ಆಶಿಕಾ ರಂಗನಾಥ ಮದುವೆ ಸುದ್ದಿ ವೈರಲ್; ಇದು ನಿಜನಾ?

Published : Apr 01, 2022, 12:59 PM ISTUpdated : Apr 01, 2022, 03:22 PM IST
ಆಶಿಕಾ ರಂಗನಾಥ ಮದುವೆ ಸುದ್ದಿ ವೈರಲ್; ಇದು ನಿಜನಾ?

ಸಾರಾಂಶ

ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ನಟಿ ಆಶಿಕಾ ರಂಗನಾಥ್. ಹುಡುಗನ ಹೆಸರು ರಿವೀಲ್ ಆಗಬೇಕಿದೆ....

2016ರಲ್ಲಿ ಕ್ರೇಜಿ ಬಾಯ್ ಚಿತ್ರದ ಮೂಲಕ ಸಿನಿ ಜರ್ನಿ ಆರಂಭಿಸಿದ ಚೆಲುವೆ ಆಶಿಕಾ ರಂಗನಾಥ್ ಕನ್ನಡಿಗರಿಗೆ ಚುಟು ಚುಟು ಹುಡುಗಿ. ಸುಮಾರು 14 ಸಿನಿಮಾಗಳಲ್ಲಿ ನಟಿಸಿರುವ ಅಶಿಕಾ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಅಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವ ಸ್ಟೈಲಿಶ್ ಫೋಟೋಗಳು ಪಡ್ಡೆ ಹುಡುಗರ ನಿದ್ದೆ ಗೆಡಿಸಿದೆ ಎನ್ನಬಹುದು.  ಕೈ ತುಂಬಾ ಸಿನಿಮಾಗಳನ್ನು ಇಟ್ಟುಕೊಂಡು ಸಖತ್ ಬ್ಯುಸಿಯಾಗಿರುವ ಆಶಿಕಾ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ ಎನ್ನುವ ಮಾತು ಗಾಂಧಿನಗರದಲ್ಲಿ ಹರಿದಾಡುತ್ತಿದೆ. 

ಹೌದ! ಮದುವೆ ಆಗಬೇಕು ಮನೆಯಲ್ಲಿ ಹುಡುಕುತ್ತಿದ್ದಾರೆ ನಾನು ಸಿಂಗಲ್ ಎಂದು ಈ ಹಿಂದೆ ಯಾವುದೋ ಕಾರ್ಯಕ್ರಮದಲ್ಲಿ ಆಶಿಕಾ ಹೇಳಿದ್ದರು. ಅಪ್ಪ ಅಮ್ಮನ ಮುದ್ದಿನ ಮಗಳಿಗೆ ಈಗ ಹುಡುಗ ಹುಡುಕಿದ್ದಾರೆ. ಏನು ಆಶಿಕಾ ಮದುವೆ ನಾ? ಏನಪ್ಪಾ ಎಲ್ಲಾ ಹುಡ್ಗೀರು ಮದ್ವೆ ಆದ್ರೆ ನಮ್ಮಂತ ಸಿಂಗಲ್‌ಗಳ ಕಥೆ ಏನು ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.  ಮದುವೆ ಫಿಕ್ಸ್ ಆಗಿದೆ ಎಂದು ಅಶಿಕಾ ಇನ್ನೂ ರಿವೀಲ್ ಮಾಡಿಲ್ಲ ಆದರೆ ಅವರ ಆಪ್ತ ಬಳಗದಿಂದ ಮಾತುಗಳು ಕೇಳಿ ಬರುತ್ತಿದೆ. ಶೀಘ್ರದಲ್ಲಿ ಅಧಿಕೃತ ಮಾಡುವ ಸಾಧ್ಯತೆಗಳಿದೆ ಎನ್ನಬಹುದು.

