ಪುನೀತ್ ರಾಜ್‌ಕುಮಾರ್ 4ನೇ ಪುಣ್ಯಸ್ಮರಣೆ, ಹಳ್ಳಿಹಳ್ಳಿಯಲ್ಲೂ ಗಲ್ಲಿಗಲ್ಲಿಯಲ್ಲೂ ಅಪ್ಪು ಗುಣಗಾನ!

Published : Oct 29, 2025, 09:58 AM ISTUpdated : Oct 29, 2025, 10:31 AM IST
Puneeth Rajkumar 4th Commemoration

ಸಾರಾಂಶ

ಪುನೀತ್ ರಾಜ್‌ಕುಮಾರ್ ಪುಣ್ಯಸ್ಮರಣೆಯಲ್ಲಿ ಚಿತ್ರರಂಗದ ಹಲವು ತಾರೆಯರು ಅಪ್ಪು ಆಪ್ತರು ಭಾಗಿ ಆಗಲಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಅನ್ನದಾನ, ರಕ್ತ ದಾನ ಹಾಗೂ ನೇತ್ರದಾನ ಶಿಬಿರ ಆಯೋಜನೆ ಮಾಡಲಾಗಿದೆ. ಈ ವರ್ಷ ಕೂಡ ನಿಗದಿತ ಸ್ಥಳಗಳಲ್ಲಿ ಅಪ್ಪು ಪ್ರತಿಮೆಗೆ ಪೂಜೆ ಮಾಡಲಾಗುವುದು.

ಪುನೀತ್ ರಾಜ್‌ಕುಮಾರ್ 4ನೇ ಪುಣ್ಯ ಸ್ಮರಣೆ

ಇಂದು ಕರ್ನಾಟಕ ರತ್ನ, ಅಪ್ಪು ಖ್ಯಾತಿಯ ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Puneeth Rajkumar) ಅವರ 4ನೇ ವರ್ಷದ ಪುಣ್ಯಸ್ಮರಣೆ. ದೊಡ್ಮನೆಯ ರಾಜಕುಮಾರನ ನೆನಪಲ್ಲಿಂದು ಕರುನಾಡು ಅಗಲಿರುವ ನೋವಿನಲ್ಲೂ ಸವಿನೆನಪಿನ ಮೂಲಕ ಸಂಭ್ರಮಿಸುತ್ತಿದೆ. ರಾಜರತ್ನನ ಪುಣ್ಯಸ್ಮರಣೆಗೆ ಅಭಿಮಾನಿಗಳ ದಂಡು ಕಂಠೀರವ ಸ್ಟುಡಿಯೋಗೆ ಆಗಮಿಸಲಿದೆ. ಅಶ್ವಿನಿ ಪುನೀತ್ ರಾಜಕುಮಾರ್, ರಾಘಣ್ಣದಂಪತಿ ಸೇರಿದಂತೆ ದೊಡ್ಮನೆಯ ಕುಟುಂಬದಿಂದ 9.30ಕ್ಕೆ ಅಪ್ಪು ಸಮಾಧಿಗೆ ಪೂಜೆ ನೆರವೇರಲಿದೆ.

