
ಸ್ಯಾಂಡಲ್‌ವುಡ್ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹೃದಯಾಘಾತದಿಂದ ಅಕ್ಟೋಬರ್ 29ರಂದು ಅಗಲಿದರು. ಅಪ್ಪು ನಮ್ಮನ್ನು ಅಗಲಿ 5 ತಿಂಗಳಾದರೂ ಅವರು ನಮ್ಮ ಜೊತೆನೇ ಇದ್ದಾರೆ ವಿದೇಶದಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ ಅಥವಾ ಯಾವುದೋ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ ಅನಿಸುತ್ತದೆ ಹೊರತು ಅವರಿಲ್ಲ ಅನಿಸೋಲ್ಲ. ಪ್ರತಿ ನಿತ್ಯ ಅಪ್ಪು ಹೆಸರಿನಲ್ಲಿ ಅನ್ನದಾನ ,ನೇತ್ರ ದಾನ ಮತ್ತು ರಕ್ತ ದಾನ ಕಾರ್ಯಕ್ರಮಗಳು ನಡೆಯುತ್ತಿದೆ. ಇಷ್ಟೇ ಅಲ್ಲ ಪಾರ್ವತಿ ಪುತ್ರ ಗಣೇಶನಿಗೆ ಮೊದಲು ಪೂಜೆ ಮಾಡಿ ಕಾರ್ಯಕ್ರಮ ಆರಂಭಿಸುತ್ತಾರೆ ಹಾಗೆಯೇ ಅಪ್ಪುಗೆ ಮೊದಲು ಪೂಜೆ ಸಲ್ಲಿಸಿ ಜನರು ಕಾರ್ಯಕ್ರಮ ಶುರು ಮಾಡುತ್ತಿದ್ದಾರೆ.
ಅಪ್ಪು ಇಷ್ಟೊಂದು ಪ್ರೀತಿ ಸಂಪಾದಿಸಿದ್ದಾರೆ, ಯಾರಿಗೂ ತಿಳಿಯದ ಹಾಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಅಣ್ಣ ಶಿವರಾಜ್‌ಕುಮಾರ್ ಮತ್ತು ರಾಘವೇಂದ್ರ ರಾಜ್‌ಕುಮಾರ್‌ಗೆ ಆಶ್ಚರ್ಯವಾಗಿದೆ. ನನ್ನ ತಮ್ಮ ನನ್ನ ತಂದೆ ರೀತಿ ಗ್ರೇಟ್ ವ್ಯಕ್ತಿ ಆಗ್ಬಿಟ್ಟ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ. ಹೊಸ ವರ್ಷ ಎಂದು ಆಚರಿಸುವ ಯುಗಾದಿ ಹಬ್ಬದ ದಿನ ಪುನೀತ್ ಪತ್ನಿ ಅಶ್ವಿನಿ ಅಭಿಮಾನಿ ದೇವರುಗಳಿಗೆ ಪತ್ರ ಬರೆದಿದ್ದಾರೆ. ಅವರ ಪ್ರೀತಿ ಮತ್ತು ಸಪೋರ್ಟ್‌ಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಪತ್ರ:
ಕಳೆದ ಐದು ತಿಂಗಳುಗಳು, ಅಪ್ಪು ಅವರು ಹಾಕಿಕೊಟ್ಟ ಮಾರ್ಗದಲ್ಲಿ ನೀವೆಲ್ಲರೂ ಹೇಗೆ ನಡೆದುಕೊಂಡಿದ್ದೀರಿ ಅವರ ಹೆಸರಿನಲ್ಲಿ ಮತ್ತು ಗೌರವಾರ್ಥವಾಗಿ ಮಹತ್ತರವಾದ ಕೆಲಸಗಳನ್ನು ಮಾಡಿದ್ದೀರಿ. ಅದಕೆಲ್ಲಾ ನಾನು ಗೌರವ ಹಾಗೂ ಅಭಿಮಾನದಿಂದ ಆಭಾರಿಯಾಗಿದ್ದೇನೆ. ಇದೆಲ್ಲವೂ ನನಗೆ ಸಂತೋಷವನ್ನು ನೀಡುವುದು ಮಾತ್ರವಲ್ಲದೆ ನಿಮ್ಮೊಂದಿಗೆ ಈ ಪಯಣವನ್ನು ಮುಂದುವರೆಸುವ ಭರವಸೆ ಮತ್ತು ಶಕ್ತಿಯನ್ನು ನೀಡಿದೆ. ಈ ಯುಗಾದಿ ಹಬ್ಬದಂದು ಭಗವಂತನ ಅನುಗ್ರಹ ಸಂಪೂರ್ಣವಾಇ ನಿಮ್ಮಲ್ಲರ ಮೇಲಿರಲೆಂದು ಪ್ರಾರ್ಥಿಸುತ್ತೇನೆ' ಎಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಬರೆದಿದ್ದಾರೆ.
ಅಶ್ವಿನಿ ಅವರ ಪತ್ರವನ್ನು ಓದಿ ನೆಟ್ಟಿಗರು ಭಾವುಕರಾಗಿದ್ದಾರೆ. 'ಜೊತೆಗಿರದ ಜೀವ ಎಂದೆಂದಿಗೂ ಜೀವಂತ. ಕರ್ನಾಟಕಕ್ಕೆ ಇರುವುದು ಒಂದೇ ಪವರ್ ಸ್ಟಾರ್ ನೀವು ತಲೆ ಕೆಡಿಸಿಕೊಳ್ಳಬೇಡಿ ಮೇಡಂ ನಾವಿದ್ದೀವಿ. ನಿಮ್ಮ ಬಾಯಲ್ಲಿ ಅಪ್ಪು ಅಂತ ಹೆಸರು ಕೇಳಿದರೆ ನಮಗೆ ಸಿಹಿ ತಿಂದಷ್ಟೇ ಖುಷಿ. ನೀವು ಮಕ್ಕಳಾದ toto nukki ನೋಡ್ಕೊಳ್ಳಿ ಖುಷಿ ಖುಷಿಯಾಗಿರಿ. ಇಷ್ಟು ವರ್ಷ ಅಣ್ಣ ವಿಶ್ ಮಾಡ್ತಿದ್ರು ಈಗ ನಿಮ್ಮ ಕಡೆ ಇಂದ ಅಪ್ಪು ಪರವಾಗಿ ವಿಶ್ ಬರ್ತಿರುವುದಕ್ಕೆ ಖುಷಿಯಾಗುತ್ತಿದೆ' ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.