ಆಶಿಕಾ ಪೋಷಕರು ಆಯ್ಕೆ ಮಾಡಿರುವ ಹುಡುಗ ಇವರು, ಇದು ಪಕ್ಕಾ ಅರೇಂಜ್ಡ್‌ ಮ್ಯಾರೇಜ್. ಹುಡುಗನ ಹೆಸರು ಏನು? ಎಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಆದರೆ ಹುಡುಗ ಉದ್ಯಮಿ ಆಗಿದ್ದು ಕೋಟಿ ಆಸ್ತಿಯ ಒಡೆಯ ಎಂದು ಖಾಸಗಿ ವೆಬ್‌ ಪೋರ್ಟಲ್‌ ಸುದ್ದಿ ಮಾಡಿತ್ತು. ಚಿತ್ರರಂಗಕ್ಕೂ ಅವರಿಗೂ ಯಾವ ಸಂಬಂಧವಿಲ್ಲ ಎಂದು ಕೇಳಿ ಬರುತ್ತಿದೆ. ಆಶಿಕಾ ಕುಟುಂಬ ಮತ್ತು ಹುಡುಗನ ಕುಟುಂಬ ಚಿರಪರಿಚಿತವಂತೆ ಹೀಗಾಗಿ ಪೋಷಕರು ಸೇರಿಕೊಂಡು ಈ ಮದುವೆಯನ್ನು ನಿಗದಿ ಮಾಡಿದ್ದಾರೆ. 

ಫಾರ್ಮ್ ಹೌಸ್ ಮಾವಿನ ತೋಪಿನಲ್ಲಿ ಆಶಿಕಾ..! ಒಬ್ಬರೇ ಅಲ್ಲ

ಈ ಜೋಡಿ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಮೊದಲು ನಿಶ್ಚಿತಾರ್ಥ ಮಾಡಿಕೊಂಡು ಆನಂತರ ಡಿಸೆಂಬರ್ 2022ರ ಒಳಗೆ ಮದುವೆ ಆಗಲಿದ್ದಾರೆ. ಕಾರ್ಯಕ್ರಮಗಳ ದಿನಾಂಕ ಕೂಡ ರಿವೀಲ್ ಆಗಿಲ್ಲ.  ಆಶಿಕಾ ಮದುವೆ ಎಂದು ಕೇಳುತ್ತಿದ್ದಂತೆ ಜನರಿಗೆ ಕ್ಯೂರಿಯಾಸಿಟಿ ಹೆಚ್ಚಾಗಿದೆ. ನೀವೇ ಇಷ್ಟೊಂದು ಬ್ಯೂಟಿಫುಲ್ ಇನ್ನು ನಿಮ್ಮ ಹುಡುಗ ಎಷ್ಟು ಹ್ಯಾಂಡ್ಸಂ ಇರಬಹುದು ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಆಶಿಕಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಸೀರೆ ಲುಕ್‌ ನೋಡಿ ಅನೇಕರು ಪಕ್ಕಾ ಮನೆ ಮಗಳು ನನ್ನ ಮದುವೆಯಾಗಿ ಎಂದು ನೇರವಾಗಿ ಪ್ರಪೋಸಲ್ ಇಡುತ್ತಿದ್ದರು. 

ಆಶಿಕಾ ಮತ್ತು ಶರಣ್ ಜೋಡಿಯಾಗಿ ಅಭಿನಯಿಸಿರುವ ಅವತಾರ ಪುರುಷ ಸಿನಿಮಾ ರಿಲೀಸ್‌ಗೆ ಸಿದ್ಧವಾಗಿದೆ ಹಾಗೇ ರೋಮೋ ಸಿನಿಮಾ ಚಿತ್ರೀಕರಣ ಹಂತದಲ್ಲಿದೆ. ಕೆಲವು ತಿಂಗಳುಗಳ ಮುನ್ನ ಮದಗಜ ಸಕ್ಸಸ್ ಮೀಟ್‌ ಕೂಡ ನಡೆಯಿತ್ತು. ಯಾವ ಭಾಷೆಗೆ ಹೋಗಿ ಏನೇ ಮಾಡ್ಲಿ. ಆದರೆ, ನಮ್ಮ ರಾಜ್ಯದಲ್ಲಿ ಬಂದು ಕನ್ನಡ ಮಾತನಾಡೋದು, ಕನ್ನಡದವರನ್ನು ನೋಡೋದು ತುಂಬಾನೇ ಖುಷಿ ಕೊಡುತ್ತದೆ. ‘ಮದಗಜ’ ಚಿತ್ರದಲ್ಲಿ ನಾನು ಮಾಡಿದ ಪಲ್ಲವಿ ಪಾತ್ರವನ್ನು ಎಲ್ಲರೂ ಇಷ್ಟಪಟ್ಟಿದ್ದೀರಿ. ಎಲ್ಲ ಹುಡುಗರಿಗೂ ದೊಡ್ಡ ಥ್ಯಾಂಕ್ಸ್​' ಎಂದು ನಾಯಕಿ ಆಶಿಕಾ ರಂಗನಾಥ್‌ (Ashika Ranganath) ಹೇಳಿದರು.

