ಬರೋಬ್ಬರಿ 10ಕೆಜಿ ತೂಕ ಇಳಿಸಿಕೊಂಡ 'ಭೂಪತಿ' ಚಿತ್ರದ ನಟಿ; ಹೇಗಿದ್ದಾರೆ ನೋಡಿ!

Suvarna News   | Asianet News
Published : Jul 09, 2020, 01:51 PM ISTUpdated : Jul 09, 2020, 01:55 PM IST
ಬರೋಬ್ಬರಿ 10ಕೆಜಿ ತೂಕ ಇಳಿಸಿಕೊಂಡ 'ಭೂಪತಿ' ಚಿತ್ರದ ನಟಿ; ಹೇಗಿದ್ದಾರೆ ನೋಡಿ!

ಸಾರಾಂಶ

 ಒಂದು ವರ್ಷದಲ್ಲಿ 10 ಕೆಜಿ ತೂಕ ಇಳಿಸಿಕೊಂಡ ನಟಿ ಶೆರಿನ್ ಶೃಂಗಾರ್‌, ಅಭಿಮಾನಿಗಳಿಗೂ ಫಿಟ್ ಆ್ಯಂಡ್ ಫೈನ್ ಈಗರಿಲು ಸಲಹೆ ನೀಡಿದ್ದಾರೆ...

ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಜೋಡಿಯಾಗಿ 'ಭೂಪತಿ' ಚಿತ್ರದಲ್ಲಿ ಮಿಂಚಿದ ನಟಿ ಶೆರಿನ್ ಶೃಂಗಾರ್ ಈಗ ಸೋಷಿಯಲ್ ಮೀಡಿಯಾ ಸೆನ್ಸೇಶನ್ ನಟಿಯಾಗಿದ್ದಾರೆ. ಅದೂ ತೂಕ ಇಳಿಸಿಕೊಂಡು, ಫಿಟ್‌ನೆಸ್ ಟ್ರೈನರ್ ಆಗಿ...
 
10 ಕೆಜಿ ತೂಕ ಇಳಿಸಿಕೊಂಡ ಶೆರಿನ್:
ಒಂದು ವರ್ಷ ಅವಧಿಯಲ್ಲಿ ಭೂಪತಿ ಚಿತ್ರದ ನಟಿ ಸುಮಾರು 10 ಕೆಜಿ ತೂಕ ಇಳಿಸಿಕೊಂಡಿದ್ದಾರೆ  ಶೆರಿನ್ . ಈ ಹಿಂದೆ ದಪ್ಪಗಿದ್ದ ಪೋಟೋ ಮತ್ತು ಈಗ ಸಣ್ಣಗಾಗಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. 

'ಒಂದು ವರ್ಷ, 10 ಕೆಜಿ ಇಳಿಸಿಕೊಂಡ ನಂತರ ಕಾಣಿಸುತ್ತಿರುವುದು ಹೀಗೆ. ಈ ಹಿಂದೆ ನಾನು ಕಾಣಿಸುತ್ತಿದ್ದ ರೀತಿಯ ಬಗ್ಗೆಯೂ ನನಗೆ ಖುಷಿಯಿದೆ. ತೂಕ ಇಳಿಸಿಕೊಳ್ಳುವುದು ತುಂಬಾನೇ ಸುಲಭ. ಆದರೆ ಜನರು ಮಾತನಾಡುವುದನ್ನು ನಿಲ್ಲಿಸಲು ಸುಲಭವಲ್ಲ. ನಾವು ಒಬ್ಬರನ್ನು ಖುಷಿ ಪಡಿಸಬಹುದು, ಇನ್ನೊಬ್ಬರ ಮನಸ್ಸಿಗೆ ನೋವಾಗುವಂತೆಯೂ ಮಾತನಾಡಬಹುದು, ಚಿಂತಿಸಿ'  ಎಂದು ಬರೆದುಕೊಂಡಿದ್ದಾರೆ.

