
ನವೆಂಬರ್ (November) ತಿಂಗಳು ಕನ್ನಡ ಚಿತ್ರರಂಗಕ್ಕೆ (Sandalwood) ಹಬ್ಬವಿದ್ದಂತೆ. ಸುಮಾರು 10 ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿದೆ. ಇದರ ಪೈಕಿ ನೆನಪಿರಲಿ ಪ್ರೇಮ್ (Prem Nenapirali) ನಟನೆಯ ಪೇಮಂ ಪೂಜ್ಯಂ (Premam Poojyam) ಸಿನಿಮಾ ಕೂಡ ಒಂದು. ಈಗಾಗಲೇ ಹಾಡುಗಳು ಮತ್ತು ಪೋಸ್ಟರ್ ಮೂಲಕ ಕನ್ನಡಿಗರ ಗಮನ ಸೆಳೆದಿರುವ ಈ ಚಿತ್ರ ಇದೇ ನವೆಂಬರ್ 12ರಂದು ಬಿಡುಗಡೆ ಆಗುತ್ತಿದೆ. ಧಾರವಾಹಿ ಮೂಲಕ ಗಮನ ಸೆಳೆದಿರುವ ಬೃಂದಾ ಆಚಾರ್ಯ (Brunda Acharya) ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ.
'ಚಿತ್ರದಲ್ಲಿ ನನ್ನ ಪಾತ್ರಕ್ಕೆ ಎರಡು ಶೇಡ್ ಇದೆ. ನಿರ್ದೇಶಕರು (Director) ಹೇಳಿದ ಪ್ರಕಾರ ನಾನು ಒಂದು ಶೇಡ್‌ಗೆ ತೂಕ ಹೆಚ್ಚಿಸಿಕೊಳ್ಳಬೇಕು ಮತ್ತೊಂದು ಶೇಡ್‌ಗೆ ತೂಕ ಇಳಿಸಿಕೊಳ್ಳಬೇಕು. ಪಾತ್ರದ ಬಗ್ಗೆ ಹೆಚ್ಚಾಗಿ ರಿವೀಲ್ ಮಾಡೋಕೆ ಆಗಲ್ಲ ಆದರೆ ಇದು ಸುಮಾರು 20 ವರ್ಷಗಳ ಜರ್ನಿ ಅಂತೆ. ಈ ಚಿತ್ರದಲ್ಲಿ ನನ್ನ ಡೆಬ್ಯೂ (Debut) ಆಗಿರುವುದಕ್ಕೆ ನನಗೆ ಖುಷಿಯಾಗಿದೆ.' ಎಂದು ಖಾಸಗಿ ಸಂದರ್ಶನದಲ್ಲಿ ಮಾತನಾಡಿರುವ ಬೃಂದಾ ವಿದೇಶದಲ್ಲಿ (Vietnam) ಚಿತ್ರೀಕರಣ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
'ಪ್ರೇಮ್ ಅವರು ನಿಜಕ್ಕೂ ಜೆಂಟಲ್‌ಮ್ಯಾನ್ (Gentalman) ತುಂಬಾನೇ ಸಪೋರ್ಟ್ ಮಾಡುತ್ತಾರೆ. ಅವರು ಟೆನ್ಶನ್ ಮಾಡಿಕೊಳ್ಳುವುದಿಲ್ಲ ತುಂಬಾನೇ ಕೂಲ್ (Cool) ಆಗಿರುವ ವ್ಯಕ್ತಿ. ಕ್ಯಾಮೆರಾ ಮುಂದೆ ಕ್ಯಾಮೆರಾ (Camera) ಹಿಂದೆ ಅವರ ಬಗ್ಗೆ ನಾನು ತುಂಬಾನೇ ಕಲಿತಿರುವೆ. ನನ್ನ ಭಾಗ ಚಿತ್ರೀಕರಣ ಇಲ್ಲದಿದ್ದರೂ ನಾನು ಸೆಟ್‌ನಲ್ಲಿರುತ್ತಿದ್ದೆ. ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಫ್ಯಾಮಿಲಿಯಿಂದ ನಾನು ಬಂದಿರುವುದು. ನನ್ನ ಪೋಷಕರಿಬ್ಬರು ಟೀಚರ್‌ಗಳು (Teacher). ಬಾಲ್ಯದಿಂದಲೂ ನಾನು ಆರ್ಟ್ಸ್ ಕಡೆ ಹೆಚ್ಚಿನ ಗಮನ ಕೊಡುತ್ತಿದ್ದೆ. ಇಂಜಿನಿಯರಿಂಗ್ (Engineering) ಮುಗಿಸಿದ ನಂತರ ನಾನು ಎಲ್ಲರಂತೆ ಕಾರ್ಪೋರೇಟ್ ಕೆಲಸ ಮಾಡಿರುವೆ. ಆದರೂ ಇರಲಿ ಒಂದು ಲಕ್ ಟ್ರೈ ಮಾಡೋಣ ಎಂದು ಧಾರವಾಹಿ ಆಡಿಷನ್‌ನಲ್ಲಿ (Audition) ಭಾಗಿಯಾಗಿದ್ದೆ' ಎಂದು ಬೃಂದಾ ಮಾತನಾಡಿದ್ದಾರೆ.
'ಕಾರ್ಪೋರೇಟ್ ಕೆಲಸ (Corporate work) ಮಾಡುತ್ತಲೇ ನಾನು ಮಹಾಕಾಳಿ (Mahakali) ಧಾರಾವಾಹಿಯಲ್ಲಿ ನಟಿಸಿದೆ. ಆನಂತರ ನಮ್ಮ ನಿರ್ದೇಶಕರು ಮತ್ತೊಂದು ಧಾರವಾಹಿ ಶನಿಗೆ (Shani) ಆಫರ್ ನೀಡಿದ್ದರು. ಇದು ಪ್ರಮುಖ ಪಾತ್ರವಾಗಿತ್ತು. ಸಬ್ಯಾಟಿಕಲ್ ರಜೆ ತೆಗೆದುಕೊಂಡು ಚಿತ್ರೀಕರಣ ಮುಗಿಸಿ ಮತ್ತೆ ಕಾರ್ಪೋರೇಟ್ ಕೆಲಸ ಶುರು ಮಾಡಿದೆ. ಈಗ ಪ್ರೇಮಂ ಪೂಜ್ಯಂ ಸಿನಿಮಾ ನನ್ನ ಜರ್ನಿಗೆ ದೊಡ್ಡ ತಿರುವು ನೀಡಲಿದೆ' ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.