ಆಶಿಕಾ ರಂಗನಾಥ್ ಕೆಂಪು ತುಟಿಗಳ ರಹಸ್ಯ: ಪಟಾಕಿ ಪೋರಿಯ ಆನ್‌ಲೈನ್ ಮಾತುಕತೆ!

ಇದೀಗ ತಮಿಳು ಚಿತ್ರರಂಗಕ್ಕೆ ಎಂಟ್ರಿ ಆಗುತ್ತಿದ್ದಾರೆ ಎಂದು ಎಲ್ಲೆಡೆ ಸುದ್ದಿಯಾಗುತ್ತಿದೆ. ಕನ್ನಡ ಸಿನಿಮಾಗಳಲ್ಲಿ ಮಿಂಚಿರುವ ಆಶಿಕಾ ತಮಿಳು ಸಿನಿಮಾ ಒಪ್ಪಿಕೊಂಡಿದ್ದಾರೆ ಎಂದು ಕೆಲವು ಮೂಲಗಳಿಂದ ತಿಳಿದು ಬಂದಿದೆ. 'ಈ ರೀತಿಯ ವಿಭಿನ್ನ ಕತೆಯುಳ್ಳ ಸಿನಿಮಾದಲ್ಲಿ ನಟಿಸುತ್ತಿರುವುದು ಇದೇ ಮೊದಲು. ಕ್ರೀಡೆ ಪ್ರಧಾನವಾದ ಕತೆಯಳ್ಳ ಸಿನಿಮಾ ಇದಾಗಿದ್ದು ಇಂತಹ ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ನಟಿಸುತ್ತಿರುವುದು' ಎಂದು ಆಶಿಕಾ ಖಾಸಗಿ ವೆಬ್‌ಸೈಟ್‌ನೊಂದಿಗೆ ಮಾತನಾಡಿದ್ದಾರೆ. 'ಭಾಷೆ ತುಂಬಾ ಕಷ್ಟವಾಗುತ್ತಿದೆ ಆದರೆ ಚಿತ್ರತಂಡ ಸಾಕಷ್ಟು ಸಹಾಯ ಮಾಡುತ್ತಿದೆ. ಚಿತ್ರಕತೆ ಸಂಭಾಷಣೆಗಳನ್ನು ಮೊದಲೇ ಕನ್ನಡ ಮತ್ತು ಇಂಗ್ಲಿಷ್‌ಗೆ ಟ್ರಾನ್ಸಲೇಟ್ ಮಾಡಿಕೊಡುತ್ತಾರೆ ಅದನ್ನ ನೋಡಿಕೊಂಡು ಮಾರನೇ ದಿನವೇ ಚಿತ್ರೀಕರಣಕ್ಕೆ ತಯಾರಿ ಮಾಡಿಕೊಳ್ಳುವೆ. ನಾಯಕ ನಟ ಬಿಟ್ಟರೆ ಇಡೀ ಚಿತ್ರೀಕರಣ ಸೆಟ್‌ನಲ್ಲಿ ಯಾರಿಗೂ ಕನ್ನಡ ಬರುವುದಿಲ್ಲ. ಸೆಟ್‌ನಲ್ಲಿ ನಟ ಹಾಗೂ ನಾನು ಕನ್ನಡದಲ್ಲಿಯೇ ಮಾತನಾಡುತ್ತಿರುತ್ತೇವೆ. ' ಎಂದು ಆಶಿಕಾ ಹೇಳಿದ್ದಾರೆ.

(ಖಾಸಗಿ ವೆಬ್ ಪೋರ್ಟಲ್ ಏಪ್ರಿಲ್ ಫೂಲ್ ಮಾಡಲು ಮಾಡಿದ ಸುದ್ದಿ ಇದಾಗಿದ್ದು ಅಭಿಮಾನಿಗಳು ಇದನ್ನು ಸತ್ಯವೆಂದು ನಂಬಿದ್ದಾರೆ. ಮದುವೆ ವಿಚಾರ ನಿಜವೆಂದು ನಂಬಿ ಹುಡುಗರಿಗೆ ಹಾರ್ಟ್ ಬ್ರೇಕ್ ಆಗಿದೆ. ಇದು ಕೇವಲ ತಮಾಷೆಗಾಗಿ, ಸತ್ಯವಲ್ಲ)

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?