ಅಪ್ಪು ಅಗಲಿದ ನಂತರ ಪಿಆರ್‌ಕೆ ಸಂಸ್ಥೆಯನ್ನು ಅಶ್ವಿನಿ ಅವರು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಒನ್ ಕಟ್ ಟು ಕಟ್ ಸಿನಿಮಾನ ಅಮೇಜಾನ್ ಪ್ರೈಮ್‌ನಲ್ಲಿ ರಿಲೀಸ್ ಮಾಡಿದ್ದರು, ಅಪ್ಪು ಪ್ರೀತಿಯಿಂದ ಆಯ್ಕೆ ಮಾಡಿದ ಸಿನಿಮಾ ಫ್ಯಾಮಿಲಿ ಪ್ಯಾಕ್‌ನ ಕೂಡ ಓಟಿಟಿಯಲ್ಲಿ ರಿಲೀಸ್ ಮಾಡಿದರು, ಜೇಮ್ಸ್ ಚಿತ್ರದ ಹಾಡುಗಳು, ಟೀಸರ್‌ಗಳನ್ನು ತಮ್ಮ ಪಿಆರ್‌ಕೆ ಆಡಿಯೋ ಯೂಟ್ಯೂಬ್‌ನಲ್ಲಿ ರಿಲೀಸ್ ಮಾಡಿದ್ದಾರೆ ಹಾಗೇ ಅಪ್ಪು ಕೊನೆ ಡಾಕ್ಯುಮೆಂಟರ್ ಗಂದಧಗುಡಿಯನ್ನು ಅದ್ಧೂರಿಯಾಗಿ ದೊಡ್ಡ ಪರದೆ ಮೇಲೆ ತರಬೇಕು ಎನ್ನು ನಿರ್ಧಾರ ಮಾಡಿದ್ದಾರೆ. ಅಪ್ಪು ಕನಸ್ಸು ನಾನು ಮುಂದುವರೆಸುವೆ ಎಂದು ಹೇಳಿದ್ದಾರೆ.
ಜನರೊಟ್ಟಿಗೆ ಅಪ್ಪು:
'ಅಪ್ಪು ಅವರ ಲೋಕೋಪಕಾರಿ ಚಟುವಟಿಕೆಗಳು ಬಗ್ಗೆ ನನಗೆ ಗೊತ್ತಿತ್ತು ಆದರೆ ಇಷ್ಟರ ಮಟ್ಟಕ್ಕಿದೆ ಎಂದು ಗೊತ್ತಿರಲಿಲ್ಲ. ಏಕೆಂದರೆ ಅವರ ಜೊತೆ ನಾನು ಶೂಟ್‌ಗಳಿಗೆ (Shoot) ಹೋಗುತ್ತಿರಲಿಲ್ಲ ಅಲ್ಲಿ ಅವರು ಅನೇಕರನ್ನು ಭೇಟಿ ಮಾಡಿರುತ್ತಾರೆ. ಈಗ ಜನರು ಬಂದು ಅವರ ಜೊತೆಗಿರುವ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದಾರೆ ನಿಜಕ್ಕೂ ಇಷ್ಟೊಂದು ಜನರ ಮನಸ್ಸು ಮಟ್ಟಿದ್ದಾರೆ ಎಂದು ಗೊತ್ತಿರಲಿಲ್ಲ. ಅಪ್ಪು ಸದಾ ವಿದ್ಯಾಭ್ಯಾಸ ಮತ್ತು ಆರೋಗ್ಯದ (Education and Health) ಕಡೆ ಹೆಚ್ಚಿನ ಗಮನ ನೀಡುತ್ತಿದ್ದರು ಅದರ ಬಗ್ಗೆ ನನಗೆ ಗೊತ್ತಿತ್ತು ಅದರೆ ಅದರ ಹೊರತಾಗಿ ಅವರು ತಮ್ಮದೇ ಆದ ಕೆಲಸಗಳನ್ನು ಮಾಡಿದ್ದಾರೆ' ಎಂದು ಅಶ್ವಿನಿ ಪುನೀತ್ ಹೇಳಿದ್ದಾರೆ.
ಜೀವನದ ಪಾಠ:
'ಕೆಲಸದ ಬಗ್ಗೆ ಅಪ್ಪುಗಿದ್ದ ಶ್ರದ್ಧೆ ಅವರ ನಮ್ರತೆ, ಸರಳತೆ ಮತ್ತು ಮತ್ತೊಬ್ಬರಿಗೆ ಸಹಾಯ ಮಾಡಬೇಕು ಎನ್ನುವ ಮನೋಭಾವ ನೋಡಿದ್ದೀನಿ ಹಾಗೇ ನಾನು ಅದನ್ನು ಅಳವಡಿಸಿಕೊಳ್ಳುತ್ತಿರುವೆ. ಅವರ ಒಳ್ಳೆ ಗುಣಗಳ ಬಗ್ಗೆ ನಾನು ಹೇಳುತ್ತಲೇ ಇರಬಹುದು' ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.