
ಮತ್ತೆ ಮತ್ತೆ ಒಂದು ಸಿನಿಮಾ ನೋಡ್ಬೇಕು ಅಂದ್ರೆ ಅದರಲ್ಲಿ ಗಮನ ಸೆಳೆಯುವ ಎಲಿಮೆಂಟ್ ಇರಬೇಕು. ಅದು ಲವ್ ಮಾಕ್ಟೇಲ್ ಸಿನಿಮಾದಲ್ಲಿದೆ ಎಂದು ಕೊರೋನಾ ವೈರಸ್ ಮೊದಲನೇ ಲಾಕ್‌ಡೌನ್‌ನಲ್ಲಿ ಸಿನಿ ರಸಿಕರು ಮಾತನಾಡಿರುವುದನ್ನು ನೋಡಿದ್ದೀವಿ. ಸಿನಿಮಾ ಯಶಸ್ಸು ಕಾಣುತ್ತಿದ್ದಂತೆ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಎರಡನೇ ಭಾಗ ರೆಡಿ ಮಾಡಿಕೊಂಡು ಇದೇ ಫೆಬ್ರವರಿ 11ರಂದು ಬಿಡುಗಡೆ ಮಾಡುತ್ತಿದ್ದಾರೆ.
ಅದ್ಧೂರಿಯಾಗಿ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿ ಪ್ರತಿಯೊಬ್ಬ ಪಾತ್ರಧಾರಿಯನ್ನೂ ಸಿನಿ ತಂಡ ಪರಿಚಯಿಸಿಕೊಟ್ಟಿದೆ. ಮೊದಲ ಭಾಗದಲ್ಲಿ ಎಲ್ಲರಿಗೂ irritate ಮಾಡಿದ ಜೋ ಕ್ಯಾರೆಕ್ಟರ್ ಅನ್ನು ಅಮೃತಾ ಅಯ್ಯಂಗಾರ್ ಮಾಡಿದ್ದಾರೆ. ಎರಡನೇ ಭಾಗದಲ್ಲಿ ತಮ್ಮ ಕ್ಯಾರೆಕ್ಟರ್ ಹೇಗಿರಲಿದೆ ಎಂಬುದನ್ನು ಹಂಚಿಕೊಂಡಿದ್ದಾರೆ.
'ಜೋ ಪಾತ್ರದ ಬಗ್ಗೆ ನನಗೆ ತುಂಬಾನೇ ಭಯವಿದೆ. ನಾನು ಅಂದುಕೊಂಡಿದ್ದೆ ಜೋ ಪಾತ್ರವನ್ನು ಪಾಸಿಟಿವ್ ಆಗಿ ಸ್ವೀಕರಿಸುವುದಿಲ್ಲವೆಂದು. ರಿಲೀಸ್ ಹಿಂದಿನ ದಿನವೂ ನಾನು ಓ ನನ್ನ ಪಾತ್ರದಿಂದ ನೆಗೆಟಿವ್ ಇಂಪ್ಯಾಕ್ಟ್ ಆಗುತ್ತದೆ ಅಂದುಕೊಂಡಿದ್ದೆ. ಆದರೆ ಜನರು ಸ್ವೀಕರಿಸಿರುವ ರೀತಿ ನೋಡಿ ಖುಷಿ ಆಯ್ತು. ಆ ಪಾತ್ರ ಜನರ ನಡುವೆ ಇಷ್ಟೊಂದು ಹಿಟ್ ಆಗುತ್ತೆ ಅಂದು ಕೊಂಡಿರಲಿಲ್ಲ,' ಎಂದು ಅಮೃತಾ ಮಾತನಾಡಿದ್ದಾರೆ.