Aunty ಎಂದವನ ಮೂಳೆ ಪುಡಿ ಮಾಡಿದ 'ಭೂಪತಿ ಚಿತ್ರದ ನಾಯಕಿ...

ಫೋಟೋ ಶೇರ್ ಆದ ಕೆಲವೇ ನಿಮಿಷಗಳಲ್ಲಿ ವೈರಲ್ ಆಗಿ 1 ಲಕ್ಷ 60 ಸಾವಿರಕ್ಕೂ ಹೆಚ್ಚು ಲೈಕ್ಸ್ ಪಡೆದುಕೊಂಡಿದೆ. ಚಿತ್ರರಂಗದ ಆಪ್ತರು ಶೆರಿನ್ ಟ್ರಾನ್ಸಫಾರ್ಮೇಶನ್‌ ಬಗ್ಗೆ ಕಾಮೆಂಟ್ ಮಾಡಿದ್ದಾರೆ ಫ್ಯಾನ್ಸ್.

 

ಟ್ರೋಲಿಗರಿಗೆ ಕ್ಲಾಸ್:
ಈ ಹಿಂದೆ ಶೆರಿನ್ ದಪ್ಪವಿರುವ ಫೋಟೋಗಳನ್ನು ಟ್ರೋಲಿಗರು ಶೇರ್ ಮಾಡಿಕೊಂಡು 'ಆಂಟಿ' ಎಂದು ಗೇಲಿ ಮಾಡುತ್ತಿದ್ದರು. ಇನ್‌ಸ್ಟಾಗ್ರಾಂನಲ್ಲಿ ಸಕ್ರಿಯವಾಗಿರುವ ಶೆರಿನ್ ನೆಟ್ಟಿಗರನ್ನು ತರಾಟೆಗೆ ತೆಗೆದುಕೊಂಡಿದ್ದರು. 'ನಾವು ಹೇಗೆ ಕಾಣಿಸುತ್ತೀವಿ ಎಂದು ಜನರು ಬೇಗ ಜಡ್ಜ್‌ ಮಾಡುತ್ತಾರೆ. ಇಂಥ ಕೆಟ್ಟ ದೃಷ್ಟಿಯಿಂದ ನೋಡುವವರು ಇರುವ ಜಗತ್ತಿನಲ್ಲಿ ನಾವು ಬದುಕಬೇಕು ನೋಡಿ. ನಾವು ಹೇಗಿದ್ದೇವೋ ಹಾಗೆಯೇ ಮೊದಲನ್ನು ನಮ್ಮನ್ನು ನಾವು ಒಪ್ಪಿಕೊಂಡು ಬಿಡಬೇಕು. ನಮ್ಮನ್ನು ನಾವು ಪ್ರೀತಿಸಬೇಕು,' ಎಂದು ರಿಪ್ಲೈ ಮಾಡಿದ್ದರು.

ಟಿಪ್ಸ್‌:
ಶೆರಿನ್ ಫೋಟೋ ಶೇರ್ ಮಾಡಿದ ನಂತರ ಅನೇಕರು ತೂಕ ಇಳಿಸಿಕೊಳ್ಳಲು ಟಿಪ್ಸ್‌ ಕೇಳುತ್ತಿದ್ದಾರೆ. ಈ ಬಗ್ಗೆ ಮಾತನಾಡಲು ಶೆರಿನ್ IGTV ವಿಡಿಯೋ ಮೂಲಕ ಟಿಪ್ಸ್‌  ಶೇರ್ ಮಾಡಿಕೊಂಡಿದ್ದಾರೆ. 'ನಾನು ತೂಕ ಇಳಿಸಿಕೊಳ್ಳಲು ಮಾಡಿದ ಕಸರತ್ತು, ಡಯಟ್ ನಿಮಗೆ ವರ್ಕ್ ಆಗದೇ ಇರಬಹುದು. ಈ ಕಾರಣಕ್ಕೆ ನೀವು ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಆ ನಂತರ ಡಯಟ್ ಶುರು ಮಾಡಬೇಕು,' ಎಂದು ವೀಡಿಯೋ ಪ್ರಾರಂಭದಲ್ಲೇ ಮಾತನಾಡಿದ್ದಾರೆ.

