಯರು ಹಾಗೂ ವಿಲನ್‌ ಸುತ್ತ ಚಿತ್ರದ ಕಥೆ ಸಾಗುತ್ತದೆ. ಹಾಸ್ಯಮಿಶ್ರಿತ ಸಂಭಾಷಣೆಗಳು ನೋಡುಗರಿಗೆ ಕಚಗುಳಿಯನ್ನಿಡುತ್ತದೆ. ಹಾಗೆ ಸೆಂಟಿಮೆಂಟ್ ದೃಶ್ಯಗಳು ಮನಕಲುಕುತ್ತವೆ. ಈ ಸಿನಿಮಾದ ಶೀರ್ಷಿಕೆಯೇ ಹೇಳುವಂತೆ ಇದರಲ್ಲೊಂದು ಫ್ರೆಂಡ್​ಶಿಪ್​ ಕಥೆಯಿದೆ. ನೀನು ಯಾವತ್ತು ಇವರ ಸಹವಾಸ ಬಿಡುತ್ತೀಯೋ ಅವತ್ತು ಉದ್ಧಾರ ಆಗುತ್ತೀಯ ಎಂದು ಒಂದು ದೃಶ್ಯದಲ್ಲಿ ಹಾಗೆ ಮತ್ತೊಂದು ಸೀನ್‌ನಲ್ಲಿ 'ಎಂತಹ ಪರಿಸ್ಥಿತಿಯಲ್ಲೂ ಏನೇ ಆದರೂ ನಿನ್ನ ಫ್ರೆಂಡ್ಸ್​ ಬಿಟ್ಟುಕೊಡಬೇಡ' ಎಂಬ ಡೈಲಾಗ್ ಶ್ರೀಗೆ ಅದಿತಿ​ ಹೇಳುವುದು ಸಸ್ಪೆನ್ಸ್ ಆಗಿ ಟ್ರೇಲರ್‌ನಲ್ಲಿ ಮೂಡಿಬಂದಿದೆ.

Gajanana and Gang: ಶ್ರೀ ಮಹದೇವ್-ಅದಿತಿ ಪ್ರಭುದೇವ ಚಿತ್ರದ ಫಸ್ಟ್‌ಲುಕ್ ರಿಲೀಸ್

ಪಕ್ಕಾ ಹಾಸ್ಯ ಪ್ರಧಾನ ಮತ್ತು ಯುವಪೀಳಿಗೆ ಸುತ್ತ ಗಿರಕಿ ಹೊಡೆಯುವ ಕಥೆ 'ಗಜಾನನ ಅಂಡ್ ಗ್ಯಾಂಗ್' ಚಿತ್ರದಲ್ಲಿದ್ದು, ಚಿತ್ರದ ನಿರ್ದೇಶಕ ಅಭಿಷೇಕ್ ಚಿತ್ರದ ಪ್ರಮುಖ ಘಟ್ಟದಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ರಿವರ್ಸ್ ಸ್ಕ್ರೀನ್ ಪ್ಲೇ ಇರುತ್ತದೆ. ಕ್ಯೂಟ್, ಚಾಕಲೇಟ್ ಹೀರೋ, ಲವ್ವರ್ ಬಾಯ್ ಇಮೇಜ್‌ಗಿಂತ ವಿಭಿನ್ನವಾದ ಪಾತ್ರವಿದು. ನಾನಲ್ಲದಿರುವ ಪಾತ್ರವಿದು, ಎರಡು ಕಾಲಘಟ್ಟದಲ್ಲಿ ಕಥೆ ನಡೆಯುತ್ತದೆ. ನಾನು ಎರಡು ಶೇಡ್‌ನಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಗಜ ಎಂಬುದು ನನ್ನ ಪಾತ್ರದ ಹೆಸರು ಎಂದು ಶ್ರೀ ಮಹದೇವ್ ಹೇಳಿದ್ದಾರೆ. ವಿಜೆಟ್ ಚಂದ್ರ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?