ಅನ್ನದಾನ, ರಕ್ತ ದಾನ ಹಾಗೂ ನೇತ್ರದಾನ ಶಿಬಿರ

ಪುನೀತ್ ರಾಜ್‌ಕುಮಾರ್ ಪುಣ್ಯಸ್ಮರಣೆಯಲ್ಲಿ ಚಿತ್ರರಂಗದ ಹಲವು ತಾರೆಯರು ಅಪ್ಪು ಆಪ್ತರು ಭಾಗಿ ಆಗಲಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಅನ್ನದಾನ, ರಕ್ತ ದಾನ ಹಾಗೂ ನೇತ್ರದಾನ ಶಿಬಿರ ಆಯೋಜನೆ ಮಾಡಲಾಗಿದೆ. ಈ ವರ್ಷ ಕೂಡ ನಿಗದಿತ ಸ್ಥಳಗಳಲ್ಲಿ ಅಪ್ಪು ಪ್ರತಿಮೆಗೆ ಪೂಜೆ ಮಾಡಲಾಗುವುದು, ಪ್ರಸಾದ ಹಂಚಲಾಗುವುದು ಎನ್ನಲಾಗಿದೆ. ಪುನೀತ್ ರಾಜ್‌ಕುಮಾರ್ ನಮ್ಮನ್ನಗಲಿ ಬರೋಬ್ಬರಿ 4 ವರ್ಷಗಳು ಕಳೆದುಹೋಗಿವೆ ಎಂದರೆ ನಂಬಲು ಅಸಾಧ್ಯ. ಆದರೆ, ಅಪ್ಪು ನೆನಪು ಕನ್ನಡಿಗರಲ್ಲಿ ಶಾಶ್ವತವಾಗಿ ಎಂದೆಂದಿಗೂ ಇರಲಿದೆ.

ಬಾಲನಟರಾಗಿ ಚಿತ್ರರಂಗ ಪ್ರವೇಶ

ಡಾ ರಾಜ್‌ಕುಮಾರ್ ಕಿರಿಯ ಮಗ ಪುನೀತ್ ರಾಜ್‌ಕುಮಾರ್ ಅವರು ಬಾಲನಟರಾಗಿ ಚಿತ್ರರಂಗ ಪ್ರವೇಶಿಸಿ, ಬಳಿಕ ನಾಯಕನಟರಾಗಿ ಮಿಂಚಿದವರು. ಅಪ್ಪು ಹೆಸರಿನಿಂದಲೂ ಕನ್ನಡನಾಡಿನಲ್ಲಿ ಪುನೀತ್ ಪರಿಚಿತರು. 25ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಿ, ಸಾಕಷ್ಟು ಹಿಟ್ ಸಿನಿಮಾಗಳನ್ನು ಕನ್ನಡಗರಿಗೆ ನೀಡಿ ತಮ್ಮ 46ನೆಯ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ ಪುನೀತ್ ರಾಜ್‌ಕುಮಾರ್. ಆದರೆ, ತಮ್ಮ ನೆನಪನ್ನು ಕರ್ನಾಟಕದ ಜನತೆಗೆ ಶಾಶ್ವತವಾಗಿ ಬಿಟ್ಟು ಹೋಗಿದ್ದಾರೆ.

ಅಪ್ಪು ಸಿನಿಮಾದ ಮೂಲಕ ನಾಯಕನಾರಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟ ಪುನೀತ್ ರಾಜ್‌ಕುಮಾರ್ ಅವರು ಆ ಬಳಿಕ ಅಭಿ, ಆಕಾಶ್ ಪೃಥ್ವಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ಪ್ರೀತಿ ಸಂಪಾದಿಸಿದ್ದಾರೆ. ಕನ್ನಡದ ಮೇರುನಟ ಡಾ ರಾಜ್‌ಕುಮಾರ್ ಅವರ ಪುತ್ರನಾಗಿ ಆ ಕುಟುಂಬದ ಗೌರವಕ್ಕೆ ಚ್ಯುತಿ ಬರದಂತೆ ನಡೆದುಕೊಳ್ಳಬೇಕಾದ ಜವಾಬ್ದಾರಿ ಪುನೀತ್ ಅವರ ಮೇಲೆ ಬೆಟ್ಟದಷ್ಟಿತ್ತು. ಅದನ್ನು ಅವರು ಸಮರ್ಥವಾಗಿ ನಿಭಾಯಿಸಿದ್ದಾರೆ ಎನ್ನಬಹುದು. ಇಂದು ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ, ನೆನಪಿನ ಮೂಲಕ ನಿರಂತರವಾಗಿ ಇದ್ದಾರೆ, ಇರಲಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?