ವಿಪರೀತ ದಪ್ಪಗಿದ್ದು, ಬಾಡಿ ಶೇಮಿಂಗ್ ಮಾಡಿಸಿಕೊಂಡ ಅನೇಕ ಸೆಲೆಬ್ರಿಟಿಗಳು ಕಷ್ಟಪಟ್ಟು ತಮ್ಮ ತೂಕವನ್ನು ಗಣನೀಯವಾಗಿ ಇಳಿಸಕೊಂಡ ಸಾಕಷ್ಟು ಉದಾರಣೆಗಳಿವೆ. ಇದರಲ್ಲಿಯೂ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಮೂಡಿ ಬರುವ ಕಾಮೆಂಟ್ಸ್‌ಗೆ ಹೆದರಿ ಅನೇಕರು ತೂಕು ಇಳಿಸಿಕೊಳ್ಳಲು ದೃಢ ನಿರ್ಧಾರ ತೆಗೆದುಕೊಂಡಿದ್ದಿದೆ. 

 

ಸೈಫಾ ಆಲಿಖಾನ್ ಮೊದಲ ಹೆಂಡತಿಯ ಮಗಳು ಸಾರಾ ಆಲಿ ಖಾನ್ 96 ಕೆಜಿ ತೂಗುತ್ತಿದ್ದಳು. 46 ಕೆಜಿಗೆ ಬರಲು ಸಾಕಷ್ಟು ವರ್ಕ್ ಔಟ್ ಮಾಡಿದ್ದಾಳಂತೆ. ಅಲ್ಲದೇ ಅನಿಲ್ ಕಪೂರ್ ಮಗಳು ಸೋನಮ್ ಕಪೂರ್ ಸಹ ಈಗೇನೋ ಫ್ಯಾಷನ್ ಐಕಾನ್ ಎಂಬ ಹೆಸರಿಗೆ ಪಾತ್ರರಾಗಿದ್ದಾರೆ. ಆದರೆ, ಚಿತ್ರ ಜಗತ್ತಿಗೆ ಕಾಲಿಡುವ ಮುನ್ನ ಬರೋಬ್ಬರಿ ಸುಮಾರು ಕ್ವಿಂಟಾಲ್ ಹತ್ತಿರ ಹತ್ತಿರ ತೂಗುತ್ತಿದ್ದರಂತೆ. 

96 ಕೆಜಿಯಿಂದ 46 ಕೆಜಿಗೆ : ಡುಮ್ಮಿ ಸಾರಾ ಸ್ಲಿಮ್ಮಿ ಆದ ವೀಡಿಯೋ ವೈರಲ್‌ 

ವಿದ್ಯುಲೇಖಾ ಎಂಬ ಹಾಸ್ಯ ನಟಿಯೂ ಸಿಕ್ಕಾಪಟ್ಟೆ ದಪ್ಪಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುವುದು ಇವರಿಗೆ ಅತೀವ ನೋವು ತರುತ್ತಿತ್ತು. ಗಟ್ಟಿ ಮನಸ್ಸು ಮಾಡಿ ತೂಕ ಇಳಿಸಿಕೊಂಡ ಈ ನಟಿ, ದೇಹ ದಂಡಿಸಲು ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?
Karna Serial: ಸಂಜಯ್‌ ಕುತಂತ್ರಕ್ಕೆ ಬಲಿಯಾದ ನಿತ್ಯಾ: ಈಗ ಕರ್ಣನ ಜೊತೆ ಅಸಲಿ ಮದುವೆ ಆಗ್ಲೇಬೇಕು! ನಿಧಿ ಕಥೆ ಏನು?