'ಸಾಮಾನ್ಯವಾಗಿ ಯಾರು ಈ ಎರಡನೇ ಭಾಗ ನಿರೀಕ್ಷೆ ಮಾಡಿರಲಿಲ್ಲ. ಆದರೆ ಈ ಭಾಗದಲ್ಲಿ ಸ್ವಲ್ಪ ಮುಗ್ಧತೆ ಮತ್ತು ಕಹಿ ಮುಖ ಕೂಡ ನೋಡಬಹುದು. ಮೊದಲ ಭಾಗ ರಿಲೀಸ್ ಆಗಿ ತುಂಬಾ ಸಮಯ ಕಳೆದಿದೆ ಹೀಗಾಗಿ ಸ್ವಲ್ಪ ಮೆಚ್ಯೂರಿಟಿ ಇರಲಿದೆ. ಆದರೆ ಹಿಂದಿನ ರೀತಿ ಅದೇ ಇರಿಟೇಷನ್ ಮತ್ತು ಕೋಪ ಬರುವ ಹುಡುಗಿನೇ. ಆದರೆ ಒಳ್ಳೆಯ ರೀತಿಯಲ್ಲಿ ಮತ್ತೆ ಆದಿಗೆ ಕ್ಲೋಸ್ ಆಗುವೆ,' ಎಂದು ಅಮೃತಾ ಹೇಳಿದ್ದಾರೆ.
'ಮೊದಲ ಭಾಗದಲ್ಲಿರುವ ಲುಕ್ ಮತ್ತು ಅದೇ ರೀತಿ ಕ್ಯಾರೆಕ್ಟರ್‌ಗೆ ಬದಲಾಗುವುದು ಸ್ವಲ್ಪ ಚಾಲೆಂಜ್ ಆಗಿತ್ತು. ನಾನು ಹೇಳುವ ಡೈಲಾಗ್‌ನಲ್ಲಿ ಒಂದು ಚೂರು ಬದಲಾವಣೆ ಆಗಬಾರದು. ವೀಕ್ಷಕರು ತುಂಬಾನೇ ಕ್ರಿಟಿಕಲ್ ಅಗಿ ಯೋಚನೆ ಮಾಡುತ್ತಾರೆ. ಹೀಗಾಗಿ ನಾನೇ ಮೊದಲನೇ ಭಾಗ ನೋಡಿಕೊಂಡು, ಎರಡನೇ ಭಾಗದಲ್ಲಿ ನಟಿಸುತ್ತಿದ್ದೆ,' ಎಂದಿದ್ದಾರೆ ಅಮೃತಾ.
ಟ್ರೈಲರ್:
'ಟ್ರೈಲರ್ ತುಂಬಾ ಚೆನ್ನಾಗಿದೆ ಚಿತ್ರದ ಬಗ್ಗೆ ಸಣ್ಣ ಸುಳಿವನ್ನೂ ಬಿಟ್ಟು ಕೊಟ್ಟಿಲ್ಲ. ಮೊದಲ ಭಾಗದಲ್ಲಿ ತುಂಬಾನೇ ನಗಿಸುತ್ತದೆ. ಎರಡನೇ ಭಾಗದಲ್ಲಿ ತುಂಬಾ ಎಮೋಷನಲ್ ಮಾಡುತ್ತದೆ. ಮೊದಲ ಭಾಗದಲ್ಲಿದ್ದ ಮೌನ ಮತ್ತು ಬೇಸರವನ್ನು ಇದರ ಮೊದಲ ಭಾಗದಲ್ಲಿ ಮಾತ್ರ ನೋಡಬಹುದು. ಲವ್ ಸ್ಟೋರಿಗಳಲ್ಲಿ ಭಾಗಗಳನ್ನು ಮಾಡುವುದು ತುಂಬಾ ಕಷ್ಟ. ಪಾತ್ರ ಕ್ಯಾರಿ ಮಾಡುವ ರೀತಿ ಮತ್ತು ಕಥೆ ದೊಡ್ಡ ಜವಾಬ್ದಾರಿ. ಆದರೆ ಕೃಷ್ಣ ಮತ್ತು ಮಿಲನಾ ಅವರು ಅದ್ಭುತವಾಗಿ ಪಾತ್ರಗಳನ್ನು ತೋರಿಸಿದ್ದಾರೆ. ಸಿನಿಮಾ ನನ್ನ ನಿರೀಕ್ಷೆ ಮೀರಿಸಿದೆ. 2022ರ ಬೆಸ್ಟ್ ಫಿಲ್ಮಂ ಆಗಿರಲಿದೆ,' ಎಂದು ಅಮೃತಾ ಮಾತನಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.